Homeಮುಖಪುಟಪ್ರಜಾಪ್ರಭುತ್ವದಿಂದ ಚುನಾವಣಾ ನಿರಂಕುಶಾಧಿಕಾರದತ್ತ ಭಾರತ: ವಿ-ಡೆಮ್ ವರದಿ

ಪ್ರಜಾಪ್ರಭುತ್ವದಿಂದ ಚುನಾವಣಾ ನಿರಂಕುಶಾಧಿಕಾರದತ್ತ ಭಾರತ: ವಿ-ಡೆಮ್ ವರದಿ

- Advertisement -
- Advertisement -

ಇತ್ತೀಚಿನ ವರ್ಷಗಳಲ್ಲಿ ಭಾರತವು ವಿಶ್ವದ ಅತ್ಯಂತ ‘ಕೆಟ್ಟ ನಿರಂಕುಶವಾದಿ’ಗಳಲ್ಲಿ ಒಂದಾಗಿದೆ ಎಂದು ಸ್ವೀಡನ್ ಮೂಲದ ವೆರೈಟೀಸ್ ಆಫ್ ಡೆಮಾಕ್ರಸಿ (ವಿ-ಡೆಮ್) ಇನ್‌ಸ್ಟಿಟ್ಯೂಟ್ ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ವಿ-ಡೆಮ್ ವಿವಿಧ ದೇಶಗಳ ‘ಪ್ರಜಾಪ್ರಭುತ್ವ ಮತ್ತು ನಿರಂಕುಶಾಧಿಕಾರ’ವನ್ನು ‘ಉದಾರ ಪ್ರಜಾಪ್ರಭುತ್ವ, ಚುನಾವಣಾ ಪ್ರಜಾಪ್ರಭುತ್ವ, ಚುನಾವಣಾ ನಿರಂಕುಶಪ್ರಭುತ್ವ ಮತ್ತು ಮುಚ್ಚಿದ ನಿರಂಕುಶಪ್ರಭುತ್ವ’ ಎಂಬ ನಾಲ್ಕು ವಿಭಾಗಗಳಾಗಿ ವರ್ಗೀಕರಿಸಿ ಅಧ್ಯಯನ ನಡೆಸಿದೆ. ಈ ಮೂಲಕ ದೇಶಗಳು ಯಾವ ಕಡೆ ವಾಲುತ್ತಿದೆ ಎಂದು ಅಂದಾಜಿಸಿದೆ.

“ಅಭಿವ್ಯಕ್ತಿ ಮತ್ತು ಸಂಘಟನಾ ಸ್ವಾತಂತ್ರ್ಯವಿಲ್ಲದ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆಯದ ಕೇವಲ ಕಾರ್ಯಾಂಗಕ್ಕಾಗಿ ಬಹುಪಕ್ಷೀಯ ಚುನಾವಣೆಗಳು ಅಸ್ತಿತ್ವದಲ್ಲಿರುವುದನ್ನು ‘ಚುನಾವಣಾ ನಿರಂಕುಶಾಧಿಕಾರ’ ಎಂದು ವಿ-ಡೆಮ್ ವ್ಯಾಖ್ಯಾನಿಸಿದೆ.

ನಿರಂಕುಶಾಧಿಕಾರವು ಜಾಗತಿಕ ಮಟ್ಟದಲ್ಲಿ ಏರಿಕೆಯಾಗಿದ್ದು, ವಿಶ್ವದ ಶೇ. 35ರಷ್ಟು ಜನಸಂಖ್ಯೆಯನ್ನು ಹೊಂದಿರುವ 42 ದೇಶಗಳು ಹೊಸದಾಗಿ ಈ ಪ್ರವೃತ್ತಿಯನ್ನು ಅನುಭವಿಸುತ್ತಿವೆ. ಏರಿಕೆಯಾಗುತ್ತಿರುವ ನಿರಂಕುಶಾಧಿಕಾರ ವಿದ್ಯಮಾನಕ್ಕೆ ಜಗತ್ತಿನ ಜನಸಂಖ್ಯೆಯ ಪೈಕಿ ಶೇ. 18ರಷ್ಟು ಜನಸಂಖ್ಯೆ ಹೊಂದಿರುವ ಭಾರತವು ಗಮನಾರ್ಹ ಕೊಡುಗೆ ನೀಡಿರುವುದು ವಿ-ಡೆಮ್ ವರದಿಯಲ್ಲಿ ಬೆಳಕಿಗೆ ಬಂದಿದೆ. ಈ ಹಿಂದೆ ಪ್ರಜಾಪ್ರಭುತ್ವ ದೇಶ ಎಂದು ಗುರುತಿಸಿಕೊಂಡಿದ್ದ ಭಾರತವು 2018ರಲ್ಲಿ ಚುನಾವಣಾ ನಿರಂಕುಶಾಧಿಕಾರವಾಗಿ ರೂಪಾಂತರಗೊಂಡಿದೆ ಹಾಗೂ 2023ರ ಕೊನೆಗೂ ಈ ಪ್ರವೃತ್ತಿ ಮುಂದುವರಿದಿದೆ ಎಂಬುದರತ್ತ ವರದಿಯು ಬೊಟ್ಟು ಮಾಡಿದೆ.

ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಟೀಕಾಕಾರರ ಬಾಯಿ ಮುಚ್ಚಿಸಲು ದೇಶದ್ರೋಹ, ಮಾನನಷ್ಟ ಮತ್ತು ಭಯೋತ್ಪಾದನೆ ನಿಗ್ರಹದಂತಹ ಕಾನೂನುಗಳನ್ನು ಬಳಸಿದೆ ವರದಿ ತಿಳಿಸಿದೆ.

ಬಿಜೆಪಿ ಸರ್ಕಾರವು 2019ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಗೆ ತಿದ್ದುಪಡಿ ತರುವ ಮೂಲಕ ‘ಜಾತ್ಯತೀತತೆಯ ಸಂವಿಧಾನಿಕ ಬದ್ಧತೆ’ಯನ್ನು ದುರ್ಬಲಗೊಳಿಸಿದೆ. 2019ರ ತಿದ್ದುಪಡಿಯು ಕೇಂದ್ರ ಸರ್ಕಾರಕ್ಕೆ ವ್ಯಕ್ತಿಗಳನ್ನು ‘ಭಯೋತ್ಪಾದಕರು’ ಎಂದು ಗುರುತಿಸಲು ಅವಕಾಶ ಮಾಡಿಕೊಟ್ಟಿದೆ. ಇದು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳಿಗೆ ಪ್ರಕರಣಗಳನ್ನು ತನಿಖೆ ಮಾಡಲು ಅಧಿಕಾರ ನೀಡಿದೆ ಎಂದು ವರದಿ ಹೇಳಿದೆ.

ಮಾಧ್ಯಮಗಳನ್ನು ಸೆನ್ಸಾರ್ ಮಾಡುವಂತಹ ಪ್ರಯತ್ನಗಳ ಮೂಲಕ ಅತ್ಯಂತ ಕೆಟ್ಟ ಸರ್ಕಾರಿ ಅಪರಾಧಿಗಳನ್ನು ಎಸಗುತ್ತಿರುವ ರಾಷ್ಟ್ರಗಳಾದ ಎಲ್ ಸಾಲ್ವಡಾರ್ ಮತ್ತು ಮಾರಿಷಸ್‌ಗಳ ಪಟ್ಟಿಯಲ್ಲಿ ಭಾರತ ಸೇರುತ್ತಿದೆ. ಭಾರತ ಸರ್ಕಾರ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು, ರಾಜಕೀಯ ವಿರೋಧಿಗಳು ಮತ್ತು ಸರ್ಕಾರದ ನೀತಿಗಳ ವಿರುದ್ದ ಪ್ರತಿಭಟಿಸುವ ಜನರನ್ನು ಬೆದರಿಸುವುದು, ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಭಿನ್ನಾಭಿಪ್ರಾಯಗಳನ್ನು ಮೌನಗೊಳಿಸುತ್ತಿದೆ ಎಂದು ವರದಿ ತಿಳಿಸಿದೆ.

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮೂರನೇ ಬಾರಿಗೆ ಗೆಲ್ಲುವ ನಿರೀಕ್ಷೆಯಿದೆ. ಮೋದಿಯವರ ನಾಯಕತ್ವದಲ್ಲಿ ಈಗಾಗಲೇ ಗಣನೀಯ ಪ್ರಮಾಣದ ಪ್ರಜಾಪ್ರಭುತ್ವದ ಅವನತಿಯಾಗುತ್ತಿದೆ. ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ನಾಗರಿಕ ಸಮಾಜದ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆಯನ್ನು ಗಮನಿಸಿದರೆ, ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು ಎಂದು ವರದಿ ಅಭಿಪ್ರಾಯಪಟ್ಟಿದೆ.

2023ರ ವಿ-ಡೆಮ್ ಇನ್‌ಸ್ಟಿಟ್ಯೂಟ್‌ನ ಲಿಬರಲ್ ಡೆಮಾಕ್ರಸಿ ಇಂಡೆಕ್ಸ್‌ನಲ್ಲಿ ಸಮೀಕ್ಷೆ ಮಾಡಲಾದ 179 ದೇಶಗಳಲ್ಲಿ ಭಾರತವು 104 ನೇ ಸ್ಥಾನದಲ್ಲಿದೆ. ಈ ಸೂಚ್ಯಂಕವನ್ನು “ಉದಾರ ಪ್ರಜಾಪ್ರಭುತ್ವ ಮತ್ತು ಚುನಾವಣಾ ಪ್ರಜಾಪ್ರಭುತ್ವ’ ಈ ಎರಡೂ ಅಂಶಗಳ ಮೂಲಕ ಅಳೆಯಲಾಗಿದೆ. ಉದಾರ ಪ್ರಜಾಪ್ರಭುತ್ವ ಮತ್ತು ಚುನಾವಣಾ ಪ್ರಜಾಪ್ರಭುತ್ವದ ಒಳಗೆ 71 ಉಪ ವರ್ಗೀಕರಣಗಳನ್ನು ಮಾಡಿ ಸಮೀಕ್ಷೆ ನಡೆಸಲಾಗಿದೆ.

ವಿ-ಡೆಮ್ ಇನ್ಸ್‌ಟ್ಯೂಟ್‌ನ ಈ ವರ್ಷದ ವರದಿಯ ಬಗ್ಗೆ ಭಾರತ ಸರ್ಕಾರ ಅಥವಾ ವಿದೇಶಾಂಗ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, 2021ರಲ್ಲಿ ವಿ-ಡೆಮ್ ಮತ್ತು ಯುಎಸ್ ಮೂಲದ ಸರ್ಕಾರೇತರ ಸಂಸ್ಥೆ ಫ್ರೀಡಂ ಹೌಸ್ “ಭಾರತದಲ್ಲಿ ಪ್ರಜಾಪ್ರಭುತ್ವ ಕುಸಿಯುತ್ತಿದೆ” ಎಂದು ವರದಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವ ಎಸ್‌. ಜೈಶಂಕರ್, “ಸ್ವಯಂ ಘೋಷಿತ ಜಾಗತಿಕ ಪಾಲಕರಿಂದ ದೇಶಕ್ಕೆ ಅನುಮೋದನೆ ಅಥವಾ ನೈತಿಕ ಉಪದೇಶದ ಅಗತ್ಯವಿಲ್ಲ” ಎಂದಿದ್ದರು.

ಇದನ್ನೂ ಓದಿ : ಜಮ್ಮು ಕಾಶ್ಮೀರಕ್ಕೆ ಮೋದಿ ಭೇಟಿ ವೇಳೆ ವಿದೇಶಿ ಮಾಧ್ಯಮಗಳ ಪತ್ರಕರ್ತರನ್ನು ಹೊರಗಿಟ್ಟ ಸರ್ಕಾರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...