Homeಅಂತರಾಷ್ಟ್ರೀಯಬಿಜೆಪಿ ಮುಖಂಡರಿಂದ ಪ್ರವಾದಿ ನಿಂದನೆ ಪ್ರಕರಣ: 15 ರಾಷ್ಟ್ರಗಳ ಖಂಡನೆ

ಬಿಜೆಪಿ ಮುಖಂಡರಿಂದ ಪ್ರವಾದಿ ನಿಂದನೆ ಪ್ರಕರಣ: 15 ರಾಷ್ಟ್ರಗಳ ಖಂಡನೆ

- Advertisement -
- Advertisement -

ಬಿಜೆಪಿಯ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು 15 ಪ್ರಮುಖ ರಾಷ್ಟ್ರಗಳು ಕಟು ಶಬ್ದಗಳಲ್ಲಿ ಖಂಡಿಸಿವೆ.

ಇರಾನ್, ಇರಾಕ್, ಕುವೈತ್, ಕತಾರ್, ಸೌದಿ ಅರೇಬಿಯಾ, ಓಮನ್, ಯುಎಇ, ಜೋರ್ಡಾನ್, ಅಫ್ಘಾನಿಸ್ತಾನ, ಬಹ್ರೇನ್, ಮಾಲ್ಡೀವ್ಸ್, ಲಿಬಿಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ಪ್ರತಿಭಟನೆಯನ್ನು ದಾಖಲಿಸಿವೆ.

ಕತಾರ್, ಇರಾನ್ ಮತ್ತು ಬಹ್ರೇನ್ ದೇಶಗಳು ಭಾರತೀಯ ರಾಯಭಾರಿಯನ್ನು ಕರೆಸಿದ್ದು, ತಮ್ಮ ವಿರೋಧವನ್ನು ತಿಳಿಸಿವೆ. ಭಾರತ ಸರ್ಕಾರವು ಸಾರ್ವಜನಿಕವಾಗಿ ಈ ಬಗ್ಗೆ ಕ್ಷಮೆಯಾಚನೆ ಮಾಡುವುದನ್ನು ನಿರೀಕ್ಷಿಸುವುದಾಗಿ ಕತಾರ್‌ ಹೇಳಿದೆ. ಜೊತಗೆ ಪಕ್ಷದ ವಕ್ತಾರೆಯ ವಿರುದ್ಧ ಬಿಜೆಪಿ ಕೈಗೊಂಡಿರುವ ಕ್ರಮವನ್ನು ಬಹ್ರೇನ್ ಮತ್ತು ಸೌದಿ ಅರೇಬಿಯಾ ಸ್ವಾಗತಿಸಿವೆ.

ಟಿಆರ್‌ಎಸ್ ಪಕ್ಷದ ಸಚಿವ ಕೆ.ಟಿ. ರಾಮರಾವ್ ಪ್ರತಿಕ್ರಿಯಿಸಿದ್ದು, “ಪ್ರಧಾನಿ ಮೋದಿ ಅವರೇ, ಬಿಜೆಪಿಯ ಮತಾಂಧರ ದ್ವೇಷದ ಭಾಷಣಗಳಿಗೆ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಭಾರತ ಯಾಕೆ ಕ್ಷಮೆಯಾಚಿಸಬೇಕು. ಬಿಜೆಪಿ ದಿನವಿಡೀ ದ್ವೇಷವನ್ನು ಉಗುಳುವುದು ಮತ್ತು ಹರಡುವುದಕ್ಕಾಗಿ ಪ್ರತಿ ಭಾರತೀಯರಲ್ಲಿ ಕ್ಷಮೆಯಾಚಿಸಬೇಕು. ಕ್ಷಮೆ ಕೇಳಬೇಕಾದ್ದು ಬಿಜೆಪಿಯೇ ಹೊರತು ಇಡೀ ಭಾರತವಲ್ಲ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, “ಭಾರತವು ಕ್ಷಮೆ ಕೇಳಬೇಕಾದ ಯಾವುದೇ ತಪ್ಪನ್ನು ಮಾಡಿಲ್ಲ. ತಪ್ಪಿ ಆಗಿದ್ದು ಬಿಜೆಪಿಯಿಂದ. ದೇಶವೇಕೆ ಅದನ್ನು ಸರಿದೂಗಿಸಬೇಕು? ಕತಾರ್ ಮತ್ತು ಕುವೈತ್‌‌ ನಮ್ಮ ಪ್ರಧಾನಿಗೆ ಅವರ ರಾಜಧರ್ಮವನ್ನು ನೆನಪಿಸುತ್ತಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ?” ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಕಳೆದ ವಾರ ಟಿವಿ ಚರ್ಚೆಯ ಸಂದರ್ಭದಲ್ಲಿ ನೂಪುರ್‌ ಶರ್ಮಾ ಅವರು ಪ್ರವಾದಿಯನ್ನು ಅವಮಾನಿಸುವ ಉದ್ದೇಶದಿಂದ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಯ ವಿರುದ್ಧ ಮುಸ್ಲಿಮರು ಭಾರಿ ಆಕ್ರೋಶ ಮತ್ತು ಪ್ರತಿಭಟನೆಯನ್ನು ನಡೆಸಿದ್ದರು. ಈ ಮಧ್ಯೆಯೆ ನವೀನ್ ಕುಮಾರ್ ಅವರು ಪ್ರವಾದಿಯವರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದು ವಿವಾದವು ಮತ್ತುಷ್ಟು ಬಿಗಡಾಯಿಸುವಂತೆ ಮಾಡಿತ್ತು.

ನೂಪುರ್ ಶರ್ಮಾ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿದ್ದರೆ, ನವೀನ್ ಜಿಂದಾಲ್ ಪಕ್ಷದ ದೆಹಲಿ ಮಾಧ್ಯಮ ಘಟಕದ ಮುಖ್ಯಸ್ಥರಾಗಿದ್ದಾರೆ. ಇದೀಗ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಿದೆ. ಆದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಪಕ್ಷಗಳು ಒತ್ತಾಯಿಸಿವೆ.

ಪ್ರವಾದಿ ನಿಂದನೆ ಮಾಡಿದ ಆ ಇಬ್ಬರು ಮುಖಂಡರನ್ನು ಅಮಾನತು ಮಾಡಿರುವುದು ಬಿಜೆಪಿ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ಮೋದಿ ವಿರುದ್ಧ ಕಿಡಿಕಾರಿರುವ ಅವರು #maulanamodi (#ಮೌಲಾನಾಮೋದಿ), #ModiShamesIndia (#ಮೋದಿಶೇಮ್ಸ್‌ಇಂಡಿಯಾ) ಹ್ಯಾಷ್‌ ಟ್ಯಾಗ್‌ಗಳ ಬಳಸಿ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; #ಮೋದಿಶೇಮ್ಸ್‌ಇಂಡಿಯಾ #ಮೌಲಾನಾಮೋದಿ ಹ್ಯಾಷ್‌ಟ್ಯಾಗ್‌ ಟ್ವಿಟ್ಟರ್‌‌ನಲ್ಲಿ ಟ್ರೆಂಡಿಂಗ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಪ್ರವಾದಿಗೆ ಅವಮಾನ ಆಗಿದೆ ಅಂತ ಬೊಬ್ಬೋ ಹೊಡಿಯೋ ನಾಮಾರ್ದರು,ಕಲಬೆರಕೆಗಳು ಹಿಂದೂ ದೇವರಿಗೆ ಇದೇ ಕಲಬೆರಕೆಗಳು ಅವಮಾನಿಸಿದಾಗ ಎಲ್ಲಾ ಮಾಧ್ಯಮಗಳು,ಕಲಬೆರಕೆಗಳು ಸಗಣಿ ತಿಂತಿದ್ವ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಕನ್ನಡ “ಲೋಕ” ಲಡಾಯಿ; ಕೇಸರಿಪಡೆಯ ಕಲಹ ಕಾಂಗ್ರೆಸ್‌ಗೆ ವರವಾದೀತೆ?

0
ಉತ್ತರ ಕನ್ನಡದ ಅಷ್ಟೂ ಎಂಟು ವಿಧಾನಸಭಾ ಕ್ಷೇತ್ರಗಳ ಜತೆ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಸೇರಿಸಿ ರಚಿಸಲಾಗಿರುವ "ಉತ್ತರ ಕನ್ನಡ ಲೋಕಸಭಾ ಕ್ಷೇತ್ರ" ವಿಭಿನ್ನತೆ, ವೈವಿಧ್ಯತೆಗಳ ವಿಶಿಷ್ಟ ಸೀಮೆ. ಭೋರ್ಗರೆವ ಅರಬ್ಬೀ...