Homeಕರ್ನಾಟಕಹಾಸ್ಟೆಲ್‌ ಹಾಸಿಗೆ, ದಿಂಬಿನಲ್ಲಿ ಅಕ್ರಮ; ತನಿಖೆ ನಡೆಸುವಂತೆ ಬೆಂಗಳೂರು ವಿವಿ ಕುಲಪತಿಗೆ ವಿದ್ಯಾರ್ಥಿಗಳ ಪತ್ರ

ಹಾಸ್ಟೆಲ್‌ ಹಾಸಿಗೆ, ದಿಂಬಿನಲ್ಲಿ ಅಕ್ರಮ; ತನಿಖೆ ನಡೆಸುವಂತೆ ಬೆಂಗಳೂರು ವಿವಿ ಕುಲಪತಿಗೆ ವಿದ್ಯಾರ್ಥಿಗಳ ಪತ್ರ

- Advertisement -
- Advertisement -

ಬೆಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿರುವ 9 ವಸತಿ ನಿಲಯಗಳಿಗೆ 2021-2022ನೇ ಸಾಲಿನಲ್ಲಿ ಪೂರೈಕೆ ಮಾಡಲಾಗಿರುವ ಹಾಸಿಗೆ ಮತ್ತು ತಲೆದಿಂಬುಗಳ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಅದರ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಎಲ್ಲಾ ವಸತಿ ನಿಯಲದ ವಿದ್ಯಾರ್ಥಿಗಳು (ಪಿಜಿ, ಪಿಎಚ್‌ಡಿ) ವಿವಿಯ ಕುಲಪತಿಯವರಿಗೆ ಪತ್ರ ಬರೆದಿದ್ದಾರೆ.

“ಬೆಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿರುವ 9 ವಸತಿ ನಿಯಲಗಳಲ್ಲಿ ವಾಸವಿರುವ ಎಲ್ಲಾ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನಲ್ಲಿ ಹಾಸಿಗೆ ಮತ್ತು ತಲೆದಿಂಬುಗಳನ್ನು ಪೂರೈಸಲು ಟೆಂಡರ್ ಕರೆಯಲಾಗಿತ್ತು. ಇದರಂತೆ 2022 ಫೆಬ್ರವರಿ 3 ರಂದು ನಡೆದ ತಾಂತ್ರಿಕ ಬಿಡ್‌ನಲ್ಲಿ ಎಲ್‌.ಆನಂದ್‌ ರೆಡ್ಡಿ (ಎಸ್‌.ವಿ.ಎಲ್‌. ಟ್ರೇಡಿಂಡ್‌ ಕಾರ್ಪೋರೇಷನ್‌, ಎಚ್‌ಬಿಆರ್‌ ಲೇಔಟ್‌, ಬೆಂಗಳೂರು) ಆಯ್ಕೆಯಾಗಿದ್ದರು. ಇವರಿಂದ ಹಾಸಿಗೆ ಮತ್ತು ತಲೆದಿಂಬುಗಳನ್ನು ಖರೀದಿಸಲಾಗಿದೆ. ಆದರೆ ಅವುಗಳು ಕಳಪೆ ಗುಣಮಟ್ಟದಿಂದ ಕೂಡಿವೆ” ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಒಟ್ಟು 9 ವಿದ್ಯಾರ್ಥಿ ನಿಲಯಗಳಿಗೆ 1,848 ಹಾಸಿಗೆ, 2,273 ತಲೆದಿಂಬುಗಳನ್ನು ಖರೀದಿಸಲಾಗಿದೆ. ಇದರ ಒಟ್ಟು ಹಣದ ಮೊತ್ತ 1,23,80,650 ರೂಪಾಯಿ ಆಗಿದೆ. ಪ್ರತಿ ಹಾಸಿಗೆಗೆ 5,900 ರೂ. ಮತ್ತು ಪ್ರತಿ ತಲೆದಿಂಬಿಗೆ 650 ರೂ.ಗಳನ್ನು ನಿಗದಿಪಡಿಸಲಾಗಿದೆ. ಆದರೆ ಪ್ರಸ್ತುತ ವಿದ್ಯಾರ್ಥಿಗಳಿಗೆ ಪೂರೈಸಲಾಗಿರುವ ಹಾಸಿಗೆ ಮತ್ತು ತಲೆದಿಂಬುಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿವೆ. ಪೂರೈಕೆ ಮಾಡಲಾಗಿರುವ ಹಾಸಿಗೆಯ ಮೇಲೆ ಆ ಕಂಪನಿಯ ಯಾವುದೇ ಲೇಬಲ್ ಅಥವಾ ಯಾವುದೇ ಹೆಸರಿನ ಬ್ರಾಂಡ್ ನೇಮ್ ಇರುವುದಿಲ್ಲ. ಇದು ವಿದ್ಯಾರ್ಥಿಗಳಿಗೆ ಅನುಮಾನವನ್ನು ಸೃಷ್ಟಿಸಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈಗ ಪೂರೈಕೆ ಮಾಡಲಾಗಿರುವ ಹಾಸಿಗೆ ಮತ್ತು ತಲೆದಿಂಬುಗಳ ಬೆಲೆ ಮಾರುಕಟ್ಟೆಯಲ್ಲಿ 5900 ರೂ.ಗಿಂತಲೂ ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿವೆ ಎಂದು ತಿಳಿದು ಬರುತ್ತಿದೆ. ಹಲವು ಅಂಗಡಿ ಮಾಲೀಕರ ಜೊತೆಗೆ ವಿಚಾರಿಸಲಾಗಿದೆ, ಅಂತರ್ಜಾಲದಲ್ಲಿ ಕ್ರಾಸ್‌ ಚೆಕ್ ಕೂಡ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲಾಗಿರುವ ಹಾಸಿಗೆ ಮತ್ತು ತಲೆದಿಂಬುಗಳು ಕಳಪೆ ಮಟ್ಟದಿಂದ ಕೂಡಿದ್ದು ಇದರ ಖರೀದಿಯಲ್ಲಿ ಅಕ್ರಮ ನಡೆದಿರುವುದು ಕಂಡು ಬಂದಿದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ನೀಡಿರುವಂತಹ ತಲೆದಿಂಬು ಮತ್ತು ಹಾಸಿಗೆಗಳು ಹರಿದು ಹೋಗಿವೆ, ಬಳಸಲು ಯೋಗ್ಯಸ್ಥಿತಿಯಲ್ಲಿ ಇರುವುದಿಲ್ಲ. ಈ ಹಾಸಿಗೆ ಮತ್ತು ತಲೆದಿಂಬುಗಳನ್ನು ಬಳಸಿ ಅನೇಕ ಆರೋಗ್ಯದ ಸಮಸ್ಯೆಗಳು ಕೂಡ ಉದ್ಭವಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಈ ಖರೀದಿಯ ಪ್ರಕ್ರಿಯೆಯಲ್ಲಿ ಭಾಗಿಯಾಗಿ, ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿ, ಅಕ್ರಮವೆಸಗಿರುವ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಆಗಿನ ನಿರ್ದೇಶಕರು (ಸಿ.ಡಿ.ವೆಂಕಟೇಶ್‌ ಮತ್ತು ಇದಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯದಲ್ಲಿನ ಅಧಿಕಾರಿ ವರ್ಗದವರು), ಹಾಸಿಗೆ ಮತ್ತು ತಲೆದಿಂಬುಗಳ ಪರಿಶೀಲನೆ ವರದಿಯನ್ನು ನೀಡಿದ ಡಾ.ಹನುಮಂತನಾಯ್ಕ ಹೆಚ್.ಎಸ್., ವೇಣುಗೋಪಾಲ್ ಎಂ, ನೇಮ್ ಬ್ರಾಂಡ್ ನೀಡದೆ ಹಾಸಿಗೆ ಮತ್ತು ತಲೆದಿಂಬುಗಳನ್ನು ಪೂರೈಕೆ ಮಾಡಿದಂತಹ ಕಂಪನಿ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ. ಇವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು ವಿವಿ ವಿದ್ಯಾರ್ಥಿಗಳ ಮನವಿ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...