Homeಅಂತರಾಷ್ಟ್ರೀಯಕ್ರೈಂ ಮಿನಿಸ್ಟರ್ ಆಫ್ ಇಂಡಿಯಾ ಹ್ಯಾಷ್‌ಟ್ಯಾಗ್: ಮೋದಿ ಅಮೆರಿಕ ಭೇಟಿ ವಿರೋಧಿಸಿ ಪ್ರತಿಭಟನೆ

ಕ್ರೈಂ ಮಿನಿಸ್ಟರ್ ಆಫ್ ಇಂಡಿಯಾ ಹ್ಯಾಷ್‌ಟ್ಯಾಗ್: ಮೋದಿ ಅಮೆರಿಕ ಭೇಟಿ ವಿರೋಧಿಸಿ ಪ್ರತಿಭಟನೆ

ಹೆ ಜೋ ಬೈಡನ್, ಮೋದಿಯನ್ನು ಕೇಳಿ, ಭಾರತವೇಕೆ ನರಮೇಧದ ಹೊಸ್ತಿಲಲ್ಲಿದೆ ಎಂಬ ಫಲಕಗಳು ನ್ಯೂಯಾರ್ಕ್ ನಗರದಾದ್ಯಂತ ರಾರಾಜಿಸುತ್ತಿವೆ.

- Advertisement -
- Advertisement -

ಹೆ, ಜೋ ಬೈಡನ್ ಮೋದಿಯನ್ನು ಕೇಳಿ ವಿದ್ಯಾರ್ಥಿ ಕಾರ್ಯಕರ್ತ ಉಮರ್ ಖಾಲಿದ್ ವಿಚಾರಣೆ ಎದುರಿಸದೆ ಏಕೆ 1000 ದಿನಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ? #ಕ್ರೈಂ ಮಿನಿಸ್ಟರ್ ಆಫ್ ಇಂಡಿಯಾ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ಈ ರೀತಿಯ ಭಿತ್ತಿಫಲಕಗಳನ್ನು ಬಳಸಿ ಮೋದಿ ಅಮೆರಿಕ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಹೆ ಜೋ ಬೈಡನ್, ಮೋದಿಯನ್ನು ಕೇಳಿ ಒಲಿಂಪಿಕ್ಸ್ ಪದಕಗಳನ್ನು ಗೆದ್ದ ಮಹಿಳಾ ಕುಸ್ತಿಪಟುಗಳು ಮೋದಿಯವರ ಸಚಿವನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದನ್ನು ವಿರೋಧಿಸಿ ಪ್ರತಿಭಟಿಸಿದಾಗ ಅವರ ಮೇಲೆ ಹಿಂಸಾಚಾರ ಎಸಗಿದ್ದು ಏಕೆ? ಎಂಬ ಡಿಜಿಟಲ್ ಹೋರ್ಡಿಂಗ್‌ಗಳು ಕಂಡು ಬರುತ್ತಿವೆ.

ಹೆ, ಜೋ ಬೈಡನ್, ಪ್ರಶ್ನೆ: 2005-2014ರವರೆಗೆ ಏಕೆ ಅಮೆರಿಕ ಮೋದಿಯವರ ವೀಸಾವನ್ನು ರದ್ದುಗೊಳಿಸಿತ್ತು? ಉತ್ತರ: ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ಕಾರಣಕ್ಕಾಗಿ.. ಮತ್ತು ಈ ಕಾರಣಕ್ಕೆ ವೀಸಾ ನಿರಾಕರಿಸಲ್ಪಟ್ಟ ಏಕೈಕ ವ್ಯಕ್ತಿ ಮೋದಿ. #ಕ್ರೈಂ ಮಿನಿಸ್ಟರ್ ಆಫ್ ಇಂಡಿಯಾ ಎಂದು ಸಹ ಪ್ರದರ್ಶಿಸಲಾಗುತ್ತಿದೆ.

ನಿಮಗಿದು ಗೊತ್ತೆ, ಮೋದಿ ಆಳ್ವಿಕೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ದಲಿತರ ಮೇಲೆ ಮಾಬ್ ಲಿಂಚಿಂಗ್‌ಗಳು ಮಿತಿ ಮೀರಿವೆ. ಆದರೆ ಇದಕ್ಕೆ ಯಾರೂ ಉತ್ತರದಾಯಿಗಳಲ್ಲ.. ಹೇ ಜೋ ಬಿಡೆನ್, ಇಂದು ಭಾರತವೇಕೆ ನರಮೇಧದ ಹೊಸ್ತಿಲಲ್ಲಿದೆ ಎಂದು ಮೋದಿಯವರನ್ನು ಕೇಳಿ ಎಂಬ ವಿಡಿಯೋ ತುಣುಕುಗಳು ಬಿತ್ತರವಾಗುತ್ತಿವೆ.

ಇದನ್ನೂ ಓದಿ: ಪ್ರಧಾನಿ ಮೋದಿಯವರ ಬಡವಿರೋಧಿ, ಸೇಡಿನ ರಾಜಕಾರಣದ ಕ್ರೋನಾಲಜಿ ವಿವರಿಸಿದ ಜೈರಾಮ್ ರಮೇಶ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದ ಎಸ್‌ಐಟಿ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಇದೀಗ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾಗುತ್ತಿದ್ದಂತೆ...