Homeಕರ್ನಾಟಕಕಾಶ್ಮೀರ್‌‌ ಫೈಲ್ ಸಿನಿಮಾ ಬದಲು, ಗುಜರಾತ್ ಹತ್ಯಾಕಾಂಡದ ಕುರಿತ ‘ಪರ್ಜಾನಿಯ’ ಸಿನಿಮಾ ನೋಡಲು ಅವಕಾಶ ಮಾಡಿಕೊಡಿ:...

ಕಾಶ್ಮೀರ್‌‌ ಫೈಲ್ ಸಿನಿಮಾ ಬದಲು, ಗುಜರಾತ್ ಹತ್ಯಾಕಾಂಡದ ಕುರಿತ ‘ಪರ್ಜಾನಿಯ’ ಸಿನಿಮಾ ನೋಡಲು ಅವಕಾಶ ಮಾಡಿಕೊಡಿ: ಬಿ. ಕೆ. ಹರಿಪ್ರಸಾದ್

- Advertisement -
- Advertisement -

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಯವರು ‘ದಿ ಕಾಶ್ಮೀರ್‌‌ ಫೈಲ್‌‌’ ಸಿನಿಮಾ ವೀಕ್ಷಣೆಗೆ ಪ್ರಕಟಣೆ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪರಿಷತ್‌ನ ವಿಪಕ್ಷ ನಾಯಕ ಬಿ.ಕೆ. ಹರೀಶ್‌, ಗುಜರಾತ್ ಹತ್ಯಾಕಾಂಡದ ಕುರಿತ ‘ಫರ್ಜಾನಿಯ’ ಮತ್ತು ವಾರಣಾಸಿ ದಲಿತ ಮಹಿಳೆಯ ಅತ್ಯಾಚಾರದ ಕುರಿತು ‘ವಾಟರ್’ ಎಂಬ ಎರಡು ಸಿನಿಮಾಗಳು ಇವೆ ಅವನ್ನೂ ತೋರಿಸಿ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರವೇ ಉತ್ಸಾಹ ತೋರಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿದ್ದು, ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚಿತ್ರವನ್ನು ವೀಕ್ಷಿಸಲು ಸಚಿವರು ಹಾಗೂ ಶಾಸಕರಿಗೆ ವ್ಯವಸ್ಥೆ ಮಾಡಿರುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: ಹಿಜಾಬ್ ತೀರ್ಪು ವಿರೋಧಿಸಿ ಪ್ರತಿಭಟನೆ ಆರಂಭಿಸಿದ ಚೆನ್ನೈನ ವಿದ್ಯಾರ್ಥಿಗಳು

ಇದೀಗ ವಿಧಾನ ಪರಿಷತ್​ನಲ್ಲಿ ಇದೇ ಘೋಷಣೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಮಾಡಿದ್ದು, ಪ್ರತಿಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಈ ಪ್ರಕಟಣೆಯನ್ನು ವಾಪಾಸು ಪಡೆಯುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಗುಜರಾತ್ ಹತ್ಯಾಕಾಂಡದ ಕುರಿತು ‘ಫರ್ಜಾನಿಯಾ’ ಮತ್ತು ವಾರಣಾಸಿ ದಲಿತ ಮಹಿಳೆಯ ಅತ್ಯಾಚಾರದ ಕುರಿತು ‘ವಾಟರ್’ ಎಂಬ ಎರಡು ಸಿನಿಮಾಗಳು ಇವೆ ಇವೆ ಅವನ್ನೂ ತೋರಿಸಿ ಎಂದು ಹೇಳಿದ್ದಾರೆ.

‘‘ನಾವು ಯಾವ ಸಿನಿಮಾ ನೋಡಬೇಕು ಎಂದು ಸದನದಲ್ಲಿ ಹೇಳುವ ಹಾಗಿಲ್ಲ. ಕೆಲವರು ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದಾರೆ. ನಾವೂ ಹಾಗಾದ್ರೆ ಅದನ್ನು ನೋಡಬೇಕಾ? ಸರ್ಕಾರ ಪಿಚ್ಚರ್ ತೋರಿಸೋದಕ್ಕೆ ಇದೆಯಾ? ಸಭಾಪತಿ ನಿಷ್ಪಕ್ಷಪಾತಿ ಆಗಿರಬೇಕು. ಪೀಠದಿಂದ ಯಾಕೆ ಇದನ್ನು ಹೇಳಿಸ್ತೀರಾ?’’ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು ಎಂದು ಪ್ರಶ್ನಿಸಿದ ಅವರು ಸದನದಲ್ಲಿ ಮಾಡಿದ ಘೋಷಣೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರಿ ಪತ್ರಕರ್ತ ಫಹಾದ್ ಶಾ ಬಿಡುಗಡೆಗೆ ಪತ್ರಿಕಾ ಸಂಸ್ಥೆಗಳ ಒತ್ತಾಯ

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ‘‘ಸರ್ಕಾರ ಯಾಕೆ ಬಲವಂತವಾಗಿ ಸಿನಿಮಾ ತೋರಿಸುವುದಕ್ಕೆ ಹೊರಟಿದೆ? ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು?” ಎಂದು ಪ್ರಶ್ನಿಸಿದ್ದಾರೆ.

ನಂತರ ಸಿನಿಮಾ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಗದ್ದಲ ಏರ್ಪಟ್ಟಿದೆ. ಕಾಂಗ್ರೆಸ್‌ ಸದಸ್ಯರು ಘೋಷಣೆ ವಾಪಸ್ ಪಡೆಯಬೇಕು ಎಂದು ಪಟ್ಟು ಹಿಡಿದು, ಪರಿಷತ್ ಬಾವಿಗಿಳಿದು ಧರಣಿ ನಡೆಸಿದ್ದಾರೆ. ಇದರಂದಾಗಿ ಹತ್ತು ನಿಮಿಷಗಳ ಕಾಲ ಅಧಿವೇಶ ಮುಂದೂಡಲಾಯಿತು.

ನಂತರ ಮತ್ತೆ ಅಧಿವೇಶನ ಪ್ರಾರಂಭವಾದ ತಕ್ಷಣ ಹರಿಪ್ರಸಾದ್ ಅವರು ಕಾಶ್ಮೀರದ ಪಂಡಿತರ ಕೊಲೆಗಳಿಗೆ ಸಂಬಂಧಿಸಿದ ಶ್ರೀನಗರ ಪೊಲೀಸ್ ಇಲಾಖೆ ನೀಡಿದ ಆರ್‌ಟಿಐ ಮಾಹಿತಿಯ ಪ್ರತಿಯನ್ನು ಓದಿ, “1990ರ ನಂತರ ಕಾಶ್ಮೀರಿ ಪಂಡಿತರ ಕೊಲೆಗಳ ಸಂಖ್ಯೆ 89. ಅದೇ ಅವಧಿಯಲ್ಲಿ ದಲಿತರು ಹಾಗೂ ಬೇರೆ ಸಮುದಾಯಕ್ಕೆ ಸೇರಿದ ಒಟ್ಟು 1635 ಜನರನ್ನ ಕೊಲೆ ಮಾಡಲಾಗಿದೆ. ಇದು ಆರ್‌ಟಿಐನಲ್ಲಿ ಬಹಿರಂಗವಾಗಿದೆ. ಸದನಕ್ಕೆ ಈ ಪ್ರತಿ ನೀಡಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: `ಕಾಶ್ಮೀರ್‌ ಫೈಲ್ಸ್‌‌’ ಎಂದು ಕೂಗುತ್ತಿರುವವರಿಗೆ ‘ದಲಿತ್‌ ಫೈಲ್ಸ್‌‌’ ಕಾಣುವುದಿಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಜಾತಿ ಬಿಡಿ, ಧರ್ಮ ಉಳಿಸಿ. ಧರ್ಮದ ಹಂಗೇ ಬೇಡ ಎಂದಿದ್ದರೆ, ಗೌರಿಯವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬಹುದಾಗಿತ್ತಲ್ವಾ?

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...