ಚಿತ್ರಕೃಪೆ: ANI

ಸಾವನಪ್ಪಿದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಪರವಾಗಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದು ವಾಟರ್‌ ಕ್ಯಾನನ್‌ ಪ್ರಯೋಗಿಸಲಾಗಿದೆ.

ರಾಜ್‌ ಘಾಟ್‌ ನಿಂದ ಇಂಡಿಯಾಗೇಟ್‌ವರೆಗೆ ಕ್ಯಾಂಡಲ್‌ ಲೈಟ್‌ ಮಾರ್ಚ್‌ ಮಾಡಲು ಪ್ರತಿಭಟನಾಕಾರರು ಉದ್ದೇಶಿಸಿದ್ದರು. ಆದರೆ ಅದಕ್ಕೆ ಪೊಲೀಸರು ಅವಕಾಶ ನೀಡಿಲ್ಲ ಎಂದು ಎಎನ್‌ಐ ವರದಿ ಮಾಡಿದೆ.

ಇನ್ನೊಂದೆಡೆ ಉತ್ತರ ಪ್ರದೇಶದ ಲಕ್ನೋದಲ್ಲಿ ಉನ್ನಾವೋ ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಉತ್ತರ ಪ್ರದೇಶ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ. ಪ್ರತಿಭಟನಾಕಾರರಿಗೆ ಮನಬಂದರೆ ಲಾಠಿ ಮುರಿಯುವವರೆಗೂ ಹೊಡೆಯುತ್ತಿರುವ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಹಾಗಾಗಿ ಯು.ಪಿ ಪೊಲೀಸರ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇಂದು ಉನ್ನಾವ್‌ನಲ್ಲಿಯೂ ಸಹ ಸರಣಿ ಪ್ರತಿಭಟನೆಗಳು ಜರುಗಿವೆ. ಸಂಸದ ಸಾಕ್ಷಿ ಮಹಾರಾಜ್‌ ಸೇರಿದಂತೆ, ಹಲವು ಕೇಂದ್ರ ಸಚಿವರು ಉನ್ನಾವ್‌ ಸಂತ್ರಸ್ತ ಕುಟುಂಬಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರ ಸೂಚನೆಯಂತೆ ತೆರಳಿದ್ದಾಗ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಾರೆ ಮತ್ತು ಭೇಟಿಯನ್ನು ವಿರೋಧಿಸಿದ್ದಾರೆ.

1 COMMENT

  1. ತೆಲಂಗಾಣದಲ್ಲಿ ಪಶು ವೈದ್ಯೆ ಯನ್ನು ಅತ್ಯಾಚಾರ ಮಾಡಿದವರಿಗೆ ಪೂಲೀಷರು ಗುಂಡಿಕ್ಕಿದರು. ಆದರೆ ಉನ್ನಾ ವ್ ನಲ್ಲಿ ಅತ್ಯಾಚಾರ ಮಾಡಿ ಆಕೆ ಅತ್ಯಾಚಾರ ಮಾಡಿದವರ ಮೇಲೆ ದೂರು ನೀಡಿದ್ದಕ್ಕೆ ಆಕೆಗೆ ಬೆಂಕಿ ಹಾಕಿದರು. ಅವರಿಗೆ ಗುOಡಿಕ್ಕುವುದಕ್ಕೆ ಈ ಪೂಲೀಷ್ ನವರಿಗೆ ಏಕೆ ಸಾಧ್ಯವಾಗಲಿಲ್ಲ.

LEAVE A REPLY

Please enter your comment!
Please enter your name here