Homeಕರ್ನಾಟಕಬೆಂಗಳೂರು: ಬಿಬಿಎಂಪಿಯಿಂದ ಬೀದಿ ಬದಿ ವ್ಯಾಪಾರಿಗಳ ತೆರವು; ವಿರೋಧ ವ್ಯಕ್ತಪಡಿಸಿದ ವ್ಯಾಪಾರಿಗಳ ಸಂಘ

ಬೆಂಗಳೂರು: ಬಿಬಿಎಂಪಿಯಿಂದ ಬೀದಿ ಬದಿ ವ್ಯಾಪಾರಿಗಳ ತೆರವು; ವಿರೋಧ ವ್ಯಕ್ತಪಡಿಸಿದ ವ್ಯಾಪಾರಿಗಳ ಸಂಘ

- Advertisement -
- Advertisement -

ಬೀದಿ ವ್ಯಾಪಾರಿಗಳಿಗೆ ಜಯನಗರ 4ನೇ ಬ್ಲಾಕ್‌ನಲ್ಲಿ ವ್ಯಾಪಾರ ಮಾಡದಂತೆ ಬಿ.ಬಿ.ಎಂ.ಪಿ ಮಾರ್ಷಲ್ ಗಳು ಹಾಗೂ ಅಧಿಕಾರಿಗಳು ಸೂಚಿಸಿ ಇಂದು ತೆರವು ಕಾರ್ಯಾಚರಣೆ ನಡೆಸಿದ್ದು, ಇದಕ್ಕೆ ಬೀದಿ ಬದಿ ವ್ಯಾಪಾರಿಗಳ ಸಂಘ ವಿರೋಧಿಸಿದೆ.

ಜಯನಗರ 4ನೆ ಬ್ಲಾಕ್‌ ಕಾಂಪ್ಲೆಕ್ಸ್‌ ಸುತ್ತಲಿನ ಬೀದಿ ವ್ಯಾಪಾರಿಗಳು ಸುಮಾರು 30-40 ವರ್ಷಗಳಿಂದ ಅಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಅಲ್ಲಿ ಸುಮಾರು 400-500 ಬೀದಿ ವ್ಯಾಪಾರಿಗಳಿದ್ದಾರೆ. ಅವರಿಗೆ 2018ರಲ್ಲಿ ಬಿಬಿಎಂಪಿ ಗುರುತಿನ ಚೀಟಿ ಹಾಗೂ ವ್ಯಾಪಾರ ಪ್ರಮಾಣ ಪತ್ರವನ್ನು ನೀಡಿದೆ. ಆದರೆ ನ.4ರಂದು  ಬಿಬಿಎಂಪಿ ಮಾರ್ಷಲ್‌ಗಳು ಹಾಗೂ ಅಧಿಕಾರಿಗಳು ಬಂದು ನ.7ರ ಮಂಗಳವಾರದಿಂದ ಜಯನಗರ 4ನೆ ಬ್ಲಾಕ್‌ ಕಾಂಪ್ಲೆಕ್ಸ್‌ ಸುತ್ತಲಿನ ಬೀದಿಯಲ್ಲಿ ವ್ಯಾಪಾರ ಮಾಡಬಾರದು ಎಂದು ಸೂಚಿಸಿದ್ದಾರೆ.

ಈ ಬಗ್ಗೆ ಬೀದಿ ಬದಿ ವ್ಯಾಪಾರಿಗಳ ಸಂಘ ಪ್ರಕಟಣೆ ಹೊರಡಿಸಿದ್ದು, ನಮಗೆ ಬಹಳ ಆತಂಕವಾಗಿದೆ. ನಾವು ಯಾವುದೇ ಅಪರಾಧ ಮಾಡಿಲ್ಲ. ನಾವು ಬೀದಿ ವ್ಯಾಪಾರಿಗಳ ಕಾನೂನಿನ ಪ್ರಕಾರ ವ್ಯಾಪಾರ ಮಾಡುತ್ತಿದ್ದೇವೆ  ನಮ್ಮಿಂದ ತಪ್ಪಿದ್ದರೆ ದಯವಿಟ್ಟು ಸಭೆ ಕೆರೆದು ತಿಳಿಸಿ, ನಾವು ತಿದ್ದಿಕೊಳ್ಳುತ್ತೇವೆ. ಆದರೆ ಈ ರೀತಿ ದಿಡೀರ್‌ ಎತ್ತಂಗಡಿ ಮಾಡಿದರೆ ಹೇಗೆ? ಬೀದಿ ವ್ಯಾಪಾರಿಗಳ (ಜೀವನೋ ಪಾಯ ರಕ್ಷಣೆ ಹಾಗು ನಿಯಂತ್ರಣ )ಕಾಯ್ದೆ 2014ರ ಕಲಾಂ 3(3)ರ ಪ್ರಕಾರ ಕಾನೂನಿನಡಿಯಲ್ಲಿ ಸಮೀಕ್ಷೆ ಮುಗಿದು ವ್ಯಾಪಾರ ಮಾಡುತ್ತಿರುವ ಎಲ್ಲಾ ವ್ಯಾಪಾರಿಗಳಿಗೆ ಗುರುತಿನ ಚೀಟಿ ಕೊಡುವ ತನಕ ಯಾರಿಗೂ ಎತ್ತಂಗಡಿ ಮಾಡುವಂತಿಲ್ಲ. ಹಾಗೆಯೇ ಕಲಾಂ 18ರ ಪ್ರಕಾರ ಲಿಖಿತ ನೋಟಿಸ್ ನೀಡದೆ ಯಾರನ್ನು ಎತ್ತಂಗಡಿ ಮಾಡುವಂತಿಲ್ಲ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘ ಹೇಳಿದೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಹೋರಾಟಗಾರರಾದ ವಿನಯ್‌, ಜಯನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಎತ್ತಂಗಡಿಗೆ ಬಿಬಿಎಂಪಿ ಸೂಚಿಸಿದೆ. ನಾವು ಇದಕ್ಕೆ ವಿರೋಧವನ್ನು ಬಿಬಿಎಂಪಿಗೆ ಕಳುಹಿಸಿದ್ದೇವೆ. ಬೆಳಿಗ್ಗಿನಿಂದ ತೆರವು ಮಾಡುತ್ತಿದ್ದಾರೆ. ಯಾವುದೇ ಆದೇಶವಿಲ್ಲ. ಮೌಖಿಕವಾಗಿ ಮಾತ್ರವಾಗಿ ಹೇಳಲಾಗಿದೆ. ತುಂಬಾ ಜನ ಇಲ್ಲಿ ಒತ್ತುವರಿ ಮಾಡಿದ್ದಾರೆ ಎಂದು ಬಿಬಿಎಂಪಿ ಹೇಳುತ್ತಿದೆ. ಯಾಕೆ ಈ ಆದೇಶ ಮಾಡಿದ್ದಾರೆ ಎನ್ನವುದು ಸ್ಪಷ್ಟವಾಗಿ ಹೇಳುತ್ತಿಲ್ಲ. ಅಲ್ಲಿ ವ್ಯಾಪಾರ ಮಾಡುತಿದ್ದ ಎಲ್ಲಾ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮುಂದುವರಿಸಲು ಅವಕಾಶ ನೀಡಬೇಕು. ಬೀದಿ ವ್ಯಾಪಾರಕ್ಕೆ ತೊಂದರೆ ಆಗದ ರೀತಿ ಸೂಕ್ತ ಆದೇಶ ನೀಡಬೇಕು. ಬೀದಿ ವ್ಯಾಪಾರಿಗಳ (ಜೀವನೋ ಪಾಯ ರಕ್ಷಣೆ ಹಾಗು ನಿಯಂತ್ರಣ )ಕಾಯ್ದೆ 2014ರ ಬಗ್ಗೆ ಬಿಬಿಎಂಪಿ
ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಕಾರ್ಯಾಗಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಬೀದಿ ಬದಿ ವ್ಯಾಪಾರಿ ಸುಬ್ರಮಣ್ಯ, ನಾವು 35-40ವರ್ಷಗಳಿಂದ ಇದೇ ಬೀದಿಯಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಇದೀಗ ದಿಡೀರ್‌ ನಮಗೆ ತೆರವಿಗೆ ಆದೇಶ ಬಂದಿದೆ. ಇಂದು ಬೆಳಿಗ್ಗಿನಿಂದಲೇ ತೆರವಿಗೆ ಬಂದಿದ್ದಾರೆ. 150ಕ್ಕೂ ಅಧಿಕ ವ್ಯಾಪಾರಿಗಳ ಜೀವನೋಪಾಯದ ಮೇಲೆ ಇದು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ನಾವು ಈ ಬಗ್ಗೆ ಸ್ಥಳೀಯ ಶಾಸಕರ ಬಳಿ ತೆರಳಿ ಸಮಸ್ಯೆ ಹೇಳಿದ್ದೇವೆ. ಅವರು ಸಮಸ್ಯೆ ಬಗೆಹರಿಸುವ ಭರವಸೆ ಇದೆ ಎಂದು ಹೇಳಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಬೀದಿ ಬದಿ ವ್ಯಾಪಾರಿ ಸೋಮನಾಥನ್, ನಾವು 40 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಹೂ, ಹಣ್ಣುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದೆವು. ಎಲ್ಲವನ್ನೂ ತೆಗೆದು ಎಸೆಯುತ್ತಿದ್ದಾರೆ. ನಾವು ಮತ ಹಾಕುವುದಿಲ್ಲ. ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೋರ್ಟ್‌ ಆದೇಶ ಎಂದು ಹೇಳುತ್ತಿದ್ದಾರೆ. ನಮ್ಮ ಸಮಸ್ಯೆ ಕೇಳುವವರು ಯಾರು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

 

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...