Homeಮುಖಪುಟಪತ್ರಕರ್ತರ ಮೇಲೆ UAPA ವಿಧಿಸಿರುವುದು ಅಘೋಷಿತ ತುರ್ತು ಪರಿಸ್ಥಿತಿಯನ್ನು ಸೂಚಿಸುತ್ತದೆ: NWMI

ಪತ್ರಕರ್ತರ ಮೇಲೆ UAPA ವಿಧಿಸಿರುವುದು ಅಘೋಷಿತ ತುರ್ತು ಪರಿಸ್ಥಿತಿಯನ್ನು ಸೂಚಿಸುತ್ತದೆ: NWMI

- Advertisement -
- Advertisement -

ನೆಟ್‌ವರ್ಕ್ ಆಫ್ ವುಮೆನ್ ಇನ್ ಮೀಡಿಯಾ, ಇಂಡಿಯಾ (ಎನ್‌ಡಬ್ಲ್ಯುಎಂಐ) ಚೆನ್ನೈ ಘಟಕದ ಸದಸ್ಯರು, ನ್ಯೂಸ್‌ಕ್ಲಿಕ್‌ ವಿರುದ್ಧದ ಪೊಲೀಸರ ಕ್ರಮವನ್ನು ವಿರೋಧಿಸಿ ಶನಿವಾರ ಚೆನ್ನೈ ಪ್ರೆಸ್ ಕ್ಲಬ್‌ನ ಹೊರಗೆ ಪ್ರತಿಭಟಿಸಿದ್ದು, ಪೊಲೀಸರ ಕ್ರಮ ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಹೇಳಿದ್ದಾರೆ.

ಅವರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA)ಯನ್ನು ಪತ್ರಕರ್ತರ ಮೇಲೆ ವಿಧಿಸಿರುವುದನ್ನು ‘ಅಘೋಷಿತ ತುರ್ತುಪರಿಸ್ಥಿತಿ’ ಎಂದು ಕರೆದಿದ್ದಾರೆ. UAPAಯ ಭಯೋತ್ಪಾದಕ ಕೃತ್ಯಗಳಿಗೆ ಹಣವನ್ನು ಸಂಗ್ರಹಣೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಕಾಯ್ದೆಯಲ್ಲಿನ ಪದಗಳು ಅಸ್ಪಷ್ಟವಾಗಿರುವುದರಿಂದ, ಪ್ರಾಸಿಕ್ಯೂಷನ್ ಯಾವುದೇ ಕೃತ್ಯವನ್ನು ಅಪರಾಧ ಅಥವಾ ಭಯೋತ್ಪಾದನೆ ಎಂದು ಹೆಸರಿಸಬಹುದು. ಯಾವುದೇ ಸಂಸ್ಥೆಗೆ ಸಂಬಂಧಿಸಿದ ಪುಸ್ತಕ ಅಥವಾ ವಸ್ತುವನ್ನು ಹೊಂದಿರುವುದು ಈ ಹಿಂದೆ ದೋಷಾರೋಪಣೆ ಎಂದು ಪರಿಗಣಿಸಲಾಗಿದೆ ಎಂದು ಫ್ರಂಟ್‌ಲೈನ್‌ನ ಸಂಪಾದಕ ವೈಷ್ಣಾ ರಾಯ್ ಹೇಳಿದ್ದಾರೆ.

ನ್ಯೂಸ್‌ಕ್ಲಿಕ್ ಚೀನಿಯರಿಂದ ಹಣವನ್ನು ತೆಗೆದುಕೊಂಡಿದೆ ಎಂದು ಎಫ್‌ಐಆರ್ ಹೇಳಿಕೊಂಡಿದೆ. ಭಾರತ ಸರ್ಕಾರದ ವಿರುದ್ಧ ಪೇಯ್ಡ್ ನ್ಯೂಸ್ ಪ್ರಕಟಿಸಲು ನ್ಯೂಸ್‌ಕ್ಲಿಕ್ ಚೀನಿಯರಿಂದ ಹಣ ಪಡೆದಿದೆ ಎಂದು ಎಫ್‌ಐಆರ್ ಹೇಳಿಕೊಂಡಿದ್ದರೂ, ಅಂತಹ ಯಾವುದೇ ಸುದ್ದಿಯನ್ನು ಪರಿಶೀಲನೆ ನಡೆಸಿಲ್ಲ ಎಂದು ಹೇಳಿದ್ದಾರೆ.

ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, 1975ರ ತುರ್ತು ಪರಿಸ್ಥಿತಿಗೆ ದೇಶದ ಪರಿಸ್ಥಿತಿಯನ್ನು ಹೋಲಿಸಲು ಹಿಂಜರಿಯುತ್ತಿದ್ದವರೂ ಸಹ ಈಗ ಅದೇ ಪರಿಸ್ಥಿತಿಯನ್ನು ಹೊಂದಿದ್ದಾರೆ ಎಂಬುದನ್ನು ಮನವರಿಕೆಮಾಡಿಕೊಂಡಿದ್ದಾರೆ. ಇದು ಅಘೋಷಿತ ತುರ್ತು ಪರಿಸ್ಥಿತಿ. ನೀವು ಮುಕ್ತ ಮಾದ್ಯಮವನ್ನು ಕಂಬಿಯ ಹಿಂದೆ ಹಾಕಿದರೆ, ನಿಮ್ಮನ್ನು ನೀವು ಪ್ರಜಾಪ್ರಭುತ್ವ ವಾದಿಗಳು ಎಂದು ಕರೆಯುವ ಹಕ್ಕಿಲ್ಲ. ಚುನಾವಣೆಯಲ್ಲಿ ಅನೇಕ ಫ್ಯಾಸಿಸ್ಟರು ಆಯ್ಕೆಯಾಗಿ ಅಧಿಕಾರಕ್ಕೆ ಬಂದರೆ ಚುನಾವಣೆಗಳು ಪ್ರಜಾಪ್ರಭುತ್ವವನ್ನು ರೂಪಿಸುವುದಿಲ್ಲ ಎಂದು ಅವರು ಹೇಳಿದರು.

ಇದನ್ನು ಓದಿ: ಇಸ್ರೇಲ್ ಮೇಲೆ ಹಮಾಸ್ ಗುಂಪಿನ ರಾಕೆಟ್‌ ದಾಳಿಯಲ್ಲಿ ಕನಿಷ್ಠ 40 ಜನರು ಸಾವು

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...