Homeಕರ್ನಾಟಕಇತಿಹಾಸ ನೋಡಿದರೆ ಭರವಸೆ ಕಳೆದುಕೊಳ್ಳಬೇಕಿಲ್ಲ: ಅರುಂಧತಿ ರಾಯ್

ಇತಿಹಾಸ ನೋಡಿದರೆ ಭರವಸೆ ಕಳೆದುಕೊಳ್ಳಬೇಕಿಲ್ಲ: ಅರುಂಧತಿ ರಾಯ್

ಗೌರಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ದಿಟ್ಟ ಪತ್ರಕರ್ತೆ ‘ಗೌರಿ ಲಂಕೇಶ್ ನೆನಪು’ ಕಾರ್ಯಕ್ರಮ ಬೆಂಗಳೂರಿನಲ್ಲಿ ಸೋಮವಾರ ನಡೆಯಿತು.

- Advertisement -
- Advertisement -

“ಇತಿಹಾಸವನ್ನು ನೋಡಿದರೆ, ಅಲ್ಲಿನ ಕ್ರಾಂತಿಗಳನ್ನು ಗಮನಿಸಿದರೆ ನಾವು ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ” ಎಂದು ಬೂಕರ್‌ ಪ್ರಶಸ್ತಿ ವಿಜೇತ ಲೇಖಕಿ ಅರುಂಧತಿ ರಾಯ್‌ ಹೇಳಿದರು.

ಬೆಂಗಳೂರಿನಲ್ಲಿ ಗೌರಿ ಮೆಮೋರಿಯಲ್ ಟ್ರಸ್ಟ್ ಏರ್ಪಡಿಸಿದ್ದ ದಿಟ್ಟ ಪತ್ರಕರ್ತೆ ‘ಗೌರಿ ಲಂಕೇಶ್ ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೊತೆಗೆ ಹಿರಿಯ ಪತ್ರಕರ್ತರಾದ ಡಿ.ಉಮಾಪತಿ ಹಾಗೂ ಭಾಷಾ ವಿದ್ವಾಂಸರಾದ ಜಿ.ಎನ್‌.ದೇವಿಯವರು ನಡೆಸಿಕೊಟ್ಟ ಸಂವಾದದಲ್ಲಿ ಪ್ರತಿಕ್ರಿಯೆ ನೀಡಿದರು.

ಆಶಾವಾದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ರಭುತ್ವದಲ್ಲಿ ಸಮಸ್ಯೆ ಇಲ್ಲ. ಸಮಾಜದಲ್ಲಿ ಸಮಸ್ಯೆ ಇದೆ. ಜಾತಿ ವರ್ಣವ್ಯವಸ್ಥೆಯ ಅನುಕರಣೆ, ಶ್ರೇಣಿಕೃತ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ. ಬೇರೆ ದೇಶಗಳಲ್ಲಿ ಏನಾಗಿದೆ? ಮಹಾಯುದ್ಧಗಳಾಗಲು ಸಾಕಷ್ಟು ವರ್ಷಗಳು ಬೇಕಾದವು. ನಾವಿನ್ನು ಆರಂಭಿಕ ಹಂತದಲ್ಲಿದ್ದೇವೆ. ಮೋದಿ ಅಧಿಕಾರಕ್ಕೆ ಬಂದು ಏಳು ವರ್ಷಗಳು ಕಳೆದಿವೆ” ಎಂದು ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಆರ್‌ಎಸ್‌ಎಸ್ ನೂರು ವರ್ಷಗಳಿಂದ ಕೆಲಸ ಮಾಡುತ್ತಿದೆ. ಒಂದೇ ದೃಷ್ಟಿ, ಒಂದೇ ಗುರಿ, ಒಂದೇ ದ್ವೇಷ ಇದ್ದವರು ಮಾತ್ರ ಹಾಗೆ ಕೆಲಸ ಮಾಡುತ್ತಾರೆ. ಜಗತ್ತಿನಲ್ಲಿ ಯಾವುದೂ ಶಾಶ್ವತವಾಗಿ ಇರಲು ಸಾಧ್ಯವಿಲ್ಲ” ಎಂದು ಆಶಾವಾದ ವ್ಯಕ್ತಪಡಿಸಿದರು.

ಗೌರಿ ನೆನಪು ಕಾರ್ಯಕ್ರಮದಲ್ಲಿ ಅರುಂಧತಿ ರಾಯ್ ಮಾತನಾಡಿದರು

“ಗೌರಿ ಎಂಥವರಾಗಿದ್ದರೆಂದರೆ, ಪ್ರತಿಸಲ ನಾನೇನಾದರೂ ಬರೆದಾಗಲೂ ತುಂಬ ಉತ್ಸಾಹದಿಂದ ಕರೆ ಮಾಡುತ್ತಿದ್ದರು. ಅರುಂಧತಿ, ನಾನಿದನ್ನು ಅನುವಾದಿಸಲೇ ಎಂದು ಕೇಳುತ್ತಿದ್ದರು. ಐ ಲವ್ ಯೂ ಎನ್ನುತ್ತಿದ್ದರು. ಇಂಥ ಬಾಂಧವ್ಯ ನಮ್ಮಿಬ್ಬರ ಮಧ್ಯೆ ಇತ್ತು. ಗೌರಿ ಇಂದು ಇಲ್ಲ. ನಾನು ತುಂಬ ಗೌರವಿಸುವ ಎಲ್ಲರೂ ಇಲ್ಲಿದ್ದೀರಿ. ಮೂರು ದಿನಗಳ ಹಿಂದೆ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ಇಂಥ ಹೊತ್ತಲ್ಲಿ ಆಕೆಯ ಸಮಾಧಿ ಸ್ಥಳ ಬಿಟ್ಟು ಬರಲು ಮನಸ್ಸು ಒಪ್ಪುತ್ತದೊ ಇಲ್ಲವೊ ಗೊತ್ತಿರಲಿಲ್ಲ. ಆದರೆ ನಾನಿಲ್ಲಿಗೆ ಗೌರಿಗಾಗಿ ಬರದೇ ಹೋದರೆ ನನ್ನ ತಾಯಿಯೇ ನನ್ನ ಬಗ್ಗೆ ನಾಚಿಕೆಪಡುತ್ತಿದ್ದರು ಎಂದು ಭಾವಿಸಿದ್ದೇನೆ” ಎಂದು ತಿಳಿಸಿದರು.

ಇದನ್ನೂ ಓದಿರಿ: ಗೌರಿಯ ದನಿ ಅಡಗುವುದಿಲ್ಲ: ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಒಡನಾಡಿಗಳ ಪ್ರತಿಜ್ಞೆ

ತೀಸ್ತಾ ಈಗಷ್ಟೆ ಜೈಲಿನಿಂದ ಹೊರಬಂದಿದ್ದಾರೆ. ಬಿಲ್ಕಿಸ್ ಬಾನೋ ವಿಚಾರದಲ್ಲಿ ಏನಾಯಿತೆಂಬುದು ನಮಗೆಲ್ಲಾ ಗೊತ್ತಿದೆ. ಸರ್ಕಾರ ಯಾವ ಬಗೆಯ ಸಂದೇಶವನ್ನು ನಮಗೆ ಕೊಡಲು ಯತ್ನಿಸುತ್ತಿದೆ ಎಂಬುದನ್ನು ಯೋಚಿಸುತ್ತಿದ್ದೇನೆ. ತೀಸ್ತಾ ಜೈಲಿನಲ್ಲಿದ್ದಾಗ ನಾನು, ನ್ಯಾಯ ಮತ್ತು ಶಾಂತಿಗಾಗಿ ನಿಂತಿರುವವರು ಗುಜರಾತ್ ಹತ್ಯಾಕಾಂಡದ ಅಧ್ಯಯನದಲ್ಲಿ ಸಂಗ್ರಹಿಸಿದ ಕಾನೂನು ದಾಖಲೆಗಳನ್ನು ಬಹಳ ಗಮನವಿಟ್ಟು ಓದುತ್ತಿದ್ದೆ. ಇದೊಂದು ನಿಜಕ್ಕೂ ಅಸಾಧಾರಣ ಕೆಲಸ ಎಂದು ಬಣ್ಣಿಸಿದರು.

ಗೌರಿ ನೆನಪು ಕಾರ್ಯಕ್ರಮದಲ್ಲಿ ಜಿ.ಎನ್‌.ದೇವಿ ಹಾಗೂ ಅರುಂಧತಿ ರಾಯ್‌ ಸಂವಾದ ನಡೆಸಿದರು.

ಫ್ಯಾಸಿಸ್ಟ್ ವ್ಯವಸ್ಥೆಯೊಳಗೂ ಎಲ್ಲೋ ನ್ಯಾಯ ಸಿಕ್ಕೀತು ಎಂಬ ಸಣ್ಣ ಆಶಾವಾದ ಹೊಂದಿದ್ದವರಲ್ಲಿ ನಾನೂ ಒಬ್ಬಳು. ತೀಸ್ತಾ ಮತ್ತು ಸಂಘಟನೆಗಳು ಮಾಡಿರುವ ಕೆಲಸ ಅದ್ಭುತವಾದುದು. ಯಾಕೆಂದರೆ ಮುಂದೊಂದು ದಿನ ಈ ಖಚಿತ ದಾಖಲಾತಿಗಳ ಸಂಪುಟವೇ ಗುಜರಾತ್‌ನಲ್ಲಿ ಏನು ಸಂಭವಿಸಿತೊ ಆ ಕ್ರೈಮ್‌ಗೆ ಸಾಕ್ಷ್ಯ ಒದಗಿಸಬೇಕು ಎಂದು ತಿಳಿಸಿದರು.

ದೇಶದಲ್ಲೆಲ್ಲೊ ರೈಲ್ವೆ ದುರಂತ ಘಟಿಸಿದರೆ ರೈಲ್ವೆ ಮಂತ್ರಿಯೇ ರಾಜೀನಾಮೆ ಕೊಡುತ್ತಿದ್ದ ದೇಶವಾಗಿತ್ತು ನಮ್ಮದು. ಆದರೆ ಇಂದು ಹತ್ಯಾಕಾಂಡದ ಚುನಾವಣಾ ಲಾಭವನ್ನು ಮಾಡಿಕೊಳ್ಳುವ, ಹೊಸ ಹತ್ಯಾಕಾಂಡಗಳ ಮತ್ತು ಹಳೆಯ ಹತ್ಯಾಕಾಂಡಗಳ ಲಾಭ ಗಿಟ್ಟಿಸುವ ಜನರನ್ನು ನೋಡುತ್ತಿದ್ದೇವೆ. ಗುಜರಾತ್ ಹತ್ಯಾಕಾಂಡ ಸಂಭವಿಸಿದಾಗ ಬಿಜೆಪಿ ಮತ್ತು ನರೇಂದ್ರ ಮೋದಿ ಚುನಾವಣೆಗೆ ಕರೆ ಕೊಡುವ ತರಾತುರಿ ತೋರಿಸಿದ್ದನ್ನು ಕಂಡೆವು. ಯಾಕೆ ಅಂಥ ತುರ್ತು ಇತ್ತು? ಏನಿತ್ತು ಅಂಥ ತುರ್ತು? ಎಂದು ಪ್ರಶ್ನಿಸಿದರು.

ಗೌರಿ ನೆನಪು ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ

ಅತ್ಯಾಚಾರಿಗಳು, ಹಂತಕರು ಬಿಡುಗಡೆಯಾದರು. ಯಾವ ಸಂದೇಶವನ್ನು ಕೊಡುತ್ತಿದೆ ಇದು? ಅವರು ಮತ್ತೆ ಜೈಲುಪಾಲಾಗಲೂಬಹುದು. ಆದರೆ ಅವರ ಬಿಡುಗಡೆಗೆ ಕಾರಣರಾದ ಮಂದಿ, ಅವರನ್ನು ಕಾನೂನಾತ್ಮಕ ಪ್ರಕ್ರಿಯೆಯ ಮೇಲೆ ಬಿಡುಗಡೆ ಮಾಡಿದವರು – ಇಲ್ಲಿ ಎಲ್ಲದರ ದುರ್ಬಳಕೆಯಾಗಿದ್ದಿರಬಹುದು, ಆದರೆ ಯಾರೂ ಅದನ್ನು ಹೇಳುತ್ತಿಲ್ಲ – ಸಮಿತಿಯಲ್ಲಿದ್ದ ಹೆಚ್ಚಿನವರು ಬಿಜೆಪಿಯವರೇ. ಅವರ ಪ್ರಕಾರ, ಈಗ ಶಿಕ್ಷೆಗೊಳಗಾದವರಾರೂ ಅಂಥ ಅಪರಾಧ ಎಸಗುವುದಕ್ಕೆ ಸಾಧ್ಯವೇ ಇಲ್ಲ, ಯಾಕೆಂದರೆ ಅವರು ಬ್ರಾಹ್ಮಣರು ಎಂದು ವಿಷಾದಿಸಿದರು.

ಕಾಂಗ್ರೆಸ್ ಮುಕ್ತ ಭಾರತ ಅಭಿಯಾನದಲ್ಲಿ ಪಕ್ಷವೊಂದು ತೊಡಗಿದೆ ಎಂದರೆ ಏನರ್ಥ? ನಿಜವಾಗಿಯೂ ಅವರು ಏನನ್ನು ಹೇಳುತ್ತಿದ್ದಾರೆ? ಪ್ರತಿಪಕ್ಷವೇ ಇರಕೂಡದೆಂಬ ಸ್ಥಿತಿ. ಪ್ರತಿಪಕ್ಷವಿರದ ಪ್ರಜಾಪ್ರಭುತ್ವ. ಅಂಥ ಸನ್ನಿವೇಶವೊಂದು ಇರದು. ವಿರೋಧಪಕ್ಷವಿಲ್ಲದ ಪ್ರಜಾಪ್ರಭುತ್ವವು ಸಾಧ್ಯವೇ ಇಲ್ಲ. ಎತ್ತ ಸಾಗಿದ್ದೇವೆ ಎಂಬುದನ್ನು ಅವರು ಸ್ಪಷ್ಟವಾಗಿ ಸೂಚಿಸುತ್ತಿದ್ದಾರೆ ಎಂದು ಎಚ್ಚರಿಸಿದರು.

ಗೌರಿ ನೆನಪು ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ

ಸಂವಿಧಾನವಿದೆ, ಕಾನೂನುಗಳಿವೆ, ಆದರೆ ಎಲ್ಲವೂ ನಿಮ್ಮ ಜಾತಿ, ಧರ್ಮ, ಲಿಂಗದ ಮೇಲೆ ಅವಲಂಬಿತ. ನೀವ್ಯಾರು ಎಂಬುದರ ಮೇಲೆ ಕಾನೂನು ಅನ್ವಯವಾಗುತ್ತದೆ. ಇಂಥದೊಂದು ರೀತಿ ಬಹುಕಾಲದಿಂದ ನಡೆದುಬಂದಿದೆ ಎಂದ ಅವರು, ನಮ್ಮಲ್ಲಿ ಚುನಾವಣೆಯಿದೆ, ಆದರೆ ಚುನಾವಣಾ ವ್ಯವಸ್ಥೆ ಏನಾಗಿದೆ ಎಂಬುದು ಗೊತ್ತಿದೆ. ವಿಶ್ವದಲ್ಲಿಯೇ ಶ್ರೀಮಂತ ಪಕ್ಷ ನಮ್ಮಲ್ಲಿದೆ. ಈ ಅತಿ ಶ್ರೀಮಂತ ಪಕ್ಷ ಸಂಸದರನ್ನು, ಶಾಸಕರನ್ನು ಖರೀದಿಸಬಲ್ಲದು. ಹೊಸ ಜನಾಂದೋಲನವೇನಾದರೂ ನಡೆದರೆ ನನ್ನದೊಂದು ಸಲಹೆಯಿದೆ. ಚುನಾಯಿತ ಪ್ರತಿನಿಧಿಗಳಿಗೆ ಸಂಸದರು ಮತ್ತು ಶಾಸಕರಿಗೆ ಕನಿಷ್ಠ ಬೆಂಬಲ ಬೆಲೆಗಾಗಿ ಕಿಸಾನ್ ಆಂದೋಲನದ ರೀತಿಯಲ್ಲಿ ಅಭಿಯಾನ ನಡೆಸಬೇಕು ಎಂದು ಆಶಿಸಿದರು.

ಸ್ವಾತಂತ್ರ್ಯದ 75ನೇ ವರ್ಷದಲ್ಲಿದ್ದೇವೆ. ಪ್ಲ್ಯಾಟ್ಗಳ ದಟ್ಟಣೆಯಿರುವ ದೆಹಲಿ ನಗರಿಯಲ್ಲಿ ಅದೆಷ್ಟೋ ಮಂದಿ ಬೀದಿಬದಿಯಲ್ಲೇ ಹಸಿವಿನಿಂದ ಬಳಲುತ್ತಿದ್ದಾರೆ. ಈಗ ಎಲ್ಲಿಗೆ ಬಂದಿದೆಯೆಂದರೆ, 5 ಕೆಜಿ ಹಿಟ್ಟು ಕೊಡುವುದನ್ನೇ ಅಪಾಯಕಾರಿಯೆನ್ನುವಂತೆ ಬಿಂಬಿಸಲಾಗುತ್ತಿದೆ. ಅದೇ ಮೋದಿ ಉಚಿತವಾಗಿ ಉಪ್ಪು ಕೊಟ್ಟರೆ, ಉಪ್ಪಿನ ಋಣ ತೀರಿಸುವುದಕ್ಕಾದರೂ ನಮಗೆ ಓಟು ಕೊಡಿ ಎಂದು ಕೇಳದಿರಲಾರರು ಎಂದರು.

ಇಂಥ ಸ್ಥಿತಿಯಲ್ಲಿ ಯಾವ ವಸಾಹತುಸಾಹಿ ವ್ಯವಸ್ಥೆಯಡಿಯಲ್ಲಿ ಇದ್ದೆವೊ ಅಲ್ಲಿಂದಲೇ ಆರಂಭಿಸಬೇಕಾಗಿದೆ. ಬೀದಿಯಿಂದಲೇ ಆರಂಭಿಸಬೇಕಾಗಿದೆ. ಬೀದಿಗಳೂ ಇಂದು ವಿಷಮಯವಾಗಿವೆ. ಟಿವಿ ಚಾನೆಲ್ಗಳ ಮೂಲಕ ಮಾತ್ರವಲ್ಲ, ಸೀರಿಯಲ್ಲು ಸಿನಿಮಾ ಎಲ್ಲದರ ಮೂಲಕವೂ ದಿನದ ಇಪ್ಪತ್ನಾಲ್ಕು ಗಂಟೆಯೂ ವಿಷಬೀಜ ಬಿತ್ತಲಾಗುತ್ತಿದೆ. ಎಲ್ಲವನ್ನೂ ಶೂನ್ಯದಿಂದಲೇ ಆರಂಭಿಸಬೇಕಾಗಿದೆ. ಈಗಿರುವುದಕ್ಕೊಂದು ಕೊನೆಯಿದ್ದೇ ಇದೆ. ಅದು ಭೌತ ನಿಯಮ. ಇದು ಕೊನೆಯಾಗಲೇಬೇಕು. ಭರವಸೆ ಕಳೆದುಕೊಳ್ಳಬೇಕಿಲ್ಲ ಎಂದರು.

ಇವರು ಫ್ಯಾಸಿಸ್ಟ್ ಶಕ್ತಿಗಳೋ ಇಲ್ಲವೋ ಎಂದು ಚರ್ಚೆ ಮಾಡುತ್ತಲೇ ಇದ್ದೇವೆ. ಆದರೆ ಇವರು ಬಹಳ ಸ್ಪಷ್ಟವಾಗಿದ್ದಾರೆ. ಬಿಜೆಪಿ ಕಳೆದ ಎರಡು ಚುನಾವಣೆಗಳಲ್ಲಿ ಮುಸ್ಲಿಮರ ಮತಗಳಿಲ್ಲದೆ ಗೆಲ್ಲಬಲ್ಲೆವು ಎಂಬುದನ್ನು ತೋರಿಸಿಕೊಟ್ಟಿದೆ. ತೊಂಬತ್ತರ ದಶಕದಲ್ಲಿ ಎರಡು ಬಗೆಯ ಬೀಗಗಳನ್ನು ತೆರೆಯಲಾಯಿತು. ಒಂದು ಬಾಬರಿ ಮಸೀದಿಯದ್ದಾದರೆ ಮತ್ತೊಂದು ಮಾರುಕಟ್ಟೆಯದ್ದು ಎಂದು ವಿವರಿಸಿದರು.

ಉದ್ಯೋಗ ಇಲ್ಲದೆ, ಬೆಲೆ ಏರಿಕೆಯಿಂದ, ದೌರ್ಜನ್ಯಗಳಿಂದ ನರಳುತ್ತಿರುವ ಜನರೇ ಮತ್ತೆ ಮತ್ತೆ ತಮ್ಮ ನರಕಕ್ಕಾಗಿ ಮತ ಹಾಕುತ್ತಿದ್ದಾರೆ. ಜಾತಿ ವ್ಯವಸ್ಥೆಯಿಂದ ಶತಮಾನಗಳ ನರಳಿದವರು ಅದೇ ಜನರಿಗೆ ವೋಟ್ ಹಾಕುತ್ತಾರೆ. ಮಸ್ಲಿಮರನ್ನು ವೋಟಿನ ಹಕ್ಲಿಲ್ಲದಂತೆ ಮಾಡಲಾಗುತ್ತಿದೆ. ಇದು ಸಮಾಜದ ಅಮಾನವೀಕರಣ ಆಗುತ್ತಿರುವ ಸೂಚನೆ ಎಂದು ತಿಳಿಸಿದರು.

ಭಾರತವು ಪೊಲೀಸ್ ರಾಜ್ಯವಾಗುತ್ತಿದೆ. ಕಾಶ್ಮೀರದೊಂದಿಗೆ ಯಾವುದೇ ಸಂವಹನ ಸಾಧ್ಯವಾಗುತ್ತಿಲ್ಲ. ವಸಾಹತುಶಾಹಿ ಕಾಲದಲ್ಲಿ ನಾವು ಬೀದಿಗಳಲ್ಲಿ ಹೋರಾಟ ಮಾಡುತ್ತಿದ್ದೆವು. ಆದರೆ ಇಂದು ಬೀದಿಗಳೂ ವಿಷಮಯವಾಗಿವೆ. ಪ್ರತಿಯೊಂದು ಸಣ್ಣ ಗೆಲುವನ್ನೂ ಸಂಭ್ರಮಿಸುತ್ತಾ ಮುನ್ನಡೆಯಬೇಕಾಗಿದೆ ಎಂದು ಆಶಿಸಿದರು.

ಗೌರಿ ಮೊಮೊರಿಯಲ್ ಟ್ರಸ್ಟ್‌ ಕಾರ್ಯದರ್ಶಿ ದೀಪು ಪ್ರಸ್ತಾವಿಕವಾಗಿ ಮಾತನಾಡಿ, “ತೀಸ್ತಾ ಅವರನ್ನು ಜೈಲಿಗೆ ಕಳುಹಿಸಲಾಯಿತು. ಚಾರ್ಜ್‌‌ಶೀಟ್ ಇಲ್ಲದೆ ಎರಡು ತಿಂಗಳು ಒಬ್ಬ ವ್ಯಕ್ತಿಯನ್ನು ಜೈಲಿನಲ್ಲಿ ಇಡಲಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

ಟ್ರಸ್ಟ್‌ನ ಅಧ್ಯಕ್ಷರಾದ ತೀಸ್ತಾ ಸೆಟಲ್ವಾಡ್ ಅವರು ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಶೇಷ ವಿಡಿಯೊ ಸಂದೇಶ ಕಳುಹಿಸಿದ್ದರು.

“ನಾನು ಸಬರಮತಿ ಮಹಿಳಾ ಜೈಲಿನಲ್ಲಿ ನೋಡಿದ ಮಹಿಳಾ ಕೈದಿಗಳ ಬಗ್ಗೆ ಯೋಚಿಸುತ್ತಿದ್ದೇನೆ. ಅನೇಕರಿಗೆ ಜಾಮೀನು ನಿರಾಕರಿಸಲಾಗಿದೆ. ನ್ಯಾಯ ಪಡೆದುಕೊಳ್ಳಲು ಕೆಲವರಿಗೆ ದಾರಿಯೇ ಇಲ್ಲ. ಈ ಮಹಿಳೆಯರಿಗಾಗಿ ಏನು ಮಾಡಬಹುದು ಎಂದು ಚಿಂತಿಸುತ್ತೇನೆ” ಎಂದು ತೀಸ್ತಾ ವಿಡಿಯೊ ಮೂಲಕ ತಿಳಿಸಿದರು.

ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಮಾತನಾಡಿ, “ಗೌರಿ ಹೋಗಿ ಐದು ವರ್ಷವಾಯಿತು. ನಿನ್ನೆ ಮೊನ್ನೆ ಜೊತೆಗಿದ್ದಳು ಅನಿಸುತ್ತಿದೆ. ಕೆಲವೊಮ್ಮೆ ಆಕೆಯನ್ನು ನೋಡಿ ತುಂಬಾ ವರ್ಷಗಳೇ ಆಯಿತು ಅನಿಸುತ್ತದೆ. ಇಂದಿನ ಸನ್ನಿವೇಶದಲ್ಲಿ ಲಂಕೇಶ್‌ ಇದ್ದಿದ್ದರೆ, ಗೌರಿ ಇದ್ದಿದ್ದರೆ ಏನಾಗುತ್ತಿತ್ತು? ಎಂದು ಯೋಚಿಸುತ್ತಿದ್ದೇವೆ. ಸುದ್ದಿಗಳನ್ನು ನೋಡಿದರೆ ಭರವಸೆ ಇಲ್ಲ ಅನಿಸುತ್ತದೆ. ನಮ್ಮೂರು ಶಿವಮೊಗ್ಗ, ಈಗ ಮಂಗಳೂರಿನಂತೆ ಬದಲಾಗುತ್ತಿದೆ. ಜನರ ಕೈಗೆ ಆಯುಧ ಕೊಟ್ಟು ಗುದ್ದಾಡಲು ಬಿಟ್ಟಿದ್ದಾರೆ. -ಯಾವುದೇ ಭರವಸೆ ಇಲ್ಲ- ಎಂದು ರವಿಕುಮಾರ್‌ ಹೇಳಿದ್ದರು” ಎಂದು ನೆನಪಿಸಿಕೊಂಡರು.

ಗೌರಿ ನೆನಪು ಕಾರ್ಯಕ್ರಮದಲ್ಲಿ ಕವಿತಾ ಲಂಕೇಶ್ ಮಾತನಾಡಿದರು.

 ಇದನ್ನೂ ಓದಿರಿ: ಗೌರಿ ಲಂಕೇಶ್ ನಮ್ಮೆದೆಗಳಲ್ಲಿ ಹುಟ್ಟಿ ಐದು ವರ್ಷಗಳು!: ವಿಡಿಯೊ ಗ್ಯಾಲರಿ

ಬಹುಭಾಷಾ ನಟ ಪ್ರಕಾಶ್ ರೈ ಮಾತನಾಡಿ, “ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ. ನಾವು ಇಲ್ಲಿದ್ದೇವೆ. ಆದರೆ ಗೌರಿಯನ್ನು ಕೊಲ್ಲಿಸಿದವರು ರಾಜ್ಯ ಹಾಗೂ ದೇಶವನ್ನು ಆಳುತ್ತಿದ್ದಾರೆ. ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳ ಬಿಡುಗಡೆಯ ಹಿಂದಿನ ಭಾವವನ್ನು ಅರ್ಥಮಾಡಿಕೊಳ್ಳಬೇಕು. ಅಲ್ಪಸಂಖ್ಯಾತರನ್ನು ಅತ್ಯಾಚಾರ ಮಾಡಿದರೂ ಬಿಡುಗಡೆ ಮಾಡಲಾಗುತ್ತದೆ ಎಂಬ ಸಂದೇಶವನ್ನು ಇಲ್ಲಿ ನೀಡಲಾಗಿದೆ” ಎಂದು ಎಚ್ಚರಿಸಿದರು.

ಗೌರಿ ನೆನಪು ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಮಾತನಾಡಿದರು.

ಗೌರಿ, ತೀಸ್ತಾ, ಅರುಂಧತಿ ರಾಯ್‌ ಥರದ ಹೆಣ್ಣುಮಕ್ಕಳು ನಮಗೆ ಭರವಸೆಯಾಗಿದ್ದಾರೆ. ತೀಸ್ತಾ ಜೈಲಿನಿಂದ ಹೊರಬಂದ ಬಳಿಕ ಆಶಾವಾದ ವ್ಯಕ್ತಪಡಿಸಿದ್ದಾರೆ. ಈ ಐದು ವರ್ಷಗಳಲ್ಲಿ ಆಕ್ಟಿವಿಸ್ಟ್‌ಗಳಿಗಿಂತ ರೈತರು, ಹೆಣ್ಣುಮಕ್ಕಳು ಬೀದಿಗಿಳಿದು ಹೋರಾಡಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬಲವಾಗಲು ನಮ್ಮ ನಡುವಿರುವ ಅಹಂ ಕಾರಣ. ನಮ್ಮ ಎಲ್ಲ ಅಹಂಗಳನ್ನು ಮರೆತು ಗೌರಿಯ ಆಶಯಗಳನ್ನು ಮುಂದುವರಿಸಬೇಕಿದೆ. ಗೌರಿಯನ್ನು ನಾವು ಹೂತಿಲ್ಲ, ಅವಳನ್ನು ಬಿತ್ತಿದ್ದೇವೆ ಎಂದು ನುಡಿದರು.

ಟ್ರಸ್ಟ್‌ನ ಸದಸ್ಯರಾದ ಪ್ರೊ.ವಿ.ಎಸ್.ಶ್ರೀಧರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಾಡುಗಾರರಾದ ಜನ್ನಿ, ಎಂ.ಡಿ.ಪಲ್ಲವಿಯವರು ಗಾಯನ ಮಾಡಿದರು. ನ್ಯಾಯಪಥ ಸಂಪಾದಕರಾದ ಡಿ.ಎನ್.ಗುರುಪ್ರಸಾದ್‌ ಸ್ವಾಗತ ಮಾಡಿದರು. ಪತ್ರಕರ್ತ ಚಂದ್ರು ತಾರಹುಣಸೆ ನಿರೂಪಣೆ ಮಾಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...