ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ವೈಷ್ಣವ ದೇವಾಲಯ (ಚೆನ್ನಕೇಶವ ದೇವಾಲಯ) ಕೆಡವಿದಾಗ ಜೈನ ವಿಗ್ರಹ ಪತ್ತೆಯಾಗಿತ್ತು ಎಂಬುದು ಚರ್ಚೆಯ ಮುನ್ನೆಲೆಗೆ ಬಂದಿದೆ.
ಟಿಪ್ಪು ಸುಲ್ತಾನ್ ಆಳ್ವಿಕೆಯ ಅವಧಿಯಲ್ಲಿ ದೇವಾಲಯವನ್ನು ಕೆಡವಿ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಕಟ್ಟಲಾಗಿದೆ ಎಂಬ ಚರ್ಚೆ ನಡೆಯುತ್ತಿದ್ದು, ಜೈನ ಹಾಗೂ ಬೌದ್ಧ ಧಾರ್ಮಿಕ ಕೇಂದ್ರಗಳ ಮೇಲೆ ವೈಷ್ಣವ ಹಾಗೂ ಶೈವ ದೇವಾಲಯಗಳನ್ನು ನಿರ್ಮಿಸಿರುವ ವಿಷಯಗಳೂ ಚರ್ಚೆಯಾಗುತ್ತಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
‘ಟಿಪ್ಪು ಸುಲ್ತಾನ್’ ಹಾಗೂ ‘ಮೈಸೂರು ಇತಿಹಾಸ’ದ ಕುರಿತು ಆಳವಾಗಿ ಅಧ್ಯಯನ ಮಾಡಿದವರಾದ ಪ್ರೊ.ಪಿ.ವಿ.ನಂಜರಾಜ ಅರಸು ರವರು, ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, ಜಾಮೀಯ ಮಸೀದಿ ಇತಿಹಾಸದ ಜೊತೆಗೆ ಹದಿನಾರು ಗ್ರಾಮದ ಚೆನ್ನಕೇಶವ ದೇವಾಲಯದ ಕುತಿತೂ ವಿವರಿಸಿದ್ದಾರೆ.
“ಶ್ರೀರಂಗಪಟ್ಟಣದಲ್ಲಿ ದೇವಸ್ಥಾನ ಇದ್ದದ್ದು ನಿಜ. ಒಂದು ರಾಜ್ಯದ ರಾಜಧಾನಿ ಅಂದಾಗ ಶತ್ರುಗಳ ದಾಳಿಯನ್ನು ಗಮನಿಸುತ್ತಿರಬೇಕಾಗುತ್ತದೆ. ಅದಕ್ಕಾಗಿ ಕಾವಲು ಗೋಪುರಗಳು ಬೇಕಾಗಿರುತ್ತವೆ. ಬ್ರಿಟಿಷರ ನಡುವೆ ಟಿಪ್ಪು ನಡೆಸಿದ ನಾಲ್ಕು ಆಂಗ್ಲೋ ಮೈಸೂರು ಯುದ್ಧದಲ್ಲೂ ಬ್ರಿಟಿಷರು ದಾಳಿ ಮಾಡಿದ್ದು ಮಳವಳ್ಳಿ ಕಡೆಯಿಂದ. ಮದ್ದೂರು, ಮಂಡ್ಯ ಕಡೆಯಿಂದ ಬರಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ನದಿ ದಾಟುವುದು ಕಷ್ಟವಿತ್ತು. ಹೀಗಾಗಿ ಮಳವಳ್ಳಿ ಮಾರ್ಗವನ್ನು ಬ್ರಿಟಿಷರು ಆಯ್ದುಕೊಂಡರು. ಹೀಗಾಗಿ ಕಾವಲು ಗೋಪುರಗಳನ್ನು ನಿರ್ಮಿಸಲಾಯಿತು. ಈ ಮಸೀದಿಯಲ್ಲಿನ ಕಾವಲು ಗೋಪುರದ ಒಳಗೆ 200 ಮೆಟ್ಟಿಲುಗಳಿವೆ. ಈಗ ಬೀಗ ಹಾಕಿದ್ದಾರೆ. ನೀವು ಬೀಗ ತೆಗೆಸಿ ಹೋಗಿ ನೋಡಿ. ಸುಮಾರು ನಲವತ್ತು ಮೈಲಿ ದೂರದ ಮಳವಳ್ಳಿವರೆಗೂ ನೋಡಬಹುದು. ಮತ್ತೆ ಈ ಕಡೆ ತಿರುಗಿ ನೋಡಿದರೆ ಮದ್ದೂರುವರೆಗೂ ನೋಡಬಹುದು. ಇದಕ್ಕಾಗಿ ದೇವಾಲಯವನ್ನು ಮಸೀದಿಯಾಗಿ ರೂಪಾಂತರಿಸುತ್ತಾನೆ. ಅಲ್ಲಿನ ಆಂಜನೇಯ ದೇವರನ್ನು ಕೋಟೆಗೆ ಸ್ಥಳಾಂತರಿಸುತ್ತಾನೆ” ಎಂದು ವಿವರಿಸಿದ ಅವರು, “ಹದಿನಾರು ಗ್ರಾಮದಲ್ಲಿ ವೈಷ್ಣವ ದೇವಾಲಯದ ಗೋಡೆಯನ್ನು ಒಡೆದಾಗ ಜೈನ ತೀರ್ಥಂಕರರ ವಿಗ್ರಹ ಪತ್ತೆಯಾಗಿದೆ. ಇಲ್ಲಿನ ಚೆನ್ನಕೇಶವ ದೇವಾಲಯ ಕೆಡವಿ ಬಸದಿಯನ್ನು ಮುತಾಲಿಕ್ ನಿರ್ಮಿಸುತ್ತಾರೆಯೇ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿರಿ: ಟಿಪ್ಪು ಮತ್ತು ಮೈಸೂರು ಚರಿತ್ರೆ ಕುರಿತ ಎರಡು ಅಮೂಲ್ಯ ಬರಹಗಳು
ಇತಿಹಾಸವನ್ನು ಕೆದಕುತ್ತಾ ಹೋದರೆ ದೇವಾಲಯಗಳ ಅಡಿಯಲ್ಲಿ ಜೈನ ಹಾಗೂ ಬೌದ್ಧ ಧರ್ಮದ ಕುರುಹುಗಳು ಸಿಗುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದಕ್ಕೆ ಪೂರಕವಾಗಿ ಹದಿನಾರು ಗ್ರಾಮದ ಇತಿಹಾಸವನ್ನು ಪ್ರೊ.ನಂಜರಾಜ ಅರಸು ಉಲ್ಲೇಖಿಸುತ್ತಾರೆ.
ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನ್‌ರನ್ನು ಜಿಹಾದಿ, ಅತ್ಯಾಚಾರಿ ಎಂದು ಕರೆದಿಲ್ಲ
“ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹದಿನಾರು ಗ್ರಾಮದ ಇತಿಹಾಸವನ್ನು ಬರೆಯಲು ಹೊರಟಾಗ ಹಲವಾರು ಸಂಗತಿಗಳು ತೆರೆದುಕೊಂಡವು. ಯದುವಂಶರು ಹುಟ್ಟಿದ್ದು ಇದೇ ಗ್ರಾಮದಲ್ಲಿ ಎನ್ನುತ್ತಾರೆ. ಈ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ಹದಿನಾರು ಗ್ರಾಮದ ನಿವಾಸಿ ಡಾ.ಎಚ್.ಸಿ.ಮಹದೇವಪ್ಪ ಅವರು ತಮ್ಮ ಅಧಿಕಾರವಧಿಯಲ್ಲಿ ಹದಿನಾರು ಗ್ರಾಮದ ಅಭಿವೃದ್ಧಿಗೆ, ದೇವಾಲಯಗಳ ಜೀರ್ಣೋದ್ಧಾರಕ್ಕೆ ಕ್ರಮ ವಹಿಸಿದರು. ಆಗ ಜೈನ ತೀರ್ಥಂಕರರ ವಿಗ್ರಹ ಪತ್ತೆಯಾಗಿತ್ತು” ಎಂದು ಹೇಳುತ್ತಾರೆ ನಂಜರಾಜ ಅರಸು.
“ಹದಿನಾರು ಗ್ರಾಮದಲ್ಲಿ ಚೆನ್ನಕೇಶವ ದೇವಾಲಯವಿದೆ. ಅದು ವೈಷ್ಣವ ದೇವರು. ವಿಜಯನಗರ ಕಾಲದ ವಾಸ್ತುಶಿಲ್ಪ ಶೈಲಿಯಲ್ಲಿ ದೇವಾಲಯವನ್ನು ಕಾಣಬಹುದು. ದೇವಾಲಯದ ಗೋಡೆಗಳು ಶಿಥಿಲವಾಗಿದ್ದರಿಂದ ಹೊಸದಾಗಿಯೇ ಕಟ್ಟಲು ಅಂದಿನ ಸಚಿವ ಮಹದೇವಪ್ಪ ಸೂಚಿಸಿದರು. ಗರ್ಭಗುಡಿಯಲ್ಲಿನ ದೇವರನ್ನು ಗೋಣಿಚೀಲ, ಟಾರ್ಪಲ್ ಇತ್ಯಾದಿಗಳಿಂದ ಮುಚ್ಚಿ ಸುರಕ್ಷಿತವಾಗಿಟ್ಟು ಗೋಡೆಗಳನ್ನು ಒಡೆಯಲಾಯಿತು. ಹೊಸದಾಗಿ ಗೋಡೆ ನಿರ್ಮಿಸಲು ಒಂದು ಬದಿಯ ಗೋಡೆಯ ಬಳಿ ಆರು ಅಡಿ ಅಗೆದಾಗ ತೀರ್ಥಂಕರರ ಅರ್ಧಭಾಗ (ಸೊಂಟದ ಮೇಲಿನ ಭಾಗ) ಸಿಕ್ಕಿತು. ಇನ್ನೊಂದು ಗೋಡೆ ಒಡೆದಾಗ ಸೊಂಟದಿಂದ ಕೆಳಭಾಗ ಸಿಕ್ಕಿತು. ಅಂದರೆ ಇಲ್ಲಿ ಮೊದಲು ಜೈನರ ಬಸದಿ ಇತ್ತು. ಅದನ್ನು ವೈಷ್ಣವರು ಒಡೆದುಹಾಕಿದ್ದಾರೆ. ತೀರ್ಥಂಕರರ ವಿಗ್ರಹವನ್ನು ಅಲ್ಲಿಯೇ ಮುಚ್ಚಿಹಾಕಿ ವಿಷ್ಣು ದೇವಾಲಯ ಕಟ್ಟಿದ್ದಾರೆ ಎಂದಾಯಿತಲ್ಲ. ಮುತಾಲಿಕ್ ಹಾಗೂ ಕೆಲವು ಸ್ವಾಮೀಜಿಗಳು ಚೆನ್ನಕೇಶವನ ವಿಗ್ರಹ ತೆರವು ಮಾಡಿ, ಪಾರ್ಶ್ವನಾಥರ ವಿಗ್ರಹವನ್ನು ಪ್ರತಿಷ್ಠಾಪಿಸಬೇಕಲ್ಲವೇ?” ಎಂದು ಪ್ರಶ್ನಿಸಿದರು.
“ನನಗೆ ಯಾವ ದೇವರ ಬಗ್ಗೆಯೂ ಆಸಕ್ತಿ ಇಲ್ಲ. ಆದರೆ ಮಸೀದಿ ಒಡೆದು ದೇವಸ್ಥಾನ ಮಾಡುತ್ತೇವೆ ಎನ್ನುತ್ತಾರಲ್ಲ. ಹದಿನಾರು ಗ್ರಾಮದಲ್ಲಿ ಯಾವುದನ್ನು ಒಡೆಯುತ್ತಾರೆ? ಮೈಸೂರಿನಿಂದ ಪಶ್ಚಿಮವಾಹಿನಿಗೆ ಹೊರಟರೆ ದಾರಿಯಲ್ಲಿ ಕಳಸ್ತವಾಡಿ ಎಂಬ ಗ್ರಾಮ ಸಿಗುತ್ತದೆ. ಮುತಾಲಿಕ್ ಉಲ್ಲೇಖಿಸುವ ಬ್ರಿಟಿಷರೇ ಬರೆದ ಪ್ರಕಾರ, 1484ರ ಅವಧಿಯಲ್ಲಿ ತಿಮ್ಮಣ್ಣನಾಯಕನಿಗೆ ವಿಜಯನಗರದ ಅರಸರು ಅನುಮತಿ ನೀಡಿ ಕಳಸ್ತವಾಡಿಯಲ್ಲಿದ್ದ 100 ಜೈನಬಸದಿಗಳನ್ನು ಒಡೆದುಹಾಕುತ್ತಾರೆ. ನಂತರ ಇಲ್ಲಿನ ಜೈನ ಬಸದಿಗಳಿಂದ ಕಲ್ಲು, ಮರದ ವಸ್ತುಗಳನ್ನು ತೆಗೆದುಕೊಂಡು ಹೋಗಿ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನವನ್ನು ವಿಸ್ತಾರಗೊಳಿಸಲಾಗುತ್ತದೆ. ಮುತಾಲಿಕ್ ಅವರೇ ಇದನ್ನು ನಿಮ್ಮ ಬ್ರಿಟಿಷರೇ ಬರೆದಿದ್ದಾರೆ. ನೂರೊಂದು ಜೈನ ಬಸದಿ ಇತ್ತೆಂದು ಇಲ್ಲಿನ ಜನರಿಗೇ ಗೊತ್ತೇ ಇಲ್ಲ. ಹೊಸದಾಗಿ ಪ್ರತಿಷ್ಠಾಪನೆ ಮಾಡುತ್ತೀರಾ?” ಎಂದು ಕೇಳಿದರು.
ಭಶೀರರ ಯೋಗ್ಯತೆಗಳ ಅನಾವರಣ ತಿಳಿತಿದೆ ,ಶಾಂತಿದೂತರ ಬಣ್ಣ ಬಯಲು ಆಗಲೇ ಬೇಕಿದೆ.