Homeಮುಖಪುಟಕ್ರಮ ಕೈಗೊಳ್ಳದಿದ್ದರೆ ಲೋಕಸಭಾ ಸದಸ್ಯತ್ವ ತ್ಯಜಿಸುವೆ: ಮುಸ್ಲಿಂ ವಿರೋಧಿ ನಿಂದನೆಗೆ ಡ್ಯಾನಿಶ್ ಅಲಿ ಪ್ರತಿಕ್ರಿಯೆ

ಕ್ರಮ ಕೈಗೊಳ್ಳದಿದ್ದರೆ ಲೋಕಸಭಾ ಸದಸ್ಯತ್ವ ತ್ಯಜಿಸುವೆ: ಮುಸ್ಲಿಂ ವಿರೋಧಿ ನಿಂದನೆಗೆ ಡ್ಯಾನಿಶ್ ಅಲಿ ಪ್ರತಿಕ್ರಿಯೆ

- Advertisement -
- Advertisement -

ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತಮ್ಮ ಲೋಕಸಭಾ ಸದಸ್ಯತ್ವವನ್ನು ತ್ಯಜಿಸುವುದಾಗಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕ ಮತ್ತು ಲೋಕಸಭಾ ಸಂಸದ ಡ್ಯಾನಿಶ್ ಅಲಿ ಹೇಳಿದ್ದಾರೆ.

ಗುರುವಾರ ಸಂಸತ್ತಿನ ಕೆಳಮನೆಯಲ್ಲಿ ಚಂದ್ರಯಾನ-3ರ ಯಶಸ್ಸಿನ ಚರ್ಚೆಯ ವೇಳೆ ಬಿಜೆಪಿ ನಾಯಕನಿಂದ ದ್ವೇಷಪೂರಿತ ಹೇಳಿಕೆ ಹೊರಬಿದ್ದಿದೆ. ”ಯೇ ಉಗ್ರವಾದಿ (ಉಗ್ರವಾದಿ), ಯೇ ಆಟಂಕ್ವಾಡಿ ಹೈ, ಉಗ್ರವಾದಿ ಹೈ, ಯೇ ಆಂತಂಕ್ವಾದಿ (ಭಯೋತ್ಪಾದಕ) ಹೈ” ಎಂದು ಹೇಳಿದ್ದಾರೆ

ಈ ಬಗ್ಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಡ್ಯಾನಿಶ್ ಅಲಿ, ”ಬಿಧುರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರವನ್ನು ಸಲ್ಲಿಸಿದ್ದೇನೆ. ಲೋಕಸಭಾ ಸ್ಪೀಕರ್ ಘಟನೆಯ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ. ಎಲ್ಲವೂ ದಾಖಲೆಯಲ್ಲಿದೆ. ಆದರೆ, ಬಿಧುರಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮತ್ತು ನನ್ನ ಹಕ್ಕುಗಳನ್ನು ರಕ್ಷಿಸದಿದ್ದರೆ, ನಾನು ಲೋಕಸಭೆ ಸದಸ್ಯತ್ವವನ್ನು ತೊರೆಯುವ ಬಗ್ಗೆ ಯೋಚಿಸುತ್ತೇನೆ” ಎಂದು ಹೇಳಿದರು.

”ಬಿಧುರಿ ಬಳಸಿರುವ ಅವಹೇಳನಕಾರಿ ಭಾಷೆ ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ” ಎಂದು ಡ್ಯಾನಿಶ್ ಅಲಿ ಹೇಳಿದ್ದಾರೆ.

”ಚುನಾಯಿತ ಸಂಸದರ ವಿರುದ್ಧ ಇಂತಹ ಅಸಂಸದೀಯ ಭಾಷೆ ಬಳಸಿರುವುದು ಇದೇ ಮೊದಲು, ನನಗೆ ನಿದ್ರೆ ಬರಲಿಲ್ಲ, ನನ್ನ ಆತ್ಮವು ನಡುಗಿತು. ಚುನಾಯಿತ ಸಂಸದರು ಈ ಪರಿಸ್ಥಿತಿಯನ್ನು ಎದುರಿಸಿದರೆ, ಸಾಮಾನ್ಯ ಜನರ ಗತಿಯೇನು? ಭಾರವಾದ ಹೃದಯದಿಂದ, ನಾನು ಸಹ ಈ ಸಂಸತ್ತನ್ನು ತೊರೆಯಲು ಯೋಚಿಸುತ್ತಿದ್ದೇನೆ ಏಕೆಂದರೆ ಇದನ್ನು ಸಹಿಸಲಾಗುವುದಿಲ್ಲ” ಎಂದು ಅಸಮಾಧಾನವನ್ನು ಹೊರಹಾಕಿದರು.

”ನಾವು ಆಯ್ಕೆಯಾಗಿದ್ದೇವೆ ಇದಕ್ಕಾಗಿಯೇ? ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದು ಇದಕ್ಕಾಗಿಯೇ..? ಅವರು (ಬಿಜೆಪಿ) ನನಗೆ ಮಾತ್ರ ಅವಮಾನ ಮಾಡಲಿಲ್ಲ, ನನ್ನ ಹಿಂಬಾಲಕರಿಗೆ ಅವಮಾನ ಮಾಡಿ, ಇಡೀ ರಾಷ್ಟ್ರಕ್ಕೆ ಅವಮಾನ ಮಾಡಿದರು… ಈಗ ನೋಡೋಣ ಬಿಜೆಪಿ ರಮೇಶ್ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳುತ್ತಾ ಅಥವಾ ಬಡ್ತಿ ನೀಡಿ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರಾ… ಬಹುಶಃ ಇದು ಅವರ ನಡುವೆ ಪೈಪೋಟಿಯಾಗಿ ಪರಿಣಮಿಸಿದೆ. ಬಿಜೆಪಿ ನಾಯಕರು ಹೊರಗೆ ಮಾತ್ರವಲ್ಲದೆ ಸಂಸತ್ತಿನ ಒಳಗೂ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದರು.

ಬಿಧುರಿ ಅವರ ಹೇಳಿಕೆಗೆ ವಿರೋಧ ಪಕ್ಷದ ಸದಸ್ಯರು ಬಿಜೆಪಿ ಸಂಸದರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಇದನ್ನೂ ಓದಿ: ‘ಮುಲ್ಲಾ ಭಯೋತ್ಪಾದಕ’: ಲೋಕಸಭೆಯಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ನಿಂದನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read