Homeಚಳವಳಿಮೊಹಮ್ಮದ್ ಜುಬೇರ್ ನಿಜವಾದ ಪತ್ರಕರ್ತ, ದೇಶಭಕ್ತ: ಟ್ವಿಟರ್‌ನಲ್ಲಿ #IStandWithZubair ಟ್ರೆಂಡಿಂಗ್

ಮೊಹಮ್ಮದ್ ಜುಬೇರ್ ನಿಜವಾದ ಪತ್ರಕರ್ತ, ದೇಶಭಕ್ತ: ಟ್ವಿಟರ್‌ನಲ್ಲಿ #IStandWithZubair ಟ್ರೆಂಡಿಂಗ್

"ನಾವು ಜುಬೇರ್ ಪರ ನಿಲ್ಲುತ್ತೇವೆ, ಏಕೆಂದರೆ ಅವರು ಸತ್ಯದ ಜೊತೆ ನಿಂತಿದ್ದಾರೆ" ಎಂಬುದಾಗಿ ಪತ್ರಕರ್ತ ಪುನೀತ್ ಕುಮಾರ್ ಸಿಂಗ್ ಬರೆದಿದ್ದಾರೆ.

- Advertisement -
- Advertisement -

ಖ್ಯಾತ ಫ್ಯಾಕ್ಟ್‌ಚೆಕ್ ತಾಣ ಆಲ್ಟ್‌ನ್ಯೂಸ್‌ನ ಸಹ ಸಂಸ್ಥಾಪಕ, ಪತ್ರಕರ್ತರಾದ ಮೊಹಮ್ಮದ್ ಜುಬೇರ್‌ ಮೇಲಿನ FIR ರದ್ದುಗೊಳಿಸಲು ಅಹಲಾಬಾದ್ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೆ ಟ್ವಿಟರ್‌ನಲ್ಲಿ ಅವರ ಪರವಾಗಿ ಟ್ವೀಟ್‌ಗಳ ಸುರಿಮಳೆಯಾಗಿವೆ. ಮೊಹಮ್ಮದ್ ಜುಬೇರ್ ನಿಜವಾದ ಪತ್ರಕರ್ತ, ದೇಶಭಕ್ತ ಎಂದು ಕರೆದಿರುವ ನೆಟ್ಟಿಗರು ಟ್ವಿಟರ್‌ನಲ್ಲಿ #IStandWithZubair ಹ್ಯಾಸ್‌ಟ್ಯಾಗ್ ಅನ್ನು ರಾಷ್ಟ್ರಮಟ್ಟದಲ್ಲಿ ಟ್ರೆಂಡಿಂಗ್ ಮಾಡಿದ್ದಾರೆ.

ಜುಬೇರ್ ತನ್ನ ಟ್ವೀಟ್‌ನಲ್ಲಿ ಯತಿ ನರಸಿಂಗಾನಂದ ಸರಸ್ವತಿ, ಭಜರಂಗ ಮುನಿ ಮತ್ತು ಆನಂದ್ ಸ್ವರೂಪ್ ಎಂಬ 3 ಹಿಂದೂ ಧರ್ಮೀಯರನ್ನು ‘ದ್ವೇಷ ಪ್ರಚೋದಕರು’ ಎಂದು ಕರೆದ ಆರೋಪದ ಮೇಲೆ ಅವರ ವಿರುದ್ಧ FIR ದಾಖಲಾಗಿದೆ. ಐಪಿಸಿ ಸೆಕ್ಷನ್ 295-ಎ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 67 ರ ಅಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ಜೂನ್ 1 ರಂದು ಜುಬೈರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

‘ತಮ್ಮ ಟ್ವೀಟ್‌ನಲ್ಲಿ ಒಂದು ವರ್ಗದ ಧಾರ್ಮಿಕ ನಂಬಿಕೆಯನ್ನು ಅವಮಾನಿಸಿಲ್ಲ ಅಥವಾ ಅವಮಾನಿಸುವ ಪ್ರಯತ್ನ ಮಾಡಿಲ್ಲ. ದುಷ್ಟ ಉದ್ದೇಶದಿಂದ ಕಿರುಕುಳ ನೀಡುವುದಕ್ಕಾಗಿಯೇ ನನ್ನ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ. ಹಾಗಾಗಿ ಅದನ್ನು ರದ್ದುಗೊಳಿಸಬೇಕೆಂದು’ ಜುಬೇರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣದ ತನಿಖೆಯು ಪ್ರಾಥಮಿಕ ಹಂತದಲ್ಲಿರುವುದರಿಂದ ಹಾಗೆ ಮಾಡಲು ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಅಜಯ್ ಕುಮಾರ್ ಶ್ರೀವಾಸ್ತವ ಅವರ ಪೀಠವು ಜುಬೇರ್ ಮನವಿಯನ್ನು ವಜಾಗೊಳಿಸಿದೆ.

ಈ ಹಿನ್ನಲೆಯಲ್ಲಿ ಟ್ವಿಟರ್‌ನಲ್ಲಿ ಜುಬೇರ್ ಬೆಂಬಲಿಸಿ ಟ್ವೀಟ್‌ಗಳು ಹರಿದಾಡುತ್ತಿವೆ. ಇದುವರೆಗೂ #IStandWithZubair ಹ್ಯಾಸ್‌ಟ್ಯಾಗ್ ಹೊಂದಿರುವ ಒಂದೂವರೆ ಲಕ್ಷಕ್ಕೂ ಅಧಿಕ ಟ್ವೀಟ್‌ಗಳು ದಾಖಲಾಗಿವೆ. “ನಾವು ಜುಬೇರ್ ಪರ ನಿಲ್ಲುತ್ತೇವೆ, ಏಕೆಂದರೆ ಅವರು ಸತ್ಯದ ಜೊತೆ ನಿಂತಿದ್ದಾರೆ” ಎಂಬುದಾಗಿ ಪತ್ರಕರ್ತ ಪುನೀತ್ ಕುಮಾರ್ ಸಿಂಗ್ ಬರೆದಿದ್ದಾರೆ.

ಸುಳ್ಳುಗಳು, ತಪ್ಪು ಮಾಹಿತಿಗಳು ಮತ್ತು ಪ್ರೊಪಗಂಡಾಗಳನ್ನು ಬಹಿರಂಗಗೊಳಿಸುವುದು ಅಪರಾಧವಲ್ಲ ಎಂದು ರುಚಾ ಚಿತ್ನಿಸ್ ಬರೆದಿದ್ದಾರೆ.

“ಧೈರ್ಯಕ್ಕೆ ಮತ್ತೊಂದು ಹೆಸರು ಜುಬೇರ್. ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು ದ್ವೇಷಪೂರಿತ ಧರ್ಮಾಂಧರಿಂದ ತುಂಬಿರುವ ಸಮಯದಲ್ಲಿ, ಮೊಹಮ್ಮದ್ ಜುಬೇರ್ ಅವರು ದೇಶದ ಅತ್ಯುತ್ತಮ ಪತ್ರಕರ್ತರಲ್ಲಿ ಒಬ್ಬರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಅವರು ಫ್ಯಾಸಿಸ್ಟರಿಗೆ ಬೆದರಿಕೆಯಾಗಿದ್ದಾರೆ ಏಕೆಂದರೆ ಅವರು ಹಸಿ ಸುಳ್ಳುಗಳನ್ನು ಪ್ರತಿನಿತ್ಯ ಬಹಿರಂಗಪಡಿಸುತ್ತಿದ್ದಾರೆ” ಎಂದು ಪತ್ರಕರ್ತ ಸಿದ್ಧಾರ್ಥ್ ಬರೆದಿದ್ದಾರೆ.

ಯಾರು ಜುಬೇರ್?

ಪ್ರತಿ ನಿತ್ಯ ಸುಳ್ಳು ಸುದ್ದಿಗಳನ್ನು ಬೆತ್ತಲು ಮಾಡುತ್ತಿರುವ ‘Altnews’ ವೆಬ್ ಸೈಟ್‌ ಸಹ ಸಂಪಾದಕರಾದ ಜುಬೇರ್ ಮೂಲತಃ ಕರ್ನಾಟಕದವರು. ಅಲ್ಪಸಂಖ್ಯಾತರ ಮೇಲಿನ ಕಲ್ಪಿತ ಆರೋಪಗಳನ್ನು, ತಪ್ಪ ಸಂದೇಶಗಳನ್ನು ಅವರು ಸಾಕ್ಷಿ ಸಮೇತ ಬಯಲುಗೊಳಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಮುಖ್ಯವಾಹಿನಿ ಮಾಧ್ಯಮಗಳು ಹರಡುವ ಸುಳ್ಳುಗಳು, ದ್ವೇಷಪೂರಿತ ಕಾರ್ಯಕ್ರಮಗಳನ್ನು ಇವರು ಬೆತ್ತಲುಗೊಳಿಸಿದ್ದಾರೆ. ಇತ್ತೀಚೆಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಟೈಮ್ಸ್ ನೌ ಚಾನೆಲ್‌ನಲ್ಲಿ ಪ್ರವಾದಿಯವರಿಗೆ ಅವಮಾನ ಮಾಡಿದ ವಿಡಿಯೋವನ್ನು ಟೈಮ್ಸ್ ನೌ ಚಾನೆಲ್ ಡಿಲೀಟ್ ಮಾಡಿದ್ದರೂ ಸಹ ಅದನ್ನು ಡೌನ್‌ಲೌಡ್ ಮಾಡಿಟ್ಟು ಜಗತ್ತಿಗೆ ತಿಳಿಯುವಂತೆ ಮಾಡಿದ್ದು ಇದೇ ಜುಬೇರ್.

ಧರಮ್ ಸಂಸದ್ ಹೆಸರಿನಲ್ಲಿ ಯತಿನರಸಿಂಗಾನಂದ ಸರಸ್ವತಿ ಸೇರಿದಂತೆ ಇತರ ಧಾರ್ಮಿಕ ನಾಯಕರು ಮಾಡಿದ ದ್ವೇಷ ಭಾಷಣಗಳನ್ನು ಜುಬೇರ್ ನಿರಂತರವಾಗಿ ಪ್ರಚಾರ ಮಾಡಿ ಅವರ ಮೇಲೆ ಎಫ್‌ಐಆರ್ ದಾಖಲಾಗುವಂತೆ ಮಾಡಿದ್ದರು. ಅಲ್ಲದೇ ಎಲ್ಲೆ ತಪ್ಪು ಮಾಹಿತಿಗಳು, ದ್ವೇ‍ಷ ಭಾಷಣಗಳು ಕಂಡರೂ ಅವುಗಳನ್ನು ಸ್ಥಳೀಯ ಪೊಲೀಸರಿಗೆ ಟ್ಯಾಗ್ ಮಾಡುವ ಮೂಲಕ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಜುಬೇರ್ ನಿಂದಾಗಿ ಹಲವಾರು ಜನರು ತಮ್ಮ ತಪ್ಪು ಮಾಹಿತಿಗಳ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದರು.

ಜುಬೇರ್‌ರವರ ಈ ಜನಪರ, ಪ್ರಜಾಪ್ರಭುತ್ವದ ಪರವಾಗಿನ ಕೆಲಸಗಳನ್ನು ಪರಿಗಣಿಸಿ ಅವರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಾಂತಿ ಸಂಶೋಧನಾ ಸಂಸ್ಥೆ ಓಸ್ಲೊ (PRIO) ನಾಮನಿರ್ದೇಶನ ಮಾಡಿತ್ತು. “ಸತ್ಯ ಪರಿಶೀಲನೆಯ ವೆಬ್‌ಸೈಟ್‌ ಮೂಲಕ ಗಮನಾರ್ಹ ಕೊಡುಗೆ ನೀಡಿದ ಪ್ರತೀಕ್ ಸಿನ್ಹಾ ಮತ್ತು ಜುಬೈರ್ ಅವರನ್ನು ‘ಯೋಗ್ಯ ಅಭ್ಯರ್ಥಿಗಳು’ ಎಂದು ಪರಿಗಣಿಸಲಾಗಿದೆ. ಆಲ್ಟ್ ನ್ಯೂಸ್ ಬರೆದ ಸತ್ಯಶೋಧನಾ ಲೇಖನಗಳು ಹಲವು ನಕಲಿ ಸುದ್ದಿಗಳನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ನಿಂದಿಸುವ ನಿಟ್ಟಿನಲ್ಲಿ ಹಬ್ಬುತ್ತಿರುವ ಹಲವು ಸುಳ್ಳುಸುದ್ದಿಗಳ ಸತ್ಯ ಪರಿಶೀಲನೆ ನಡೆಸಿದ ಹಿರಿಮೆ ಅವರಿಗಿದೆ” ಎಂದು ತಿಳಿಸಿತ್ತು.

ತನ್ನ ಈ ಜವಾಬ್ದಾರಿಯುತ ಕೆಲಸಗಳಿಗಾಗಿ ಬಲಪಂಥೀಯರಿಂದ ತನ್ನ ಜೀವಕ್ಕೆ ಬೆದರಿಕೆ ಎಂದು ಇತ್ತೀಚೆಗೆ ಜುಬೇರ್ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಇದೀಗ ಅವರ ವಿರುದ್ಧವೇ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿರುವುದು ವಿಪರ್ಯಾಸವಾಗಿದೆ. ಆದರೆ ಜನರು ಜುಬೇರ್ ಪರ ನಿಂತು ಸತ್ಯದ ಜೊತೆ ನಾವಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಗುಜರಾತ್‌ ಬಿಜೆಪಿಯ ವಿವಾದಾತ್ಮಕ ಪೋಸ್ಟ್‌‌ ರದ್ದು ಮಾಡಿದ ಟ್ವಿಟರ್‌ ಸಂಸ್ಥೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...