Homeಮುಖಪುಟಗಾಝಾದ ಅಲ್-ಮಘಾಝಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ: 30ಕ್ಕೂ ಹೆಚ್ಚು ಜನರ ಹತ್ಯೆ

ಗಾಝಾದ ಅಲ್-ಮಘಾಝಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ: 30ಕ್ಕೂ ಹೆಚ್ಚು ಜನರ ಹತ್ಯೆ

- Advertisement -
- Advertisement -

ಇಸ್ರೇಲ್ ಸೇನೆಯು ಮಧ್ಯ ಗಾಝಾದಲ್ಲಿರುವ ಅಲ್-ಮಘಾಝಿ ನಿರಾಶ್ರಿತರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ್ದು, 30ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ನಡೆದ ವೈಮಾನಿಕ ದಾಳಿಯ ಸಂತ್ರಸ್ತರನ್ನು ಡೀರ್ ಎಲ್-ಬಾಲಾಹ್‌ನಲ್ಲಿರುವ ಅಲ್-ಅಕ್ಸಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹಮಾಸ್‌ನ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪ್ಯಾಲೆಸ್ತೀನಿ ಸುದ್ದಿ ಸಂಸ್ಥೆ ವಾಫಾ ಈ ಹಿಂದೆ ಬಾಂಬ್ ದಾಳಿಯಲ್ಲಿ 51 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ವರದಿ ಮಾಡಿದೆ.

ಜಬಾಲಿಯಾ ಮತ್ತು ಬುರೇಜ್ ನಿರಾಶ್ರಿತರ ಶಿಬಿರಗಳ ಮೇಲಿನ ವಾಯು ದಾಳಿಗಳಲ್ಲಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ತೀನ್‌ ಅಧಿಕಾರಿಗಳು ಹೇಳಿದ್ದಾರೆ. ಈ ದಾಳಿಯ ಬಗ್ಗೆ ಅಲ್ ಜಝೀರಾ ಮಾದ್ಯಮ, ಇಸ್ರೇಲ್‌ನ ಮಿಲಿಟರಿಯನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇಸ್ರೇಲ್‌ ಸೇನಾ ವಕ್ತಾರರು ತಮ್ಮ ಪಡೆಗಳು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದವೇ ಎಂಬುದರ ಕುರಿತು ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ತಕ್ಷಣದ ಕದನ ವಿರಾಮಕ್ಕಾಗಿ ಅರಬ್ ದೇಶಗಳ ಕರೆಗಳನ್ನು ಯುನೈಟೆಡ್ ಸ್ಟೇಟ್ಸ್ ಶನಿವಾರ ತಿರಸ್ಕರಿಸಿದ ನಂತರ ಮತ್ತೆ ಗಾಝಾದ ಮೇಲೆ ದಾಳಿಯಾಗಿದೆ. ಯುಎಸ್ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಪೂರ್ಣ ಕದನ ವಿರಾಮವು ಹಮಾಸ್‌ನ್ನು ಮರುಸಂಘಟಿತವಾಗಲು ಮತ್ತು ದಾಳಿಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದ್ದರು.

ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು 240ಕ್ಕೂ ಹೆಚ್ಚು ಇಸ್ರೇಲ್‌ ಒತ್ತೆಯಾಳುಗಳನ್ನು ಬಿಡುಗಡೆ ಮಾಡದ ಹೊರತು ಕದನ ವಿರಾಮವನ್ನು ತಿರಸ್ಕರಿಸಿದ್ದಾರೆ.

ಉತ್ತರ ಗಾಝಾದ ಜಬಾಲ ನಿರಾಶ್ರಿತರ ಶಿಬಿರದಲ್ಲಿ ಸ್ಥಳಾಂತರಗೊಂಡವರಿಗೆ ಆಶ್ರಯ ನೀಡಿದ್ದ ವಿಶ್ವಸಂಸ್ಥೆ ನಡೆಸುತ್ತಿರುವ ಅಲ್-ಫಕೂರಾ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಟ 15 ಮಂದಿ ಮೃತಪಟ್ಟಿದ್ದು 54 ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

ಗಾಝಾ ಪಟ್ಟಿಯಲ್ಲಿ ಯುದ್ಧದಿಂದ ನಿರಾಶ್ರಿತಗೊಂಡವರು ಆಶ್ರಯ ಪಡೆದಿದ್ದ ತನ್ನ 4 ಶಾಲೆಗಳು ಬಾಂಬ್ ದಾಳಿಯಲ್ಲಿ ಹಾನಿಗೊಳಗಾಗಿವೆ ಎಂದು ವಿಶ್ವಸಂಸ್ಥೆ ಹೇಳಿದೆ. ಇದಲ್ಲದೆ ಉತ್ತರ ಗಾಝಾದಿಂದ ಗಾಯಾಳುಗಳನ್ನು ಸ್ಥಳಾಂತರಿಸಲು ಬಳಸುತ್ತಿದ್ದ ಆಂಬ್ಯುಲೆನ್ಸ್‌ನ್ನು ಗುರಿಯಾಗಿಸಿ ಶುಕ್ರವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ 15 ಜನರು ಮೃತಪಟ್ಟು 60 ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

ಪ್ಯಾಲೆಸ್ತೀನ್ ಅಧಿಕಾರಿಗಳ ಪ್ರಕಾರ, ಹಮಾಸ್‌ ವಿರುದ್ಧ ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಗಾಝಾದಲ್ಲಿ ಕನಿಷ್ಠ 9,488 ಪ್ಯಾಲೆಸ್ತೀನಿಯನ್ನರ ಹತ್ಯೆ ನಡೆದಿದೆ.

ಇಸ್ರೇಲ್‌ ಅಧಿಕಾರಿಗಳ ಪ್ರಕಾರ ಅ.7ರಂದು ದಕ್ಷಿಣ ಇಸ್ರೇಲ್‌ನ ಮೇಲೆ ಹಮಾಸ್‌ ಹಠಾತ್ ದಾಳಿ ನಡೆಸಿದಾಗ ಕನಿಷ್ಠ 1,430 ಜನರು ಸಾವನ್ನಪ್ಪಿದ್ದಾರೆ ಮತ್ತು 240ಕ್ಕೂ ಹೆಚ್ಚು ಜನರು ಈಗಲೂ ಒತ್ತೆಯಾಳುಗಳಾಗಿದ್ದಾರೆ.

 

ಇದನ್ನು ಓದಿ: ಇಸ್ರೇಲ್‌-ಪ್ಯಾಲೆಸ್ತೀನ್‌ ಸಂಘರ್ಷ ‘ಜಾಗತಿಕ ಬಿಕ್ಕಟ್ಟು’: ಮಾರ್ಟಿನ್ ಗ್ರಿಫಿತ್ಸ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...