Homeಕರ್ನಾಟಕಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಲು ದಂಪತಿಯನ್ನು ಮಠಕ್ಕೆ ಕಳಿಸಿದ ನ್ಯಾಯಾಧೀಶರು : ಚಿಂತಕರ ವಿರೋಧ

ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಲು ದಂಪತಿಯನ್ನು ಮಠಕ್ಕೆ ಕಳಿಸಿದ ನ್ಯಾಯಾಧೀಶರು : ಚಿಂತಕರ ವಿರೋಧ

- Advertisement -
- Advertisement -

ಕೌಟುಂಬಿಕ ಸಮಸ್ಯೆ ಪ್ರಕರಣದಲ್ಲಿ ನ್ಯಾಯಕೋರಿ ಧಾರವಾಡದ ಹೈಕೋರ್ಟ್‌ ಸರ್ಕ್ಯೂಟ್ ಪೀಠಕ್ಕೆ ಬಂದಿದ್ದ ದಂಪತಿಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಮಠಾಧೀಶರ ಬಳಿಗೆ ಕಳುಹಿಸಿರುವುದಕ್ಕೆ ನಾಡಿನ ಚಿಂತಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯ ದಂಪತಿ ನಾಲ್ಕು ವರ್ಷಗಳ ಹಿಂದೆ ವಿಚ್ಛೇದನ ಕೋರಿ ಹೈಕೋರ್ಟ್‌ ಪೀಠದ ಮೊರೆ ಹೋಗಿದ್ದರು. ಕಳೆದ ಸೆಪ್ಟೆಂಬರ್ 17ರಂದು ಪ್ರಕರಣದ ವಿಚಾರಣೆ ನಡೆದಿತ್ತು. ಈ ವೇಳೆ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ದೀಕ್ಷಿತ್ ಅವರು, ದಂಪತಿಗೆ ಬುದ್ದಿವಾದ ಹೇಳಿದ್ದಾರೆ. ಸಣ್ಣಪುಟ್ಟ ವಿಚಾರಗಳಿಗೆ ವಿಚ್ಛೇದನ ಪಡೆಯುವುದು ಸರಿಯಲ್ಲ ಎಂದಿದ್ದಾರೆ.

ವಿಚಾರಣೆ ವೇಳೆ ಇಬ್ಬರ ವಾದ ಆಲಿಸಿದ ನ್ಯಾಯಮೂರ್ತಿ, ಆರಂಭದಲ್ಲಿ ಇಬ್ಬರೂ ಕೂಡ ಯಾರಾದರು ಆಪ್ತ ಸಮಾಲೋಚಕರ ಬಳಿ ಹೋಗಿ ಎಂದಿದ್ದರು. ಬಳಿಕ ಮಾತು ಮುಂದುವರಿಸಿದ ಅವರು, ಮಠಕ್ಕೆ ಹೋಗಿ ಸ್ವಾಮೀಜಿಗಳ ಪ್ರವಚನ ಕೇಳಿ ಎಂದಿದ್ದಾರೆ.

ಮೊದಲು ಪತಿಗೆ ಯಾವ ಮಠಕ್ಕೆ ಹೋಗ್ತೀರಿ? ಎಂದಾಗ ಅವರು ಗದಗದ ತೋಂಟದಾರ್ಯ ಮಠದ ಸ್ವಾಮಿ ಬಳಿ ಹೋಗ್ತೀನಿ ಎಂದಿದ್ದಾರೆ. ನಂತರ ಪತ್ನಿ ಬಳಿ ಕೇಳಿದಾಗ, ಆಕೆ ನಾನು ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಹೋಗ್ತೀನಿ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, ಗವಿಸಿದ್ದೇಶ್ವರ ಸ್ವಾಮೀಜಿ ವಿವೇಕಾನಂದರಿದ್ದಂತೆ, ಅವರ ಬಳಿ ಹೋಗಿ ಎಂದು ಸಲಹೆ ನೀಡಿದ್ದಾರೆ.

ನ್ಯಾಯಮೂರ್ತಿಯ ಈ ನಡೆಯನ್ನು ವಿರೋಧಿಸಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಚಿಂತಕರು, “ಜನರು ಅಂತಿಮವಾಗಿ ನ್ಯಾಯಾಲಯಕ್ಕೆ ಹೋಗುವುದು ನ್ಯಾಯ ಸಿಗುತ್ತದೆ ಎಂಬ ಭರವಸೆಯಿಂದ. ಆದರೆ, ನ್ಯಾಯಾಧೀಶರು ತಮ್ಮ ಕಾನೂನುಬದ್ದ ಕರ್ತವ್ಯ ನಿರ್ವಹಿಸುವ ಬದಲು, ಮಠಾಧೀಶರ ಬಳಿ ಹೋಗಿ ಎಂದಿರುವುದು ‘ಮಠಗಳು ಸಂವಿಧಾನದಡಿ ಇರುವ ನ್ಯಾಯಾಲಯಗಳಿಗಿಂತ ದೊಡ್ಡದು’ ಎಂಬ ಸಂದೇಶ ನೀಡುತ್ತದೆ. ನ್ಯಾಯಾಲಯಗಳು ವಾದ-ಪ್ರತಿವಾದ ಆಲಿಸಿ, ಸಾಕ್ಷ್ಯಗಳನ್ನು ಪರಿಶೀಲಿಸಿ ತೀರ್ಪು ನೀಡುವ ಬದಲು, ಮಠಗಳಿಗೆ ಕಳುಹಿಸುವುದು ಯಾವ ಬಗೆಯ ನ್ಯಾಯ?” ಎಂದು ಪ್ರಶ್ನಿಸಿದ್ದಾರೆ.

“ನಿರ್ದಿಷ್ಟ ಜಾತಿ, ವರ್ಗದ ಮಠಗಳು ವಿವಾದಗಳನ್ನು ಬಗೆಹರಿಸುವ ನ್ಯಾಯಾಲಯಗಳಾದರೆ, ಸಂವಿಧಾನದಡಿ ಇರುವ ನ್ಯಾಯಾಲಯಗಳ ಅಗತ್ಯವೇನು? ಮಠಗಳನ್ನೇ ನ್ಯಾಯಾಲಯಗಳು ಎಂದು ಘೋಷಿಸಿಬಿಡಿ. ನ್ಯಾಯಮೂರ್ತಿ ದೀಕ್ಷಿತ್ ಅವರ ನಡೆ ಸಂವಿಧಾನ ವಿರೋಧಿ. ಇದು ಹಿಂದೆ ಮೇಲ್ಜಾತಿಯವರು ತೀರ್ಮಾನ ನೀಡುತ್ತಿದ್ದ ಪಂಚಾಯತಿ ಕಟ್ಟೆಗಳನ್ನು ನೆನಪಿಸುತ್ತದೆ. ಕಾನೂನಿನ ನಿಯಮದಡಿ ನ್ಯಾಯದಾನ ಮಾಡುವ ಬದಲು, ಜಾತಿ, ವರ್ಗ, ಮತಗಳಡಿ ಅನ್ಯಾಯವನ್ನು ಕ್ರಮಬದ್ದಗೊಳಿಸುವ ಕ್ರಮವಾಗಿದೆ” ಎಂದಿದ್ದಾರೆ.

“ನ್ಯಾಯಾಧೀಶರಿಗೆ ಮಧ್ಯಸ್ಥಿಕೆಯ ಅಗತ್ಯ ಕಂಡು ಬಂದರೆ ಕಾನೂನು ಸೇವಾ ಪ್ರಾಧಿಕಾರ ನಡೆಸುವ ಕಾನೂನು ಬದ್ದ ಸಂಧಾನ ಕೇಂದ್ರ (ಮೀಡಿಯೇಷನ್ ಸೆಂಟರ್ )ಕ್ಕೆ ಕಳಿಸಲು ಸೂಚಿಸಬಹುದಿತ್ತು. ಅದನ್ನು ಬಿಟ್ಟು ಮಠಾಧೀಶರ ಬಳಿ ಕಳುಹಿಸುವುದು ಕಾನೂನುಬದ್ದ ನ್ಯಾಯಪೀಠಕ್ಕಿಂತ ಮಠಾಧೀಶರ ನ್ಯಾಯಪೀಠವೇ ಮೇಲೂ ಎಂಬ ಸಂದೇಶ ರವಾನಿಸುತ್ತದೆ” ಎಂದು ಹೇಳಿದ್ದಾರೆ.

“ವಿವಾದ ಬಗೆಹರಿಸಲಿರುವ ಪರ್ಯಾರ್ಯ ವ್ಯವಸ್ಥೆ (ಎಡಿಆರ್) ಅಥವಾ ಮಧ್ಯಸ್ಥಿಕೆಗೆ ಎಲ್ಲೆಂದರಲ್ಲಿ ಶಿಫಾರಸು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಮಧ್ಯಸ್ಥಿಕೆ ಮಾಡುವವರಿಗೂ ಕೆಲವು ಅರ್ಹತೆಗಳಿರಬೇಕು. ಆ ಅರ್ಹತೆ ಗವಿಸಿದ್ದೇಶ್ವರ ಸ್ವಾಮಿಗೆ ಇದೆಯಾ? ಎಂಬುವುದರ ಬಗ್ಗೆ ನ್ಯಾಯಾಲಯ ಏನನ್ನು ಹೇಳಿಲ್ಲ” ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಡಾ.ವಿ.ಪಿ ನಿರಂಜನಾರಾದ್ಯ, ಬಸವರಾಜ ಸೂಳಿಭಾವಿ, ಡಾ. ವಸುಂದರ ಭೂಪತಿ, ಬಿ.ಸುರೇಶ, ಡಾ. ಸಬೀಹಾ ಭೂಮಿಗೌಡ, ಮೂಡ್ನಕೂಡ ಚಿನ್ನಸ್ವಾಮಿ, ಕ.ಮ ರವಿಶಂಕರ, ಲಕ್ಷ್ಮಣ ಕೊಡಸೆ, ಡಾ.ಜಯಲಕ್ಷ್ಮಿ ಹೆಚ್‌.ಜಿ, ಡಾ.ಮಂಜುನಾಥ್ ಬಿಆರ್, ಡಾ.ತುಕರಾಮ, ಶ್ರೀಪಾದ ಭಟ್ಟ, ಪೂಜಾ ಸಿಂಗೆ, ಪ್ರಕಾಶ ಬಿ, ಮುತ್ತು ಬಿಳಿಯಲಿ, ಜಿ.ಎಂ ವೀರಸಂಗಯ್ಯ, ಬಸವರಾಜ ಬ್ಯಾಗವಾಟ, ಎಸ್‌.ಸತ್ಯ, ವಿಶುಕುಮಾರ, ಅನಿಲ ಹೊಸಮನಿ, ಪ್ರಶಾಂತ್ ಹೊಸಪೇಟೆ, ಕರಿಬಸಪ್ಪ ಎಂ ಸೇರಿದಂತೆ ನಾಡಿನ ಪ್ರಗತಿಪರ ಚಿಂತಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಪೌರಕಾರ್ಮಿಕ ಮಹಿಳೆಯರ ಮೇಲೆ ಹಲ್ಲೆ, ಜಾತಿ ನಿಂದನೆ ಪ್ರಕರಣ : ಆರೋಪಿಯ ಬಂಧನ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಶ್ನಿಸುವವರನ್ನು ‘ದಿಮಾಗಿ ನಕ್ಸಲ್’ ಎಂದು ಕರೆಯುವುದು ಸೂಕ್ಷ್ಮತೆಯಿಲ್ಲದ ನಡವಳಿಕೆ: ಗೀತಾಂಜಲಿ ಅಂಗಮೋ

ಪ್ರಶ್ನೆ ಕೇಳುವ ವ್ಯಕ್ತಿಯನ್ನು ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ ನಕ್ಸಲರು) ಎಂದು ಕರೆಯುವುದು ಅತ್ಯಂತ ಸೂಕ್ಷ್ಮತೆಯಿಲ್ಲದ ರೀತಿಯಾಗಿದೆ ಎಂದು ಪ್ರಸಿದ್ಧ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ...

ಬಸವರಾಜ ಕನ್ನಾಳೆ ಸಿಂಡಿಕೇಟ್ ಸದಸ್ಯತ್ವ ರದ್ದಾಗುತ್ತಾ? ರಾಜಭವನದ ಮೌನಕ್ಕೆ ಮೂಡಿದ ಅನುಮಾನ

ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ಬಂಧನದ ಬೆನ್ನಲ್ಲೇ, ತನಿಖಾ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ವಿವಿಯ ಪ್ರಭಾರ ಕುಲಪತಿ ಪ್ರೊ. ನಾಗಭೂಷಣ ಅವರಿಂದ...

‘ಜಿಡಿಪಿ ಬಿಟ್ಟು ನಿಮ್ಮ ಮುಖದ ಸೌಂದರ್ಯದ ರಹಸ್ಯ ತಿಳಿಸಿ..’; ಪ್ರಧಾನಿ ಮೋದಿ ಕಾಲೆಳೆದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಇತ್ತೀಚೆಗೆ ಬಿಡುಗಡೆಯಾದ ಭಾರತದ ತ್ರೈಮಾಸಿಕ ಜಿಡಿಪಿ ಅಂಕಿಅಂಶಗಳ ಕುರಿತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ. 2026-27ರ ಹಣಕಾಸು ವರ್ಷದ ಮೊದಲ...

ರಾಜಕೀಯ ಪಕ್ಷಗಳ ಬಿಎಲ್‌ಎಗಳು ಎಸ್‌ಐಆರ್‌ನ ಎಲ್ಲ ಮಾಹಿತಿಗಳನ್ನೂ ಪರಿಶೀಲಿಸಲು ಜವಾಬ್ದಾರರಲ್ಲ : ದೆಹಲಿ ಹೈಕೋರ್ಟ್

ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಎಣಿಕೆ ನಮೂನೆಗಳಲ್ಲಿರುವ (ಎನ್ಯುಮರೇಷನ್ ಫಾರಂ) ಎಲ್ಲ ವಿವರಗಳನ್ನು ಪರಿಶೀಲಿಸಲು ಜವಾಬ್ದಾರರಲ್ಲ ಎಂದು ದೆಹಲಿ ಹೈಕೋರ್ಟ್...

‘ಕೈಯಿಂದ ಮಲ ಹೊರುವ ಪದ್ಧತಿ ಇಲ್ಲ’ ಎಂದ ಸರ್ಕಾರ: ‘ಹಾಗಾದರೆ ನಾವು ಇನ್ನೂ ಏಕೆ ಈ ಕೆಲಸ ಮಾಡುತ್ತಿದ್ದೇವೆ?’ ಎಂದು ಪ್ರಶ್ನಿಸಿದ ಮಹಿಳಾ ಕಾರ್ಮಿಕರು

ನವದೆಹಲಿ: ದೇಶದಲ್ಲಿ ಕೈಯಿಂದ ಮಲ ಹೊರುವ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿರುವ ಬೆನ್ನಲ್ಲೇ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಜಮ್ಮು ಮತ್ತು ಕಾಶ್ಮೀರದ ಮಹಿಳಾ ನೈರ್ಮಲ್ಯ...

ಕಾನೂನು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಅಧಿಕಾರ ಬಾರ್ ಕೌನ್ಸಿಲ್‌ಗಳಿಗೆ ಇಲ್ಲ; ನಲ್ಸಾರ್ ವಿವಿ ವಿರುದ್ಧದ ಬಿಸಿಐ ಅಧ್ಯಕ್ಷರ ಆದೇಶ ಕಾನೂನುಬಾಹಿರ : ಸುಪ್ರೀಂ ಕೋರ್ಟ್

ಕಾನೂನು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಮತ್ತು ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ (ಸೆ.3) ಮಹತ್ವದ...

ದೇಶದ ಆರ್ಥಿಕ ಸ್ಥಿರತೆಯ ಬಗ್ಗೆ ಕೇಂದ್ರ ಸರ್ಕಾರದಿಂದ ಸುಳ್ಳು ನಿರೂಪಣೆ ಸೃಷ್ಟಿ: ಶರದ್ ಪವಾರ್

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಸಂಕಷ್ಟದಲ್ಲಿರುವ ನೈಜ ಆರ್ಥಿಕತೆಯನ್ನು ಮರೆಮಾಚಲು ಕೇಂದ್ರ ಸರ್ಕಾರವು 'ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ತಿರುಚುತ್ತಿದೆ' ಎಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ. "ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡಾ...

ಮಹದೇವಪುರ, ಗಾಂಧಿನಗರ ವೋಟರ್ ಲಿಸ್ಟ್ ಹಗರಣ: ಇಸಿಐ ತನಿಖೆಗೆ ರಾಜ್ಯ ಚುನಾವಣಾ ಆಯೋಗ ಶಿಫಾರಸು

ಮಹದೇವಪುರ ಮತ್ತು ಗಾಂಧಿನಗರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಸಂಸದ ಮನ್ಸೂರ್ ಅಲಿ ಖಾನ್ ನೀಡಿದ್ದ ದೂರನ್ನು ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಕೇಂದ್ರ ಚುನಾವಣಾ ಆಯೋಗಕ್ಕೆ...

ಬಹುತೇಕ ಧರ್ಮಗಳು ಲಿಂಗ ಸಮಾನತೆಯನ್ನು ಗುರುತಿಸಲು ಹಿಂಜರಿಯುತ್ತವೆ: ಎಂ. ಎ. ಬೇಬಿ

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಉಪಸ್ಥಿತಿಯ ಮೇಲೆ ನಿರ್ಬಂಧಗಳನ್ನು ಹೇರಬೇಕೆಂದು ಪ್ರತಿಪಾದಿಸಿದ್ದ ಇಸ್ಲಾಮಿಕ್ ಪಂಡಿತ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಹೇಳಿಕೆಯನ್ನು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ. ಎ. ಬೇಬಿ ಅವರು ತೀವ್ರವಾಗಿ...

ಭಾಗವತ್ ಕಾರ್ಯಕ್ರಮಕ್ಕೆ ಅಮೆರಿಕದ ಧಾರ್ಮಿಕ ನಾಯಕರ ತೀವ್ರ ಆಕ್ಷೇಪ: ‘ನಮ್ಮನ್ನು ತಪ್ಪುದಾರಿಗೆಳೆದು ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಕರೆಸಲಾಗಿತ್ತು’ ಎಂದು ಆರೋಪ

ನ್ಯೂಯಾರ್ಕ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ಇಬ್ಬರು ಅಮೆರಿಕದ ಧಾರ್ಮಿಕ ಮುಖಂಡರು, ಕಾರ್ಯಕ್ರಮದ ನೈಜ ಉದ್ದೇಶ ಮತ್ತು ಭಾಗವತ್ ಅವರ ಭಾಗವಹಿಸುವಿಕೆ...