Homeಕರ್ನಾಟಕರಂಗಾಯಣದಲ್ಲಿ ಪ್ರದರ್ಶನಗೊಂಡ ನಾಟಕದಲ್ಲಿ ಸಿದ್ದರಾಮಯ್ಯನವರ ಅವಹೇಳನ: ದೂರು ದಾಖಲು

ರಂಗಾಯಣದಲ್ಲಿ ಪ್ರದರ್ಶನಗೊಂಡ ನಾಟಕದಲ್ಲಿ ಸಿದ್ದರಾಮಯ್ಯನವರ ಅವಹೇಳನ: ದೂರು ದಾಖಲು

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರನ್ನೂ ಉದ್ದೇಶಪೂರ್ವಕವಾಗಿ ನಾಟಕದಲ್ಲಿ ಗೇಲಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

- Advertisement -
- Advertisement -

ಕೋಮುದ್ವೇಷ, ಟಿಪ್ಪು ಮೇಲಿನ ಅಸಹನೆಯ ಮೂಲಕ ಸುದ್ದಿಯಲ್ಲಿರುವ ಮೈಸೂರು ರಂಗಾಯಣ ಮತ್ತೆ ವಿವಾದದ ಕೇಂದ್ರ ಬಿಂದುವಾಗಿದೆ. ಮಾಜಿ ಮುಖ್ಯಮಂತ್ರಿ, ಅಹಿಂದ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಕುರಿತು ಅವಹೇಳನಕಾರಿಯಾಗಿ ನಾಟಕವನ್ನು ತಿರುಚಿ ಪ್ರದರ್ಶಿಸಿದ ಆರೋಪಕ್ಕೆ ಗುರಿಯಾಗಿದ್ದು, ಈ ಕುರಿತು ದೂರು ದಾಖಲಿಸಲಾಗಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ನಾಟಕವನ್ನು ಕಾರ್ತಿಕ್ ಉಪಮನ್ಯು ನಿರ್ದೇಶನದಲ್ಲಿ ‘ನಾಗರತ್ನಮ್ಮ’ ರಂಗ ಕಾರ್ಯಾಗಾರದ ಶಿಬಿರಾರ್ಥಿಗಳು ಶನಿವಾರ ಪ್ರದರ್ಶಿಸುತ್ತಿದ್ದರು. ಈ ನಾಟಕದಲ್ಲಿ ಕೆಲವು ಅಂಶಗಳನ್ನು ತಿರುಚಿ ಸಿದ್ದರಾಮಯ್ಯನವರನ್ನು ಹೀಯಾಳಿಸಲಾಗಿದೆ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರನ್ನೂ ಗೇಲಿ ಮಾಡಲಾಗಿದೆ ಎಂದು ಇಲ್ಲಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಂಗಾಯಣದ ರಂಗ ಕಾರ್ಯಾಗಾರದ ಶಿಬಿರಾರ್ಥಿಗಳ ವಿರುದ್ಧ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯ ಅವರು ದೂರು ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ನಾಟಕದೊಳಗೆ ತುರುಕಿರುವ ಅಂಶಗಳನ್ನು ಪ್ರೇಕ್ಷಕರು ಪ್ರಶ್ನಿಸುವ ಘಟನೆಯೂ ನಡೆದಿದೆ.

ಸುಬ್ರಹ್ಮಣ್ಯ ಅವರ ದೂರಿನಲ್ಲಿ ಏನಿದೆ?

“ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಡಿ.31ರ ಸಂಜೆ 6.30ಕ್ಕೆ ‘ಸಾಂಬಶಿವನ ಪ್ರಹಸನ’ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರರು ರಚಿಸಿರುವ, ಕಾರ್ತಿಕ್ ಉಪಮನ್ಯು ಎಸ್. ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ತಮ್ಮ ಆಡಳಿತಾವಧಿಯಲ್ಲಿ ರಾಜ್ಯದ ಜನತೆಗೆ ನೀಡಿದ ಹಲವು ಭಾಗ್ಯಗಳನ್ನು ವ್ಯಂಗ್ಯ ಮಾಡಿ, ಕಾಲ್ಪನಿಕವಾಗಿ ರಾಜನ ಪಾತ್ರವನ್ನು ಸೃಷ್ಟಿಸಿ ಆತನನ್ನು ಸಿದ್ರಾಮಯ್ಯನವರಿಗೆ ಹೋಲಿಸಿ ಅವಹೇಳನ ಮಾಡಲಾಗಿದೆ” ಎಂದು ಬಿ.ಸುಬ್ರಹ್ಮಣ್ಯ ಅವರು ತಿಳಿಸಿದ್ದಾರೆ.

“‘ಅನ್ನಭಾಗ್ಯ’, ‘ಕ್ಷೀರಭಾಗ್ಯ’, ‘ಶಾದಿ ಭಾಗ್ಯ’ಗಳನ್ನು ಕೊಟ್ಟು ಜನರನ್ನು ಅವರು ಸೋಂಬೇರಿಗಳನ್ನಾಗಿ ಮಾಡಿದರು. ಅದೇ ರೀತಿ ‘ಕಳ್ಳತನ ಭಾಗ್ಯ’ವನ್ನು ನೀಡಬೇಕಾಗಿತ್ತು ಎನ್ನುವ ಸಂಭಾಷಣೆಯನ್ನು ರಂಗದ ಮೇಲೆ ಪ್ರಸ್ತುತಪಡಿಸಲಾಗಿತ್ತು. ಕಾರ್ಯಕ್ರಮಗಳಲ್ಲಿ ನಿದ್ರೆ ಹೊಡೆಯುವುದು, ಗೊರಕೆ ಹೊಡೆದು ಅವರಿಂದ ರಾಜ್ಯವೇ ಹಾಳಾಗಿದೆ. ನಿಮಗೆ ಈ ಭಾರಿ ಬಾದಾಮಿಯೂ ಕೂಡ ಸಿಗುವುದಿಲ್ಲ ಎಂದು ಸೇವಕನ ಪಾತ್ರಧಾರಿಯಿಂದ ನಾಟಕದಲ್ಲಿ ಹೇಳಿಸಲಾಗಿದೆ” ಎಂದು ಆರೋಪಿಸಿದ್ದಾರೆ.

ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯ

“ಇದು ನೇರವಾಗಿ ಸಿದ್ದರಾಮಯ್ಯನವರಿಗೆ ಹೋಲಿಕೆ ಮಾಡಲಾಗಿದೆ. ಹಾಗೂ ಕೇಡಿ ಆಂಕಲ್ ಎಂದು ಮಂತ್ರಿಯ ಪಾತ್ರವನ್ನು ಸೃಷ್ಟಿಸಿ ಅದರಲ್ಲಿ ಕಳ್ಳತನ ಮಾಡಿ ಕೊಳ್ಳೆ ಹೊಡೆಯುತ್ತಿದ್ದಾನೆ ಎಂದು ಹೇಳಿಸಲಾಗಿದೆ. ಇದೂ ಕೂಡ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನೇ ಹೋಲುವಂತೆ ಪಾತ್ರ ಸೃಷ್ಟಿಸಲಾಗಿದೆ ಎಂದು ನಾಟಕ ವೀಕ್ಷಿಸಲು ಹೋಗಿದ್ದ ಪ್ರೇಕ್ಷಕರು ನನ್ನ ಗಮನಕ್ಕೆ ತಂದರು. ಅಷ್ಟೊತ್ತಿಗಾಗಲೇ ಸಾಮಾಜಿಕ ಜಾಲತಾಣ ಮತ್ತು ಸುದ್ದಿಮಾಧ್ಯಮಗಳಲ್ಲಿಯೂ ಈ ವಿಚಾರ ಪ್ರಸಾರವಾಗಿತ್ತು” ಎಂದು ಮಾಹಿತಿ ನೀಡಿದ್ದಾರೆ.

“ಆ ನಂತರ ನಾನು ಸ್ಥಳಕ್ಕೆ ಹೋಗಿ ಸತ್ಯಾಸತ್ಯತೆ ಬಗ್ಗೆ ರಂಗಾಯಣ ಉಪನಿರ್ದೇಶಕರಾದ ನಿರ್ಮಲ ಮಠಪತಿ ಅವರನ್ನು ಪ್ರಶ್ನಿಸಿದೆ. ಅವರು ಅದಕ್ಕೆ, ‘ಈ ವಿಚಾರ ನನ್ನ ಗಮನಕ್ಕೂ ಬಂದಿದೆ. ಈ ನಾಟಕ ನಿರ್ದೇಶಕರು ವಿಷಾದ ವ್ಯಕ್ತಪಡಿಸಿದ್ದಾರೆ’ ಎಂದು ಜವಾಬು ನೀಡಿದರು. ಹಿಂದುಳಿದ ನಾಯಕರೂ ಹಾಗೂ ನಾಡಿನ ಅಭಿವೃದ್ಧಿಯ ಹರಿಕಾರರು ಆದ ಸಿದ್ದರಾಮಯ್ಯ ಅವರನ್ನು ಹೀಯಾಳಿಸಿರುವುದು ನಮ್ಮ ಸಮಾಜಕ್ಕೆ ನೋವು ತಂದಿದೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನು ಕೇಡಿ ಆಂಕಲ್ ಎಂದು ಸಂಬೋಧಿಸಿರುವುದು ಅದು ಕೂಡ ಬೇಸರದ ಸಂಗತಿಯಾಗಿದೆ” ಎಂದಿದ್ದಾರೆ.

“ಜಾತಿ ಜಾತಿಗಳ ನಡುವೆ ಮತ್ತು ಧರ್ಮಗಳ ನಡುವೆ ದ್ವೇಷ ಹುಟ್ಟುವಂತೆ ಮಾಡಿ ಸಮಾಜದಲ್ಲಿನ ಅಶಾಂತಿ ಸೃಷ್ಟಿಸಿ ಗಲಾಟೆ ಉಂಟು ಮಾಡುವ ರೀತಿಯಲ್ಲಿ ಪ್ರದರ್ಶನ ಮಾಡಿ ಸಮಾಜದಲ್ಲಿ ಗಲಾಟೆ ಮತ್ತು ಅಶಾಂತಿ ಉಂಟು ಮಾಡುವಂತೆ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ಇಷ್ಟೆಲ್ಲಾ ಪ್ರಮಾದ ಉಂಟು ಮಾಡಿರುವ ಇಡೀ ನಾಟಕ ತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಮ್ಮಲ್ಲಿ ಮನವಿ ಮಾಡುತ್ತೇನೆ” ಎಂದಿದ್ದಾರೆ.

“ನನ್ನ ಗಮನಕ್ಕೆ ಬಂದಂತಹ ವಿಷಯಗಳನ್ನು ತಿಳಿಸಿದ್ದೇನೆ. ಆನಂತರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಚಾರಿತ್ರ್ಯವಧೆಗೆ ಸಂಬಂಧಿಸಿದಂತೆ ಇನ್ನಿತರ ರೀತಿಗಳಲ್ಲಿ ನಡೆದುಕೊಂಡಿರುವ ಬಗ್ಗೆ ಮತ್ತಷ್ಟು ವಿಚಾರಗಳನ್ನು ನಾಟಕದಲ್ಲಿ ನಿರೂಪಿಸಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿರಿ: ಕೃತಿ ವಿಮರ್ಶೆ: ಆರ್‌ಎಸ್‌ಎಸ್‌ ಜಾತಿ ರಾಜಕೀಯ ಕನಸುಗಳ ಸಾಕಾರಕ್ಕೆ ಟಿಪ್ಪು ಹೆಸರಲ್ಲಿ ನಕಲಿ ಇತಿಹಾಸ ಸೃಷ್ಟಿ!

‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ಸುಬ್ರಹ್ಮಣ್ಯ ಅವರು, “ಮೂರು ದಶಕಗಳಲ್ಲಿ ಯಾವತ್ತೂ ರಂಗಾಯಣ ಈ ಪರಿಯ ವಿವಾದಗಳಿಗೆ ಗುರಿಯಾಗಿರಲಿಲ್ಲ. ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ದ್ವೇಷ ಹುಟ್ಟಿಹಾಕುವ ಕೆಲಸವನ್ನು ಈಗ ಮಾಡುತ್ತಿದೆ. ಯಾವುದೇ ಮುಖ್ಯಮಂತ್ರಿಯವರು ಇದ್ದಾಗಲೂ ಕೆಟ್ಟ ನಿರ್ದೇಶಕರನ್ನು ರಂಗಾಯಣಕ್ಕೆ ನೇಮಿಸಿರಲಿಲ್ಲ. ಆದರೆ ಅಡ್ಡಂಡ ಕಾರ್ಯಪ್ಪನವರು ಬಂದ ಮೇಲೆ ರಂಗಾಯಣ ವಿವಾದದ ಕೇಂದ್ರಬಿಂದುವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಕಂಬಾರರ ನಾಟಕದಲ್ಲಿ ಎಲ್ಲಿಯೂ ಈ ಸಾಲುಗಳು ಇಲ್ಲ. ಉದ್ದೇಶಪೂರ್ವಕವಾಗಿ ಸೇರಿಸಿ ಅವಹೇಳನ ಮಾಡಲಾಗಿದೆ. ಎಲ್ಲ ಒತ್ತಡಗಳನ್ನು ಬದಿಗೆ ಸರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಲೇಬೇಕು. ಇಲ್ಲವಾದರೆ ಕೋರ್ಟ್ ಮೆಟ್ಟಿಲೇರುತ್ತೇನೆ” ಎಂದು ಎಚ್ಚರಿಸಿದ್ದಾರೆ.

ನಾಟಕದ ವೇಳೆಯೇ ಪ್ರತಿಭಟನೆ

ನಾಟಕ ಪ್ರದರ್ಶನವಾಗುತ್ತಿದ್ದ ಸಂದರ್ಭದಲ್ಲಿಯೇ ಪ್ರೇಕ್ಷಕರಿಂದ ಆಕ್ಷೇಪ ವ್ಯಕ್ತವಾಗಿದೆ. ಮೋಹನ್‌ ಎನ್ನುವವರು ಪ್ರದರ್ಶನದ ವೇಳೆಯೇ ಎದ್ದು ನಿಂತು, “ಭಾಗ್ಯಗಳನ್ನು ನೀಡಿ ಸೋಮಾರಿ ಮಾಡುತ್ತಿದ್ದೀರಿ, ಬರೀ ನಿದ್ದೆ ಮಾಡುತ್ತಿದ್ದೀರಿ ಎಂದೆಲ್ಲ ಹೇಳಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ವ್ಯಂಗ್ಯ ಮಾಡುತ್ತಿದ್ದೀರಿ. ಮೂಲ ನಾಟಕದಲ್ಲಿ ಹೀಗಿದೆಯೇ? ದುರುದ್ದೇಶಪೂರ್ವಕವಾಗಿ ನಾಟಕ ರೂಪಿಸಿದ್ದೀರಿ” ಎಂದು ವೇದಿಕೆಗೇರಿ ಕಿಡಿಕಾರಿದ್ದರು. “ಐವತ್ತು ರೂಪಾಯಿ ಕೊಟ್ಟು ಬಂದಿರುವ ಕಲಾಭಿಮಾನಿ ನಾನು. ನನ್ನ ಪ್ರಶ್ನೆಗೆ ಉತ್ತರಿಸಬೇಕು” ಎಂದು ಒತ್ತಾಯಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಅವರು ಸುಮ್ಮನೆ ವೇದಿಕೆ ಹತ್ತಿ ವಾದ‌ಮಾಡಿ ಬಂದಿದ್ದಾರೆ…. ಸಿದ್ದರಾಮಯ್ಯನವರನ್ನ ಅವಹೇಳನ‌ಮಾಡಿದವರನ್ನ ಕೆರ ತೆಗೆದುಕೊಂಡು ಹೊಡಿಬೇಕಾಗಿತ್ತು..

  2. Le nimage amdekar bandu savidanada arivu eddaru ennu indirect gi manusanskrti yruvadau bidta illa
    Neevu 3% navaru rss ,bajaragadal ,sreeramsene namm anna yenu kittigenakagalla
    Ee bari pakka congress gellatte modi basli amitsha badli
    E desha secular not a hindu country
    Non sense,ninna kathe mugitu

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...