Homeಮುಖಪುಟಗಾಝಾಕ್ಕೆ ವೈದ್ಯಕೀಯ ನೆರವು ರವಾನಿಸಿದ ಜೋರ್ಡಾನ್‌

ಗಾಝಾಕ್ಕೆ ವೈದ್ಯಕೀಯ ನೆರವು ರವಾನಿಸಿದ ಜೋರ್ಡಾನ್‌

- Advertisement -
- Advertisement -

ಗಾಝಾದಲ್ಲಿರುವ ಆಸ್ಪತ್ರೆಗೆ ತುರ್ತು ವೈದ್ಯಕೀಯ ಸಹಾಯವನ್ನು ಜೋರ್ಡಾನ್‌ನ ಕಿಂಗ್ ಅಬ್ದುಲ್ಲಾ II ಘೋಷಿಸಿದ್ದು, ವಾಯುಪಡೆಯು ಮೂಲಕ ವೈದ್ಯಕೀಯ ನೆರವನ್ನು ಕಳುಹಿಸಿಕೊಟ್ಟಿದ್ದಾರೆ.

ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್‌ ಮಾಡಿದ ಜೋರ್ಡಾನ್‌ನ ಕಿಂಗ್ ಅಬ್ದುಲ್ಲಾ II, ವಾಯುಪಡೆಯ ಸಿಬ್ಬಂದಿಗಳು ಮಧ್ಯರಾತ್ರಿಯಲ್ಲಿ ಗಾಝಾದ ಆಸ್ಪತ್ರೆಗೆ ತುರ್ತು ವೈದ್ಯಕೀಯ ನೆರವು ರವಾನಿಸಿದ್ದಾರೆ. ಗಾಝಾದಲ್ಲಿನ ಯುದ್ಧದಲ್ಲಿ ಗಾಯಗೊಂಡ ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ. ನಾವು ನಮ್ಮ ಪ್ಯಾಲೆಸ್ತೀನ್ ಸಹೋದರರಿಗೆ ಸಹಾಯ ಮಾಡಲು ಸದಾ ಸಿದ್ದರಾಗಿದ್ದೇವೆ ಎಂದು ಹೇಳಿದ್ದಾರೆ.

ನ.1ರಂದು ಜೋರ್ಡಾನ್ ದೇಶವು ಗಾಝಾದ ಮೇಲೆ ನಡೆಯುತ್ತಿರುವ ದಾಳಿಯನ್ನು ಪ್ರತಿಭಟಿಸಿ ಇಸ್ರೇಲ್‌ನಿಂದ ತನ್ನ ರಾಯಭಾರಿಯನ್ನು ವಾಪಾಸ್ಸು ಕರೆಸಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಅಯ್ಮನ್ ಸಫಾದಿ, ರಾಯಭಾರಿಯನ್ನು ವಾಪಾಸ್ಸು ಕರೆಸಿಕೊಂಡಿರುವುದು ಗಾಝಾದ ಮೇಲಿನ ಯುದ್ಧ ನಿಲುಗಡೆಗೆ ಸಂಬಂಧಿಸಿದೆ. ಪ್ಯಾಲೆಸ್ತೀನಿಯಾದ ಜನರ ಆಹಾರ, ನೀರು, ಔಷಧಿಗಳ ಹಕ್ಕನ್ನು ಕಸಿದುಕೊಂಡ ಕ್ರಮಗಳಿಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.

ಗಾಝಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಜೋರ್ಡಾನ್ ಕೆಲಸ ಮಾಡುವುದನ್ನು ಮುಂದುವರಿಸಲಿದೆ.  ಮಾನವೀಯ ನೆರವು ನೀಡಲು, ನಾಗರಿಕರನ್ನು ರಕ್ಷಿಸಲು ಜೋರ್ಡಾನ್ ಸದಾ ಬದ್ಧವಾಗಿದೆ ಎಂದು ಸಫಾದಿ  ಹೇಳಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧವು  30ನೇ ದಿನಕ್ಕೆ ಕಾಲಿಟ್ಟಿದೆ. ಗಾಝಾ ಪಟ್ಟಿಯಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 9,770ಕ್ಕೂ ಅಧಿಕವಾಗಿದೆ. ಬಲಿಯಾದವರಲ್ಲಿ 4,008 ಮಕ್ಕಳು ಮತ್ತು 2,550 ಮಹಿಳೆಯರು ಸೇರಿದ್ದಾರೆ ಎಂದು ಪ್ಯಾಲೆಸ್ತೀನ್‌ ಆರೋಗ್ಯ ಸಚಿವಾಲಯ ಇತ್ತೀಚಿನ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿ ತಿಳಿಸಿದೆ.

ಇಸ್ರೇಲ್‌ ಅಧಿಕಾರಿಗಳ ಪ್ರಕಾರ, ಇಸ್ರೇಲ್‌ನಲ್ಲಿ ಈವರೆಗೆ 1400ಜನರು ಮೃತಪಟ್ಟಿದ್ದಾರೆ. ಮತ್ತು ವಿದೇಶಿ ಪ್ರಜೆಗಳು ಸೇರಿದಂತೆ 242 ಜನರು ಗಾಝಾದಲ್ಲಿ ಬಂಧಿತರಾಗಿದ್ದಾರೆ. ಇಲ್ಲಿಯವರೆಗೆ ನಾಲ್ಕು ನಾಗರಿಕ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ ಮತ್ತು ಒಬ್ಬ ಮಹಿಳಾ ಸೈನಿಕರನ್ನು ಇಸ್ರೇಲ್‌ ಪಡೆಗಳು ರಕ್ಷಿಸಿವೆ. ಒತ್ತೆಯಾಳುಗಳಲ್ಲಿ 57 ಮಂದಿ ಇಸ್ರೇಲ್‌ ವೈಮಾನಿಕ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ. ಭಾನುವಾರ ಗಾಝಾದಲ್ಲಿ ಒಬ್ಬ ಇಸ್ರೇಲ್‌ ಸೈನಿಕನನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಕೊಲ್ಲಲ್ಪಟ್ಟ ಒಟ್ಟು ಸೈನಿಕರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಇದನ್ನು ಓದಿ: 29ನೇ ದಿನಕ್ಕೆ ಕಾಲಿಟ್ಟ ಯುದ್ಧ; ಇಸ್ರೇಲ್‌ನಿಂದ ಗಾಝಾದಲ್ಲಿ 9,770 ನಾಗರಿಕರ ಹತ್ಯೆ; ಮೃತರಲ್ಲಿ ಹೆಚ್ಚಿನವರು ಮಕ್ಕಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...