Homeಅಂತರಾಷ್ಟ್ರೀಯನೇಪಾಳ ಹಾಗೂ ಪಾಕಿಸ್ತಾನಕ್ಕಿಂತ ಭಾರತದ ಕನಿಷ್ಠ ವೇತನ ಕಡಿಮೆ: ವಿಶ್ವ ಸಂಸ್ಥೆ ವರದಿ

ನೇಪಾಳ ಹಾಗೂ ಪಾಕಿಸ್ತಾನಕ್ಕಿಂತ ಭಾರತದ ಕನಿಷ್ಠ ವೇತನ ಕಡಿಮೆ: ವಿಶ್ವ ಸಂಸ್ಥೆ ವರದಿ

ದಕ್ಷಿಣ ಏಷ್ಯಾ ಹಾಗೂ ಫೆಸಿಫಿಕ್ ರಾಷ್ಟಗಳಲ್ಲಿ ಕನಿಷ್ಠ ವೇತನ ಹಾಗೂ ಕೊಳ್ಳುವ ಶಕ್ತಿಯ ಸಾಮ್ಯತೆಯಲ್ಲಿ ಬಾಂಗ್ಲಾದೇಶ ಅತ್ಯಂತ ಕೆಳಮಟ್ಟದಲ್ಲಿರುವ ದೇಶವಾಗಿದೆ ಎಂದು ವರದಿ ತಿಳಿಸಿದೆ.

- Advertisement -
- Advertisement -

2019 ರಲ್ಲಿ ಭಾರತದ ಒಟ್ಟು ಕನಿಷ್ಠ ವೇತನವು ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ, ಮಯನ್ಮಾರ್‌,ಚೀನಾ, ಅಫ್ಘಾನಿಸ್ತಾನ, ನೇಪಾಳಗಳಿಗೆ ಹೋಲಿಸಿದರೆ ಕಡಿಮೆಯಾಗಿತ್ತು ಎಂದು ವಿಶ್ವ ಸಂಸ್ಥೆಯ ಅಂಗಸಂಸ್ಥೆಯಗಿರುವ ಜಾಗತಿಕ ಕಾರ್ಮಿಕ ಸಂಘಟನೆ(ILO) ತನ್ನ 2020-21 ರ ವಿಶ್ವ ವೇತನ ವರದಿ(ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ)ಯಲ್ಲಿ ತಿಳಿಸಿದೆ.

ಭಾರತದಲ್ಲಿ ಮಾಸಿಕವಾಗಿ US$65 (ಅಮೆರಿಕನ್ ಡಾಲರ್‌) ಕನಿಷ್ಠ ವೇತನವಿದ್ದರೆ ನೆರೆಯ ಶ್ರೀಲಂಕಾದಲ್ಲಿ US$70‌, ಮಯನ್ಮಾರ್‌‌‌ನಲ್ಲಿ US$82, ನೇಪಾಳದಲ್ಲಿ US$ 119, ಅಫ್ಘಾನಿಸ್ತಾನದಲ್ಲಿ US$71, ಚೀನಾದಲ್ಲಿ US$217 ಹಾಗೂ ಪಾಕಿಸ್ತಾನಲ್ಲಿ US$117 ಗಳಷ್ಟು ವೇತನವಿತ್ತು.

ಇದನ್ನೂ ಓದಿ: ಭಾರತದ ಇಂಟರ್ನೆಟ್ ಸ್ಪೀಡ್ ವಿಶ್ವದಲ್ಲಿಯೇ ಅತ್ಯಂತ ಕಳಪೆ; ಡಿಜಿಟಲ್ ಇಂಡಿಯಾ?

PC: ilo.org

ಅಲ್ಲದೆ ಕೊಳ್ಳುವ ಶಕ್ತಿಯ ಸಾಮ್ಯತೆಯಲ್ಲಿ ಕೂಡಾ ಭಾರತ ಮೇಲಿನ ರಾಷ್ಟ್ರಗಳಿಗಿಂತ ಕಡಿಮೆ ದಾಖಲಿಸಿದೆ. ಭಾರತ 251 ಅಂಕಗಳಷ್ಟು ಕೊಳ್ಳುವ ಶಕ್ತಿ ಗಳಿಸಿದ್ದರೆ ಶ್ರೀಲಂಕಾ 247‌, ಮಯನ್ಮಾರ್ 317, ನೇಪಾಳ 396, ಅಫ್ಘಾನಿಸ್ತಾನ 306, ಚೀನಾ 353 ಹಾಗೂ ಪಾಕಿಸ್ತಾನ 491 ಅಂಕಳನ್ನು ಗಳಿಸಿತ್ತು ಎಂದು ವರದಿ ತೋರಿಸಿದೆ.

ದಕ್ಷಿಣ ಏಷ್ಯಾ ಹಾಗೂ ಫೆಸಿಫಿಕ್ ರಾಷ್ಟಗಳಲ್ಲಿ ಕನಿಷ್ಠ ವೇತನ ಹಾಗೂ ಕೊಳ್ಳುವ ಶಕ್ತಿಯ ಸಾಮ್ಯತೆಯಲ್ಲಿ ಬಾಂಗ್ಲಾದೇಶ ಅತ್ಯಂತ ಕೆಳಮಟ್ಟದಲ್ಲಿರುವ ದೇಶವಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ’ಭಾರತದ ಕೋವಿಡ್ ಟೀಚರ್‌’ – ಕೆ.ಕೆ. ಶೈಲಜಾರನ್ನು ಬಣ್ಣಿಸಿದ ಅಂತರಾಷ್ಟ್ರೀಯ ವಿಜ್ಞಾನ ನಿಯತಕಾಲಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...