Homeಕರ್ನಾಟಕವಿದ್ಯುತ್ ದರ ಏರಿಸಿದ ಬಿಜೆಪಿ ಸರ್ಕಾರ ಆತ್ಮವಂಚಕತನದ ಮಾತಾಡುತ್ತಿದೆ: ಕಾಂಗ್ರೆಸ್ ಆಕ್ರೋಶ

ವಿದ್ಯುತ್ ದರ ಏರಿಸಿದ ಬಿಜೆಪಿ ಸರ್ಕಾರ ಆತ್ಮವಂಚಕತನದ ಮಾತಾಡುತ್ತಿದೆ: ಕಾಂಗ್ರೆಸ್ ಆಕ್ರೋಶ

ಚುನಾವಣೆ ಮುಗಿದ ಎರಡು ದಿನ ನಂತರ ಮೇ 12ರಂದು ದರ ಏರಿಕೆಗೆ ಒಪ್ಪಿಗೆ ನೀಡಲಾಗಿತ್ತು. ಹಾಗಾಗಿ ಬಿಜೆಪಿ ಸರ್ಕಾರ ಇದ್ದಾಗಲೇ ಈ ಆದೇಶ ಹೊರಡಿಸಿರುವುದು ಸ್ಪಷ್ಟವಾಗಿದೆ.

- Advertisement -
- Advertisement -

ವಿದ್ಯುತ್ ದರ ಏರಿಸಿ, ಚುನಾವಣೆಯ ನಂತರ ಜಾರಿಗೆ ಬರುವಂತೆ ತಂತ್ರ ರೂಪಿಸಿದ ಬಿಜೆಪಿ ಪಕ್ಷವು
ಈಗ ವಿದ್ಯುತ್ ದರ ಏರಿಕೆಯ ಬಗ್ಗೆ ಆತ್ಮವಂಚಕತನದ ಮಾತಾಡುತ್ತಿದೆ.. ಬಿಜೆಪಿಗೆ ಆತ್ಮ ಇದ್ದರೆ ಆತ್ಮಸಾಕ್ಷಿಯಿಂದ ಬೆಲೆ ಏರಿಸಿದ್ದನ್ನು ಒಪ್ಪಿಕೊಂಡು ಜನರ ಕ್ಷಮೆ ಕೇಳಲಿ ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

ಬಿಜೆಪಿ ಪಕ್ಷ ಮೇ 12 ರಂದು ವಿದ್ಯುತ್ ದರ ಏರಿಸಿ ಈಗ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

“ಮುಂಬಾಗಿಲಿನಲ್ಲಿ ನಿಂತು ಎಲ್ಲರಿಗೂ ಉಚಿತ ವಿದ್ಯುತ್ ಅಂತ ಹೇಳಿ, ಹಿಂಬಾಗಿಲಿನಿಂದ ವಿದ್ಯುತ್ ಬೆಲೆಗಳನ್ನು ಗಗನಕ್ಕೆ ಏರಿಸಿರುವ #ATMSarkara ತಂತ್ರ ಬಯಲಾಗಿದೆ. ಸಿದ್ದರಾಮಯ್ಯನವರೇ, ಇದೀಗ ತಮ್ಮದೇ ಪಕ್ಷದ ಮತ್ತೋರ್ವ ಶಾಸಕ ತನ್ವೀರ್ ಸೇಠ್‌ರವರು ನಿಮಗೆ ಪತ್ರಬರೆದು ನೀವು ಮಾಡುತ್ತಿರುವುದು ತಪ್ಪು ಎಂದು ಹೇಳಿದರೂ, ಅದನ್ನು ಲೆಕ್ಕಿಸದಿರುವಷ್ಟು ಭಂಡರಾಗಿದ್ದೀರ? ತಮ್ಮ ಭಂಡತನದಿಂದ ರಾಜ್ಯಕ್ಕೆ ಕೆಡಕಾಗುತ್ತಿದೆ ನೆನಪಿರಲಿ” ಎಂದು ಇಂದು ಬೆಳಿಗ್ಗೆ ಬಿಜೆಪಿ ಟ್ವೀಟ್ ಮಾಡಿದೆ.

ವಿದ್ಯುತ್ ದರ ಏರಿಕೆಗೆ ಯಾರು ಕಾರಣ?

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ವಿದ್ಯುತ್ ದರ ಹೆಚ್ಚಿಸಿ ಮೇ 12ರಂದು ಆದೇಶ ಹೊರಡಿಸಿದೆ. ಅದರಂತೆ ಜೂನ್ ತಿಂಗಳಿನಿಂದ ಗ್ರಾಹಕರಿಗೆ ಎರಡು ಸ್ತರಗಳಲ್ಲಿ (ಸ್ಪ್ಯಾಬ್‌ಗಳಲ್ಲಿ) ವಿದ್ಯುತ್‌ ಯೂನಿಟ್ ದರ ನಿಗದಿಪಡಿಸಿದೆ. ಗ್ರಾಹಕರು ಬಳಸಿದ 100 ಯೂನಿಟ್‌ವರೆಗಿನ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ‍4.15 ಪೈಸೆ ವಿಧಿಸಲಾಗುತ್ತಿದೆ. 100 ಯೂನಿಟ್ ಮೀರಿದರೆ, ಬಳಸಿದ ಅಷ್ಟೂ ಯೂನಿಟ್‌ ವಿದ್ಯುತ್‌ಗೆ 7ರೂನಂತೆ ದರ ವಿಧಿಸಲಾಗುತ್ತಿದೆ. ಹೀಗಾಗಿ, ಜುಲೈ ತಿಂಗಳಲ್ಲಿ 100 ಯೂನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡಿದ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 7ರೂ ದರ ಲೆಕ್ಕ ಹಾಕಿ ಬಿಲ್ ನೀಡಲಾಗಿದೆ. ಹಾಗಾಗಿ ಹಲವರ ವಿದ್ಯುತ್ ಬಿಲ್ ಡಬಲ್ ಆಗಿದೆ.

ವಿದ್ಯುತ್‌ ದರ ಏರಿಕೆ ಪ್ರಸ್ತಾವನೆಯನ್ನು ಎಸ್ಕಾಂಗಳು ಕೆಇಆರ್‌ಸಿ ಮುಂದೆ ಇಟ್ಟಿದ್ದರೂ ಚುನಾವಣೆ ನಡೆಯುತ್ತಿದ್ದ ಹೊತ್ತಿನಲ್ಲಿ ಅನುಮೋದನೆ ನೀಡಿರಲಿಲ್ಲ. ಚುನಾವಣೆ ಮುಗಿದ ಎರಡು ದಿನ ನಂತರ ಮೇ 12ರಂದು ದರ ಏರಿಕೆಗೆ ಒಪ್ಪಿಗೆ ನೀಡಲಾಗಿತ್ತು. ಹಾಗಾಗಿ ಬಿಜೆಪಿ ಸರ್ಕಾರ ಇದ್ದಾಗಲೇ ಈ ಆದೇಶ ಹೊರಡಿಸಿರುವುದು ಸ್ಪಷ್ಟವಾಗಿದೆ.

ಬೊಮ್ಮಾಯಿ ಸರ್ಕಾರದ ವಿದ್ಯುತ್ ದರ ಏರಿಕೆ ಆದೇಶ ವಾಪಸ್ ಪಡೆಯಲು ಆಗ್ರಹ

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿಯವರ ವಿದ್ಯುತ್ ಬೆಲೆ ಏರಿಕೆ ಆದೇಶ ವಾಪಸ್ ಪಡೆಯಿರಿ ಎಂದು ಮೈಸೂರಿನ ಶಾಸಕ ತನ್ವೀರ್ ಸೇಠ್‌ರವರು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ವಿದ್ಯುತ್ ಬೆಲೆ ಏರಿಕೆ ನಿರ್ಧಾರವನ್ನು ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡಿದೆ. ಆದರೆ ಜನರು ಈಗಿನ ಕಾಂಗ್ರೆಸ್ ಸರ್ಕಾರ ಬೆಲೆ ಏರಿಸಿದೆ ಎಂದು ತಪ್ಪು ಇಳಿಸಿದ್ದಾರೆ. ಇದರಿಂದ ಪಕ್ಷದ ಗೌರವ ಹಾಳಾಗುತ್ತಿದೆ. ಹಾಗಾಗಿ ವಿದ್ಯುತ್ ಬೆಲೆ ಏರಿಕೆ ಆದೇಶವನ್ನು ವಾಪಸ್ ಪಡೆಯಿರಿ ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೊಮ್ಮಾಯಿ ಸರ್ಕಾರದ ವಿದ್ಯುತ್ ಬೆಲೆ ಏರಿಕೆ ಆದೇಶ ವಾಪಸ್ ಪಡೆಯಿರಿ: ಸಿಎಂಗೆ ಶಾಸಕ ತನ್ವೀರ್ ಸೇಠ್ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...