Homeಮುಖಪುಟತ್ರಿಪುರಾ: ಮಹಿಳಾ ಪತ್ರಕರ್ತೆಯರ ವಿರುದ್ಧದ ಎಫ್‌ಐಆರ್‌‌ಗೆ ಸುಪ್ರೀಂನಿಂದ ತಡೆ

ತ್ರಿಪುರಾ: ಮಹಿಳಾ ಪತ್ರಕರ್ತೆಯರ ವಿರುದ್ಧದ ಎಫ್‌ಐಆರ್‌‌ಗೆ ಸುಪ್ರೀಂನಿಂದ ತಡೆ

ಇತ್ತೀಚೆಗೆ ನಡೆದಿದ್ದ ಕೋಮುಗಲಭೆಯ ಬಗ್ಗೆ ವರದಿ ಮಾಡಲು ರಾಜ್ಯಕ್ಕೆ ತೆರಳಿದ್ದಾಗ ಅವರನ್ನು ಪೊಲೀಸರು ಬಂಧಿಸಿದ್ದರು

- Advertisement -
- Advertisement -

ತ್ರಿಪುರಾ ರಾಜ್ಯದಲ್ಲಿ ಇತ್ತೀಚೆಗೆ ನಡೆದಿದ್ದ ಕೋಮುಗಲಭೆಯ ಬಗ್ಗೆ ವರದಿ ಮಾಡಿದ್ದಕ್ಕಾಗಿ ಪೊಲೀಸರು HW ನ್ಯೂಸ್ ನೆಟ್‌ವರ್ಕ್ ಮತ್ತು ಅದರ ಇಬ್ಬರು ಮಹಿಳಾ ಪತ್ರಕರ್ತರ ವಿರುದ್ಧ ದಾಖಲಿಸಿದ ಎರಡು ಎಫ್‌ಐಆರ್‌ಗಳ ಮೇಲಿನ ಎಲ್ಲಾ ಕ್ರಿಮಿನಲ್ ಪ್ರಕ್ರಿಯೆಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ.

ನ್ಯಾಯಮೂರ್ತಿ ಚಂದ್ರಚೂಡ್, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಸಮೃದ್ಧಿ ಸಕುನಿಯಾ ಮತ್ತು ಸ್ವರ್ಣಾ ಝಾ ಅವರು ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಸಲ್ಲಿಸಿದ ಮನವಿಗೆ ತ್ರಿಪುರಾ ಸರ್ಕಾರದ ಪ್ರತಿಕ್ರಿಯೆಯನ್ನು ಕೋರಿದೆ.

ನಾಲ್ಕು ವಾರಗಳಲ್ಲಿ ಪ್ರತಿ-ಅಫಿಡವಿಟ್ ಸಲ್ಲಿಸುವಂತೆ ಅರ್ಜಿದಾರರಿಗೆ ಪೀಠವು ಸೂಚಿಸಿದೆ.

ಇದನ್ನೂ ಓದಿ: ತ್ರಿಪುರಾ ಹಿಂಸಾಚಾರ ವರದಿ ಮಾಡಿದ ಪತ್ರಕರ್ತೆಯರನ್ನು ಬಂಧಿಸಿದ ಅಸ್ಸಾಂ ಪೊಲೀಸರು

ವರದಿಗಳ ಪ್ರಕಾರ, ರಾಜ್ಯಗಳಲ್ಲಿ ಇತ್ತೀಚಿನ ನಡೆದ ಕೋಮು ಘಟನೆಗಳ ಕುರಿತು ಬರೆಯಲು ತ್ರಿಪುರಾಕ್ಕೆ ಬಂದ ಮಹಿಳಾ ಪತ್ರಕರ್ತರನ್ನು ಅಸ್ಸಾಂ ಪೊಲೀಸರು ಅಸ್ಸಾಂ-ತ್ರಿಪುರಾ ಗಡಿಗೆ ಸಮೀಪವಿರುವ ಕರೀಂಗಂಜ್‌ನ ನೀಲಂ ಬಜಾರ್‌ನಲ್ಲಿ ಬಂಧಿಸಿದ್ದಾರೆ.

ತಮ್ಮ ವರದಿಯ ಮೂಲಕ ತ್ರಿಪುರಾ ಸರ್ಕಾರದ ಇಮೇಜ್‌ಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಪತ್ರಕರ್ತರು ಮತ್ತು ಸುದ್ದಿ ವಾಹಿನಿಯ ವಿರುದ್ಧ ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆ ವಿಎಚ್‌ಪಿಯ ಬೆಂಬಲಿಗರು ತ್ರಿಪುರಾದ ಫಾತಿಕ್ರೊಯ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.

ಹಿಂಸಾಚಾರದ ಸಂತ್ರಸ್ತರು ನೀಡಿದ ಹೇಳಿಕೆಗಳ ಆಧಾರದ ಮೇಲೆ ನಾವು ಸತ್ಯಗಳನ್ನು ಗ್ರೌಂಡ್ ರಿಪೋರ್ಟಿಂಗ್ ಮೂಲಕ ಪ್ರಕಟಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಪತ್ರಕರ್ತರು ಪೊಲೀಸ್ ಕ್ರಮವನ್ನು ಪ್ರಶ್ನಿಸಿದ್ದರು. ಜೊತೆಗೆ ತಮ್ಮ ಮೇಲೆ ಎಫ್‌ಐಆರ್‌ ದಾಖಲಿಸಿ “ಪತ್ರಿಕಾ ಸ್ವಾತಂತ್ಯ್ರಕ್ಕೆ ಕಿರುಕುಳ” ನೀಡಲಾಗುತ್ತಿದೆ ಎಂದು ಪ್ರತಿಪಾದಿಸಿದ್ದರು.

ಇದನ್ನೂ ಓದಿ: ತ್ರಿಪುರಾ ಹಿಂಸಾಚಾರ ವರದಿ ಮಾಡಿದ ಪತ್ರಕರ್ತೆಯರ ಬಂಧನ: ರಾಹುಲ್ ಗಾಂಧಿ, ಮಾಧ್ಯಮ ಸಂಸ್ಥೆಗಳಿಂದ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...