Homeಮುಖಪುಟವಾರಣಾಸಿಯಲ್ಲಿ ಹೇಯ ಕೃತ್ಯ: 3 ನೇ ತರಗತಿ ಬಾಲಕಿ ಮೇಲೆ ಶಾಲಾ ಸಿಬ್ಬಂದಿಯಿಂದ ಅತ್ಯಾಚಾರ

ವಾರಣಾಸಿಯಲ್ಲಿ ಹೇಯ ಕೃತ್ಯ: 3 ನೇ ತರಗತಿ ಬಾಲಕಿ ಮೇಲೆ ಶಾಲಾ ಸಿಬ್ಬಂದಿಯಿಂದ ಅತ್ಯಾಚಾರ

- Advertisement -
- Advertisement -

ಮೂರನೇ ತರಗತಿಯ ಬಾಲಕಿ ಮೇಲೆ ಶಾಲಾ ಶೌಚಾಲಯದಲ್ಲಿ ಶಾಲಾ ಸಿಬ್ಬಂದಿಯೊಬ್ಬರು ಅತ್ಯಾಚಾರ ಎಸಗಿರುವ ಹೇಯ ಕೃತ್ಯ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

ವಾರಣಾಸಿಯ ಲಹರ್ತಾರಾದಲ್ಲಿರುವ ಸನ್‌ಬೀಮ್ ಶಾಲೆಯಲ್ಲಿ 3ನೇ ತರಗತಿ ಬಾಲಕಿ ಮೇಲೆ ಶಾಲೆಯಲ್ಲಿ ಸ್ವಚ್ಛತಾ ಕೆಲಸ ಮಾಡುವ ವ್ಯಕ್ತಿ ಅತ್ಯಾಚಾರವೆಸಗಿದ್ದಾರೆ. ಅಪ್ರಾಪ್ತ ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಸಿಗ್ರಾ ಠಾಣೆ ಪೊಲೀಸರು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಸ್ವೀಪರ್ ಅಜಯ್ ಕುಮಾರ್ ಅಲಿಯಾಸ್ ಸಿಂಕುನ್ನನು ಬಂಧಿಸಿದ್ದಾರೆ.

ಸಿಗ್ರಾ ಠಾಣೆಯ ಪೊಲೀಸರು ಅಪ್ರಾಪ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಂಗಳೂರು: 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ, ನಾಲ್ವರ ಬಂಧನ

मासूम से रेप का आरोपी अजय कुमार उर्फ सिंकू। - Dainik Bhaskar
ಆರೋಪಿ ಅಜಯ್ ಕುಮಾರ್‌

“ಶುಕ್ರವಾರ ತನ್ನ ಮಗಳು ಶಾಲೆಯಿಂದ ಬಂದಾಗ, ಆಕೆ ತುಂಬಾ ಹೆದರಿದ್ದಳು ಜೊತೆಗೆ ಆಕೆಯ ಬಟ್ಟೆಯ ಮೇಲೆ ರಕ್ತ ಇತ್ತು. ಮಗಳನ್ನು ಕೇಳಿದಾಗ ಆಕೆ ಅಳಲು ಆರಂಭಿಸಿದಳು. ಇದಾದ ಬಳಿಕ ಆಕೆ ಅಳುತ್ತಾ ಶಾಲೆಯ ವಾಶ್‌ರೂಮ್‌ಗೆ ಹೋದಾಗ, ಅಲ್ಲಿ ಕಸಗುಡಿಸುವವರೊಬ್ಬರು ಬಂದು ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಘಟನೆಯನ್ನು ಸಂಪೂರ್ಣವಾಗಿ ತಿಳಿಸಿದ್ದಾರೆ’ ಎಂದು ಬಾಲಕಿಯ ತಾಯಿ ಹೇಳಿದ್ದಾರೆ.

ಕೂಡಲೇ ಘಟನೆಯ ಬಗ್ಗೆ ಪತಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಬಾಲಕಿಯ ತಂದೆ 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದಾರೆ. ಶಾಲೆಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿ ಸ್ವೀಪರ್ ನನ್ನು ಗುರುತಿಸಿ ಬಂಧಿಸಿದ್ದಾರೆ.

ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ವರುಣಾ ವಲಯದ ಡಿಸಿಪಿ ವಿಕ್ರಾಂತ್ ವೀರ್ ತಿಳಿಸಿದ್ದಾರೆ. ಆರೋಪಿಯನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗುವುದು. ಶಾಲಾ ಆವರಣದಲ್ಲಿ ನಡೆದ ಈ ನಾಚಿಕೆಗೇಡಿನ ಘಟನೆಯನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ನಾವು ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ. ಆರೋಪಿಗಳಿಗೆ ಆದಷ್ಟು ಬೇಗ ಕಠಿಣ ಶಿಕ್ಷೆ ನೀಡಲಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಕುಟುಂಬದ ನಾಲ್ವರ ಕೊಲೆ, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...