Homeಮುಖಪುಟಟಿ20 ವಿಶ್ವಕಪ್: ದಕ್ಷಿಣಾ ಆಫ್ರಿಕಾ ವಿರುದ್ಧ ಸೋತ ಭಾರತ- ಸೆಮಿಫೈನಲ್ ಹಾದಿ ತುಸು ಕಠಿಣ

ಟಿ20 ವಿಶ್ವಕಪ್: ದಕ್ಷಿಣಾ ಆಫ್ರಿಕಾ ವಿರುದ್ಧ ಸೋತ ಭಾರತ- ಸೆಮಿಫೈನಲ್ ಹಾದಿ ತುಸು ಕಠಿಣ

- Advertisement -
- Advertisement -

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಮೊದಲನೇ ಸೋಲು ಕಂಡಿದೆ. ಇಂದು ದಕ್ಷಿಣಾ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಸೋಲು ಅನುಭವಿಸಿತು. ಇದರಿಂದಾಗಿ ಎರಡನೇ ಗುಂಪಿನಲ್ಲಿ ಸೆಮಿಫೈನಲ್ ತಲುಪಲು ತೀವ್ರ ಪೈಪೋಟಿ ಏರ್ಪಟ್ಟಿದ್ದು ಭಾರತ ತಂಡವು ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್ ಪಡೆ ದಕ್ಷಿಣ ಆಫ್ರಿಕಾ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿತು. ಲುಂಗಿ ಎಂಗಿಡಿ ಮತ್ತು ಪಾರ್ನರ್ ದಾಳಿಗೆ ಸೂರ್ಯಕುಮಾರ್ ಯಾದವ್ ಹೊರುತು ಪಡಿಸಿ ಉಳಿದ ಬ್ಯಾಟ್ಸಮನ್ ಗಳ ಬಳಿ ಉತ್ತರವಿರಲಿಲ್ಲ. ಸೂರ್ಯ ಕುಮಾರ್ ಯಾದವ್ ರವರ ಪ್ರತಿರೋಧದ ಕಾರಣ (68 ರನ್ 40 ಎಸೆತಗಳಲ್ಲಿ) ಭಾರತ 9 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತು.

ಇದನ್ನೂ ಓದಿ; ಗುಜರಾತ್‌ ತೂಗುಸೇತುವೆ ದುರಂತ: ಸಾವಿನ ಸಂಖ್ಯೆ 141ಕ್ಕೆ ಏರಿಕೆ; 177 ಜನರ ರಕ್ಷಣೆ

ಸುಲಭ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಆನಂತರ ಜೊತೆಗೂಡಿದ ಏಡನ್ ಮಾಕ್ರಂ ಮತ್ತು ಡೇವಿಡ್ ಮಿಲ್ಲರ್ ರವರ 76 ರನ್ ಗಳ ಜೊತೆಯಾಟ ತಂಡದ ಗೆಲುವಿಗೆ ಸಹಕಾರಿಯಾಯಿತು. ಮಾಕ್ರಂ ಮತ್ತು ಮಿಲ್ಲರ್ ಅರ್ಧಶತಕ ಗಳಿಸಿ ಗೆಲುವಿಗೆ ನೆರವಾದರು. ಕೊನೆಯ ಓವರ್ ನಲ್ಲಿ ಮಿಲ್ಲರ್ ಮಿಂಚಿದರು.

ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಮೂರು ಪಂದ್ಯಗಳಲ್ಲಿ 02 ಗೆಲುವು ಮತ್ತು ಒಂದು ಟೈನೊಂದಿಗೆ 05 ಅಂಕ ಗಳಿಸಿ ಎರಡನೇ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಅಲ್ಲದೆ ಸೆಮಿಫೈನಲ್ ನತ್ತ ಹೆಜ್ಜೆ ಇಟ್ಟಿದೆ. ಭಾರತ ತಂಡ ಎರಡು ಗೆಲುವು ಮತ್ತು ಒಂದು ಸೋಲಿನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಭಾರತವು ಬಾಂಗ್ಲಾದೇಶ ಮುಂದಿನ ಪಂದ್ಯಗಳಲ್ಲಿ (ನವೆಂಬರ್ 2) ಮತ್ತು ಜಿಂಬಾಬ್ವೆ (ನವೆಂಬರ್ 6) ವಿರುದ್ದ ಸೆಣಸಲಿದೆ. ಈ ಮೂರು ಪಂದ್ಯಗಳನ್ನು ಗೆದ್ದಲ್ಲಿ ಅದು 08 ಪಾಯಿಂಟ್‌ಗಳೊಂದಿಗೆ ನಿರಾಂತಕವಾಗಿ ಸೆಮಿಫೈನಲ್ ತಲುಪಲಿದೆ. ಆದರೆ ಒಂದು ಪಂದ್ಯ ಸೋತರೂ ಸೆಮಿಫೈನಲ್ ಕನಸು ಕಮರಿಹೋಗುವ ಆತಂಕವಿದೆ. ಏಕೆಂದರೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಜಿಂಬಾಬ್ವೆ ತಂಡಗಳು ಸಹ ಸೆಮಿಫೈನಲ್ ರೇಸ್ ನಲ್ಲಿವೆ. ಹಾಗಾಗಿ ಭಾರತ ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಪಾಲಿನ ಆಪತ್ಬಾಂಧವ ಭರತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...