Homeಮುಖಪುಟಗಾಝಾದಲ್ಲಿ ತಕ್ಷಣ ಕದನ ವಿರಾಮಕ್ಕೆ ಆಗ್ರಹಿಸಿ ನಿರ್ಣಯ ಅಂಗೀಕಾರ: ಮತದಾನಕ್ಕೆ ಭಾರತ ಗೈರು

ಗಾಝಾದಲ್ಲಿ ತಕ್ಷಣ ಕದನ ವಿರಾಮಕ್ಕೆ ಆಗ್ರಹಿಸಿ ನಿರ್ಣಯ ಅಂಗೀಕಾರ: ಮತದಾನಕ್ಕೆ ಭಾರತ ಗೈರು

- Advertisement -
- Advertisement -

ಯುನೈಟೆಡ್ ನೇಷನ್ಸ್ ಹ್ಯೂಮನ್ ರೈಟ್ಸ್ ಕೌನ್ಸಿಲ್ (ಯುಎನ್‌ಹೆಚ್‌ಆರ್‌ಸಿ) ಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುವುದು ಸೇರಿದಂತೆ ಅನೇಕ ನಿರ್ಣಯಗಳನ್ನು ಅಂಗೀಕರಿಸಿದೆ.

ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಪರವಾಗಿ ಪಾಕಿಸ್ತಾನವು ಜಿನೀವಾ ಕೌನ್ಸಿಲ್‌ನಲ್ಲಿ ನಿರ್ಣಯವನ್ನು ಮಂಡಿಸಿದೆ.

ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪ್ಯಾಲೇಸ್ತೀನಿಯನ್ ಪ್ರದೇಶಗಳಲ್ಲಿ ಮಾನವ ಹಕ್ಕುಗಳನ್ನು ಕಾಪಾಡುವ ನಿರ್ಣಯದ ಮೇಲಿನ ಮತದಾನದಿಂದ ಶುಕ್ರವಾರ ಭಾರತ ದೂರ ಉಳಿದಿದೆ.

ಶುಕ್ರವಾರ ಅಂಗೀಕರಿಸಿದ ನಿರ್ಣಯವು, ಪೂರ್ವ ಜೆರುಸಲೇಂ ಸೇರಿದಂತೆ ಪ್ಯಾಲೆಸ್ತೀನ್ ಪ್ರದೇಶಗಳಲ್ಲಿ ಇಸ್ರೇಲ್ ತನ್ನ ಆಕ್ರಮಣವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದೆ.

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಅಕ್ರಮ ದಿಗ್ಬಂಧನ ಸೇರಿದಂತೆ ಇತರ ಎಲ್ಲಾ ರೀತಿಯ ಸಾಮೂಹಿಕ ಶಿಕ್ಷೆ ಮತ್ತು ಮುತ್ತಿಗೆಯನ್ನು ತಕ್ಷಣವೇ ತೆಗೆದು ಹಾಕಬೇಕು ಮತ್ತು ಮಾನವೀಯ ನೆರವು ಒದಗಿಸುವ ಸಲುವಾಗಿ ಗಾಝಾದಲ್ಲಿ ತಕ್ಷಣದ ಕದನ ವಿರಾಮ ಘೋಷಿಸಬೇಕು ಎಂದು ಆಗ್ರಹಿಸಿದೆ.

ಜನಾಂಗೀಯ ನಿರ್ಣಾಮಕ್ಕೆ ಕಾರಣವಾಗುವ ಇಸ್ರೇಲಿ ಕ್ರಮಗಳನ್ನು ನಿರ್ಣಯ ಖಂಡಿಸಿದ್ದು, ಗಾಝಾದ ಒಳಗೆ ಅಥವಾ ಅಲ್ಲಿಂದ ಹೊರಗೆ ಪ್ಯಾಲೆಸ್ತೀನಿಯರನ್ನು ಬಲವಂತವಾಗಿ ಸ್ಥಳಾಂತರಿಸುವುದನ್ನು ತಡೆಯಲು ಎಲ್ಲಾ ದೇಶಗಳು ತಕ್ಷಣದ ಕ್ರಮವನ್ನು ತೆಗೆದುಕೊಳ್ಳುವಂತೆ ಕರೆ ನೀಡಿದೆ.

ನಿರ್ಣಯವು ಗಾಝಾದಲ್ಲಿ ಯುದ್ಧದ ಭಾಗವಾಗಿ ಜನರು ಹಸಿವಿನಿಂದ ಬಳಲುವಂತೆ ಮಾಡಿರುವುದು. ಮಾನವೀಯ ನೆರವಿಗೆ ಇಸ್ರೇಲ್ ತಡೆಯೊಡ್ಡಿರುವುದು. ಆಹಾರ, ನೀರು, ವಿದ್ಯುತ್, ಇಂಧನ ಮತ್ತು ದೂರಸಂಪರ್ಕ ಸೇರಿದಂತೆ ನಾಗರಿಕರ ಅಗತ್ಯ ಸೌಲಭ್ಯಗಳನ್ನು ತಡೆದಿರುವುದನ್ನು ಖಂಡಿಸಿದೆ.

ಭಾರತವನ್ನು ಜೊತೆಗೆ ಫ್ರಾನ್ಸ್, ಜಪಾನ್, ನೆದರ್ಲ್ಯಾಂಡ್ಸ್ ಮತ್ತು ರೊಮೇನಿಯಾ ಸೇರಿದಂತೆ ಇತರ 13 ದೇಶಗಳು ಮತದಾನಕ್ಕೆ ಗೈರು ಹಾಜರಾಗಿದ್ದವು. ನಿರ್ಣಯದ ವಿರುದ್ಧ ಮತ ಚಲಾಯಿಸಿದ ಆರು ದೇಶಗಳಲ್ಲಿ ಯುಎಸ್, ಜರ್ಮನಿ ಮತ್ತು ಅರ್ಜೆಂಟೀನಾ ಸೇರಿವೆ.

ಇಪ್ಪತ್ತೆಂಟು ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಈ ರಾಷ್ಟ್ರಗಳಲ್ಲಿ ಬಾಂಗ್ಲಾದೇಶ, ಚೀನಾ, ಇಂಡೋನೇಷ್ಯಾ, ಕುವೈತ್, ಮಲೇಷ್ಯಾ, ಕತಾರ್, ದಕ್ಷಿಣ ಆಫ್ರಿಕಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ವಿಯೆಟ್ನಾಂ ಸೇರಿವೆ.

ಇದನ್ನೂ ಓದಿ : ಮಗುವಿನ ಜನನ ನೋಂದಣಿ ವೇಳೆ ಪೋಷಕರ ಧರ್ಮ ದಾಖಲಿಸಲಿದೆ ಸರ್ಕಾರ: ಎನ್‌ಆರ್‌ಸಿ ಹುನ್ನಾರ ಎಂದ ಟಿಎಂಸಿ ಸಂಸದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...