HomeಮುಖಪುಟJNU ವಿದ್ಯಾರ್ಥಿ ಶಾರ್ಜೀಲ್ ಇಮಾಮ್‌ಗೆ ಜಾಮೀನು; ಆದರೂ ಬಿಡುಗಡೆ ಭಾಗ್ಯವಿಲ್ಲ!

JNU ವಿದ್ಯಾರ್ಥಿ ಶಾರ್ಜೀಲ್ ಇಮಾಮ್‌ಗೆ ಜಾಮೀನು; ಆದರೂ ಬಿಡುಗಡೆ ಭಾಗ್ಯವಿಲ್ಲ!

- Advertisement -
- Advertisement -

ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ, ವಿದ್ಯಾರ್ಥಿ ಹೋರಾಟಗಾರ ಶಾರ್ಜೀಲ್ ಇಮಾಮ್‌ಗೆ ಶನಿವಾರದಂದು ಅಲಹಾಬಾದ್ ಹೈಕೋರ್ಟ್‌ ಜಾಮೀನು ನೀಡಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯ ಸಂದರ್ಭ, 2019 ರ ಜನವರಿಯಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ‘ದೇಶ ವಿರೋಧಿ ಭಾಷಣ’ ಮಾಡಿದ್ದಾರೆ ಎಂದು ಶಾರ್ಜೀಲ್ ಇಮಾಮ್ ಅವರನ್ನು ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅವರ ವಿರುದ್ಧ IPC ಸೆಕ್ಷನ್ 124 ಎ (ದೇಶದ್ರೋಹ), 153 ಎ (ಗಲಭೆಗಳನ್ನು ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ), 153 ಬಿ ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ದೆಹಲಿ ಗಲಭೆ: ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್ ಇಮಾಮ್‌ ಮತ್ತೆ ಬಂಧನ

ಶಾರ್ಜೀಲ್ ಇಮಾಮ್ ಅವರ ವಕೀಲರಾದ ತಾಲಿಬ್ ಮುಸ್ತಫಾ, ಶಾರ್ಜೀಲ್ ವಿರುದ್ಧ ಒಂದೇ ಭಾಷಣಕ್ಕಾಗಿ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. (ಅಸ್ಸಾಂ, ಮಣಿಪುರ ಮತ್ತು ಅರುಣಾಚಲ ಪ್ರದೇಶ ಪೊಲೀಸರು ಶಾರ್ಜೀಲ್‌ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ) ಪ್ರಚೋದನೆ ಅಥವಾ ಹಿಂಸೆಗೆ ಕರೆ ನೀಡಿದ್ದರೆ ಮಾತ್ರ ಸೆಕ್ಷನ್ 124 ಎ ಅನ್ನು ಅನ್ವಯಿಸಬಹುದು ಎಂದು ವಾದಿಸಿದರು. ಇದರ ಬದಲಾಗಿ ಶಾರ್ಜೀಲ್ ಶಾಂತಿಗಾಗಿ ಪದೇ ಪದೇ ಕರೆ ನೀಡಿದ್ದರು ಎಂದು ಮುಸ್ತಫಾ ಹೇಳಿದ್ದಾರೆ.

ಶಾರ್ಜೀಲ್‌‌ ಅವರು ಪ್ರಸ್ತುತ ತಿಹಾರ್‌‌ ಜೈಲಿನಲ್ಲಿದ್ದಾರೆ. ಜಾಮೀನಿನ ಹೊರತಾಗಿಯೂ ಅವರು ಅಲ್ಲಿಯೆ ಇರಬೇಕಾಗುತ್ತದೆ. ಯಾಕೆಂದರೆ ಅವರು ಈಶಾನ್ಯ ದೆಹಲಿ ಗಲಭೆ ಮತ್ತು ಜಾಮಿಯಾದಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೂಡಾ ಆರೋಪಿಯಾಗಿದ್ದಾರೆ.

“ನನ್ನ ಸಹೋದರ ಶಾರ್ಜೀಲ್ ಇಮಾಮ್‌ಗೆ ಎಫ್‌ಐಆರ್ ಸಂಖ್ಯೆ 55/2020 ರಲ್ಲಿ ಜಾಮೀನು ನೀಡಲಾಗಿದೆ. ಇದು ಅವರ ಬಿಡುಗಡೆಯ ಕಡೆಗಿನ ಮತ್ತೊಂದು ಹೆಜ್ಜೆ. ಅಂತಿಮವಾಗಿ ಸುಳ್ಳು, ಪ್ರೊಪಗಾಂಡ ಮತ್ತು ದ್ವೇಷಕ್ಕಿಂತ ಸತ್ಯವು ಮೇಲುಗೈ ಸಾಧಿಸುತ್ತದೆ” ಎಂದು ಶಾರ್ಜೀಲ್ ಸಹೋದರ ಮುಝಮ್ಮಿಲ್ ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ದೇಶದ್ರೋಹ ಪ್ರಕರಣದಲ್ಲಿ ಜೆಎನ್‌ಯು ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...