Homeಮುಖಪುಟಇಸ್ರೇಲ್-ಹಮಾಸ್ ಕದನ ವಿರಾಮ ಎರಡು ದಿನಗಳವರೆಗೆ ವಿಸ್ತರಣೆ

ಇಸ್ರೇಲ್-ಹಮಾಸ್ ಕದನ ವಿರಾಮ ಎರಡು ದಿನಗಳವರೆಗೆ ವಿಸ್ತರಣೆ

- Advertisement -
- Advertisement -

ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವನ್ನು ಇನ್ನೂ ಎರಡು ದಿನಗಳವರೆಗೆ ವಿಸ್ತರಿಸಲಾಗಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಗೆ ಮಂಗಳವಾರ ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿ ತಲುಪಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದ ಸೋಮವಾರ ರಾತ್ರಿ ಕೊನೆಗೊಳ್ಳಬೇಕಿತ್ತು ಆದರೆ ಇನ್ನೂ ನಾಲ್ಕು ದಿನಗಳ ಕದನ ವಿರಾಮ ವಿಸ್ತರಣೆಯಾಗಿದೆ. ಕದನ ವಿರಾಮ ವಿಸ್ತರಣೆಯ ನಂತರ ಹಮಾಸ್ ಸದಸ್ಯರು ಒತ್ತೆಯಾಳುಗಳ ಹೊಸ ಪಟ್ಟಿಯನ್ನು ಇಸ್ರೇಲ್ ಪ್ರಧಾನಿ ಕಚೇರಿಗೆ ಕಳುಹಿಸಿದ್ದಾರೆ.

ಸೋಮವಾರ ಸ್ಪೇನ್‌ನಲ್ಲಿ ನಡೆದ ಸಭೆಯಲ್ಲಿ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ಕೊನೆಯಾಗಬೇಕು ಅದಕ್ಕೆ ಬೇಕಾದ ಪರಿಹಾರದ ಅಗತ್ಯವನ್ನು ಅರಬ್ ರಾಜ್ಯಗಳು ಮತ್ತು ಯುರೋಪಿಯನ್ ಒಕ್ಕೂಟವು ಒಪ್ಪಿಕೊಂಡಿವೆ.

ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ಯೂನಿಯನ್ ಫಾರ್ ಮೆಡಿಟರೇನಿಯನ್ ಶೃಂಗಸಭೆಯಲ್ಲಿ, ಯುರೋಪಿಯನ್ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಜೋಸೆಪ್ ಬೊರೆಲ್ ಅವರು, ಗಾಜಾವನ್ನು ಪ್ಯಾಲೇಸ್ಟಿನಿಯನ್ ಪ್ರಾಧಿಕಾರವು ಆಳಬೇಕು ಅದುವೇ, ಏಕೈಕ ಪರಿಹಾರ ಎಂದು ಪ್ರತಿಪಾದಿಸಿದರು.

ಹಮಾಸ್ ಮತ್ತೆ 11 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಅವರೆಲ್ಲರೂ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಗುಂಪು ದಾಳಿ ಮಾಡಿದಾಗ ಅಪಹರಣಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಅವರನ್ನು ಇಸ್ರೇಲಿ ಭದ್ರತಾ ಏಜೆನ್ಸಿಗಳಿಗೆ ಹಸ್ತಾಂತರಿಸಲಾಯಿತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ 33 ಪ್ಯಾಲೆಸ್ಟೀನಿಯನ್ನರನ್ನು ಬಿಡುಗಡೆ ಮಾಡಿತು.

ಕಳೆದ ಮೂರು ದಿನಗಳಿಂದ ಇಸ್ರೇಲಿಗಳು ಮತ್ತು ಇಸ್ರೇಲಿಗಳಲ್ಲದ 69 ಒತ್ತೆಯಾಳುಗಳನ್ನು ಹಮಾಸ್ ಗುಂಪು ಬಿಡುಗಡೆ ಮಾಡಿದೆ. ಇನ್ನು ಇಸ್ರೇಲ್ ಕೂಡ ಸುಮಾರು 150 ಪ್ಯಾಲೆಸ್ಟೀನಿಯನ್ನರನ್ನು ಬಿಡುಗಡೆ ಮಾಡಿದೆ.

ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಹಠಾತ್ ದಾಳಿ ನಡೆಸಿ ಸುಮಾರು 1,200 ಜನರನ್ನು ಕೊಂದಿತು ಮತ್ತು ಸುಮಾರು 240 ಜನರನ್ನು ಒತ್ತೆಯಾಳುಗಳಾಗಿಸಿಕೊಂಡಿತು.

ಮತ್ತೊಂದೆಡೆ, ಇಸ್ರೇಲ್ ಗಾಜಾದ ಮೇಲೆ ಬಾಂಬ್ ದಾಳಿ ನಡೆಸಿ ಸುಮಾರು 15,000 ಪ್ಯಾಲೆಸ್ಟೀನಿಯನ್ನರನ್ನು ಕೊಂದಿತು.

ಇದನ್ನೂ ಓದಿ: ಗಾಝಾ ಕರಾವಳಿ ಪಟ್ಟಿಗೆ ನೆತನ್ಯಾಹು ಭೇಟಿ: ಇಸ್ರೇಲ್‌ ನಿಯಂತ್ರಣದಲ್ಲಿ ಹಮಾಸ್‌ ಆಳ್ವಿಕೆಯ ಭೂ ಪ್ರದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...