Homeಕರ್ನಾಟಕಕರ್ನಾಟಕದ ಕರಿ ಚಿರತೆ; ಜಂಗಲ್ ಬುಕ್‌‌ ಸಿನಿಮಾದ ’ಬಘೀರಾ’ ಎಂದ ನೆಟ್ಟಿಗರು..!

ಕರ್ನಾಟಕದ ಕರಿ ಚಿರತೆ; ಜಂಗಲ್ ಬುಕ್‌‌ ಸಿನಿಮಾದ ’ಬಘೀರಾ’ ಎಂದ ನೆಟ್ಟಿಗರು..!

ಚಿತ್ರವೂ ವೈರಲಾಗಿದ್ದು, ’ಅರ್ತ್’ ತನ್ನ ಟ್ವೀಟಿನಲ್ಲಿ  ’ಭಾರತದ ಕಬಿನಿ ಕಾಡಿನಲ್ಲಿ ತಿರುಗುತ್ತಿರುವ ಕಪ್ಪು ಪ್ಯಾಂಥರ್’ ಎಂದು ಬರೆದಿದೆ.

- Advertisement -
- Advertisement -

ಜನಪ್ರಿಯ ಟ್ವಿಟ್ಟರ್ ಖಾತೆ @earth ಅಪರೂಪದ ಕರಿಚಿರತೆಯ ಫೋಟೋವೊಂದನ್ನು ತನ್ನ ಖಾತೆಯಲ್ಲಿ ಪ್ರಕಟಿಸಿದ್ದು, ಈ ಚಿತ್ರಕ್ಕೆ ನಟ್ಟಿಗರು ಫೀದಾ ಆಗಿ “ಜಂಗಲ್ ಬುಕ್” ಸಿನಿಮಾದ “ಬಘೀರಾ” ಎಂದು ಕರೆದಿದ್ದಾರೆ.

ಈ ಚಿತ್ರವನ್ನು 2019 ರಲ್ಲಿ ವನ್ಯಜೀವಿ ಛಾಯಾಗ್ರಾಹಕ ಶಾಜ್ ಜಂಗ್ ರಾಜ್ಯದ ಕಬಿನಿಯಲ್ಲಿ ಕ್ಲಿಕ್ಕಿಸಿದ್ದರು. ಅವರು ಇದನ್ನು ತಮ್ಮ ಇನ್ಸ್ಟ್ರಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

ಆದರೆ ಚಿತ್ರವೂ ಈಗ ವೈರಲಾಗಿದೆ. ’ಅರ್ತ್’ ತನ್ನ ಟ್ವೀಟಿನಲ್ಲಿ  ’ಭಾರತದ ಕಬಿನಿ ಕಾಡಿನಲ್ಲಿ ತಿರುಗುತ್ತಿರುವ ಕಪ್ಪು ಪ್ಯಾಂಥರ್’ ಎಂದು ಬರೆದಿದೆ.

ಈ ಚಿತ್ರವನ್ನು ಹಲವಾರು ಜನ ಮೆಚ್ಚಿಕೊಂಡಿದ್ದು, ಚಿತ್ರವೂ ’ಜಂಗಲ್ ಬುಕ್‌’ ಸಿನಿಮಾದ ಬಘೀರಾ ನನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ.

 

ಕೆಲವು ಟ್ವಿಟ್ಟರ್ ಬಳಕೆದಾರರು ಛಾಯಾಗ್ರಾಹಕರಿಗೆ ಮನ್ನಣೆ ನೀಡದೆ ಫೋಟೋವನ್ನು ಹಂಚಿಕೊಂಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹಲವಾರು ಜನರು ಈ ಬಗ್ಗೆ ಸೂಚಿಸಿದ ನಂತರ ಚಿತ್ರದ ಛಾಯಾಗ್ರಾಹಕ ಕೂಡಾ ಈ ಬಗ್ಗೆ ಗಮನಸೆಳೆಸ ನಂತರ ಟ್ವಿಟ್ಟರ್ ಖಾತೆಯು ಪ್ರತ್ಯೇಕ ಟ್ವಿಟ್ಟರ್‌ನಲ್ಲಿ ಹಾಗೆ ಮಾಡಿದೆ.

ಶಾಜ್ ಜಂಗ್ ನೆಟ್‌ಜಿಯೋಫಿಲ್ಮ್‌ನ ಛಾಯಾಗ್ರಹಣ ನಿರ್ದೇಶಕರಾಗಿದ್ದಾರೆ. ಅವರು ದಿ ಬೈಸನ್, ಕಬಿನಿ ಎಂಬ ರೆಸಾರ್ಟ್ ಅನ್ನು ಸಹ ನಡೆಸುತ್ತಿದ್ದಾರೆ.


ಓದಿ: ಚಿರತೆ ಮರಿಗೆ ತಾಯಿ ಪ್ರೀತಿ ನೀಡಿ ಆರೈಕೆ ಮಾಡಿದ ಹಸು?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...