Homeಕರ್ನಾಟಕನಾನು ಧರಿಸಿರುವ ಬಟ್ಟೆ ಬಗ್ಗೆ ನಾಚಿಕೆ ಇಲ್ಲ, ಆದರೆ ನಿಮ್ಮ ಬಗ್ಗೆ ನಿರಾಶೆಯಾಗಿದೆ: ಸುವರ್ಣ ನ್ಯೂಸ್,...

ನಾನು ಧರಿಸಿರುವ ಬಟ್ಟೆ ಬಗ್ಗೆ ನಾಚಿಕೆ ಇಲ್ಲ, ಆದರೆ ನಿಮ್ಮ ಬಗ್ಗೆ ನಿರಾಶೆಯಾಗಿದೆ: ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ ವಿರುದ್ಧ ನಟಿ ಭೂಮಿ ಶೆಟ್ಟಿ ಆಕ್ರೋಶ

- Advertisement -
- Advertisement -

ನಾನು ಧರಿಸಿರುವ ಬಗ್ಗೆ ನನಗೆ ನಾಚಿಕೆ ಇಲ್ಲ, ಆದರೆ ನಿಮ್ಮ ಬಗ್ಗೆ ನಿರಾಶೆಯಾಗಿದೆ ಎಂದು ಸುವರ್ಣ ನ್ಯೂಸ್ ಮತ್ತು ಪಬ್ಲಿಕ್ ಟಿವಿ ವಿರುದ್ಧ ಉದಯೋನ್ಮುಕ ನಟಿ ಭೂಮಿ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ಭೂಮಿ ಶೆಟ್ಟಿಯವರು ಧರಿಸಿರುವ ಬಟ್ಟೆ ಕುರಿತು ಸಾಮಾಜಿಕ ಜಾಲತಾಣ ಬಳಕೆದಾರರು ಸಿಟ್ಟಿಗೆದ್ದಿದ್ದಾರೆ ಎಂದು ಭೂಮಿ ಶೆಟ್ಟಿಯವರನ್ನು ಅವಹೇಳನ ಮಾಡುವ ಧಾಟಿಯಲ್ಲಿ ಸುವರ್ಣ ನ್ಯೂಸ್ ಮತ್ತು ಪಬ್ಲಿಕ್ ಟಿವಿ ವಾಹಿನಿಯವರು ಸುದ್ದಿ ಮಾಡಿದ್ದರು. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ನಟಿ ಇದೇನಾ ಮಾಧ್ಯಮಗಳ ಕೆಲಸ ಎಂದು ಪ್ರಶ್ನಿಸಿದ್ದಾರೆ.

“ನಾನು ವೈಯಕ್ತಿಕವಾಗಿ ನಟರು ಮತ್ತು ಮಾಧ್ಯಮಗಳು ನಮ್ಮ ಸಮಾಜದ ಶ್ರೇಷ್ಠ ಸ್ತಂಭಗಳಿದ್ದಂತೆ ಎಂದು ಭಾವಿಸುತ್ತೇನೆ. ಜನರು ಹೀನಾಯವಾಗಿ ಮಾತನಾಡುತ್ತಾರೆ ಸರಿ, ಆದರೆ ಮಾಧ್ಯಮಗಳು? ಆ ಕೊಳಕು ಮಾತುಗಳನ್ನು ಮನರಂಜಿಸುವ ಮೂಲಕ ನೀವು ಏನನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದೀರಿ? ನಾನು ಧರಿಸಿರುವ ಬಟ್ಟೆ ಬಗ್ಗೆ ನನಗೆ ನಾಚಿಕೆ ಇಲ್ಲ, ಆದರೆ ನಿಮ್ಮ ಬಗ್ಗೆ ನಿರಾಶೆಯಾಗಿದೆ” ಎಂದು ಸುವರ್ಣ ನ್ಯೂಸ್ ಮತ್ತು ಪಬ್ಲಿಕ್ ಟಿವಿ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿ ಭೂಮಿ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಒಡೆತನದ ಸುವರ್ಣ ನ್ಯೂಸ್, ಮತ್ತು ಪಬ್ಲಿಕ್ ಟಿವಿ ಕನ್ನಡದ ಪ್ರತಿಭಾವಂತ ನಟಿ ಭೂಮಿ ಶೆಟ್ಟಿಯವರನ್ನು ಅವಮಾನಿಸುತ್ತಿವೆ. ಇದೇನಾ ಪತ್ರಿಕೋದ್ಯಮ? ಕನ್ನಡ ಮಾಧ್ಯಮದ ಸ್ಥಿತಿ!!! ಎಂದು ವಸೀಮ್ ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ರಾಜಕೀಯದಲ್ಲಿ ಜಾತೀಯತೆ ಪ್ರಶ್ನೆ ಎತ್ತುವ ಮಾರಿ ಸೆಲ್ವರಾಜ್‌ರ ’ಮಾಮನ್ನನ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Ede dodda star heroiens hege batte hakiddre adke good commentganla kodta eddru jana, hage mediadavru kuda adne dodda news madi janagalige thorsta eddru, adu erli. Suvarna news alli film news reading ge baro anchor kuda kalu gantu kano tara batte haktare adu paapa avrge public news ge kanodilla ansutte, dress sense avr avrge bittiro vichara avr choice adna prashne mado rights yargu ella.

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಭದ್ರಕೋಟೆ ಮಥುರಾದಲ್ಲಿ ಮುಸ್ಲಿಮರಿಗೆ ಮತದಾನ ನಿರಾಕರಣೆ?

0
ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಕೆಲ ಕ್ಷೇತ್ರಗಳ ಬೂತ್‌ಗಳಲ್ಲಿ ಮತದಾನದ ದಿನ ಮತಗಟ್ಟೆಗೆ ತೆರಳಿದ್ದ ನಾಗರಿಕರಿಗೆ ತಮ್ಮ ಹೆಸರು ಪಟ್ಟಿಯಿಂದ ನಾಪತ್ತೆಯಾಗಿರುವುದು, ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಮಥುರಾ...