Homeಮುಖಪುಟಹೈದರಾಬಾದ್: ಬಾಲಕಿ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಬೆಳಕಿಗೆ ಬಂದ ಮತ್ತಷ್ಟು ಕೇಸ್‌ಗಳು

ಹೈದರಾಬಾದ್: ಬಾಲಕಿ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಬೆಳಕಿಗೆ ಬಂದ ಮತ್ತಷ್ಟು ಕೇಸ್‌ಗಳು

ಜುಬ್ಲಿ ಹಿಲ್ಸ್ ಪ್ರಕರಣದ ಬಳಿಕ ಈವರೆಗೆ 4 ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ

- Advertisement -
- Advertisement -

ಇತ್ತೀಚೆಗೆ ಹೈದರಾಬಾದ್‌ನ ಜುಬ್ಲಿ ಹಿಲ್ಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ದೇಶದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮತ್ತಷ್ಟು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಲ್ಲಿಯವರೆಗೆ ಒಟ್ಟು ನಾಲ್ಕು ಅಪ್ರಾಪ್ತೆಯರ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

ಮೇ 31 ರಂದು ನಡೆದಿದ್ದ ಎರಡು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಇಂದು ಮತ್ತೆರಡು ಪ್ರಕರಣ ಬೆಳಕಿಗೆ ಬಂದಿದ್ದು, ಅಪ್ರಾಪ್ತ ವಯಸ್ಕರಲ್ಲಿಯ ಇಂತಹ ಸಾಮೂಹಿಕ ಅತ್ಯಾಚಾರದ ವಿಕೃತಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಅನಾಥಾಶ್ರಮದಲ್ಲಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಏಪ್ರಿಲ್ 22 ರಂದು ಕಾರಿನಲ್ಲಿ ಅತ್ಯಾಚಾರವೆಸಗಲಾಗಿದ್ದು, ಇದೀಗ ಈ ಘಟನೆ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕಿಯೊಬ್ಬರು ಹುಟ್ಟುಹಬ್ಬ ಆಚರಿಸಲು ಹೋಗಿದ್ದಾಗ ಏಕಾಂತದಲ್ಲಿ ಮಾತನಾಡುವ ನೆಪದಲ್ಲಿ ಕಾರಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡುವ 23 ವರ್ಷದ ಆರೋಪಿ ಸುರೇಶ್ ಎಂಬಾತನನ್ನು ಬಂಧಿಸಲಾಗಿದ್ದು, ರಾಮಗೋಪಾಲಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಬಾಲಕಿಯು ತನ್ನ ಮೇಲೆ ಥಿಯೇಟರ್‌ನಲ್ಲಿ ಅತ್ಯಾಚಾರವೆಸಗಲಾಗಿದೆ ಎಂದು ಆರೋಪಿಸಿದ್ದಾರೆ. ಅಪ್ರಾಪ್ತ ಬಾಲಕಿಗೆ ಸಿನಿಮಾ ತೋರಿಸುವ ಆಮಿಷವೊಡ್ಡಿ ಅತ್ಯಾಚಾರ ಮಾಡಿದ್ದಾನೆ. ಆರೋಪಿಯೂ ಅಪ್ರಾಪ್ತ ವಯಸ್ಕನಾಗಿದ್ದು, ಕೆಲ ತಿಂಗಳಿಂದ ಬಾಲಕಿಯೊಂದಿಗೆ ಸಂಪರ್ಕದಲ್ಲಿದ್ದ. ಘಟನೆ ಒಂದು ತಿಂಗಳ ಹಿಂದೆ ನಡೆದಿದ್ದು, ರಾಜೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಬಾಲಕಿ ಮೇಲೆ ಅಪ್ರಾಪ್ತ ಬಾಲಕರಿಂದ ಸಾಮೂಹಿಕ ಅತ್ಯಾಚಾರ: ಪ್ರಕರಣ ದಾಖಲು

ಇನ್ನು ಅಜ್ಜಿ ಮನೆಗೆ ಹೋಗುತ್ತಿದ್ದ 12 ವರ್ಷದ ಬಾಲಕಿಯ ಮೇಲೆ ಇಬ್ಬರು ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮೇ 31 ರಂದು ಈ ಘಟನೆ ನಡೆದಿದ್ದು, ಬಾಲಕಿ ಕಾಣೆಯಾಗಿದ್ದಳು. ಜೂನ್ 1 ರಂದು ಸುಲ್ತಾನ್‌ಶಾಹಿ ಪ್ರದೇಶದಲ್ಲಿ ಪೊಲೀಸರಿಗೆ ಸಿಕ್ಕಿದ್ದರು. ಕ್ಯಾಬ್ ಚಾಲಕ ಆಕೆಯನ್ನು ಕೊಂಡೂರ್ಗ್‌ನಲ್ಲಿರುವ ಸ್ನೇಹಿತನ ಮನೆಗೆ ಕರೆದೊಯ್ದು ಅಲ್ಲಿ ಇಬ್ಬರೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇಬ್ಬರು ಆರೋಪಿಗಳಾದ ಕ್ಯಾಬ್ ಚಾಲಕ ಶೇಕ್ ಕಲೀಮ್ ಅಲಿ (36) ಮತ್ತು ಮೊಹಮ್ಮದ್ ಲುಕ್ಮಾನ್ ಅಹ್ಮದ್ (36) ಅವರನ್ನು ಬಂಧಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಉದ್ಯೋಗಿಯಾಗಿರುವ ಸೂಫಿಯಾನ್ (21) ಎಂಬಾತ ಚಾರ್ಮಿನಾರ್‌ನ ಜವಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಬಾಲಕಿಗೆ ಆಮಿಷ ಒಡ್ಡಿ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಹುಡುಕಲಾಗುತ್ತಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಸುದರ್ಶನ್ ಹೇಳಿದ್ದರು.

ಮೇ 28 ರಂದು ಹೈದರಾಬಾದ್‌ನ ಜುಬ್ಲಿ ಹಿಲ್ಸ್‌ ಪ್ರದೇಶದಲ್ಲಿ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದಾಗ 17 ವರ್ಷದ ಬಾಲಕಿಯ ಮೇಲೆ ರಾಜಕೀಯ ಕುಟುಂಬಗಳ ಅಪ್ರಾಪ್ತ ವಯಸ್ಕರು ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಈ ಘಟನೆ ರಾಜಕೀಯ ಕೆಸರೆರಚಾಟಕ್ಕೂ ತಿರುಗಿದೆ.

ಅತ್ಯಾಚಾರವೆಂಬದು ಹೀನ ಕುಕೃತ್ಯ. ವಿಕೃತ ಮನಸ್ಸಗಳು ಮಾಡುವ ಘೋರ ಅಪರಾಧ. ಇಂತಹ ಹೀನ ಕೃತ್ಯಕ್ಕೆ ಹೈದರಾಬಾದ್‌ನಲ್ಲಿ ಶಾಲಾ ಬಾಲಕರೂ ಇಳಿದಿರುವುದು ದುರಂತವಾಗಿದೆ. ಈ ಕುರಿತು ಸರ್ಕಾರಗಳು ಗಂಭೀರವಾಗಿ ಚಿಂತಿಸಿ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಅರಿವು ಮೂಡಿಸಬೇಕಿದೆ. ಅತ್ಯಾಚಾರಗಳನ್ನು ತಡೆಯಲು ಗಂಭೀರ ಪ್ರಯತ್ನ ಹಾಕಬೇಕಿದೆ. ಅದು ಘೋರ ಅಪರಾಧ ಎಂದು ಎಲ್ಲರ ಮನಸ್ಸಿನಲ್ಲಿ ಮೂಡುವಂತೆ ಒತ್ತಡ ಹಾಕಬೇಕಿದೆ.


ಇದನ್ನೂ ಓದಿ: ಹೈದರಾಬಾದ್: ಮತ್ತಿಬ್ಬರು ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣ ಬೆಳಕಿಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...