Homeಮುಖಪುಟಜಾರ್ಖಂಡ್‌‌‌‌ ಸಿಎಂ ಹೇಮಂತ್‌‌ ಸೋರೆನ್‌‌ ಶಾಸಕ ಸ್ಥಾನದಿಂದ ಅನರ್ಹ ಸಾಧ್ಯತೆ; ಉರುಳಲಿದೆಯೆ ಮತ್ತೊಂದು ಸರ್ಕಾರ?

ಜಾರ್ಖಂಡ್‌‌‌‌ ಸಿಎಂ ಹೇಮಂತ್‌‌ ಸೋರೆನ್‌‌ ಶಾಸಕ ಸ್ಥಾನದಿಂದ ಅನರ್ಹ ಸಾಧ್ಯತೆ; ಉರುಳಲಿದೆಯೆ ಮತ್ತೊಂದು ಸರ್ಕಾರ?

- Advertisement -
- Advertisement -

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಚುನಾವಣಾ ಆಯೋಗವು ತಪ್ಪಿತಸ್ಥರೆಂದು ಪರಿಗಣಿಸಿದ್ದು, ಕೇವಲ ‘ಅನರ್ಹತೆ’ಗೆ ಶಿಫಾರಸು ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಈ ಹಿನ್ನಲೆಯಲ್ಲಿ ರಾಜ್ಯಪಾಲರು ಅನರ್ಹತೆಯ ಆದೇಶವನ್ನು ಗೆಜೆಟ್‌ನಲ್ಲಿ ಸೂಚಿಸಿದರೆ, ಸೊರೆನ್ ರಾಜೀನಾಮೆ ನೀಡಬೇಕಾಗುತ್ತದೆ. ಹೇಮಂತ್‌ ಸೊರೆನ್ ಅವರ ಜೊತೆ ಅವರ ಮಂತ್ರಿಮಂಡಲವೂ ರಾಜೀನಾಮೆ ನೀಡಲಿದೆ. ಆದರೆ ಆರು ತಿಂಗಳೊಳಗೆ ಚುನಾವಣಾ ಆಯೋಗ ನಡೆಸುವ ಉಪಚುನಾವಣೆಯಲ್ಲಿ ಅವರು ಮತ್ತೆ ಆಯ್ಕೆಯಾಗಬಹುದಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಜಾರ್ಖಂಡ್‌ನ ಹಿರಿಯ ನಾಯಕರಾದ ಸರಯು ರಾಯ್ ಅವರು ಮುಖ್ಯಮಂತ್ರಿ ಸೋರೆನ್‌ ಅವರು ಶಾಸಕ ಸ್ಥಾನಕ್ಕೆ ಯೋಗ್ಯರಲ್ಲ ಎಂದು ಚುನಾವಣಾ ಆಯೋಗವು ಘೋಷಿಸಿದೆ ಎಂದು “ಅತ್ಯಂತ ವಿಶ್ವಾಸಾರ್ಹ ಮೂಲ”ಗಳನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.

“ವಿಶ್ವಾಸಾರ್ಹ ಮೂಲಗಳ ಪ್ರಕಾರ, ಚುನಾವಣಾ ಆಯೋಗವು ಹೇಮಂತ್ ಸೊರೆನ್‌ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದೆ. ಅನರ್ಹತೆಯ ಅಧಿಸೂಚನೆಯು ರಾಜಭವನದಿಂದ ಹೊರಬಂದ ತಕ್ಷಣ ಅವರು ರಾಜೀನಾಮೆ ನೀಡಬೇಕು ಅಥವಾ ಗೌರವಾನ್ವಿತ ನ್ಯಾಯಾಲಯದಿಂದ ಈ ಅಧಿಸೂಚನೆಗೆ ತಡೆಯಾಜ್ಞೆ ಪಡೆಯಬೇಕು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಮಾಬ್‌ ಲಿಂಚಿಂಗ್‌ ವಿರೋಧಿ ಮಸೂದೆ’ಗೆ ಸಹಿ ಹಾಕಲು ನಿರಾಕರಿಸಿದ ಜಾರ್ಖಂಡ್‌ ರಾಜ್ಯಪಾಲ

ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರು ಸ್ವತಃ ತಾವೇ ಸರ್ಕಾರಿ ಗುತ್ತಿಗೆ ಪಡೆದಿದ್ದರಿಂದ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ ಎಂದು ಚುನಾವಣಾ ಆಯೋಜ ಅಭಿಪ್ರಾಯಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಅವರು ಗಣಿಗಾರಿಕೆ ಗುತ್ತಿಗೆಯನ್ನು ತನಗೇ ತಾನೆ ಪಡೆದುಕೊಂಡಿದ್ದಾರ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.

ರಾಜ್ಯಪಾಲ ರಮೇಶ್ ಬೈಸ್ ಅವರು ಹೇಮಂತ್‌ ಸೋರೆನ್ ಅವರ ಅನರ್ಹತೆಯ ಬಗ್ಗೆ ಚುನಾವಣಾ ಆಯೋಗದ ಅಭಿಪ್ರಾಯವನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಅದನ್ನು ತಿಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಮುಂದಕ್ಕೆ ಹೇಮಂತ್‌ ಸೊರೆನ್ ಅವರು ಚುನಾವಣೆಯಲ್ಲಿ ಸ್ಪರ್ಧಿಸದೆ ಇರಲು ನಿರ್ಬಂಧಿಸಲಾಗಿಲ್ಲ ಎಂದು ಮೂಲ ಹೇಳಿದೆ. ಈ ನಡುವೆ ಮುಖ್ಯಮಂತ್ರಿ ಸೋರೆನ್ ಅವರು ತಮ್ಮ ಮುಂದಿನ ಕ್ರಮದ ಬಗ್ಗೆ ಸಂವಿಧಾನಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ರಾಜ್ಯಪಾಲರ ಆದೇಶದ ನಂತರ ಮುಖ್ಯಮಂತ್ರಿ ಸೊರೆನ್ ಅವರು ರಾಂಚಿಯ ತಮ್ಮ ನಿವಾಸದಲ್ಲಿ ಯುಪಿಎ ಸಭೆಯನ್ನು ಕರೆದಿದ್ದಾರೆ. “ಜಾರ್ಖಂಡ್‌ನಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತು ಊಹಾಪೋಹಗಳನ್ನು ಗಮನದಲ್ಲಿಟ್ಟುಕೊಂಡು ನಮಗೆ ಜಾರ್ಖಂಡ್ ಕಾಂಗ್ರೆಸ್ ಶಾಸಕರು ರಾಂಚಿಯಲ್ಲಿ ಲಭ್ಯವಾಗುವಂತೆ ಸೂಚನೆ ನೀಡಿದ್ದೇವೆ. ನಾಳೆ ಬೆಳಗ್ಗೆ 11 ಗಂಟೆಗೆ ಸಿಎಂ ನಿವಾಸದಲ್ಲಿ ಮತ್ತೊಂದು ಸಭೆಗೆ ನಮ್ಮನ್ನು (ಯುಪಿಎ ಶಾಸಕರು) ಕರೆಯಲಾಗಿದೆ” ಎಂದು ಜಾರ್ಖಂಡ್‌ನ ಕಾಂಗ್ರೆಸ್ ಶಾಸಕಿ ಪೂರ್ಣಿಮಾ ನೀರಜ್ ಸಿಂಗ್ ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ದೆಹಲಿ ಮಾದರಿಯಲ್ಲಿ ಜಾರ್ಖಂಡ್‌ನಲ್ಲಿಯೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬಲವರ್ಧನೆ: ಕೇಜ್ರಿವಾಲ್‌ ಭೇಟಿ ಬಳಿಕ ಹೇಮಂತ್ ಸೊರೆನ್ ಘೋಷಣೆ 

ಯುಪಿಎ ಮೈತ್ರಿಕೂಟದ ಭಾಗವಾಗಿ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಹೇಮಂತ್‌ ಸೋರೆನ್ ಅವರು 2024 ರವರೆಗೆ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಪಕ್ಷವೂ ವಿಶ್ವಾಸ ವ್ಯಕ್ತಪಡಿಸಿದೆ.

82 ಸದಸ್ಯರಿರುವ ಜಾರ್ಖಂಡ್‌ ಅಸೆಂಬ್ಲಿಯಲ್ಲಿ JMM (30) ಮತ್ತು ಕಾಂಗ್ರೆಸ್ (17) ಸೇರಿ ಒಟ್ಟು 47 ಸದಸ್ಯರನ್ನು ಹೊಂದಿವೆ. ವಿಧಾನಸೌಧದ ವೆಬ್‌ಸೈಟ್‌ನ ಪ್ರಕಾರ 25 ಸದಸ್ಯರಿರುವ ಬಿಜೆಪಿ ರಾಜ್ಯದ ಪ್ರಮುಖ ಪ್ರತಿಪಕ್ಷವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಬಾಂಡ್‌ ಹಗರಣ: ಸುಪ್ರೀಂ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಗೆ ಮನವಿ

0
ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪ್ರೇರಿತ ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಶಂಕಿತ ಹಗರಣದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು...