Homeಮುಖಪುಟಈ ದೇಶದ ಪ್ರಧಾನಿಗೆ ಯಾಕೆ ಇಷ್ಟೊಂದು ಹೇಡಿತನ?: ಟ್ವಿಟರ್‌ನ ಮಾಜಿ ಸಿಇಒ ಹೇಳಿಕೆ ಹಿನ್ನೆಲೆ ಕಾಂಗ್ರೆಸ್...

ಈ ದೇಶದ ಪ್ರಧಾನಿಗೆ ಯಾಕೆ ಇಷ್ಟೊಂದು ಹೇಡಿತನ?: ಟ್ವಿಟರ್‌ನ ಮಾಜಿ ಸಿಇಒ ಹೇಳಿಕೆ ಹಿನ್ನೆಲೆ ಕಾಂಗ್ರೆಸ್ ಪ್ರಶ್ನೆ

- Advertisement -
- Advertisement -

ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಭಾರತ ಸರ್ಕಾರ ನಮ್ಮ ಮೇಲೆ ಒತ್ತಡ ಹೇರಿತ್ತು. ಅಷ್ಟೇ ಅಲ್ಲದೇ ಅವರು ಹೇಳಿದಂತೆ ನಡೆಯದಿದ್ದರೆ, ದೇಶದಲ್ಲಿ ಟ್ವಿಟರ್ ಬ್ಯಾನ್ ಮಾಡಲಾಗುವುದು, ಉದ್ಯೋಗಿಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಹಾಕಿತ್ತು ಎಂದು ಟ್ವಿಟರ್‌ನ ಮಾಜಿ ಸಿಇಒ ಜಾಕ್ ಡೋರ್ಸಿ ಅವರು ಸಂರ್ದಶನದಲ್ಲಿ ಹೇಳಿದ್ದಾರೆ. ವಿರೋಧ ಪಕ್ಷಗಳು ಜಾಕ್ ಡೋರ್ಸಿ ಅವರನ್ನು ಬೆಂಬಲಿಸಿ, ಈ ಘಟನೆಯು ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಹೇಗೆ ಅಪಾಯದಲ್ಲಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಟ್ ಅವರು, ”ಟ್ವಿಟರ್‌ನ ಸಂಸ್ಥಾಪಕ ಮತ್ತು ಮಾಜಿ ಸಿಇಒ ಜಾಕ್ ಡೋರ್ಸೆ ಅವರು ಮೋದಿ ಸರ್ಕಾರ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ರೈತ ಚಳವಳಿಯ ಬಗ್ಗೆ ಟ್ವೀಟ್‌ಗಳನ್ನು ತೋರಿಸಿದರೆ ಟ್ವಿಟರ್‌ನ ಕಚೇರಿ ಮತ್ತು ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡಲಾಗುವುದು. ಭಾರತದಲ್ಲಿ ಟ್ವಿಟರ್ ಬ್ಯಾನ್ ಮಾಡುತ್ತೇವೆ ಎಂದಿದ್ದಾರೆ. ದೇಶದ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾಗ ಪ್ರಧಾನಿ ಮೋದಿ, ಅವರ ಧ್ವನಿಯನ್ನು ಹತ್ತಿಕ್ಕುತ್ತಿದ್ದರು” ಎಂದು ವಾಗ್ಧಾಳಿ ನಡೆಸಿದರು.

”ಈ ದೇಶದ ಪ್ರಧಾನಿಗೆ ಯಾಕೆ ಇಷ್ಟೊಂದು ಹೇಡಿತನ?” ಎಂದು ಸುಪ್ರಿಯಾ ಪ್ರಶ್ನೆ ಮಾಡಿದ್ದಾರೆ.

”ಆಗಸ್ಟ್ 2021ರಲ್ಲಿ ರಾಹುಲ್ ಗಾಂಧಿ ಅವರ ಟ್ವಿಟರ್ ಹ್ಯಾಂಡಲ್ ಅನ್ನು ನಿರ್ಬಂಧಿಸಲಾಯಿತು. ಇದರಿಂದ ಮುಂದಿನ 6 ತಿಂಗಳವರೆಗೆ ಅವರ ಅನುಯಾಯಿಗಳ ಬೆಳವಣಿಗೆ ಬಹುತೇಕ ನಿಂತುಹೋಗಿತ್ತು. ಫೆಬ್ರವರಿ 2022-
ವಾಲ್ ಸ್ಟ್ರೀಟ್ ಜರ್ನಲ್ ರಾಹುಲ್ ಗಾಂಧಿ ಅವರ ಟ್ವಿಟರ್ ಹ್ಯಾಂಡಲ್ ಅನ್ನು ನಿರ್ಬಂಧಿಸಲಾಗಿದೆ ಎಂಬ ಸುದ್ದಿಯನ್ನು ಪ್ರಸಾರ ಮಾಡಲು ಹೊರಟಾಗ, ತಕ್ಷಣವೇ ನಿಷೇಧವನ್ನು ತೆಗೆದುಹಾಕಲಾಯಿತು. ಆಗ ಅನುಯಾಯಿಗಳ ಸಂಖ್ಯೆಯು ಹೆಚ್ಚಾಗಲು ಪ್ರಾರಂಭಿಸಿತು. ಹಾಗಿರುವಾಗ ಪ್ರತಿಪಕ್ಷಗಳ ಪ್ರಬಲ ಧ್ವನಿಯನ್ನು ಹತ್ತಿಕ್ಕಲು ಟ್ವಿಟರ್ ಮೋದಿ ಸರ್ಕಾರದ ಆದೇಶದ ಪಾಲಿಸಿದೆ ಎಂದು ಏಕೆ ಹೇಳಬಾರದು?” ಎಂದು ಸುಪ್ರಿಯಾ ಶ್ರೀನೇಟ್ ಪ್ರಶ್ನೆ ಮಾಡಿದ್ದಾರೆ.

ಸೋಮವಾರ, ಟ್ವಿಟರ್‌ನ ಮಾಜಿ ಸಿಇಒ ಜಾಕ್ ಡೋರ್ಸಿ ಅವರು ಯುಟ್ಯೂಬ್ ಸುದ್ದಿ ಕಾರ್ಯಕ್ರಮ ಬ್ರೇಕಿಂಗ್ ಪಾಯಿಂಟ್‌ಗಳಿಗೆ ನೀಡಿದ ಸಂದರ್ಶನದಲ್ಲಿ, ”ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುವ ಆದೇಶಗಳನ್ನು ಅನುಸರಿಸದಿದ್ದಲ್ಲಿ ಭಾರತ, ನೈಜೀರಿಯಾ ಮತ್ತು ಟರ್ಕಿಯಲ್ಲಿ ಟ್ವಿಟರ್‌ನ್ನೇ ಬ್ಯಾನ್ ಮಾಡುವ ಬೆದರಿಕೆ ಹಾಕಲಾಗಿದೆ. ಭಾರತವು ಪತ್ರಕರ್ತರು ಮತ್ತು ಪ್ರತಿಭಟನಾಕಾರರ ಸಾಮಾಜಿಕ ಮಾಧ್ಯಮ ವೇದಿಕೆಯ ಬಳಕೆಯನ್ನು ತಡೆಯಲು ಬಯಸುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಟ್ವಿಟರ್‌ ಬ್ಯಾನ್, ಉದ್ಯೋಗಿಗಳ ಮನೆಗಳ ಮೇಲೆ ದಾಳಿ’ ಮಾಡುವುದಾಗಿ ಭಾರತ ಸರ್ಕಾರ ಬೆದರಿಕೆ ಹಾಕಿತ್ತು- ಇದು ಪ್ರಜಾಪ್ರಭುತ್ವ ರಾಷ್ಟ್ರ: ಮಾಜಿ CEO ಡಾರ್ಸೆ

”ಉದಾಹರಣೆಗೆ, ಭಾರದಲ್ಲಿ ರೈತರ ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಸರ್ಕಾರವನ್ನು ಟೀಕಿಸುವ ನಿರ್ದಿಷ್ಟ ಪತ್ರಕರ್ತರ ಖಾತೆ, ವಿರೋಧಿಗಳ ಖಾತೆಗಳನ್ನು ನಿರ್ಬಂಧಿಸಬೇಕು ಎಂದು ಬಾರತ ಸರ್ಕಾರ ಅನೇಕ ಬಾರಿ ಮನವಿ ಮಾಡಿತು” ಎಂದು  ಹೇಳಿದರು.

”ನಾವು ಹೇಳಿದ್ದನ್ನು ನೀವು ಅನುಸರಿಸದೇ ಹೋದಲ್ಲಿ, ಭಾರತದಲ್ಲಿ ಟ್ವಿಟರ್ ಅನ್ನು ಬ್ಯಾನ್ ಮಾಡುತ್ತೇವೆ. ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ನಾವು ದಾಳಿ ಮಾಡುತ್ತೇವೆ. ನಾವು ನಿಮ್ಮ ಕಚೇರಿಗಳನ್ನು ಮುಚ್ಚುತ್ತೇವೆ ಎಂದು ಭಾರತ ಸರ್ಕಾರ ಎಚ್ಚರಿಕೆ ನೀಡಿದ್ದರು. ಇದು ಭಾರತ, ಪ್ರಜಾಪ್ರಭುತ್ವ ದೇಶ” ಎಂದು ಜಾಕ್ ಡೋರ್ಸಿ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...