Homeಮುಖಪುಟಮುಗ್ಗರಿಸಿದ ಭಾರತ: ಭರ್ಜರಿ ಜಯದೊಂದಿಗೆ ಫೈನಲ್‌ ಲಗ್ಗೆಯಿಟ್ಟ ಇಂಗ್ಲೆಂಡ್

ಮುಗ್ಗರಿಸಿದ ಭಾರತ: ಭರ್ಜರಿ ಜಯದೊಂದಿಗೆ ಫೈನಲ್‌ ಲಗ್ಗೆಯಿಟ್ಟ ಇಂಗ್ಲೆಂಡ್

- Advertisement -
- Advertisement -

ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್ ಫೈನಲ್ ತಲುಪಿತು. ಅಲೆಕ್ಸ್ ಹೇಲ್ಸ್ (86 ರನ್) ಮತ್ತು ಜೋಸ್ ಬಟ್ಲರ್‌ರವರ (80 ರನ್) ಆಕ್ರಮಣಕಾರಿ ಬ್ಯಾಟಿಂಗ್‌ ಬಲದಿಂದ ಸುಲಭ ಜಯ ಕಂಡಿತು. ಬೌಲಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದ ಭಾರತ ತಂಡ ಈ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿತು.

ಇಂಗ್ಲೆಂಡ್‌ನ ಈ ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳು ಭಾರತದ ಬೌಲರ್‌ಗಳ ಬೆವರಿಳಿಸಿದರು. ಚೆಂಡನ್ನು ಅಂಗಳದ ಮೂಲೆ ಮೂಲೆ ಅಟ್ಟುವ ಮೂಲಕ ಅಧಿಕಾರಯುತ ಗೆಲುವು ಪಡೆದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ನವೆಂಬರ್ 13 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.

2010ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್, 2016ರಲ್ಲಿ ವೆಸ್ಟ್ ಇಂಡೀಸ್ ಎದುರು ಫೈನಲ್‌ನಲ್ಲಿ ಮುಗ್ಗಿರಿಸಿತ್ತು. ಈಗ ಫೈನಲ್ ತಲುಪಿದ್ದು ಎರಡನೇ ಬಾರಿ ಚಾಂಪಿಯನ್ ಆಗುವ ತವಕದಲ್ಲಿದೆ. ಅದೇ ರೀತಿ 2007 ರಲ್ಲಿ ಫೈನಲ್‌ನಲ್ಲಿ ಭಾರತದ ವಿರುದ್ಧ ಮುಗ್ಗರಿಸಿದ್ದ ಪಾಕ್, 2009 ರಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಈಗ ಎರಡನೆ ಬಾರಿ ಕಪ್ ಜಯಿಸುವ ಕನಸಿನಲ್ಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳದುಕೊಂಡು 168 ರನ್ ಗಳಿಸುವ ಮೂಲಕ ಸವಾಲಿನ ಮೊತ್ತ ಪೇರಿಸಿತು. ವಿರಾಟ್ ಕೊಹ್ಲಿಯ ಸೊಗಸಾದ ಮತ್ತು ಹಾರ್ದಿಕ್ ಪಾಂಡ್ಯರವರ ಬಿರುಸಿನ ಅರ್ಧಶಕತಗಳಿಂದ ಭಾರತ ತಂಡ ಇಂಗ್ಲೆಂಡ್ ಗೆಲುವಿನ 169 ರನ್‌ಗಳ ಗುರಿ ನೀಡಿತ್ತು.

ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರೀಕ್ಷೆಯಂತೆ ವೋಕ್ಸ್ ಕೆ.ಎಲ್ ರಾಹುಲ್ ವಿಕೆಟ್ ತೆಗೆದು ಶುಭಾರಂಭ ಮಾಡಿದರು. ನಂತರ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಅಲ್ಪ ಜೊತೆಯಾಟ ನೀಡಿದರೂ ಶರ್ಮಾ ಬೇಗನೆ ನಿರ್ಗಮಿಸುವ ಮೂಲಕ ನಿರಾಸೆ ಮೂಡಿಸಿದರು. ಇನ್ನೂ ಸಿಕ್ಸ್‌ ಬಾರಿಗೆ ಭರವಸೆ ಮೂಡಿಸಿದ್ದ ಸೂರ್ಯಕುಮಾರ್ ಯಾದವ್ ಆಟವೂ ಹೆಚ್ಚು ಹೊತ್ತು ನಡೆಯಲಿಲ್ಲ. ಪರಿಣಾಮ ಭಾರತ ಒಂದು ಹಂತದಲ್ಲಿ 9 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 60 ಅಷ್ಟೇ ಗಳಿಸಿತ್ತು.

ಆದರೆ, ನಾಲ್ಕನೇ ವಿಕೆಟ್‌ಗೆ ಜೊತೆಯಾದ ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡ್ಯ ಬಿರುಸಿನ ಜೊತೆಯಾಟಕ್ಕೆ ಮುಂದಾದರು. 4 ಬೌಂಡರಿ 1 ಸಿಕ್ಸರ್ ಸಹಾಯದಿಂದ ವಿರಾಟ್ ಕೊಹ್ಲಿ 40 ಎಸೆತಕ್ಕೆ 50 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 4 ಬೌಂಡರಿ 5 ಸಿಕ್ಸರ್ ಸಹಾಯದಿಂದ 33 ಎಸೆತಕ್ಕೆ ಬಿರುಸಿನ 63 ರನ್ ಬಾರಿಸಿದರು.

ಆದರೆ ಭಾರತದ ಬೌಲರ್‌ಗಳು ಯಾವುದೇ ಹಂತದಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಲಿಲ್ಲ. ಇಂಗ್ಲೆಂಡ್‌ನ ಒಂದೂ ವಿಕೆಟ್ ಪಡೆಯಲು ವಿಫಲರಾದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ ಆಟಗಾರರು ಇನ್ನು 24 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗುರಿ ಮುಟ್ಟಿದರು.

ಇದನ್ನೂ ಓದಿ: ಗುಜರಾತ್ ಚುನಾವಣೆ: ಹಾರ್ದಿಕ್ ಪಟೇಲ್‌, ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿ ಟಿಕೆಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...