Homeಮುಖಪುಟವಿಚ್ಛೇದನದ ನಂತರ ಸಾಯುತ್ತೇನೆ ಎಂದು ಭಾವಿಸಿದ್ದೆ; ಆದರೆ ನನ್ನನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ: ನಟಿ ಸಮಂತಾ

ವಿಚ್ಛೇದನದ ನಂತರ ಸಾಯುತ್ತೇನೆ ಎಂದು ಭಾವಿಸಿದ್ದೆ; ಆದರೆ ನನ್ನನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ: ನಟಿ ಸಮಂತಾ

- Advertisement -
- Advertisement -

ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಅವರು ನಟ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದಿದ್ದು ಇತ್ತೀಚೆಗೆ ಭಾರಿ ಸುದ್ದಿಯಾಗಿದ್ದು. ಮಾಧ್ಯಮಗಳು ಅವರ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ತುಂಬಾ ಕೀಳುಮಟ್ಟದಲ್ಲಿ ವರದಿ ಮಾಡಿದ್ದವು. ಇದೀಗ ತಮ್ಮ ವಿಚ್ಛೇದನದ ಕುರಿತು ಸಮಂತಾ ಅವರು ಮೊದಲ ಬಾರಿಗೆ ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ. “ನಾನು ನನ್ನನ್ನು ತುಂಬಾ ದುರ್ಬಲ ವ್ಯಕ್ತಿ ಎಂದು ಭಾವಿಸಿದ್ದೆ, ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ. ಆದರೆ, ನನ್ನನ್ನು ನಾನು ಸಮರ್ಥವಾಗಿ ನಿಭಾಯಿಸಿಕೊಂಡಿದ್ದೇನೆ” ಎಂದು ಅವರು ಹೇಳಿದ್ದಾರೆ.

ಫಿಲ್ಮ್ ಫೇರ್ ಸಂದರ್ಶನವೊಂದರಲ್ಲಿ ಮಾತನಾಡಿದ ಸಮಂತಾ, “ಜೀವನದಲ್ಲಿ ಕಷ್ಟದ ದಿನಗಳು ಬರುವುದು ಸಾಮಾನ್ಯ. ಅದನ್ನು ನಾವು ಧೈರ್ಯದಿಂದ ಎದುರಿಸಬೇಕು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ನಮಗೆ ಇರಬೇಕಾಗುತ್ತದೆ. ನಾನು ನನ್ನನ್ನು ತುಂಬಾ ದುರ್ಬಲ ವ್ಯಕ್ತಿ ಎಂದು ಭಾವಿಸಿದ್ದೆ, ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ. ಆದರೆ, ನನ್ನನ್ನು ನಾನು ಸಮರ್ಥವಾಗಿ ನಿಭಾಯಿಸಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಪುರುಷ ಪ್ರಧಾನ ನೈತಿಕತೆ ಪ್ರಶ್ನಿಸಿ ನಟಿ ಸಮಂತಾ ಪೋಸ್ಟ್‌; ಆರೋಪಗಳಿಗೆ ಸ್ಪಷ್ಟನೆ

ನನ್ನ ಮನಸ್ಥಿತಿ ಇಷ್ಟು ಬಲವಾಗಿದೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಇನ್ನು ಜೀವನದಲ್ಲಿ ಬಹಳ ಮುಂದೆ ಸಾಗಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಸಮಂತಾ ಅವರು ತಮ್ಮ ಹೆಸರಿನ ಜೊತೆಗಿದ್ದ ಅಕ್ಕಿನೇನಿ ಎಂಬ ಪದವನ್ನು ತೆಗೆದು ಹಾಕಿದ್ದರು. ಈ ಬಳಿಕ ಹಲವು ವಿವಾದಗಳು ಸೃಷ್ಟಿಯಾಗಿದ್ದವು. ಸಮಂತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಈ ವದಂತಿಗಳು ಹರಿದಾಡುತಿದ್ದ ನಡುವೆಯೇ ಸಮಂತಾ ಅವರು ತಾಮ್ಮ ವಿಚ್ಛೇದನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು. ನಂತರ ಸಮಂತಾ, ನಾಗಚೈತನ್ಯ ಇಬ್ಬರು ವಿಚ್ಛೇದನದ ಕುರಿತಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಸಮಂತಾ ಮಾತನಾಡಿದ್ದಾರೆ. ವಿಚ್ಛೇದನದ ನಂತರ ಸಮಂತಾ ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರೀತಿಯಷ್ಟೇ ಬಯಸಿದ್ದು; 200 ಕೋಟಿ ರೂ. ಜೀವನಾಂಶ ನಿರಾಕರಿಸಿದ ನಟಿ ಸಮಂತಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

0
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಪ್ರತ್ಯೇಕ ವಿಚಾರಣೆ ಮಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಬದ್ದವಾಗಿದೆ ಎಂದು...