Homeಕರ್ನಾಟಕಭಾರತ ಸರ್ಕಾರ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ ದೇಶ ವಿಭಜನೆಯಾಗಬಹುದು: ಬರಾಕ್ ಒಬಾಮಾ ಎಚ್ಚರಿಕೆ

ಭಾರತ ಸರ್ಕಾರ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ ದೇಶ ವಿಭಜನೆಯಾಗಬಹುದು: ಬರಾಕ್ ಒಬಾಮಾ ಎಚ್ಚರಿಕೆ

- Advertisement -
- Advertisement -

ಭಾರತ ಸರ್ಕಾರವು ತನ್ನ ಜನಾಂಗೀಯ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ ದೇಶ ವಿಭಜನೆಯಾಗಲು ಪ್ರಾರಂಭಿಸಬಹುದು ಎಂದು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಶುಕ್ರವಾರ ಎಚ್ಚರಿಕೆ ನಿಡಿದ್ದಾರೆ.

ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿಯೇ ಒಬಾಮಾ ಈ ಹೇಳಿಕೆ ನೀಡಿದ್ದಾರೆ. ಗುರುವಾರ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಮೋದಿ ಭೇಟಿ ಮಾಡಿದರು.

ಹವಾಮಾನ ಬದಲಾವಣೆ ಮತ್ತು ಇತರ ಕ್ಷೇತ್ರಗಳ ಬಗ್ಗೆ ಮೋದಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂದು ಒಬಾಮಾ ಒಪ್ಪಿಕೊಂಡರು. ಆದರೆ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿ, ರಾಜತಾಂತ್ರಿಕ ಮಾತುಕತೆಗಳಿಗೆ ಪ್ರವೇಶಿಸಬೇಕು ಎಂದು ಒಬಾಮಾ ಪರೋಕ್ಷವಾಗಿ ಜೋ ಬೈಡನ್ ಅವರಿಗೆ ಹೇಳಿದರು.

ಅಮೆರಿಕದ ಅಧ್ಯಕ್ಷರು ಮೋದಿ ಅವರನ್ನು ಭೇಟಿಯಾದರೆ, ಬಹುಸಂಖ್ಯಾತ-ಹಿಂದೂ ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ತಿಳಿಹೇಳುವುದು ಉತ್ತಮ ಎಂದು ಒಬಾಮಾ ಹೇಳಿದರು.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ”ಮೋದಿಯವರೊಂದಿಗೆ ನಾನು ಮಾತುಕತೆ ನಡೆಸಿದ್ದರೆ, ನೀವು ಭಾರತದಲ್ಲಿ ಜನಾಂಗೀಯ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ, ಭಾರತವು ಒಂದು ಹಂತದಲ್ಲಿ ಬೇರ್ಪಡಲು ಪ್ರಾರಂಭಿಸುವ ಬಲವಾದ ಸಾಧ್ಯತೆಯಿದೆ ಎಂದು ಹೇಳುತ್ತಿದ್ದೆ. ನೀವು ಈಗಾಗಲೇ ದೊಡ್ಡಮಟ್ಟದ ಆಂತರಿಕ ಸಂಘರ್ಷಗಳನ್ನು ಎದುರಿಸುತ್ತಿದ್ದಿರಿ, ಈ ರೀತಿ ಮುಂದುವರೆದರೆ ಏನಾಗುತ್ತದೆ ಎನ್ನುವುದು ನಮಗೆ ಗೊತ್ತಿದೆ. ಇದು ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗುತ್ತದೆ” ಎಂದು ಒಬಾಮಾ ಹೇಳಿದ್ದಾರೆ.

”ಅಮೆರಿಕ ಅಧ್ಯಕ್ಷರು ಬಹಳಷ್ಟು ಷೇರುಗಳನ್ನು ಹೊಂದಿದ್ದಾರೆ ಮತ್ತು ನಾನು ಅಧ್ಯಕ್ಷನಾಗಿದ್ದಾಗ, ನಾನು ಕೆಲವು ಸಂದರ್ಭಗಳಲ್ಲಿ ಮಿತ್ರಪಕ್ಷಗಳ ವ್ಯಕ್ತಿಗಳೊಂದಿಗೆ ವ್ಯವಹರಿಸಿದ್ದೇನೆ. ಅವರು ಸರ್ಕಾರ ಮತ್ತು ರಾಜಕೀಯ ಪಕ್ಷಗಳನ್ನು ಆದರ್ಶಪ್ರಾಯವಾಗಿ, ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಸುತ್ತಾರೆಯೇ? ಎಂದು ನೀವು ನನ್ನನ್ನು ಖಾಸಗಿಯಾಗಿ ಕೇಳಿದರೆ, ನಾನು ಇಲ್ಲ ಎಂದು ಹೇಳಬೇಕಾಗಿದೆ” ಎಂದರು.

ಇದನ್ನೂ ಓದಿ: ಕ್ರೈಂ ಮಿನಿಸ್ಟರ್ ಆಫ್ ಇಂಡಿಯಾ ಹ್ಯಾಷ್‌ಟ್ಯಾಗ್: ಮೋದಿ ಅಮೆರಿಕ ಭೇಟಿ ವಿರೋಧಿಸಿ ಪ್ರತಿಭಟನೆ

ಒಬಾಮಾ ಅವರ ಸಂದರ್ಶನಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಮತ್ತು ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರಿನೇಟ್ ಅವರು ಟ್ವೀಟ್ ಮಾಡಿದ್ದು, ”ಈಗ ಮೋದಿಯವರ ಸ್ನೇಹಿತ ‘ಬರಾಕ್’ ಅವರಿಗೆ ಒಂದು ಸಂದೇಶ ಕಾದಿದೆ. ಅದೇನೆಂದರೆ, ಮೋದಿಯವರನ್ನು ವಿರೋಧಿಸುವ ಅಂತಾರಾಷ್ಟ್ರೀಯ ಪಿತೂರಿಯ ಭಾಗವಾಗಿದ್ದಾರೆಯೇ? ಎಂದು ಅವರ ಭಕ್ತರು ಆರೋಪಿಸುತ್ತಾರೆ!” ಎಂದು ಬರೆದಿದ್ದಾರೆ.

ಕಳೆದ ವಾರದಿಂದ, ರಾಜಕೀಯ ನಾಯಕರು ಮತ್ತು ಮಾನವ ಹಕ್ಕುಗಳ ಸಂಘಟನೆಗಳು, ”ಭಾರತದಲ್ಲಿ ಪ್ರಜಾಪ್ರಭುತ್ವದ ಹಿನ್ನಡೆಯ ಬಗ್ಗೆ ಮೋದಿ ಅವರೊಂದಿಗೆ ಕಳವಳ ವ್ಯಕ್ತಪಡಿಸುವಂತೆ ಬಿಡೆನ್ ಅವರನ್ನು ಒತ್ತಾಯಿಸುತ್ತಿದ್ದಾರೆ.

ಮಂಗಳವಾರ, 75 ಅಮೆರಿಕ ಡೆಮಾಕ್ರಟಿಕ್ ಸೆನೆಟರ್‌ಗಳು ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರು ಮೋದಿ ಅವರೊಂದಿಗೆ ಮಾನವ ಹಕ್ಕುಗಳ ಸಮಸ್ಯೆಗಳನ್ನು ಎತ್ತುವಂತೆ ಒತ್ತಾಯಿಸಿದರು.

ಬರ್ನಿ ಸ್ಯಾಂಡರ್ಸ್, ಇಲ್ಹಾನ್ ಒಮರ್ ಮತ್ತು ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್ ಸೇರಿದಂತೆ ಹಲವಾರು ಶಾಸಕರು ಗುರುವಾರ ನಂತರ ಅಮೆರಿಕ ಕಾಂಗ್ರೆಸ್‌ನಲ್ಲಿ ಮೋದಿ ಅವರ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿದರು.

ಆದಾಗ್ಯೂ, ಭಾರತದ ಪ್ರಜಾಸತ್ತಾತ್ಮಕ ಹಿನ್ನಡೆಯ ಬಗ್ಗೆ ಕಳವಳದ ಬಗ್ಗೆ ಬೈಡನ್ ಅವರು ಮೋದಿ ಅವರೊಂದಿಗೆ ಚರ್ಚಿಸುವುದಿಲ್ಲ ಎಂದು ಶ್ವೇತಭವನ ಹೇಳಿದೆ. ಅಂತಿಮವಾಗಿ, ”ಭಾರತದಲ್ಲಿ ರಾಜಕೀಯ ಮತ್ತು ಪ್ರಜಾಪ್ರಭುತ್ವ ಎಲ್ಲಿಗೆ ಹೋಗುತ್ತದೆ ಎಂಬ ಪ್ರಶ್ನೆಯನ್ನು ಭಾರತದೊಳಗೆ ಭಾರತೀಯರು ನಿರ್ಧರಿಸುತ್ತಾರೆ. ಅದನ್ನು ಯುನೈಟೆಡ್ ಸ್ಟೇಟ್ಸ್ ನಿರ್ಧರಿಸುವುದಿಲ್ಲ” ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.

ಅಮೆರಿಕ ಕಾಂಗ್ರೆಸ್‌ನ ಇಬ್ಬರು ಮುಸ್ಲಿಂ ಮಹಿಳಾ ಸದಸ್ಯರಾದ ಇಲ್ಹಾನ್ ಒಮರ್ ಮತ್ತು ರಶೀದಾ ತ್ಲೈಬ್ – ಪ್ರತಿನಿಧಿ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕೋರ್ಟೆಜ್ ಅವರು ಭಾರತೀಯ ಭಿನ್ನಮತೀಯರು ಮತ್ತು ಮುಸ್ಲಿಮರನ್ನು ನಿಂದಿಸಿದ ಆರೋಪಗಳನ್ನು ಉಲ್ಲೇಖಿಸಿ, ಗುರುವಾರ ಮೋದಿ ಅವರ ಭಾಷಣವನ್ನು ಬಹಿಷ್ಕರಿಸುವುದಾಗಿ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...