Homeಮುಖಪುಟಬಾಹ್ಯಾಕಾಶದ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದ ಜೇಮ್ಸ್‌ ವೆಬ್‌‌ ದೂರದರ್ಶಕ

ಬಾಹ್ಯಾಕಾಶದ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದ ಜೇಮ್ಸ್‌ ವೆಬ್‌‌ ದೂರದರ್ಶಕ

- Advertisement -
- Advertisement -

ನ್ಯಾಷನಲ್ ಏರೋನಾಟಿಕ್ಸ್ & ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಸಂಸ್ಥೆಯ ಜೇಮ್ಸ್‌ ವೆಬ್ ಬಾಹ್ಯಾಕಾಶ ದೂರದರ್ಶಕವು ಕೋಟ್ಯಂತರ ಮೈಲುಗಳ ದೂರದಲ್ಲಿರುವ, ನಕ್ಷತ್ರಗಳು, ನೀಹಾರಿಕೆಗಳು, ವಿವಿಧ ಆಕಾಶಕಾಯಗಳ ಚಿತ್ರಗಳನ್ನು ಸೆರೆ ಹಿಡಿದಿದೆ.

ಅವುಗಳನ್ನು ನಾಸಾ ಬಿಡುಗಡೆ ಮಾಡಿದ್ದು, ಖಗೋಳವಿಜ್ಞಾನ ಕ್ಷೇತ್ರದ ಅದ್ವಿತೀಯ ಸಂಶೋಧನೆ ಎಂದೇ ಬಣ್ಣಿಸಲಾಗುತ್ತಿದೆ.

9 ಬಿಲಿಯನ್ ಡಾಲರ್‌‌ ಬೆಲೆಯ ದೂರದರ್ಶಕವನ್ನು ಕಳೆದ ವರ್ಷ ಡಿಸೆಂಬರ್ 25ರಂದು ಉಡಾಯಿಸಲಾಯಿತು. ಇದು ಒಂದು ತಿಂಗಳ ನಂತರ ಭೂಮಿಯಿಂದ ಸುಮಾರು 1 ಮಿಲಿಯನ್ ಮೈಲುಗಳಷ್ಟು ದೂರದ ಸೌರ ಕಕ್ಷೆಯನ್ನು ತಲುಪುವಲ್ಲಿ ಯಶಸ್ವಿಯಾಯಿತು.

ಆಗ ತಾನೆ ಸೃಷ್ಟಿಯಾಗಿರುವ ನಕ್ಷತ್ರಗಳಲ್ಲಿ ಪ್ರಪಾತಗಳಂತೆ ಕಾಣುವ ರಚನೆಗಳ, ಲಯಬದ್ಧವಾಗಿ ‘ನೃತ್ಯ’ದಲ್ಲಿ ತೊಡಗಿರುವಂತೆ ಕಂಡುಬರುವ ತಾರೆಗಳ ಸಮೂಹದ ಚಿತ್ರಗಳನ್ನು ನಾಸಾ ಬಿಡುಗಡೆ ಮಾಡಿದೆ.

‘ಬಾಹ್ಯಾಕಾಶ ದೂರದರ್ಶಕ ಕಳಿಸಿರುವ ಪ್ರತಿಯೊಂದು ಚಿತ್ರವೂ ಹೊಸ ಆವಿಷ್ಕಾರವೇ ಆಗಿದೆ. ಪ್ರತಿಯೊಂದು ಚಿತ್ರವು ಮಾನವರು ಕಾಣದ ಬ್ರಹ್ಮಾಂಡ ಕುರಿತ ಹೊಸ ನೋಟ ನೀಡುತ್ತದೆ’ ಎಂದು ನಾಸಾ ಆಡಳಿತಾಧಿಕಾರಿ ಬಿಲ್‌ ನೆಲ್ಸನ್‌ ಹೇಳಿದ್ದಾರೆ.

“ಓ ಗಾಡ್‌ನೆಸ್‌, ಇದು ಯಶಸ್ವಿಯಾಗಿದೆ. ನಾನು ಭಾವುಕಳಾಗಿದ್ದೇನೆ” ಎಂದು ನಾಸಾದ ಆಪರೇಷನ್ ಪ್ರಾಜೆಕ್ಟ್ ವಿಜ್ಞಾನಿ ಜೇನ್ ರಿಗ್ಬಿ ಹೇಳಿದ್ದಾರೆ.

‘ಚಿತ್ರಗಳು ಸುಂದರವಾಗಿವೆ. ವಿಜ್ಞಾನ ತನ್ನ ಒಡಲಲ್ಲಿ ಅಡಗಿಸಿಟ್ಟುಕೊಂಡಿರುವ ಅಚ್ಚರಿಗಳನ್ನು ಅವು ತೋರುತ್ತವೆ. ನಾವು ಇನ್ನೂ ಗುರುತಿಸಲಾಗದ ಅನೇಕ ಸಂಗತಿಗಳನ್ನು ಈ ಚಿತ್ರಗಳು ಒಳಗೊಂಡಿವೆ’ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಬಾಹ್ಯಾಕಾಶವಿಜ್ಞಾನಿ ಜಾನ್‌ ಮಾಥರ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಬಿಡೆನ್ ಸೋಮವಾರ ವೆಬ್ ದೂರದರ್ಶಕದಿಂದ ಸೆರೆಹಿಡಿದ ಚಿತ್ರವನ್ನು ಪರಿಚಯಿಸಿದ್ದಾರೆ. ನಾಸಾ ಅಧಿಕಾರಿಗಳು ಮತ್ತು ಖಗೋಳಶಾಸ್ತ್ರಜ್ಞರು ಬ್ರಹ್ಮಾಂಡವನ್ನು ಬಹಳ ಹತ್ತಿರದಿಂದ ತೆರೆದಿಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ ಕೂಡ ಯುಎಸ್ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿದ ಚಿತ್ರಗಳನ್ನು ತನ್ನ ಪರದೆಯ ಮೇಲೆ ಪ್ರಸಾರ ಮಾಡಿತು. ಸ್ಕ್ವೇರ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಚಿತ್ರಗಳನ್ನು ಹಂಚಿಕೊಂಡಿದೆ.

ಗೆಲಕ್ಸಿಗಳ ವಿಕಾಸ, ನಕ್ಷತ್ರಗಳ ಜೀವನ ಚಕ್ರ, ದೂರದ ಎಕ್ಸೋಪ್ಲಾನೆಟ್‌ಗಳ ವಾತಾವರಣ ಮತ್ತು ನಮ್ಮ ಸೌರವ್ಯೂಹದ ಚಂದ್ರಗಳ ಅನ್ವೇಷಣೆ ಸೇರಿದಂತೆ ಮೊದಲಾದ ಸಂಶೋಧನೆಗಳಿಗೆ ಈ ಚಿತ್ರಗಳು ಸಹಕಾರಿಯಾಗಲಿವೆ ಎನ್ನಲಾಗುತ್ತಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...