Homeಅಂತರಾಷ್ಟ್ರೀಯಇಸ್ರೇಲ್ ಮೇಲೆ ಹಮಾಸ್ ಗುಂಪಿನ ರಾಕೆಟ್‌ ದಾಳಿಯಲ್ಲಿ ಕನಿಷ್ಠ 40 ಜನರು ಸಾವು

ಇಸ್ರೇಲ್ ಮೇಲೆ ಹಮಾಸ್ ಗುಂಪಿನ ರಾಕೆಟ್‌ ದಾಳಿಯಲ್ಲಿ ಕನಿಷ್ಠ 40 ಜನರು ಸಾವು

- Advertisement -
- Advertisement -

ಗಾಜಾ ಪಟ್ಟಿಯಲ್ಲಿರುವ ಆಡಳಿತಾರೂಢ ಹಮಾಸ್ ಗುಂಪು ಶನಿವಾರ ಬೆಳಗಿನ ಜಾವ ಇಸ್ರೇಲ್ ಮೇಲೆ ದಾಳಿಯನ್ನು ನಡೆಸಿದೆ. ಡಜನ್ ಗಟ್ಟಲೆ ಯೋಧರು ಭಾರಿ ಭದ್ರಪಡಿಸಿದ ಗಡಿಯನ್ನು ನುಸುಳಿ ಸಾವಿರಾರು ರಾಕೆಟ್‌ಗಳನ್ನು ಹಾರಿಸಿದ್ದಾರೆ.

ಹಮಾಸ್‌ ಹೋರಾಟಗಾರರು ಇಸ್ರೇಲ್‌ ಮೇಲೆ ರಾಕೆಟ್‌ ದಾಳಿ ನಡೆಸಿದ ಬಳಿಕ ಇಸ್ರೇಲ್‌ ಯುದ್ಧ ಘೋಷಿಸಿದ್ದು, ಶತ್ರುಗಳು ಇದಕ್ಕಾಗಿ ತಕ್ಕ ಬೆಲೆ ತೆರಲಿದ್ದಾರೆ ಎಂದು ಇಸ್ರೇಲ್‌ ಪ್ರಧಾನಿ ಹೇಳಿದ್ದಾರೆ.

ಇಸ್ರೇಲ್ ನಾಗರಿಕರೇ, ನಾವು ಯುದ್ಧದಲ್ಲಿದ್ದೇವೆ. ಇದು ಕಾರ್ಯಾಚರಣೆಯಲ್ಲ, ಇದು ಯುದ್ಧ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ. ಹಮಾಸ್ ಇದಕ್ಕೆ ಬೆಲೆಯನ್ನು ತೆರಲಿದೆ. ಶತ್ರುಗಳು ಹಿಂದೆಂದೂ ತಿಳಿದಿರದ ರೀತಿಯಲ್ಲಿ ಪ್ರತಿಕ್ರಿಯೆಯನ್ನು ಎದುರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಹಮಾಸ್‌ನ ಮಿಲಿಟರಿ ಪಡೆ ಅಲ್-ಕಸ್ಸಾಮ್ ಬ್ರಿಗೇಡ್‌ಗಳ ಸದಸ್ಯರು ದಕ್ಷಿಣ ಇಸ್ರೇಲಿ ಪಟ್ಟಣಗಳಾದ ನೆಟಿವೋಟ್ ಮತ್ತು ಒಫಾಕಿಮ್‌ನ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಹಮಾಸ್ ಗುಂಪು ಶನಿವಾರ ಬೆಳಗಿನ ಜಾವ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 40ಜನರು ಸಾವನ್ನಪ್ಪಿದ್ದಾರೆ ಮತ್ತು 740ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಕನಿಷ್ಠ 2,500 ರಾಕೆಟ್‌ಗಳನ್ನು ಇಸ್ರೇಲ್‌ಗೆ ಹಾರಿಸಲಾಗಿದೆ ಮತ್ತು ಶಸ್ತ್ರಸಜ್ಜಿತ ಬಂದೂಕುಧಾರಿಗಳು ಇಸ್ರೇಲ್‌ನ  ಉದ್ದಕ್ಕೂ ಹಲವಾರು ಸ್ಥಳಗಳಲ್ಲಿ ಗಡಿ ಬೇಲಿಯನ್ನು ದಾಟಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಇಸ್ರೇಲಿ ಮಿಲಿಟರಿ ವಕ್ತಾರರ ಪ್ರಕಾರ, ಇಂದು ಬೆಳಿಗ್ಗೆ ಪ್ಯಾಲೇಸ್ತೀನಿಯನ್‌ಗಳು ಸೇನಾ ನೆಲೆಗಳಿಗೆ ನುಸುಳಿದ್ದಾರೆ.

ಇದನ್ನು ಓದಿ: ಮಹಾರಾಷ್ಟ್ರ: ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರೋಪಿ ಪ್ರಜ್ವಲ್ ರೇವಣ್ಣಗೆ ಸಿದ್ದರಾಮಯ್ಯ ಕ್ರಿಮಿನಲ್ ಹಣೆಪಟ್ಟಿ ಕಟ್ಟಿದ್ದಾರೆ: ಕುಮಾರಸ್ವಾಮಿ

0
'ಇನ್ನೂ ಆರೋಪಿಯಾಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಕ್ರಿಮಿನಲ್ ಎಂಬ ಹಣೆಪಟ್ಟಿ ಕಟ್ಟಿದ್ದಾರೆ' ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಲೈಂಗಿಕ ಹಗರಣದ...