Homeಮುಖಪುಟಎಎಪಿ-ಬಿಜೆಪಿ ಮಧ್ಯೆ ಮತ್ತೊಮ್ಮೆ ಫೈಟ್; ದೆಹಲಿ ಮೇಯರ್ ಚುನಾವಣೆ ಸ್ಥಗಿತ

ಎಎಪಿ-ಬಿಜೆಪಿ ಮಧ್ಯೆ ಮತ್ತೊಮ್ಮೆ ಫೈಟ್; ದೆಹಲಿ ಮೇಯರ್ ಚುನಾವಣೆ ಸ್ಥಗಿತ

- Advertisement -
- Advertisement -

ದೆಹಲಿಯ ಮಹಾನಗರ ಪಾಲಿಕೆಯು ಮಂಗಳವಾರ ಮೇಯರ್ ಮತ್ತು ಉಪ ಮೇಯರ್ ಹುದ್ದೆಗೆ ಚುನಾವಣೆ ನಡೆಸಲು ನಿರ್ಧರಿಸಿತ್ತು. ಆದರೆ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಬಿಜೆಪಿ ನಡುವಿನ ಘರ್ಷಣೆಯಿಂದಾಗಿ  ಎರಡನೇ ಬಾರಿಗೆ ಸ್ಥಗಿತಗೊಂಡಿದೆ.

ದೆಹಲಿಯ ಮಹಾನಗರ ಪಾಲಿಕೆ (MCD) ಸದನದಲ್ಲಿ ಗದ್ದಲ ಏರ್ಪಟ್ಟಿದ್ದರಿಂದ ಮತ್ತೊಮ್ಮೆ ಅನಿರ್ದಿಷ್ಟಾವಧಿಗೆ ಸದನವನ್ನು ಮುಂದೂಡಲಾಯಿತು. ಜನವರಿ 6 ರಂದು ನಡೆದ 250 ಸದಸ್ಯರ ಎಂಸಿಡಿ ಹೌಸ್‌ನ ಮೊದಲ ಸಭೆಯಲ್ಲೂ ಎಎಪಿ ಕೌನ್ಸಿಲರ್‌ಗಳ ದೊಡ್ಡ ಪ್ರತಿಭಟನೆಯ ನಡುವೆ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು. ಚುನಾವಣೆಯಲ್ಲಿ ಬಿಜೆಪಿ ಸೋತರೂ ಕೂಡಾ ಅಧಿಕಾರದ ನಿಯಂತ್ರಣವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆಪ್ ಆರೋಪಿಸಿತ್ತು.

ಮಂಗಳವಾರ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ನೇಮಿಸಿದ ಬಿಜೆಪಿಯ ಅಧ್ಯಕ್ಷ ಸತ್ಯ ಶರ್ಮಾ ಅವರು ಕಳೆದ ಸಭೆಯಲ್ಲಿ ಎಎಪಿಯ ತೀವ್ರ ವಿರೋಧದ ನಡೆವೆಯೂ ಮೊದಲು 10 ನಾಮನಿರ್ದೇಶಿತ ಕೌನ್ಸಿಲರ್‌ಗಳಿಗೆ ಪ್ರಮಾಣ ವಚನ ಬೋಧಿಸಿದರು. ಆಲ್ಡರ್‌ಮೆನ್ ಎಂದು ಕರೆಯಲ್ಪಡುವ ಈ ಕೌನ್ಸಿಲರ್‌ಗಳಿಗೆ ಮತ ಚಲಾಯಿಸಲು ಅವಕಾಶವಿಲ್ಲ ಎಂದು ಎಎಪಿ ಹೇಳಿದೆ.

ಇದನ್ನೂ ಓದಿ: ಗುಜರಾತ್‌: ನಾಮಪತ್ರ ಹಿಂಪಡೆಯಲು ಒತ್ತಾಯಿಸಿ ಆಪ್‌ ಅಭ್ಯರ್ಥಿಯನ್ನು ಎಳೆದೊಯ್ದ ಬಿಜೆಪಿ- ಎಎಪಿ ಆರೋಪ

MCD ಯ ಪ್ರಧಾನ ಕಛೇರಿಯಾದ ಸಿವಿಕ್ ಸೆಂಟರ್‍‌ಗೆ ಹೆಚ್ಚಿನ ಸಂಖ್ಯೆಯ ರಕ್ಷಣಾ ಸಿಬ್ಬಂದಿ ಮತ್ತು ಮಾರ್ಷಲ್‌ಗಳನ್ನು ಒಳಗೊಂಡಂತೆ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ.

ಆಪ್‌ನಿಂದ ಶೆಲ್ಲಿ ಒಬೆರಾಯ್ ಅವರನ್ನು ಮೇಯರ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದೆ ಮತ್ತು ಇನ್ನೊಬ್ಬ ಅಭ್ಯರ್ಥಿ ಅಶು ಠಾಕೂರ್ ಅವರನ್ನು “ಬ್ಯಾಕ್ಅಪ್” ಎಂದು ಹೆಸರಿಸಿದೆ. ಬಿಜೆಪಿ ರೇಖಾ ಗುಪ್ತಾ ಅವರನ್ನು ನಾಮನಿರ್ದೇಶನ ಮಾಡಿದೆ. ಉಪಮೇಯರ್ ಹುದ್ದೆಗೆ ಆಲೆ ಮೊಹಮ್ಮದ್ ಇಕ್ಬಾಲ್ ಮತ್ತು ಜಲಜ್ ಕುಮಾರ್ (ಎಎಪಿ) ಮತ್ತು ಕಮಲ್ ಬಾಗ್ರಿ (ಬಿಜೆಪಿ) ನಾಮನಿರ್ದೇಶಿತರಾಗಿದ್ದಾರೆ.

ಚುನಾವಣೆಯಲ್ಲಿ ಸೋತ ನಂತರವೂ ಕೂಡ ಬಿಜೆಪಿ ಮೊದಲು ಮೇಯರ್ ಹುದ್ದೆಗೆ ಎಎಪಿ ವಿರುದ್ಧ ಹೋರಾಡುವುದಾಗಿ ಸುಳಿವು ನೀಡಿತ್ತು. ನಂತರ ಪಕ್ಷವು ಹೇಳಿಕೆಯಿಂದ ಹಿಂದೆ ಸರಿಯಿತು, ಮೇಯರ್ ಆಪ್‌ನವರೇ ಆಗುತ್ತಾರೆ ಎಂದು ಹೇಳಿದರು. ಮತ್ತೊಂದು ಬದಲಾವಣೆಯ ಬಲಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಿಜೆಪಿ ಹೇಳಿದೆ.

ರಾಜಧಾನಿಯ 250 ಸದಸ್ಯರ ನಾಗರಿಕ ಸಂಸ್ಥೆಗೆ ಕಳೆದ ವರ್ಷ ಡಿಸೆಂಬರ್ 4 ರಂದು ಚುನಾವಣೆ ನಡೆದಿತ್ತು ಮತ್ತು ಡಿಸೆಂಬರ್ 7 ರಂದು ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಆಪ್ 134 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ ಮತ್ತು ನಾಗರಿಕ ಸಂಸ್ಥೆಯಲ್ಲಿ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ. ಬಿಜೆಪಿ 104 ವಾರ್ಡ್‌ಗಳನ್ನು ಗೆದ್ದು ಎರಡನೇ ಸ್ಥಾನ ಗಳಿಸಿದರೆ, ಕಾಂಗ್ರೆಸ್ ಒಂಬತ್ತು ಸ್ಥಾನಗಳನ್ನು ಗೆದ್ದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...