HomeಚಳವಳಿJNUನಲ್ಲಿ ಸೆಕ್ಯುರಿಟಿಯಾಗಿದ್ದುಕೊಂಡು ಅಲ್ಲಿಯೇ ಬಿಎ ರಷ್ಯನ್ ಪ್ರವೇಶ ಪರೀಕ್ಷೆಯನ್ನು ಪಾಸು ಮಾಡಿದ ಯುವಕನ ಸ್ಫೂರ್ತಿಯುತ ಯಶೋಗಾಥೆ.

JNUನಲ್ಲಿ ಸೆಕ್ಯುರಿಟಿಯಾಗಿದ್ದುಕೊಂಡು ಅಲ್ಲಿಯೇ ಬಿಎ ರಷ್ಯನ್ ಪ್ರವೇಶ ಪರೀಕ್ಷೆಯನ್ನು ಪಾಸು ಮಾಡಿದ ಯುವಕನ ಸ್ಫೂರ್ತಿಯುತ ಯಶೋಗಾಥೆ.

- Advertisement -
- Advertisement -

ನಾವು ಆತ್ಮಾರ್ಥವಾಗಿ ಏನಾನ್ನಾದರು ಸಾಧಿಸಬೇಕೆಂದು ಬಯಸಿದರೆ ಇಡೀ ಬ್ರಹ್ಮಾಂಡವೇ ಸಂಚುಹೂಡಿ ನಮ್ಮ ಜೊತೆ ನಿಲ್ಲುತ್ತದೆ’ ಎಂಬ ಮಾತಿದೆ. ಅಂತೆಯೇ ಛಲಬಿಡದೆ ಸಾಧಿಸುವ ಹಾದಿಯಲ್ಲಿ ಮುನ್ನೆಡೆಯುವವರಿಗೆ ಯಶಸ್ಸು ಸಿಕ್ಕೇ ಸಿಗುತ್ತದೆ. ಅಂತಹದ್ದೇ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಯುವಕ 34ರ ಹರೆಯದ ರಂಜಾಲ್ ಮೀನಾ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ (ಜೆಎನ್‌ಯು) ಭದ್ರತಾ ಸಿಬ್ಬಂದಿಯಾಗಿ 2014ರಲ್ಲಿ ಸೇರಿದ ರಂಜಾಲ್ ಮೀನಾ ಅವರಿಗೆ ಅದೇ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿ ದಾಖಲಾಗುತ್ತೇನೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಆದರೆ ಊಹೆಗೂ ಮೀರಿ ಸಾಧನೆ ಮಾಡಿರುವ ಇವರು ತಮ್ಮ ಕುಟುಂಬದಲ್ಲಿ ಕಲಿಯುತ್ತಿರುವ ಮೊದಲ ಪೀಳಿಗೆಯವರಾಗಿದ್ದಾರೆ. ರಾಜಸ್ಥಾನದ ಕರೌಲಿ ಎಂಬ ಗ್ರಾಮೀಣ ಪ್ರದೇಶದಿಂದ ಬಂದಿರುವ ರಂಜಾಲ್ ಜೆಎನ್‌ಯುವಿನ ಬಿಎ ರಷ್ಯನ್ ಪ್ರವೇಶ ಪರೀಕ್ಷೆಯನ್ನು ಭೇದಿಸಿ ಪಾಸುಮಾಡಿದ್ದಾರೆ.

ಮೀನಾ ದಿನಗೂಲಿ ಕೆಲಸಗಾರನ ಮಗನಾಗಿದ್ದು, ತನ್ನ ಹಳ್ಳಿ ಭಜೇರಾದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಶಾಲೆಯ ವಿದ್ಯಾಭ್ಯಾಸ ಮುಗಿದ ನಂತರ ಕಾಲೇಜು ವಿದ್ಯಾಭ್ಯಾಸಕ್ಕೆ ತಮ್ಮ ಹಳ್ಳಿಯಿಂದ 25 ರಿಂದ 30km ದೂರ ಹೋಗಬೇಕಾದ ಕಾರಣದಿಂದ ಹಾಗೂ ಕುಟುಂಬದ ಪರಿಸ್ಥಿತಿ ಕಷ್ಟದಲ್ಲಿದ್ದರಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಸಿ ತಂದೆಯ ಕೆಲಸದಲ್ಲಿ ಸಹಾಯ ಮಾಡಲು ಆರಂಭಿಸಿದ್ದರು.

ಆದರೆ ಕಲಿಯುವ ಆಸಕ್ತಿ ಕಳೆದುಕೊಳ್ಳದ ಅವರು ರಾಜಸ್ಥಾನ ವಿಶ್ವನಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ, ಇತಿಹಾಸ ಮತ್ತು ಹಿಂದಿ ವಿಷಯಗಳಲ್ಲಿ ಕರೆಸ್ಪಾಂಡಿಂಗ್ನಲ್ಲಿ ಬಿಎ ಪದವಿ ಪಡೆದರು. ನಂತರ ತನ್ನ ಹೆಂಡತಿ ಮತ್ತು ಮೂವರು ಹೆಣ್ಣು ಮಕ್ಕಳೊಂದಿಗೆ ದೆಹಲಿಗೆ ಬಂದು ಒಂದು ಚಿಕ್ಕ ಮನೆಯಲ್ಲಿ ವಾಸಿಸುತ್ತಿರುವ ರಂಜಾಲ್, ತನ್ನ ಕುಟುಂಬದ ಆರ್ಥಿಕ ನಿರ್ವಹಣೆಗಾಗಿ ಜೆಎನ್‌ಯುನಲ್ಲಿ ಸೆಕ್ಯೂರಿಟಿಯಾಗಿ ಕೆಸಲಕ್ಕೆ ಸೇರಿದರು. ಈ ಕಾರಣದಿಂದಾಗಿ ದಿನನಿತ್ಯ ಕಾಲೇಜಿಗೆ ಹೋಗಿ ಅಭ್ಯಾಸ ಮಾಡುವ ಅವಕಾಶ ಅವರಿಗೆ ಇರಲಿಲ್ಲ. ಆದರೆ ಜೆಎನ್‌ಯುವಿನ ಶೈಕ್ಷಣಿಕ ವಾತಾವರಣವನ್ನು ನೋಡಿದ ಮೇಲೆ ಅವರ ವಿದ್ಯಾಭ್ಯಾಸದ ಕನಸು ಮರುಕಳಿಸಿ, ಓದಿನ ಮೇಲಿನ ಆಸಕ್ತಿ ತೆರೆದುಕೊಂಡಿದೆ. ಓದಿನ ಮೇಲಿನ ಪ್ರೀತಿಯಿಂದ ಕೆಲಸದ ನಂತರ ಬಿಡುವಿನ ಸಮಯದಲ್ಲಿ ಪ್ರವೇಶ ಪರೀಕ್ಷೆ ತಯಾರಿ ನಡೆಸಲು ಆರಂಭಿಸಿದರು.

ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಮೀನಾ ಕುಟುಂಬದಲ್ಲಿ ಅವರೊಬ್ಬರೇ ದುಡಿಯುತ್ತಿದ್ದು, ತಿಂಗಳಿಗೆ 15,000 ಸಂಪಾದಿಸುತ್ತಿದ್ದಾರೆ. ಈ ಹಣದಿಂದ ಕುಟುಂಬ ನಿರ್ವಹಣೆಯೇ ಕಷ್ಟವಾಗಿದ್ದು, ದಿನಪತ್ರಿಕೆಗಳನ್ನು ಕೊಂಡುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ಇವರು ತಮ್ಮ ಮೊಬೈಲ್ ಫೋನ್ ಮೂಲಕವೇ ಪತ್ರಿಕೆಗಳ ಸುದ್ದಿಗಳನ್ನು ಓದುವುದು ಮತ್ತು ವಿದ್ಯಾರ್ಥಿಗಳಿಂದ ಪಿಡಿಎಫ್ ನೋಟ್ಸ್ ಗಳನ್ನು ಪಡೆದುಕೊಂಡು ಅಭ್ಯಾಸ ಮಾಡಿದ್ದಾರೆ.

ವಿದೇಶಿ ಭಾಷೆಗಳನ್ನು ಕಲಿಯುವವರು ವಿದೇಶಗಳಿಗೆ ಭೇಟಿಕೊಡುತ್ತಾರೆಂದು ಕೇಳಿದ್ದ ರಂಜಾಲ್ ಮೀನಾ ವಿದೇಶಿ ಭಾಷೆಯನ್ನು ಕಲಿಯಲು ಆಯ್ಕೆ ಮಾಡಿಕೊಂಡರು ಹಾಗೂ ನಾಗರೀಕ ಸೇವೆಗಳಿಗೆ ಸೇರಬೇಕೆಂಬ ಇಚ್ಛೆಯಿಂದ ಅದರಲ್ಲಿಯೂ ತಮ್ಮ ಅದೃಷ್ಡ ಪರೀಕ್ಷಿಸಲು ಬಯಸಿದ್ದರು. ಆದರೆ ಜೆಎನ್‌ಯು ವಿಶ್ವನಿದ್ಯಾನಿಲಯದಲ್ಲಿ ಉದ್ಯೋಗ ಮಾಡಿಕೊಂಡು ನಿಯಮಿತ ಶಿಕ್ಷಣವನ್ನು ದಿನನಿತ್ಯ ಪಡೆಯಲು ಸಾಧ್ಯವಿಲ್ಲ ಎಂಬ ನಿಯಮವಿದೆ. ಹಾಗಾಗಿ ಈಗ ರಾತ್ರಿ ವೇಳೆಯ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.

ಇವರ ಶ್ರಮ ಮತ್ತು ಸಾಧನೆಯನ್ನು ನೋಡಿದ ಭದ್ರತಾ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ‘ನಮಗೆ ಆತನ ಬಗ್ಗೆ ಹೆಮ್ಮೆ ಇದೆ. ಆದರೆ ರಾತ್ರಿ ವೇಳೆ ಕೆಲಸ ಮಾಡಿ ದಿನನಿತ್ಯ ವಿದ್ಯಾಭ್ಯಾಸ ಮಾಡಲು ಕಷ್ಟವಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಆತನಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಜೆಎನ್‌ಯು ಎಂದರೆ ಹಲವಾರು ವಿಶೇಷತೆಗಳಿಗೆ ಹೆಸರುವಾಸಿಯಾಗಿರುವ ವಿಶ್ವವಿದ್ಯಾನಿಲಯ. ಇಲ್ಲಿ ಯಾರೂ ಜಾತಿ ಮತ್ತು ಸಾಮಾಜಿಕ ಶ್ರೇಣಿ ವ್ಯವಸ್ಥೆಗೆ ಆಸ್ಪದ ನೀಡುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳು ಮತ್ತು ಪ್ರಧ್ಯಾಪಕರು ಪ್ರೋತ್ಸಾಹ ನೀಡಿದರು. ಇವರೆಲ್ಲರ ಪ್ರೋತ್ಸಾಹದಿಂದ ನಾನು ರಾತ್ರೋರಾತ್ರಿ ಪ್ರಸಿದ್ದನಾಗಿದ್ದೇನೆ. ಆದರೆ ಇತ್ತೀಚೆಗೆ ಜೆಎನ್‌ಯು ಬಗ್ಗೆ ತಪ್ಪು ಕಲ್ಪನೆಗಳು ಹೆಚ್ಚಾಗಿವೆ. 2016ರ ಫೆಬ್ರವರಿ ಘಟನೆಯ ನಂತರ ವಿವಿಯ ಬಗ್ಗೆ ಹಲವು ವಂದತಿಗಳು ಕೇಳಿ ಬರುತ್ತಿವೆ. ಆದರೆ ವಿದ್ಯಾರ್ಥಿಗಳು ಕೇವಲ ಪ್ರತಿಭಟನೆಗಷ್ಟೇ ಸೀಮಿತವಾಗಿಲ್ಲ. ಹಲವಾರು ವಿದ್ವಾಂಸರು ಈ ವಿವಿಯಿಂದ ಬಂದಿದ್ದಾರೆ. ನಾನೂ ಕೂಡ ಏನನ್ನಾದರು ಸಾಧಿಸುತ್ತೇನೆ ಎಂದು ಮೀನಾ ಅಭಿಪ್ರಾಯಪಟ್ಟಿದ್ದಾರೆ.

ಆಡಳಿತ ಮಂಡಳಿಯಿಂದ ಮೀನಾಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಇದು ಒಂದು ವಿಶಿಷ್ಟವಾದ ಪ್ರಕರಣವಾದ್ದರಿಂದ, ಏನು ಮಾಡಬಹುದೆಂದು ನಾವು ನೋಡಬೇಕಾಗಿದೆ” ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿ ಹೇಳಿದ್ದಾರೆ

ಕೃಪೆ: ಹಿಂದೂಸ್ತಾನ್ ಟೈಮ್ಸ್

ಅನುವಾದ: ಸೋಮಶೇಖರ್ ಚಲ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...