Homeಮುಖಪುಟಮಹಿಳಾ ಸರಪಂಚರ ಬದಲಿಗೆ ವೇದಿಕೆ ಹಂಚಿಕೊಂಡ ಸೋದರ ಮಾವ; ಅಖಿಲೇಶ್ ಯಾದವ್ ಹಾರಿಕೆ ಉತ್ತರ

ಮಹಿಳಾ ಸರಪಂಚರ ಬದಲಿಗೆ ವೇದಿಕೆ ಹಂಚಿಕೊಂಡ ಸೋದರ ಮಾವ; ಅಖಿಲೇಶ್ ಯಾದವ್ ಹಾರಿಕೆ ಉತ್ತರ

- Advertisement -
- Advertisement -

‘ಪುರುಷ ಪ್ರಾಧಾನ್ಯತೆ’ಯನ್ನೇ ಪಾಲಿಸಿಕೊಂಡು ಬಂದಿರುವ ಭಾರತೀಯ ಸಮಾಜವು ‘ಮಹಿಳಾ ಪ್ರಾಧಾನ್ಯತೆ’ಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅದರಲ್ಲೂ ‘ಊಳಿಗಮಾನ್ಯ ಪದ್ಧತಿ’ಯನ್ನು ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಪಾಲಿಸಿಕೊಂಡು ಬರುತ್ತಿರುವ ಉತ್ತರ ಭಾರತದಲ್ಲಿ ಮಹಿಳಾ ಮೀಸಲಾತಿ ಎನ್ನುವುದು ನೆಪ ಮಾತ್ರಕ್ಕೆ ಎಂಬಂತಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದು ಜನಪ್ರತಿನಿಧಿಗಳಾಗುವ ಮಹಿಳೆಯರ ಬದಲಿಗೆ, ಅವರ ತಂದೆ, ಸೋದರ, ಗಂಡ ಹಾಗೂ ಪುರುಷ ಸಂಬಂಧಿ ಆಡಳಿತ ನಡೆಸುವುದು ದೇಶದಾದ್ಯಂತ ಮಾಮೂಲಾಗಿಬಿಟ್ಟಿದೆ. ಮಹಿಳಾ ಸರಪಂಚರ ಬದಲಿಗೆ ಆಕೆಯ ಸಹೋದರ ಮಾವ ವೇದಿಕೆ ಹಂಚಿಕೊಂಡಿದ್ದನ್ನು ಪ್ರಶ್ನಿಸಿದ ಪತ್ರಕರ್ತರಿಗೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾರಿಕೆಯ ಉತ್ತರ ನೀಡಿದ್ದಾರೆ.

ಮಹಿಳಾ ಸರಪಂಚರ ಸೋದರ ಮಾವ ವೇದಿಕೆಯಲ್ಲಿ ಅವರನ್ನು ಏಕೆ ಪ್ರತಿನಿಧಿಸುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ‘ನೀವೆಲ್ಲರೂ ವರದಿಗಾರರೆಲ್ಲಾ ಪುರುಷರು ಏಕೆ’ ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುವ ಕಾರ್ಯಕ್ರಮದಲ್ಲಿ ಪತ್ರಕರ್ತರು ಮತ್ತು ಅಖಿಲೇಶ್ ನಡುವೆ ಈ ವಿಚಾರವಾಗಿ ಮಾತಿನ ವಿನಿಮಯ ನಡೆಯಿತು. ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಬೆಲ್ಹರಾ ಪಂಚಾಯತ್ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು. ಆಯೋಜಕರು ಸ್ಥಳೀಯ ಸರಪಂಚ್ ಶಬಾನಾ ಖಾತುನ್ ಆಗಿದ್ದರು. ಆದರೆ, ಅವರು ವೇದಿಕೆಯಿಂದ ಕಾಣೆಯಾಗಿದ್ದರು. ಅದಕ್ಕಿಂತ ಮುಖ್ಯವಾಗಿ ಆಕೆಯ ಹೆಸರೂ ಯಾವುದೇ ಹೋರ್ಡಿಂಗ್ಸ್ ನಲ್ಲಿ ಇರಲಿಲ್ಲ. ಬದಲಾಗಿ ಆಕೆಯ ಸೋದರ ಮಾವ ಅಯಾಜ್ ಖಾನ್ ಹಾಜರಿದ್ದರು. ಪೋಸ್ಟರ್‌ಗಳಲ್ಲಿ ಅವರ ಛಾಯಾಚಿತ್ರವಾಗಿದ್ದು, ಅದರ ಪಕ್ಕದಲ್ಲಿ ‘ಅಧ್ಯಕ್ಷರು’ ಎಂದು ಬರೆಯಲಾಗಿದೆ.

ಬೆಳ್ಹಾರ ಪಂಚಾಯಿತಿ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಕಳೆದ ಚುನಾವಣೆಯಲ್ಲಿ ಖತುನ್ ಅವರು ಅಲ್ಲಿಂದ ಆಯ್ಕೆಯಾಗಿದ್ದರು. ಆದರೆ, ಆಕೆ ಯಾವುದೇ ಪಂಚಾಯತ್ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಪಂಚಾಯಿತಿಯ ಎಲ್ಲಾ ನಿರ್ಧಾರಗಳನ್ನು ಆಕೆಯ ಸೋದರ ಮಾವ ತೆಗೆದುಕೊಳ್ಳುತ್ತಾನೆ ಎಂದು ಸ್ಥಳೀಯರು ಹೇಳುತ್ತಾರೆ. ಅಧಿಕೃತ ದಾಖಲೆಗಳನ್ನು ಸಹಿ ಮಾಡಲು ಮಾತ್ರ ಸರಪಂಚರ ಮನೆಗೆ ಕಡತಗಳನ್ನು ಕಳುಹಿಸಲಾಗುತ್ತದೆ.

ವಾಸ್ತವವಾಗಿ, ಅಂತಹ ಹಲವಾರು ಮೀಸಲು ಸ್ಥಾನಗಳಲ್ಲಿ, ಮಹಿಳಾ ಸರಪಂಚ್‌ಗಳ ಪತಿ ಮತ್ತು ಇತರ ಪುರುಷ ಸಂಬಂಧಿಗಳು ಸರಪಂಚ್ ಆಗಿರುತ್ತಾರೆ ಎಂದು ತಿಳಿದುಬಂದಿದೆ. ಚುನಾಯಿತ ಮಹಿಳೆಯರು ದಾಖಲೆಗಳಿಗೆ ಸಹಿ ಮಾಡುವುದಕ್ಕಿಂತ ಹೆಚ್ಚಿನದ್ದೇನೂ ಮಾಡುವುದಿಲ್ಲ.

ಈ ಸಂದರ್ಭದಲ್ಲಿ, ವರದಿಗಾರರ ಗುಂಪು ಅಖಿಲೇಶ್ ಯಾದವ್ ಅವರನ್ನು, ‘ಮಹಿಳಾ ಸರಪಂಚ್ ಪ್ರತಿನಿಧಿಸುವ ವೇದಿಕೆಯಲ್ಲಿ ಪುರುಷ ಸಂಬಂಧಿ ಇದ್ದರೆ, ಮಹಿಳಾ ಸಬಲೀಕರಣದ ಸಂದೇಶವನ್ನು ಹೇಗೆ ಕಳುಹಿಸಬಹುದು’ ಎಂದು ಕೇಳಿದರು. ‘ಇದೇನು ಹೊಸತೇ? ಎಷ್ಟೊಂದು ಪ್ರಧಾನ್‌ಪತಿಗಳು (ಪ್ರಧಾನರ ಗಂಡಂದಿರು) ಇಲ್ಲಿದ್ದಾರೆ. ಇದರಲ್ಲಿ ಸಮಸ್ಯೆ ಏನಿದೆ? ಈಗ ನಾನು ಕೇಳುತ್ತೇವೆರ, ನೀವೆಲ್ಲರೂ (ವರದಿಗಾರರು) ಪುರುಷರೆ ಏಕೆ’ ಎಂದು ಯಾದವ್ ಹಾಕಿದ ಮರು ಪ್ರಶ್ನೆಗೆ ಬೆಂಬಲಿಗರು ಹರ್ಷೋದ್ಗಾರ ವ್ಯಕ್ತಪಡಿಸಿದರು.

ಇದನ್ನೂ ಓದಿ; ಕೇಜ್ರಿವಾಲ್ ವಿರುದ್ಧ ಕೋರ್ಟ್‌ಗೆ ದೂರು ಸಲ್ಲಿಸಿದ ಜಾರಿ ನಿರ್ದೇಶನಾಲಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಾವಣಗೆರೆ ಲೋಕಸಭಾ ಕ್ಷೇತ್ರ: ಚುನಾವಣಾ ಕಣದಲ್ಲಿ ’ಜಿ.ಮಲ್ಲಿಕಾರ್ಜುನಪ್ಪ- ಶಾಮನೂರು ಶಿವಶಂಕರಪ್ಪ’ ಕುಟುಂಬದ ಮಹಿಳಾ ಅಭ್ಯರ್ಥಿಗಳು;...

1991ರವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಂತರ ಬಿಜೆಪಿ ಅಲ್ಲಿ ನೆಲೆಯೂರಿ ಹಿಡಿತ ಸಾಧಿಸಿದೆ. 1996ರ ಸಾರ್ವತ್ರಿಕ ಚುನಾವಣೆಯ ನಂತರ ಕೇಸರಿ ಪಕ್ಷವು ಇಲ್ಲಿನ ತನ್ನ ಬಿಗಿ ಹಿಡಿತವನ್ನು ಸಡಿಲಗೊಳಿಸಿಲ್ಲ. ಮಾಜಿ...