Homeಮುಖಪುಟ29ನೇ ದಿನಕ್ಕೆ ಕಾಲಿಟ್ಟ ಯುದ್ಧ; ಇಸ್ರೇಲ್‌ನಿಂದ ಗಾಝಾದಲ್ಲಿ 9,770 ನಾಗರಿಕರ ಹತ್ಯೆ; ಮೃತರಲ್ಲಿ ಹೆಚ್ಚಿನವರು ಮಕ್ಕಳು

29ನೇ ದಿನಕ್ಕೆ ಕಾಲಿಟ್ಟ ಯುದ್ಧ; ಇಸ್ರೇಲ್‌ನಿಂದ ಗಾಝಾದಲ್ಲಿ 9,770 ನಾಗರಿಕರ ಹತ್ಯೆ; ಮೃತರಲ್ಲಿ ಹೆಚ್ಚಿನವರು ಮಕ್ಕಳು

- Advertisement -
- Advertisement -

ಇಸ್ರೇಲ್-ಹಮಾಸ್ ಯುದ್ಧವು  29ನೇ ದಿನಕ್ಕೆ ಕಾಲಿಟ್ಟಿದೆ. ಗಾಝಾ ಪಟ್ಟಿಯಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 9,770 ಕ್ಕೆ ಏರಿಕೆಯಾಗಿದೆ. ಬಲಿಯಾದವರಲ್ಲಿ 4,008 ಮಕ್ಕಳು ಮತ್ತು 2,550 ಮಹಿಳೆಯರು ಸೇರಿದ್ದಾರೆ ಎಂದು  ಪ್ಯಾಲೆಸ್ತೀನ್‌ ಆರೋಗ್ಯ ಸಚಿವಾಲಯ ಇತ್ತೀಚಿನ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿ ತಿಳಿಸಿದೆ.

ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಕನಿಷ್ಠ 243 ಪ್ಯಾಲೆಸ್ತೀನಿಯನ್ನರು ಕೊಲ್ಲಲ್ಪಟ್ಟರು. 243 ಜನರಲ್ಲಿ 65 ಜನರು ಅಲ್ ಬುರೇಜ್ ಮತ್ತು ಅಲ್ ಮಘಾಝಿಯ ಸೇರಿ ಮೂರು ನಿರಾಶ್ರಿತರ ಶಿಬಿರಗಳಲ್ಲಿನ ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಅ.7 ರಂದು ಯುದ್ಧವು ಆರಂಭಗೊಂಡ ಬಳಿಕ ಹಮಾಸ್ ನಿಯಂತ್ರಿತ ಗಾಝಾಪಟ್ಟಿಯಲ್ಲಿ ಒಟ್ಟು 24,173 ಜನರು ಗಾಯಗೊಂಡಿದ್ದಾರೆ. ಅಚ್ಚರಿ ಎಂದರೆ 1,270 ಮಕ್ಕಳು ಸೇರಿ 2,260 ಮಂದಿ ಕಾಣೆಯಾಗಿದ್ದಾರೆ. ಇವರ ಸುಳಿವು ಈವರೆಗೆ ಲಭ್ಯವಾಗಿಲ್ಲ.

ಯುಎನ್ ಆಫೀಸ್ ಫಾರ್ ಕೋಆರ್ಡಿನೇಟೆಡ್ ಹ್ಯುಮಾನಿಟೇರಿಯನ್ ಅಫೇರ್ಸ್ (OCHA) ತನ್ನ ವರದಿಯಲ್ಲಿ ಗಾಝಾದಲ್ಲಿ ಸುಮಾರು 1.5 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿಸಿದೆ. ಸುಮಾರು 7,17,000 ಜನರು 149 UN ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. 1,22,000 ಮಂದಿ ಆಸ್ಪತ್ರೆಗಳಲ್ಲಿ, ಚರ್ಚ್‌ಗಳು ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿದ್ದಾರೆ. 1,10,000 ಜನರು  89 ಶಾಲೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಇದಲ್ಲದೆ ದಕ್ಷಿಣ ಗಾಝಾದಲ್ಲಿನ 92 UNRWA ಶಿಬಿರಗಳಲ್ಲಿ 5,30,000ಕ್ಕಿಂತ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಇಸ್ರೇಲ್ ವಿದ್ಯುತ್ ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸಿದ ನಂತರ ಅ. 11 ರಿಂದ ಗಾಝಾ ಸಂಪೂರ್ಣ ವಿದ್ಯುತ್ ಇಲ್ಲದೆ ಕತ್ತಲಿನಲ್ಲಿದೆ ಎಂದು ಯುಎನ್ ಕಚೇರಿ ಹೇಳಿದೆ.

ಗಾಝಾ ನಗರದ ಅಲ್-ಶಿಫಾ ಆಸ್ಪತ್ರೆ ಮತ್ತು ಉತ್ತರ ಗಾಝಾದ ಇಂಡೋನೇಷಿಯನ್ ಆಸ್ಪತ್ರೆಗಳಲ್ಲಿನ ಮುಖ್ಯ ವಿದ್ಯುತ್ ಜನರೇಟರ್‌ಗಳು ಇಂಧನ ಕೊರತೆಯಿಂದಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ ಎಂದು ವರದಿಯಾಗಿದೆ. ಈ ಎರಡೂ ಆಸ್ಪತ್ರೆಗಳು ಸಣ್ಣ ಜನರೇಟರ್‌ಗಳ ಬಳಕೆ ಮಾಡುತ್ತಿದೆ. ಇದು ಅತ್ಯಗತ್ಯ ಕೆಲಸಕ್ಕೆ  ದಿನಕ್ಕೆ ಕೆಲವೇ ಗಂಟೆಗಳ ವಿದ್ಯುತ್‌ನ್ನು ಒದಗಿಸುತ್ತದೆ.

ಯುದ್ಧ ಪ್ರಾರಂಭವಾದಾಗಿನಿಂದ ಗಾಝಾದ 35 ಆಸ್ಪತ್ರೆಗಳಲ್ಲಿ 14 ಆಸ್ಪತ್ರೆಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ ಮತ್ತು ಗಾಜಾದಾದ್ಯಂತ 51  ಪ್ರಾಥಮಿಕ ಆರೈಕೆ ಕೇಂದ್ರಗಳು ಇಂಧನದ ಕೊರತೆಯಿಂದಾಗಿ ಮುಚ್ಚಲ್ಪಟ್ಟಿವೆ.

ಇಸ್ರೇಲ್‌ ಅಧಿಕಾರಿಗಳ ಪ್ರಕಾರ, ಇಸ್ರೇಲ್‌ನಲ್ಲಿ ಈವರೆಗೆ 1400ಜನರು ಮೃತಪಟ್ಟಿದ್ದಾರೆ. ಮತ್ತು ವಿದೇಶಿ ಪ್ರಜೆಗಳು ಸೇರಿದಂತೆ 242 ಜನರು ಗಾಝಾದಲ್ಲಿ ಬಂಧಿತರಾಗಿದ್ದಾರೆ. ಇಲ್ಲಿಯವರೆಗೆ ನಾಲ್ಕು ನಾಗರಿಕ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ ಮತ್ತು ಒಬ್ಬ ಮಹಿಳಾ ಸೈನಿಕರನ್ನು ಇಸ್ರೇಲ್‌ ಪಡೆಗಳು ರಕ್ಷಿಸಿವೆ. ಒತ್ತೆಯಾಳುಗಳಲ್ಲಿ 57 ಮಂದಿ ಇಸ್ರೇಲ್‌ ವೈಮಾನಿಕ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ. ಭಾನುವಾರ ಗಾಝಾದಲ್ಲಿ ಒಬ್ಬ ಇಸ್ರೇಲ್‌ ಸೈನಿಕನನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಕೊಲ್ಲಲ್ಪಟ್ಟ ಒಟ್ಟು ಸೈನಿಕರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಇದನ್ನು ಓದಿ: ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ಆರೋಪಿಗಿತ್ತು ಗೌರಿ ಲಂಕೇಶ್ ಹತ್ಯೆ ಆರೋಪಿ ಜೊತೆ ನಂಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...