Homeಅಂತರಾಷ್ಟ್ರೀಯವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಪ್ರಧಾನಿ ಮೋದಿ ಆಪ್ತ ಉದ್ಯಮಿ ಗೌತಮ್ ಅದಾನಿ

ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಪ್ರಧಾನಿ ಮೋದಿ ಆಪ್ತ ಉದ್ಯಮಿ ಗೌತಮ್ ಅದಾನಿ

- Advertisement -
- Advertisement -

ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ, ಬಿಲಿಯನೇರ್ ಗೌತಮ್ ಅದಾನಿ ಅವರು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರು ಕಳೆದ ತಿಂಗಳಷ್ಟೆ ಎಲ್‌‌ವಿಎಂಹೆಚ್ ಮಾಲೀಕ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಅದಾನಿ ಕಳೆದ ತಿಂಗಳಷ್ಟೆ ವಿಶ್ವದ ಮೂರನೇ ಅತ್ಯಂತ ಶ್ರೀಮಂತರಾಗುವುದರೊಂದಿಗೆ ಈ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಮತ್ತು ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಚೀನಾದ ಜಾಕ್ ಮಾ ಕೂಡ ಇದನ್ನು ಸಾಧಿಸಲು ಸಾಧ್ಯವಾಗಿರಲಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಟೆಸ್ಲಾ ಮುಖ್ಯಸ್ಥ ಎಲೋನ್‌ ಮಸ್ಕ್‌ 273.5 ಬಿಲಿಯನ್‌‌ ಡಾಲರ್‌‌‌‌‌ ನಿವ್ವಳ ಮೌಲ್ಯದೊಂದಿಗೆ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಉಳಿದಿದ್ದಾರೆ. ಗೌತಮ್ ಅದಾನಿ ಪ್ರಸ್ತುತ 154.7 ಬಿಲಿಯನ್ ಡಾಲರ್‌‌ ಮೌಲ್ಯವನ್ನು ಆಸ್ತಿಯನ್ನು ಹೊಂದಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಕಳೆದ ಸ್ವಲ್ಪ ಸಮಯದಿಂದ ಅದಾನಿಯ ಶ್ರೀಮಂತಿಕೆ ಸ್ಥಿರವಾಗಿ ಏರುತ್ತಿದೆ.

ಇದನ್ನೂ ಓದಿ: ಅದಾನಿಗೆ ಗುತ್ತಿಗೆ ನೀಡಲು ಶ್ರೀಲಂಕಾ ಅಧ್ಯಕ್ಷರ ಮೇಲೆ ಮೋದಿ ಒತ್ತಡ; ಆರೋಪ ಮಾಡಿದ್ದ ಅಧಿಕಾರಿ ರಾಜೀನಾಮೆ

ಶ್ರೀಮಂತರ ಪಟ್ಟಿಯಲ್ಲಿ ಅರ್ನಾಲ್ಟ್‌ ಮೂರನೇ ಸ್ಥಾನಕ್ಕೆ ಏರಿದರೆ, ಬೆಜೋಸ್‌‌ ಎರಡನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ಫೋಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಮತ್ತೊಬ್ಬ ಭಾರತೀಯ ಮುಖೇಶ್ ಅಂಬಾನಿ 92 ಶತಕೋಟಿ ಡಾಲರ್‌‌ನೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.

ಸರಕುಗಳ ವ್ಯಾಪಾರದೊಂದಿಗೆ 1980 ರ ದಶಕದ ಉತ್ತರಾರ್ಧದಲ್ಲಿ ಅದಾನಿ ಗ್ರೂಪ್‌ ಪ್ರಾರಂಭವಾಯಿತು. ನಂತರ ಗಣಿಗಳು, ಬಂದರುಗಳು ಮತ್ತು ವಿದ್ಯುತ್ ಸ್ಥಾವರಳು, ವಿಮಾನ ನಿಲ್ದಾಣಗಳು, ಡೇಟಾ ಕೇಂದ್ರಗಳು ಮತ್ತು ರಕ್ಷಣಾ ಕ್ಷೇತ್ರದಲ್ಲೂ ಅದಾನಿ ಗ್ರೂಪ್ ಹೂಡಿಕೆ ಮಾಡಿದ್ದು, ಕಳೆದ ಕೆಲವು ವರ್ಷಗಳಿಂದ ಆಕ್ರಮಣಕಾರಿಯಾಗಿ ತನ್ನ ವ್ಯಾಪಾರದ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಿದೆ.

ದೇಶದ ಪ್ರಮುಖ ಸುದ್ದಿ ಮಾಧ್ಯಮವಾದ ಎನ್‌ಡಿಟಿವಿ ಮತ್ತು ಕ್ರೆಡಿಟ್‌‌‌ಸೈಟ್‌ ಅನ್ನು ಸ್ವಾಧೀನಪಡಿಸಿಕೊಳ್ಳಲು ಅದಾನಿ ಗ್ರೂಪ್ ಇತ್ತೀಚೆಗೆ ಆಕ್ರಮಣಕಾರಿ ಕ್ರಮವನ್ನು ಕೈಗೊಂಡಿತ್ತು.

“ವಿಶ್ವದ ಶ್ರಿಮಂತ ವ್ಯಕ್ತಿಗಳಾದ ಅಮೆರಿಕಾದ ಕೆಲವು ಬಿಲಿಯೇರ್‌ಗಳು ತಮ್ಮ ಶ್ರಿಮಂತಿಕೆಯ ಪಟ್ಟಿಯಲ್ಲಿ ಇಳಿಕೆ ಕಂಡಿದ್ದು ಅವರು ಮಾಡುತ್ತಿರುವ ಲೋಕೊಪಯೋಗಿ ಯೋಜನೆಗಳು ಕೂಡಾ ಕಾರಣ” ಎಂದು ಬ್ಲೂಮ್‌ಬರ್ಗ್ ಕಳೆದ ತಿಂಗಳು ಉಲ್ಲೇಖಿಸಿತ್ತು.

ಇದನ್ನೂ ಓದಿ: ಬಹುಜನ ಭಾರತ: ಎನ್.ಡಿ.ಟಿ.ವಿ ಅದಾನಿ ಕೈವಶ; ಮತ್ತೊಂದು ಚಾನೆಲ್ ಮೋದಿ ಪದತಲಕ್ಕೆ

ಜುಲೈನಲ್ಲಿ ಬಿಲ್ ಗೇಟ್ಸ್ ಅವರು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ಗೆ 20 ಶತಕೋಟಿ ಡಾಲರ್‌‌ ಅನ್ನು ವರ್ಗಾಯಿಸುತ್ತಿರುವುದಾಗಿ ಹೇಳಿದ್ದಾರೆ. ವಾರೆನ್ ಬಫೆಟ್ ಕೂಡಾ ಈಗಾಗಲೇ 35 ಶತಕೋಟಿ ಡಾಲರ್‌‌ಗಿಂತ ಹೆಚ್ಚಿನ ಹಣವನ್ನು ಚಾರಿಟಿಗೆ ದೇಣಿಗೆ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. 2.21 lahk crores ಸಾಲ ಅದಾನಿ ಸಮೂಹದ ಸಾಲದ ಒಟ್ಟು ಮೊತ್ತ.. ಹೀಗೆ ಜನರ ದುಡ್ಡನ್ನ ಸಾಲ ಪಡೆದು ಪ್ರಪಂಚದ 2ಅಷ್ಟೇ ಅಲ್ಲ ಮೊದಲನೇ ಶ್ರೀಮಂತನಾದರೂ ಇದರಿಂದ ಯಾವೊಬ್ಬ ಭಾರತೀಯನ ಬದುಕು ಉದ್ದಾರವಾಗೋಲ್ಲ…. ಅದನಿಗೆ ಅಭಿನಂದನೆಗಳು 😏😏💐💐

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...