Homeಮುಖಪುಟಹರಿಯಾಣ ಹಿಂಸಾಚಾರ: ಹಿಂದುತ್ವ ಗುಂಪುಗಳ ಬೆದರಿಕೆಗೆ ಪಲಾಯಾಣ ಮಾಡುತ್ತಿರುವ ಮುಸ್ಲಿಂ ವಲಸೆ ಕಾರ್ಮಿಕರು

ಹರಿಯಾಣ ಹಿಂಸಾಚಾರ: ಹಿಂದುತ್ವ ಗುಂಪುಗಳ ಬೆದರಿಕೆಗೆ ಪಲಾಯಾಣ ಮಾಡುತ್ತಿರುವ ಮುಸ್ಲಿಂ ವಲಸೆ ಕಾರ್ಮಿಕರು

- Advertisement -
- Advertisement -

ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದ ಕೋಮು ಘರ್ಷಣೆಯ ನಂತರ ವಲಸಿಗರನ್ನು ಸ್ಥಳೀಯ ಹಿಂದುತ್ವ ಗುಂಪುಗಳು ಅಲ್ಲಿಂದ ಹೋಗುವಂತೆ ಹಿಂಸಾಚಾರದ ಬೆದರಿಕೆ ಹಾಕಿದ್ದಾರೆ. ಹಾಗಾಗಿ ನೂರಾರು ಮುಸ್ಲಿಂ ವಲಸಿಗ ಕಾರ್ಮಿಕರು ಪಲಾಯನ ಮಾಡಬೇಕಾಯಿತು ಎಂದು ಟೈಮ್ಸ್ ಆಫ್ ಇಂಡಿಯಾ ಬುಧವಾರ ವರದಿ ಮಾಡಿದೆ.

ನುಹ್‌ನಲ್ಲಿನ ಕಾರ್ಮಿಕರಿಗೆ ಅಲ್ಲಿಂದ ಹೊರಡಲು ಸಮಯ ಸೀಮಿತಗೊಳಿಸಿ ಕರ್ಫ್ಯೂ ಜಾರಿ ಮಾಡಲಾಗಿದೆ. ಅವರಲ್ಲಿ ಹಲವರು ಹಿಂಸಾಚಾರ ಪೀಡಿತ ಜಿಲ್ಲೆಯಿಂದ ಪಲಾಯನ ಮಾಡುವ ಪ್ರಯತ್ನದಲ್ಲಿ ಸಣ್ಣ ಚೀಲಗಳೊಂದಿಗೆ ಅಲ್ವಾರ್ ಅಥವಾ ಸೊಹ್ನಾ ಕಡೆಗೆ ಪ್ರಯಾಣಿಸುತ್ತಿದ್ದರು ಎಂದು ಪತ್ರಿಕೆ ತಿಳಿಸಿದೆ.

ಸೋಮವಾರ ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ತಿನಿಂದ ಧಾರ್ಮಿಕ ಮೆರವಣಿಗೆ ನಡೆಸಿತು. ಆನಂತರ ಹಿಂಸಾಚಾರ ಬುಗಿಲೆದ್ದು, ಇಬ್ಬರು ಹೋಮ್ ಗಾರ್ಡ್‌ಗಳು ಮತ್ತು ಒಬ್ಬ ಇಮಾಮ್ ಸೇರಿದಂತೆ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ.

ಈ ಹಿಂಸಾಚಾರ ನುಹ್‌ನ ನೆರೆಯ ಜಿಲ್ಲೆಗಳಿಗೆ ಹರಡುತ್ತಿದ್ದಂತೆ, ಗುರುಗ್ರಾಮ್‌ನಲ್ಲಿ ಮಸೀದಿಗೆ ಬೆಂಕಿ ಹಚ್ಚಲಾಯಿತು. ಗುಂಪುಗಳು ಮುಸ್ಲಿ ಸಮುದಾಯದವರು ಮನೆಗಳನ್ನು ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ ನಂತರ ಮುಸ್ಲಿಮರ ವಲಸೆ ಕುಟುಂಬಗಳ ಗುಡಿಸಲುಗಳನ್ನು ಸುಟ್ಟು ಹಾಕಲಾಯಿತು.

ಕೆಲವರು ಮಂಗಳವಾರ ರಾತ್ರಿ ಮೋಟಾರ್‌ಸೈಕಲ್‌ಗಳಲ್ಲಿ ಬಂದರು, ”ನಾವು ಮನೆ ಬಿಟ್ಟು ವಲಸೆ ಬರದೇ ಇದ್ದರೆ ನಮ್ಮ ಕೊಳೆಗೇರಿಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆ ಹಾಕಿದರು. ಪೊಲೀಸರು ರಾತ್ರಿಯಿಂದ ಇಲ್ಲಿ ಹಾಜರಿದ್ದಾರೆ ಆದರೆ ನನ್ನ ಕುಟುಂಬವು ಹೆದರುತ್ತಿದೆ ಮತ್ತು ನಾವು ನಗರವನ್ನು ತೊರೆಯುತ್ತಿದ್ದೇವೆ” ಎಂದು ವಲಸೆ ರಿಕ್ಷಾ ಚಾಲಕ ರೆಹಮತ್ ಅಲಿ ಪಿಟಿಐಗೆ ತಿಳಿಸಿದರು.

ಪಶ್ಚಿಮ ಬಂಗಾಳದಿಂದ ಸುಮಾರು 100 ವಲಸೆ ಕುಟುಂಬಗಳು ಗುರುಗ್ರಾಮ್‌ನಲ್ಲಿ ವಾಸಿಸುತ್ತಿದ್ದು, ಕೇವಲ 15 ಕುಟುಂಬಗಳು ಮಾತ್ರ ಅಲ್ಲಿಯೇ ಉಳಿದುಕೊಂಡಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಆ ಕುಟುಂಬಗಳು ಸಹ ಹೊರಡಲು ಬಯಸುತ್ತಾರೆ ಆದರೆ ಅವರ ಬಳಿ ಹಣ ಮತ್ತು ವಾಹನಗಳಿಲ್ಲದ ಕಾರಣ ಸಾಧ್ಯವಿಲ್ಲ” ಎಂದು ಚಾನೆಲ್ ವರದಿ ಮಾಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಗುರುಗ್ರಾಮ್‌ನ ಮುಸ್ಲಿಂ ಪ್ರಾಬಲ್ಯದ ಕೊಳೆಗೇರಿಯಲ್ಲಿ ವಲಸಿಗರೊಬ್ಬರು ಮಾತನಾಡಿದ್ದು, ”ಒಬ್ಬ ವ್ಯಕ್ತಿ ತನ್ನ ಹೆಸರನ್ನು ಕೇಳಿದನು, ಅದಕ್ಕೆ ಅವನು ಹಿಂದೂ ಎಂದು ಸುಳ್ಳು ಹೇಳಿದ್ದಾನೆ. ನಂತರ, ಆತ ಸುಳ್ಳು ಹೇಳಿದ್ದಾನೆ ಎಂದು ತಿಳಿದು 40 ಜನರ ಗುಂಪು ಅವನ ಮೇಲೆ ಹಲ್ಲೆ ನಡೆಸಿದ್ದಾರೆ.

ವಲಸಿಗರಲ್ಲಿ ಒಬ್ಬರಾದ 25 ವರ್ಷದ ಶಮೀಮ್ ಹುಸೇನ್, ”ಮಂಗಳವಾರದಂದು ಗುಂಪೊಂದು ಎಲ್ಲಾ ಮುಸ್ಲಿಮರು ಪ್ರದೇಶವನ್ನು ತೊರೆಯುವಂತೆ ಕೇಳಿದೆ” ಎಂದು NDTV ಗೆ ತಿಳಿಸಿದರು.

”ನಮ್ಮಲ್ಲಿ ಹಿಂತಿರುಗಲು ಹಣವಿಲ್ಲ ಮತ್ತು ಸ್ಥಳೀಯ ಅಂಗಡಿಯವರಿಗೆ ಪಾವತಿಸಲು ಸಾಲಗಳಿವೆ. ನನಗೆ ಏನಾದರೂ ಪರವಾಗಿಲ್ಲ, ಆದರೆ ನನಗೆ ಒಂದು ವರ್ಷದ ಮಗನಿದ್ದಾನೆ ಅವನನ್ನು ಕಾಪಾಡಬೇಕು. ಸರ್ಕಾರ, ಜಿಲ್ಲಾಡಳಿತ ಮತ್ತು ಸ್ಥಳೀಯ ನಿವಾಸಿಗಳು ನಮ್ಮನ್ನು ರಕ್ಷಿಸಬೇಕೆಂಬುದು ನನ್ನ ಪ್ರಾಮಾಣಿಕ ವಿನಂತಿ. ದಯವಿಟ್ಟು ನಮಗೆ ಸಹಾಯ ಮಾಡಿ” ಎಂದು ಅಳಲು ತೋಡಿಕೊಂಡಿದ್ದಾರೆ.

”ತಾನು ಏಳು ದಿನಗಳ ಹಿಂದೆಯಷ್ಟೇ ಗುರುಗ್ರಾಮಕ್ಕೆ ಬಂದಿದ್ದು, ಒಂದೆರಡು ದಿನಗಳ ಹಿಂದೆ ಬಂದಿಳಿದ ಡೆಲಿವರಿ ಕೆಲಸಗಾರನ ಕೆಲಸಕ್ಕೆ ಕೂಲಿ ನೀಡಿಲ್ಲ” ಎಂದು ಹುಸೇನ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ಇನ್ನೊಬ್ಬ ವಲಸೆ ಕಾರ್ಮಿಕ, ರಾಜಸ್ಥಾನದ ನೀಮ್ ಕಾ ಥಾನಾ ಜಿಲ್ಲೆಯ ನಿವಾಸಿ ಧರಂಪಾಲ್ ಗುಜ್ಜರ್ ಅವರು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದು, ”ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕರು ಸೋಮವಾರ ಹೊರಡಲು ಹೇಳಿದರು. ತಾನು ಮತ್ತು ಇತರ ವಲಸೆ ಕಾರ್ಮಿಕರು ಇಡೀ ರಾತ್ರಿ ಬೀದಿಗಳಲ್ಲಿ ಕಳೆಯಬೇಕಾಯಿತು” ಎಂದು ಹೇಳಿದರು.

ಇದನ್ನೂ ಓದಿ: ಹರಿಯಾಣ ಕೋಮು ಸಂಘರ್ಷ: ಹಿಂದುತ್ವ ಸಂಘಟನೆಗಳಿಂದ ದೆಹಲಿಯಲ್ಲಿ ಪ್ರತಿಭಟನೆ; ಬಿಗಿ ಭದ್ರತೆಗೆ ಸುಪ್ರೀಂ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...