Homeಮುಖಪುಟ‘ಸಿಖ್ಖರ ಭಾವನೆ’ಗಳಿಗೆ ಧಕ್ಕೆ ಆರೋಪ: ಕ್ಷಮೆಯಾಚಿಸಿದ ಕಿರಣ್‌ ಬೇಡಿ

‘ಸಿಖ್ಖರ ಭಾವನೆ’ಗಳಿಗೆ ಧಕ್ಕೆ ಆರೋಪ: ಕ್ಷಮೆಯಾಚಿಸಿದ ಕಿರಣ್‌ ಬೇಡಿ

- Advertisement -
- Advertisement -

ಚೆನ್ನೈನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರು ಸಿಖ್ಖರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಮಂಗಳವಾರ ಆರೋಪಿಸಿದೆ.

ಸೋಮವಾರದಂದು ಅವರ ‘ಫಿಯರ್‌ಲೆಸ್ ಗವರ್ನೆನ್ಸ್’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಐಪಿಎಸ್‌ ಮಾಜಿ ಅಧಿಕಾರಿ ಕಿರಣ್‌ ಬೇಡಿ ಸಿಖ್ಖರ ಕುರಿತು ತಮಾಷೆ ಮಾಡಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡ ನಂತರ ವಿವಾದವು ಸ್ಫೋಟಗೊಂಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎಎಪಿ ಪಂಜಾಬ್ ಉಸ್ತುವಾರಿ ಜರ್ನೈಲ್ ಸಿಂಗ್ ಅವರು, ಬೇಡಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. “ಮೊಘಲರು ಭಾರತವನ್ನು ಲೂಟಿ ಮಾಡುವಾಗ ಮತ್ತು ಮಹಿಳೆಯರನ್ನು ಅಪಹರಿಸುವಾಗ, ಸಿಖ್ಖರು ಅವರೊಂದಿಗೆ ಹೋರಾಡಿದರು. ಹೆಣ್ಣುಮಕ್ಕಳನ್ನು ರಕ್ಷಿಸಿದರು. 12 ಗಂಟೆ ಸಮಯದಲ್ಲಿ ಮೊಘಲರ ಮೇಲೆ ದಾಳಿ ಮಾಡಲಾಗುತ್ತಿತ್ತು. ಇದು 12 ಗಂಟೆಯ ಇತಿಹಾಸ” ಎಂದು ಜರ್ನೈಲ್‌ ತಿರುಗೇಟು ನೀಡಿದ್ದಾರೆ.

“ಸಿಖ್ಖರಿಗೆ ಗೌರವ ನೀಡುವ ಬದಲು ಗೇಲಿ ಮಾಡುವ ಅಗ್ಗದ ಮನಸ್ಥಿತಿ ಹೊಂದಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

“ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿಲ್ಲ” ಎಂದು ಬೇಡಿ ಪ್ರತಿಕ್ರಿಯೆ ನೀಡಿದ್ದಾರೆ.

“ನನ್ನ ಸಮುದಾಯದ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ನಾನು ಬಾಬಾ ನಾನಕ್ ದೇವ್‌ಜಿ ಭಕ್ತೆ. ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಬೇಡಿ. ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ಯಾವುದೇ ನೋವನ್ನು ಉಂಟು ಮಾಡುವ ಕೊನೆಯ ವ್ಯಕ್ತಿ ನಾನಾಗಿರುತ್ತೇನೆ. ನಾನು ಸೇವೆ, ಪ್ರೀತಿ, ದಯೆಯಲ್ಲಿ ನಂಬಿಕೆ ಉಳ್ಳವಳು” ಎಂದು ಬೇಡಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿರಿ: ರಾಷ್ಟ್ರೀಯ ಪಕ್ಷ ಸ್ಥಾಪನೆ ಮಾಡುವತ್ತ ಕೆಸಿಆರ್‌‌? ಏನಿದು ತಂತ್ರಗಾರಿಕೆ?

“ನಾನು ಇಂದು ಬೆಳಿಗ್ಗೆ ಪೂಜಾ ಕೈಂಕರ್ಯ ನೆರವೇರಿಸಿದ್ದೇನೆ. ನಾನು ಭಕ್ತಳಾಗಿದ್ದು, ಎಲ್ಲಾ ರೀತಿಯಲ್ಲಿಯೂ ಬಾಬಾರ ಆಶೀರ್ವಾದವನ್ನು ಕೋರುತ್ತೇನೆ. ನಾನು ಮನೆಯಲ್ಲಿ ಪೂಜಾ ಕೈಂಕರ್ಯದೊಂದಿಗೆ ದಿನವನ್ನು ಪ್ರಾರಂಭಿಸಿವೆ. ದಯವಿಟ್ಟು ನನ್ನ ಉದ್ದೇಶವನ್ನು ಅನುಮಾನಿಸಬೇಡಿ. ನನ್ನ ಸಮುದಾಯದ ಬಗ್ಗೆ ನನಗೆ ಹೆಚ್ಚಿನ ಗೌರವ ಮತ್ತು ಅಭಿಮಾನವಿದೆ” ಎಂದಿದ್ದಾರೆ.

ಟ್ವಿಟರ್‌ನಲ್ಲಿ ಟ್ರೋಲ್‌ಗೆ ಒಳಗಾದ ಬೇಡಿ, ಸಾಮಾಜಿಕ ಮಾಧ್ಯಮದಲ್ಲಿ ನಿಂದನಾತ್ಮಕ ಪ್ರತಿಕ್ರಿಯೆ ನೀಡದಂತೆ ಕೋರಿದರು. ಕ್ರಮ ತೆಗೆದುಕೊಳ್ಳುವುದಾಗಿಯೂ ಎಚ್ಚರಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...