Homeಎಕಾನಮಿ'ನೋಟು ನಿಷೇಧದಿಂದ ಭಾರತದ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು': ನೊಬೆಲ್ ಪುರಸ್ಕೃತೆ ಎಸ್ತಾರ್ ಡುಫ್ಲೋ

‘ನೋಟು ನಿಷೇಧದಿಂದ ಭಾರತದ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು’: ನೊಬೆಲ್ ಪುರಸ್ಕೃತೆ ಎಸ್ತಾರ್ ಡುಫ್ಲೋ

- Advertisement -
- Advertisement -

ಭಾರತದಲ್ಲಿ 2016ರಲ್ಲಿ ಬಿಜೆಪಿ ಸರ್ಕಾರ ಏಕಾಏಕಿ, ರಾತ್ರೋರಾತ್ರಿ ಪ್ರಕಟಿಸಿದ್ದ ನೋಟು ಅಮಾನ್ಯೀಕರಣ ಕೆಲವೇ ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ಹಲವು ಅರ್ಥಶಾಸ್ತ್ರಜ್ಞರು, ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು. ನಿಗದಿತ ಕಾರ್ಯಸೂಚಿ ಹಾಗೂ ಪರಿಣಾಮಗಳ ಬಗ್ಗೆ ಅಂದಾಜಿಲ್ಲದೆ ಹೇರಲಾಗಿರುವ ನೋಟು ನಿಷೇಧ ಕ್ರಮ ಮುಂದೊಂದು ದಿನ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು ನೀಡಲಿದೆ. ಇದರಿಂದ ಆಗಲಿರುವ ನೋವಿನ ಬಗ್ಗೆ ನಮಗ್ಯಾರಿಗೂ ಅಂದಾಜಿಲ್ಲ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞೆ ಎಸ್ತಾರ್ ಡುಫ್ಲೋ ಅಂದೇ ಹೇಳಿದ್ದರು.

ಹೌದು… 2016ರಲ್ಲಿ ಭಾರತದಲ್ಲಿ ನೋಟು ಅಮಾನ್ಯೀಕರಣವಾದಾಗಲೇ, ಈ ಕ್ರಮದಿಂದ ಭಾರತದ ಆರ್ಥಿಕತೆ ಅಪಾಯ ಎದುರಿಸಲಿದೆ ಎಂದು ಅರ್ಥಶಾಸ್ತ್ರಜ್ಞೆ ಎಸ್ತಾರ್ ಡುಫ್ಲೋ ಹೇಳಿದ್ದರು. ಫ್ರಾನ್ಸ್ ಮೂಲದ ಎಸ್ತಾರಾ ಡುಫ್ಲೋ, ಎಂಐಟಿಗೆ ತೆರಳುವ ಮುನ್ನ ಇತಿಹಾಸ ಮತ್ತು ಅರ್ಥಶಾಸ್ತ್ರವನ್ನು ಪ್ಯಾರಿಸ್ ಮೂಲದ ಎಕೋಲ್ ನಾರ್ಮಲ್ ಸುಪಿರೀಯರ್ ಕಾಲೇಜಿನಲ್ಲಿ ಓದಿದ್ದರು. 1999ರಲ್ಲಿ ಪಿ.ಎಚ್.ಡಿ ಪಡೆದಿದ್ದಾರೆ. ಡಾಕ್ಟರೇಟ್ ಪದವಿ ನಂತರದ ಐದು ವರ್ಷಗಳಲ್ಲಿ ಎಸ್ತಾರ್ ಅರ್ಥಶಾಸ್ತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದರು. 2010ರಲ್ಲಿ ಜಾನ್ ಬೇಟ್ಸ್ ಕ್ಲರ್ಕ್ ಪ್ರಶಸ್ತಿ ಪಡೆದರು. ನಂತರ 2012 ರಲ್ಲಿ ಡುಫ್ಲೋ ಮತ್ತು ಅಭಿಜಿತ್ ಬ್ಯಾನರ್ಜಿ ಬಡತನದ ಆರ್ಥಿಕತೆ ಎಂಬ ಪುಸ್ತಕ ಪ್ರಕಟಿಸಿದರು. ಬಡತನ ಹೋಗಲಾಡಿಸುವ ದಾರಿ ಯಾವುದು..? ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿದ್ದರು. ಎಂಐಟಿಯಲ್ಲಿ ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆ್ಯಕ್ಷನ್ ಲ್ಯಾಬ್ ( ಜೆ-ಪಾಲ್) ತೆರೆದರು. ಆರ್ಥಿಕತೆಯ ಅಭಿವೃದ್ಧಿ ಮತ್ತು ಹೊಸ ನೀತಿಗಳನ್ನು ತಿಳಿಸಲು ಸಹಕಾರಿಯಾಗಿದೆ.

ಲೈವ್ ಮಿಂಟ್ ಸುದ್ದಿವಾಹಿನಿ ನಡೆಸಿದ್ದ ಸಂದರ್ಶನದಲ್ಲಿ ಎಸ್ತಾರ್ ಡುಫ್ಲೋ ಭಾರತದ ಆರ್ಥಿಕತೆಯ ಮೇಲೆ ನೋಟು ನಿಷೇಧ ಯಾವ ರೀತಿ ಪರಿಣಾಮ ಬೀರಲಿದೆ, ದೇಶದಲ್ಲಿನ ಆರೋಗ್ಯ ಸ್ಥಿತಿ, ಶೈಕ್ಷಣಿಕ ಪ್ರಗತಿ ಮತ್ತು ಮಟ್ಟಕ್ಕೆ ಕಡಿಮೆ ಪ್ರಾತಿನಿಧ್ಯ ನೀಡುತ್ತಿರುವ ಕುರಿತು ಸುದೀರ್ಘವಾಗಿ ಹೇಳಿದ್ದರು. ಸಂದರ್ಶನದ ಕೆಲ ಪ್ರಶ್ನೋತ್ತರಗಳು ಈ ಕೆಳಗಿನಂತಿದೆ.

  • ನಿಮ್ಮ ಬಡತನದ ಅರ್ಥಶಾಸ್ತ್ರಜ್ಞ ಪುಸ್ತಕದಲ್ಲಿ ನೋಟು ಅಮಾನ್ಯೀಕರಣ ಒಂದು ಪ್ರಕರಣವಾಗಿದೆ. ಆಲೋಚನೆಯಿಲ್ಲದೆ ಮಾಡಿರುವ ನೋಟು ನಿಷೇಧ ಕ್ರಮ ನಗದು ರಹಿತ ಆರ್ಥಿಕ ವ್ಯವಸ್ಥೆಗೆ ಒಂದು ಪ್ರಕರಣದಂತೆ ಎಂದು ನೀವು ಭಾವಿಸುತ್ತೀರಾ..?

ನನ್ನ ಪ್ರಕಾರ ನೋಟು ನಿಷೇಧ ಅನುಷ್ಠಾನಕ್ಕೂ ಮೊದಲು ಆಲೋಚನೆ ಮಾಡದೇ, ಇದಕ್ಕೆ ಕಡಿಮೆ ಪ್ರಾಮುಖ್ಯತೆ ನೀಡಲಾಗಿದೆ. ಹೀಗಾಗಿ ನೋಟು ಅಮಾನ್ಯೀಕರಣ ಜಾರಿ, ನಾಟಕೀಯ ಬೆಳವಣಿಗೆಗೆ ಒಂದು ಉದಾಹರಣೆಯಾಗಿದೆ. ನೂರಕ್ಕೂ ಹೆಚ್ಚು ನಿಯಮಗಳನ್ನು ಮಾಡಲಾಗಿದೆ. ಆದರೆ ಅದ್ಯಾವುದರ ಬಗ್ಗೆಯೂ ಸ್ಪಷ್ಟತೆಯಿಲ್ಲ. ಉದಾಹರಣೆಗೆ ಯುಪಿಐ ( ಯೂನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ) ವೇದಿಕೆ ನಗದು ರಹಿತ ಪೇಟಿಎಂ ಇದ್ದಂತೆ. ಬ್ಯಾಂಕುಗಳು ನೋಟು ನಿಷೇಧ ನಿಯಮಗಳ ಜಾರಿ ಮಾಡಲು ಸಿದ್ಧವಾಗಿಲ್ಲ, ಅವುಗಳ ಅನುಮೋದನೆಗೆ ಹಿಂಜರಿಯುತ್ತಿವೆ. ಯಾವುದೇ ಪ್ರಮುಖ ನಿಯಂತ್ರಣವಿಲ್ಲದೇ ನಗದು ರಹಿತ ಆರ್ಥಿಕತೆಯತ್ತ ಸಾಗಲು ತೆಗೆದುಕೊಂಡ ಕ್ರಮ ಇದಾಗಿದೆ.

  • ನೋಟು ಅಮಾನ್ಯೀಕರಣದ ಪರಿಣಾಮ ಹೆಚ್ಚು ಅನೌಪಚಾರಿಕ ವಲಯದ ಮೇಲೆ ಬೀರುತ್ತದೆ ಎಂದೇ ಹೇಳಲಾಗುತ್ತಿದೆ. ಇದು ಹೆಚ್ಚಾಗಿ ಬಡ ಜನರ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ಬಡವರ ಆದಾಯದ ಮೇಲೆ ಬೀರುವ ಈ ಆಘಾತ ಭಾರತದಲ್ಲಿನ ಬಡತನದ ವಿರುದ್ಧ ಹೋರಾಟ ನಡೆಸಲು ಸೂಕ್ತವೇ, ಇದರ ಪರಿಣಾಮ ಏನಾಗಲಿದೆ..?

ಈ ಬಗ್ಗೆ ನಮಗೆ ಗೊತ್ತಿಲ್ಲ. ಈ ನಾವು ಏನನ್ನೂ ಈಗಲೇ ಹೇಳುವುದು ಸಾಧ್ಯವಿಲ್ಲ. ಆರ್ಥಿಕತೆಯ ಅನೌಪಚಾರಿಕ ಜಿಡಿಪಿ ಸೃಷ್ಟಿಯನ್ನು ಅಳೆಯಲು ಯಾವುದೇ ಕಾರ್ಯವಿಧಾನವಿಲ್ಲ. ಅನೌಪಚಾರಿಕ ಆರ್ಥಿಕತೆ, ಜಿಡಿಪಿಯನ್ನು ಔಪಚಾರಿಕ ಆರ್ಥಿಕ ಜಿಡಿಪಿಗೆ ಸೂಚಿಸುವ ಮೂಲಕ ಲೆಕ್ಕ ಹಾಕಲಾಗುತ್ತದೆ. ನಷ್ಟದ ನಿಖರತೆಯ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಅಷ್ಟೇ ಅಲ್ಲ ಯಾವುದೇ ಹಿನ್ನಡೆ ಇಲ್ಲ ಎಂಬುದಕ್ಕೆ ಸರ್ಕಾರ ಅಂಕಿ ಅಂಶಗಳನ್ನು ಬಳಸಬಹುದು. ಕಾರ್ಯಸ್ಥಳಗಳಿಂದ ಕಾರ್ಮಿಕರು ಗ್ರಾಮಗಳತ್ತ ತೆರಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ದತ್ತಾಂಶವಿಲ್ಲ. ಇದು ಅಲ್ಫಾವಧಿಯಲ್ಲಿ ಜನತೆ ಅನುಭವಿಸುವ ನೋವನ್ನು ಎತ್ತಿ ಹಿಡಿಯುತ್ತದೆ.

  • ಆರ್ಥಿಕತೆಯ ಚಿಂತನೆ ಹಾಗೂ ಬೆಳವಣಿಗೆ, ಕಲ್ಯಾಣ, ಆರ್ಥಿಕತೆಯ ಮೇಲೆ ಕೇಂದ್ರೀಕರಿಸುವುದರ ನಡುವಿನ ವಿಭಜನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು..?

ಕೇವಲ ಆರ್ಥಿಕತೆಯ ಬೆಳವಣಿಗೆ ಮೇಲೆ ದೃಷ್ಟಿ ಕೇಂದ್ರೀಕರಿಸುವುದರಿಂದ ಸಮಸ್ಯೆ ಹಾಗೂ ಯಾವ ಬೆಳವಣಿಗೆ ಆಗಲಿದೆ ಎಂಬುದನ್ನು ಹೇಳುವುದು ಕಷ್ಟ. ಇದು ಕೇವಲ ನನ್ನ ಅಭಿಪ್ರಾಯ ಮಾತ್ರವಲ್ಲ. ಆರ್ಥಿಕ ಬೆಳವಣಿಗೆಯ ಹಲವು ನಿರ್ಧಾರಕಗಳ ಬಗ್ಗೆ ಅಧ್ಯಯನ ಮಾಡಿರುವ ಸ್ಥೂಲ ಅರ್ಥಶಾಸ್ತ್ರಜ್ಞರು ಇದನ್ನೇ ಹೇಳಿದ್ದಾರೆ. ಕೇವಲ ಬೆಳವಣಿಗೆಯ ಮೇಲೆಯೇ ಕೇಂದ್ರೀಕೃತವಾಗಿರುವುದು ಅನುಪಯುಕ್ತ. ಭವಿಷ್ಯದ ಪೀಳಿಗೆಗೆ ಸಾಮಾಜಿಕ ಚಲನಶೀಲತೆಯನ್ನು ಖಚಿತಪಡಿಸುವಲ್ಲಿ ವಿಫಲವಾಗುವುದು ಬೆಳವಣಿಗೆಗೆ ಪ್ರಮುಖ ಮತ್ತೊಂದು ವಿಷಯ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರ ಪ್ರಾಥಮಿಕ ಅಥವಾ ಚುನಾವಣೆ ವೇಳೆ ಬರ್ನಿ ಸ್ಯಾಂಡರ್ಸ್ ಗೆ ಬೆಂಬಲ ವ್ಯಕ್ತವಾಯಿತು. ಬೆಳವಣಿಗೆಗೆ ಏನು ಕಾರಣ ಎಂದು ಒಬ್ಬರು ತಿಳಿದಿದ್ದರೂ ಸಹ, ಬೆಳವಣಿಗೆಯೊಂದರ ಮೇಲೆಯೇ ದೃಷ್ಟಿ ಕೇಂದ್ರೀಕರಿಸಿ, ದೊಡ್ಡ ಲಾಭಗಳನ್ನು ನಿರ್ಲಕ್ಷಿಸುವಾಗ ಅದರ ಮೇಲೆ ಕೇಂದ್ರೀಕರಿಸುವುದು ಪ್ರತಿ ಉತ್ಪಾದಕವಾಗಿದೆ ಎಂದು ನಾನು ಭಾವಿಸುತ್ತೇನೆ.

ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳನ್ನು ನಿಷೇಧ ಮಾಡಿರುವುದು, ಯಾವುದೇ ಗಂಭೀರ ಆಲೋಚನೆಯಿಲ್ಲದೆ ಮಾಡಿದ ನೀತಿ ಪ್ರಕಟಣೆಯಾಗಿದೆ. ಕರೆನ್ಸಿ-ಸ್ಕ್ರ್ಯಾಪಿಂಗ್ ಗ್ಯಾಂಬಿಟ್‌ನ ನೈಜ ಪರಿಣಾಮ ಎಂದಿಗೂ ಕೂಡಲೇ ತಿಳಿದು ಬರುವುದಿಲ್ಲ. ಯಾಕೆಂದರೆ ಭಾರತದ ಸಂಖ್ಯಾಶಾಸ್ತ್ರೀಯ ಅಂಕಿಅಂಶಗಳು ಅನೌಪಚಾರಿಕ ಆರ್ಥಿಕತೆಯ ದತ್ತಾಂಶವನ್ನು ನಿಯಮಿತವಾಗಿ ಸೆರೆ ಹಿಡಿಯುವುದಿಲ್ಲವೆಂಬ ಬಗ್ಗೆ ಎಸ್ತಾರ್ ಡುಫ್ಲೋ 2016ರಲ್ಲೇ ತಿಳಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...

ಎಸ್ಐಆರ್ ಬಳಿಕ ಮಣಿಪುರ, ಸಿಕ್ಕಿಂ, ಮಿಜೋರಾಂನಲ್ಲಿ 2.24 ಲಕ್ಷ ಮತದಾರರ ಹೆಸರು ಕಡಿತ: ಸಿಕ್ಕಿಂನಲ್ಲಿ ಶೇ.11.15ರಷ್ಟು ಇಳಿಕೆ 

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಈಶಾನ್ಯ ಭಾರತದ ಮಣಿಪುರ, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಈ ಮೂರು ರಾಜ್ಯಗಳಲ್ಲಿ...

ಜೆಎನ್‌ಯು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ : 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ದೂರು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು...

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...