Homeಕರ್ನಾಟಕಶ್ರೀರಾಮಸೇನೆ ದುಷ್ಕರ್ಮಿಗಳಿಂದ ದಾಳಿಗೊಳಾಗಿದ್ದ ನಬೀಸಾಬ್‌ರಿಂದ ‘ಮೇ ಸಾಹಿತ್ಯ ಮೇಳ’ ಉದ್ಘಾಟನೆ!

ಶ್ರೀರಾಮಸೇನೆ ದುಷ್ಕರ್ಮಿಗಳಿಂದ ದಾಳಿಗೊಳಾಗಿದ್ದ ನಬೀಸಾಬ್‌ರಿಂದ ‘ಮೇ ಸಾಹಿತ್ಯ ಮೇಳ’ ಉದ್ಘಾಟನೆ!

- Advertisement -
- Advertisement -

ಧಾರವಾಡದಲ್ಲಿ ಬಲಪಂಥೀಯ ಶ್ರೀರಾಮಸೇನೆಯ ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದ. ಕಲ್ಲಂಗಡಿ ವ್ಯಾಪಾರಿ ನಬೀಸಾಬ್ ಕಿಲ್ಲೇದಾರ್‌‌ ಅವರು ‘8ನೇ ಮೇ ಸಾಹಿತ್ಯ ಮೇಳ’ದ ಉದ್ಘಾಟನೆ ನಡೆಸಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರಾದ ಬಸವರಾಜ್ ಸೂಳಿಬಾವಿ ಹೇಳಿದ್ದಾರೆ. ನಬೀಸಾಬ್ ಜೊತೆಗೆ ರೈತ, ಬೀಡಿ ಕಾರ್ಮಿಕ ಮಹಿಳೆ ಹಾಗೂ ಪೌರ ಕಾರ್ಮಿಕ ಮಹಿಳೆಯರು ಕೂಡಾ ಕಾರ್ಯಕ್ರಮದ ಉದ್ಘಾಟಿನೆಯಲ್ಲಿ ಇರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

8ನೇ ವರ್ಷದ ಮೇ ಸಾಹಿತ್ಯ ಮೇಳ ದಾವಣಗೆರೆಯ ತಾಜ್‌ ಪ್ಯಾಲೆಸ್‌ನಲ್ಲಿ ಈ ತಿಂಗಳ 27-28 ರಂದು ನಡೆಯಲಿದೆ. ಸಾಹಿತ್ಯ ಮೇಳವನ್ನು ಗದಗದ ‘ಲಡಾಯಿ ಪ್ರಕಾಶನ’, ಕವಲಕ್ಕಿಯ ‘ಕವಿ ಪ್ರಕಾಶನ’, ಧಾರವಾಡದ ‘ಚಿತ್ತಾರ ಕಲಾ ಬಳಗ’ ಹಾಗೂ ದಾವಣಗೆರೆಯ ‘ಮೇ ಸಾಹಿತ್ಯ ಮೇಳದ ಬಳಗ’ ಆಯೋಜಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಳೆದ ತಿಂಗಳು ಧಾರವಾಡದ ನುಗ್ಗಿಕೇರಿಯ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ಶ್ರೀರಾಮಸೇನೆಯ ಕಾರ್ಯಕರ್ತರು ಹಣ್ಣಿನ ಅಂಗಡಿಯನ್ನು ಧ್ವಂಸಗೊಳಿಸಿದ್ದರು. ನಬೀಸಾಬ್‌ ಅವರು ಬಂಡವಾಳ ಹಾಕಿ ತಂದಿದ್ದ ಕಲ್ಲಂಗಡಿ ಹಣ್ಣುಗಳನ್ನು ರಸ್ತೆಯಲ್ಲಿ ಹೊಡೆದುಹಾಕಿ ವಿಕೃತಿ ಮರೆಯಲಾಗಿತ್ತು. ಕಿಡಿಗೇಡಿಗಳ ಕೃತ್ಯದಿಂದ ನಬೀಸಾಬ್‌ ಸಾಕಷ್ಟು ನಷ್ಟ ಅನುಭವಿಸಿದ್ದರು.

ಇದನ್ನೂ ಓದಿ: ಒಡೆದ ಮನಸ್ಸುಗಳ, ಕಂಡ ಕನುಸಗಳ ಕಟ್ಟೆ ಕಟ್ಟುತ್ತೇವ..: ಈ ತಿಂಗಳ ಸೌಹಾರ್ದ-ಸಹಬಾಳ್ವೆ ಸಮಾವೇಶಗಳು

ದುಷ್ಕರ್ಮಿಗಳ ಈ ಕೃತ್ಯದ ವಿರುದ್ದ ದೇಶದಾದ್ಯಂತ ಆಕ್ರೋಶ ಕೂಡಾ ವ್ಯಕ್ತವಾಗಿ, ಜನತೆಯೂ ಸಂತ್ರಸ್ತ್ರ ನಬೀಸಾಬ್ ಅವರ ಪರವಾಗಿ ಮಾತನಾಡಿದ್ದರು ಮತ್ತು ಅವರಿಗೆ ನೆರವು ನೀಡಿದ್ದರು.

ಇದೀಗ, ಮೇ 27 ಮತ್ತು 28 ರಂದು ದಾವಣೆಗೆರೆಯಲ್ಲಿ ನಡೆಯುತ್ತಿರುವ 8ನೇ “ಮೇ ಸಾಹಿತ್ಯ ಮೇಳ” ಉದ್ಘಾಟನೆಗೆ ವ್ಯಾಪಾರಿ ನಬೀಸಾಬ್ ಕಿಲ್ಲೇದಾರ್ ಅವರನ್ನು ಆಹ್ವಾನಿಸಲಾಗಿದೆ. ಅವರ ಜೊತೆಗೆ, ರೈತ, ಬೀಡಿ ಕಾರ್ಮಿಕ ಮಹಿಳೆ ಹಾಗೂ ಪೌರ ಕಾರ್ಮಿಕ ಮಹಿಳೆಯರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

“ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸುವುದು ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಖಂಡಿಸುವುದು ನಮ್ಮ ಉದ್ದೇಶವಾಗಿದೆ” ಎಂದು ಸಾಹಿತ್ಯ ಮೇಳದ ಸಂಘಟಕರಲ್ಲಿ ಒಬ್ಬರಾದ ಬಸವರಾಜ ಸೂಳಿಭಾವಿ ಅವರು ತಿಳಿಸಿದ್ದಾರೆ ಎಂದು ಈದಿನ.ಕಾಂ ವರದಿ ಮಾಡಿದೆ.

“ಇತ್ತೀಚಿಗೆ ಧಾರವಾಡದಲ್ಲಿ ಮುಸ್ಲಿಂ ವ್ಯಾಪಾರಿಯ ಮೇಲೆ ನಡೆದ ಹಲ್ಲೆಯಂತಹ ಘಟನೆಗಳು ರಾಜ್ಯದಲ್ಲಿ ಕೋಮು ಸೌಹಾರ್ದವನ್ನು ಹಾಳು ಮಾಡಿವೆ. ಸೌಹಾರ್ದತೆಯ ಸಂದೇಶವನ್ನು ಹರಡಲು ನಾವು ವಿವಿಧ ಸಮುದಾಯಗಳು ಮತ್ತು ಸಮಾಜದ ಎಲ್ಲಾ ವರ್ಗದ ಜನರನ್ನು ಆಹ್ವಾನಿಸಿದ್ದೇವೆ. ಸಾಹಿತ್ಯ ಮೇಳದಲ್ಲಿ ಭಾಗಿಯಾಗುವವರು ದೀನದಲಿತ, ಅಲ್ಪಸಂಖ್ಯಾತ ಸಮುದಾಯಗಳನ್ನು ಪ್ರತಿನಿಧಿಸುತ್ತಾರೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಏಳು ಬಣ್ಣಗಳ ಬಾವುಟ ಬೀಸಿ ಬಹುತ್ವ ಸಂದೇಶದೊಂದಿಗೆ ಉಡುಪಿಯ ಸಾಮರಸ್ಯ ನಡಿಗೆ

ಕಾರ್ಯಕ್ರಮ ಅಯೋಜಕರಾದ ಹೆಗ್ಗೆರೆ ರಂಗಪ್ಪ ಮತ್ತು ಸನಾವುಲ್ಲಾ ನವಿಲೇಹಾಳ್ ಮಾತನಾಡಿ, “ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಸಮಾನ ಮನಸ್ಕರು, ಸಾಹಿತಿಗಳು, ಕಲಾವಿದರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಭಾಗಯಾಗಲಿದ್ದಾರೆ” ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ನಿವೃತ್ತ ಜಸ್ಟಿಸ್‌ ಕೆ.ಚಂದ್ರು, ಹೋರಾಟಗಾರ್ತಿ ಕವಿತಾ ಕೃಷ್ಣನ್‌, ಪತ್ರಕರ್ತ ಪಿ.ಸಾಯಿನಾಥ್‌ ಹಾಗೂ ಅಬ್ದುಲ್ ಸಲಾಂ ಪುತ್ತಿಗೆ ಅವರುಗಳು ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾಡಲಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿರುವ ನೂಪುರ್ ಶರ್ಮಾ ಇಡೀ ದೇಶದ ಎದುರು ಕ್ಷಮೆ ಕೇಳಬೇಕು: ಸುಪ್ರೀಂ

0
ಪ್ರವಾದಿ ಮೊಹಮ್ಮದ್‌ರವರನ್ನು ನಿಂದಿಸಿದ್ದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಇಡೀ ರಾಷ್ಟ್ರದ ಎದುರು ಕ್ಷಮೆ ಕೇಳಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ತನ್ನ ಮೇಲೆ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ಒಂದೇ ಎಫ್‌ಐಆರ್‌ಗೆ ವರ್ಗಾಹಿಸುವಂತೆ...