Homeಮುಖಪುಟ'ಟ್ವಿಟರ್‌ ಬ್ಯಾನ್, ಉದ್ಯೋಗಿಗಳ ಮನೆಗಳ ಮೇಲೆ ದಾಳಿ' ಮಾಡುವುದಾಗಿ ಭಾರತ ಸರ್ಕಾರ ಬೆದರಿಕೆ ಹಾಕಿತ್ತು- ಇದು...

‘ಟ್ವಿಟರ್‌ ಬ್ಯಾನ್, ಉದ್ಯೋಗಿಗಳ ಮನೆಗಳ ಮೇಲೆ ದಾಳಿ’ ಮಾಡುವುದಾಗಿ ಭಾರತ ಸರ್ಕಾರ ಬೆದರಿಕೆ ಹಾಕಿತ್ತು- ಇದು ಪ್ರಜಾಪ್ರಭುತ್ವ ರಾಷ್ಟ್ರ: ಮಾಜಿ CEO ಡಾರ್ಸೆ

- Advertisement -
- Advertisement -

ರೈತರ ಪ್ರತಿಭಟನೆಗಳ ಪರವಾಗಿರುವ, ಕೆಲವು ಪತ್ರಕರ್ತರ ಮತ್ತು ಸರ್ಕಾರದ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸುವವರಿಗೆ ಸಂಬಂಧಿಸಿದ ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರದಿಂದ ಹಲವು ವಿನಂತಿಗಳು ಬಂದಿವೆ ಎಂದು ಟ್ವಿಟರ್ ಮಾಜಿ ಸಿಇಒ ಜಾಕ್ ಡಾರ್ಸೆ ಹೇಳಿದ್ದಾರೆ.

”ಭಾರತ ಸರ್ಕಾರದ ಮನವಿಯನ್ನು ಅನುಸರಿಸಲು ನಾವು ನಿರಾಕರಿಸಿದ್ದರಿಂದ ದೇಶದಲ್ಲಿ ಟ್ವಿಟರ್ ಪ್ಲಾಟ್‌ಫಾರ್ಮ್ ಅನ್ನು ಮುಚ್ಚುವ ಬೆದರಿಕೆಗಳು, ಉದ್ಯೋಗಿಗಳ ಮನೆಗಳ ಮೇಲೆ ದಾಳಿ ನಡೆಸುವುದು ಮತ್ತು ಟ್ವಿಟರ್ ಕಚೇರಿಗಳನ್ನು ಮುಚ್ಚುವ ಬೆದರಿಕೆಗಳು ಸೇರಿದಂತೆ ಟ್ವಿಟರ್‌ ಮೇಲೆ ಭಾರತ ಸರ್ಕಾರ ಒತ್ತಡ ಹೇರಿದೆ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಸರ್ವಾಧಿಕಾರಿ ಕ್ರಮಗಳು ನಡೆಯುತ್ತಿವೆ” ಎಂದು ಡಾರ್ಸೆ ಒತ್ತಿ ಹೇಳಿದರು.

ಸಂದರ್ಶನವೊಂದರಲ್ಲಿ ವಿದೇಶಿ ಸರ್ಕಾರಗಳ ಒತ್ತಡದ ಕೆಲವು ಉದಾಹರಣೆಗಳನ್ನು ನೀಡುವ ಸಂದರ್ಭದಲ್ಲಿ ಡಾರ್ಸೆ ಅವರು ಭಾರತ ಸರ್ಕಾರದ ಸರ್ವಾಧಿಕಾರಿ ಧೋರಣೆಗಳ ಬಗ್ಗೆ ವಿವರಿಸಿದರು.

”ಟರ್ಕಿ ದೇಶ ಕೂಡ ಭಾರತದಂತೆಯೇ ವರ್ತಿಸಿತು. ಟರ್ಕಿ ಸರ್ಕಾರ ಕೂಡ ಟ್ವಿಟರ್ ಅನ್ನು ಮುಚ್ಚುವುದಾಗಿ ಬೆದರಿಕೆ ಹಾಕಿತು, ಆಗಾಗ್ಗೆ ಸರ್ಕಾರದೊಂದಿಗೆ ನ್ಯಾಯಾಲಯದಲ್ಲಿ ಟ್ವಿಟರ್ ಸಂಸ್ಥೆ ವಾದವನ್ನು ಮಾಡಿದೆ ಮತ್ತು ಗೆದ್ದಿದ್ದೇವೆ’ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮೂರು ವಿವಾದಿತ ಕೃಷಿ ಕಾನೂನು ತಂದಿತ್ತು. ಇದರ ವಿರುದ್ಧ 2020ರ ನವೆಂಬರ್‌ನಿಂದ ದೆಹಲಿ ಗಡಿ ಬಿಂದುಗಳಲ್ಲಿ ಕ್ಯಾಂಪ್ ಮಾಡುತ್ತಿದ್ದ ಸಾವಿರಾರು ರೈತರ ಒಂದು ವರ್ಷದ ಪ್ರತಿಭಟನೆ ನಡೆಸಿದರು. ಅವರ ಪ್ರತಿಭಟನೆ ತೀವ್ರವಾಗಿದ್ದರಿಂದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನವೆಂಬರ್ 2021ರಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಮಹತ್ವದ ಘೋಷಣೆ ಮಾಡಲಾಯಿತು.

ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರು ಹಿಮಾಲಯದೆತ್ತರಕ್ಕೆ?

ರೈತರ ಮನವೊಲಿಸುವಲ್ಲಿ ವಿಫಲವಾಗಿರುವುದನ್ನು ಒಪ್ಪಿಕೊಂಡ ಮೋದಿ, ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಮನವಿ ಮಾಡಿದರು. ತರುವಾಯ, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳಲಾಯಿತು.

ಸಂದರ್ಶನದಲ್ಲಿ ಡಾರ್ಸೆ ಅವರ ಹೇಳಿಕೆಗಳು ಗಮನ ಸೆಳೆದಿವೆ. ಡೋರ್ಸೆ ಅವರ ಆರೋಪಕ್ಕೆ ಸರ್ಕಾರ ಇನ್ನೂ ಪ್ರತಿಕ್ರಿಯಿಸದಿದ್ದರೂ, ಹಲವಾರು ಟ್ವಿಟರ್ ಖಾತೆಗಳು ಅವರ ಹೇಳಿಕೆಯ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಮೋದಿ ಸರ್ಕಾರವನ್ನು ಟೀಕಿಸಿವೆ.

ಪತ್ರಕರ್ತ ಮತ್ತು ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರು ಡಾರ್ಸೆ ಅವರೆ ಹೇಳಿಕೆಯ ಕ್ಲಿಪ್ ಹಂಚಿಕೊಂಡಿದ್ದು, ”ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಬಗ್ಗೆ ಬ್ರೇಕಿಂಗ್ ಪಾಯಿಂಟ್ಸ್ ಮಾತುಕತೆಗಳು,
ಉದಾಹರಣೆಗೆ, ರೈತರ ಪ್ರತಿಭಟನೆಗಳ ಸುತ್ತ, ಸರ್ಕಾರವನ್ನು ಟೀಕಿಸುವ ನಿರ್ದಿಷ್ಟ ಪತ್ರಕರ್ತರ ಸುತ್ತ ಅನೇಕ ವಿನಂತಿಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ನಾವು ಹೇಳಿದ್ದನ್ನು ಕೇಳದಿದ್ದರೆ, ನಿಮ್ಮ ಕಚೇರಿಗಳನ್ನು ಮುಚ್ಚುತ್ತೇವೆ, ನಾವು ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡುತ್ತೇವೆ’ ಎಂಬಂತಹ ರೀತಿಯಲ್ಲಿ ಬೆದರಿಕೆ ಹಾಕಲಾಯಿತು. ಇದು ಭಾರತ, ಪ್ರಜಾಪ್ರಭುತ್ವ ರಾಷ್ಟ್ರ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಡಾರ್ಸೆ ಅವರೆ ಹೇಳಿಕೆಯ ಕ್ಲಿಪ್ ಹಂಚಿಕೊಂಡಿದ್ದು, ”ಸರ್ಕಾರವನ್ನು ಟೀಕಿಸುವ ಪತ್ರಕರ್ತರ, ರೈತರ ಪ್ರತಿಭಟನೆಗಳು ಮತ್ತು ಟ್ವೀಟ್‌ಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಟ್ವಿಟರ್‌ಗೆ ತಿಳಿಸಿದೆ. ಭಾರತದಲ್ಲಿ ಟ್ವಿಟರ್ ಅನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದರು ಮತ್ತು ಟ್ವಿಟರ್ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡಿದರು. ಆದರೂ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ! ಎಂದು Twitter ನ ಮಾಜಿ CEO ಜಾಕ್ ಡಾರ್ಸೆ” ಹೇಳಿದ್ದಾರೆಂದು ಟ್ವಿಟ್ ಮಾಡಿದ್ದಾರೆ.

ಈ ಬಗ್ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದು, ”ಇದು ಸಂಪೂರ್ಣ ಸುಳ್ಳು, ಜಾಕ್
– ಬಹುಶಃ ಟ್ವಿಟರ್ ಇತಿಹಾಸದ ಅತ್ಯಂತ ಸಂಶಯಾಸ್ಪದ ಅವಧಿಯನ್ನು ಹೊರಹಾಕುವ ಪ್ರಯತ್ನ” ಎಂದಿದ್ದಾರೆ.

ಅಂಡರ್ ಡಾರ್ಸೆ ಮತ್ತು ಅವರ ತಂಡವು ಭಾರತದ ಕಾನೂನನ್ನು ನಿರಂತರ ಉಲ್ಲಂಘನೆ ಮಾಡಿತ್ತು. ವಾಸ್ತವವಾಗಿ, ಅವರು 2020 ರಿಂದ 2022ರವರೆಗೆ ಪದೇ ಪದೇ ಕಾನೂನನ್ನು ಅನುಸರಿಸಲಿಲ್ಲ ಮತ್ತು ಅಂತಿಮವಾಗಿ ಅವರು ಜೂನ್ 2022 ಮಾತ್ರ ಭಾರತದ ಕಾನೂನನ್ನು ಅನುಸರಿಸಿದರು.

”ಯಾರೂ ಜೈಲಿಗೆ ಹೋಗಲಿಲ್ಲ ಅಥವಾ ಟ್ವಿಟ್ಟರ್ ಅನ್ನು “ಸ್ಥಗಿತಗೊಳಿಸಲಿಲ್ಲ” ಡಾರ್ಸೆ ಅವರ ಟ್ವಿಟರ್ ಆಡಳಿತವು ಭಾರತೀಯ ಕಾನೂನಿನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಲಿಲ್ಲ. ಭಾರತದ ಕಾನೂನುಗಳು ತನಗೆ ಅನ್ವಯಿಸುವುದಿಲ್ಲ ಎಂಬಂತೆ ವರ್ತಿಸಿತು” ಎಂದು ಪ್ರತಿದಾಳಿ ಮಾಡಿ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...