Homeಮುಖಪುಟ"ಕಾಂಗ್ರೆಸ್ ಅಧೋಗತಿಗಿಳಿದದೆ; ಎಡೂರಪ್ಪನ ಬೆನ್ನಿಗೆ ಮಠಮಾನ್ಯಗಳವೆ'': ಕಾಗೋಡು ತಿಮ್ಮಪ್ಪ ಸಂದರ್ಶನ

“ಕಾಂಗ್ರೆಸ್ ಅಧೋಗತಿಗಿಳಿದದೆ; ಎಡೂರಪ್ಪನ ಬೆನ್ನಿಗೆ ಮಠಮಾನ್ಯಗಳವೆ”: ಕಾಗೋಡು ತಿಮ್ಮಪ್ಪ ಸಂದರ್ಶನ

- Advertisement -
- Advertisement -

ಕಾಗೋಡು ತಿಮ್ಮಪ್ಪನವರು ನಮ್ಮ ನಡುವಿನ ವಿಶಿಷ್ಟ ರಾಜಕಾರಣಿ. ಚುನಾವಣೆಯ ಸೋಲು ಗೆಲುವುಗಳನ್ನ ಬದಿಗಿಟ್ಟು, ಈ ವ್ಯವಸ್ಥೆಯ ಬಗ್ಗೆ ಗಾಢವಾಗಿ ಚಿಂತಿಸುವವರು. ಆ ಕಾರಣಕ್ಕೆ ಇವರನ್ನು ಕಂಡರೆ ಪಾರ್ಟಿಯ ಕಾರ್ಯಕರ್ತರಿಗೆ ಮತ್ತು ಸರಕಾರದ ಕರ್ಮಾಚಾರಿಗಳಿಗೆ ಅಷ್ಟೊಂದು ಇಷ್ಟವಿಲ್ಲ. ಪಾರ್ಟಿ ಕಾರ್ಯಕರ್ತರಿಂದ ಇವರು ನಿರೀಕ್ಷಿಸುವುದು ಕ್ಷೇತ್ರಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ. ಆದ್ದರಿಂದ ವಿನಾಕಾರಣದ ಕಾಡುಹರಟೆಗೆ ಅಲ್ಲಿ ಅವಕಾಶವಿಲ್ಲ. ಇನ್ನ ಸರ್ಕಾರದ ಕರ್ಮಾಚಾರಿಗಳು ಬಂದರೆ ಆಗುತ್ತಿರುವ ಕೆಲಸದ ಪ್ರಗತಿ ಎಲ್ಲಿಗೆ ಬಂತು, ನಿಂತಿದ್ದರೆ ಆದ ತೊಡಕೇನು, ಮುಂದೇನು ಮಾಡಬೇಕು ಎಂಬ ಸಲಹೆ. ಈ ಸಮಯದಲ್ಲಿ ಅಧಿಕಾರಿಯ ದಕ್ಷತೆ ಅದಕ್ಷತೆ ಗುರುತಿಸಿಬಿಡುವ ತಿಮ್ಮಪ್ಪನವರು ಕೆಲಸಗಾರನಿಗೆ ಮಾತ್ರ ಮನ್ನಣೆ ಕೊಡುತ್ತಾರೆ. ಇಲ್ಲವಾದರೆ ಬೈಗುಳ ಗ್ಯಾರಂಟಿ ಅವರೆಂದೂ ಮತದಾರನನ್ನ ಓಲೈಸಿದವರಲ್ಲ. ಓಟಿಗಾಗಿ ಹಲ್ಲು ಗಿಂಜಿದವರಲ್ಲ. ಚುನಾವಣೆ ಸಮಯದಲ್ಲಿ ಎದುರು ಸಿಕ್ಕವರ ಯೋಗಕ್ಷೇಮ ವಿಚಾರಿಸಬೇಕೆಂಬ ಸಲಹೆ ಕೇಳಿ ನಕ್ಕಂತವರು. ರಾಜಕಾರಣ ಆರಂಭವಾದದ್ದು ಸಮಾಜವಾದಿ ಪಾರ್ಟಿ ಮುಖಾಂತರ ದೇವರಾಜ ಅರಸು ಇಷ್ಟವಾದರೂ ಅವರ ಪಾರ್ಟಿ ಸೇರಲಿಲ್ಲ. ಆದರೂ ಗುಂಡೂರಾಯರ ಕಾಲದಲ್ಲಿ ಕಾಂಗ್ರೆಸ್ ಸೇರಿದ ತಿಮ್ಮಪ್ಪ ಇಂದಿಗೂ ಮನಸ್ಸು ಬದಲಿಸಿದವರಲ್ಲ. ಪಾರ್ಟಿ ಮತ್ತು ಕಾರ್ಯಕ್ರಮ ಬದ್ಧತೆ ಎಂದರೇನೆಂದು ತಿಮ್ಮಪ್ಪನವರನ್ನ ನೋಡಿದರೆ ತಿಳಿಯುತ್ತದೆ. ಒಬ್ಬ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಅನುಭವಗಳಿದ್ದರೂ ತಮ್ಮ ಭಾಗದ ಕೆಲಸ ನಿರ್ವಹಿಸಿದವರು. ಎಷ್ಟೇ ಸವಲತ್ತುಗಳನ್ನು ತಂದುಕೊಟ್ಟರೂ, ದ್ರೋಹ ಬಗೆಯುವ ಸಾಮಾನ್ಯ ಜನರ ನಡವಳಿಕೆ ಬಗ್ಗೆ ಎಂದೂ ಅಚ್ಚರಿಗೊಳ್ಳದವರು. ಜನರೇನೆಂಬುದನ್ನು ಲೋಹಿಯಾ, ಗೋಪಾಲಗೌಡರಿಂದ ತಿಳಿದವರು. ಆದ್ದರಿಂದ ಚುನಾವಣೆಯ ಸೋಲು ಅವರನ್ನು ಕಂಗೆಡಿಸಿಲ್ಲ. ದೇಶ ಮತ್ತು ಕರ್ನಾಟಕ ಹತ್ತಿ ಉರಿಯುತ್ತಿರುವ ಈ ಸಮಯದಲ್ಲಿ ಅವರನ್ನ ಮಾತನಾಡಿಸಬೇಕೆನಿಸಿತು. ಸಾಗರದ ಅವರ ಮನೆಗೆ ಹೋದಾಗ ಈ ಹಿಂದಿನಂತೆ ಹಲವಾರು ಕಾರುಗಳು ನಿಂತಿರಲಿಲ್ಲ. ಆ ಸಾಲಿನಲ್ಲಿ ಅವರದ್ದೂ ಒಂದು ಸಾಮಾನ್ಯ ಮನೆಯಂತೆ ಕಂಡಿತು. ಒಳಗೋದಾಗ ಆರಾಮವಾಗಿ ಟಿವಿ ನೋಡುತ್ತಾ ಕುಳಿತಿದ್ದರು.

ನನ್ನನ್ನು ಕಂಡು, “ಬನ್ರೀ” ಎಂದರು. ನಂತರ ‘ಯೇಯ್’ ಎಂದರು. ಹಾಗೆಂದರೆ ಸಹಾಯಕ ಬಂದು ಟಿವಿ ಆಫ್ ಮಾಡಬೇಕು. ಅದನ್ನು ಆತ ಮಾಡಿದ. ಈ ಹಿಂದೆ ಮನೆಗೋದಾಗ ‘ಯೇಯ್’ ಎನ್ನುತ್ತಿದ್ದರು. ಹಾಗಂದರೆ ಕಾಫಿ ತಂದು ಕೊಡು ಅಂತ. ಹೀಗೆ ತಿಮ್ಮಪ್ಪನವರ ಏಕಕ್ಷರದ ಸೂಚನೆಯಲ್ಲಿ ಒಂದೊಂದು ಸಲಹೆ ಸೂಚನೆ ವಾಕ್ಯಗಳೇ ಅಡಗಿರುತ್ತವೆ. ಇಲ್ಲಿ ಮೌನದ ಭಾಷೆಯೂ ಅಧಿಕ, ಕೆಲವೊಂದು ಪ್ರಶ್ನೆಗೆ ಅವರು ಉತ್ತರಿಸುವುದಿಲ್ಲ. ಮೌನವೇ ಉತ್ತರ ನೀಡುತ್ತದೆ.

ಪ್ರಶ್ನೆ: ಏನ್ ಸಾರ್ ದೇಶ ಹಿಂಗೆ ಮಾಡಿದ್ರು?
ಉತ್ತರ: ಮಾಡ್ತರೆ, ಅವುರಿಬ್ರು ಜೊತೆಯಾಗ್ಯವುರೆ, ಅವುರ್ಯಂಗೆ ಜೊತೆಯಾಗ್ಯವುರೆ ಅಂದ್ರೇ ಅವುರಿಗೆ ಕೌಂಟ್ರು ಕೊಡಕ್ಕೆ ನಮ್ಮಲ್ಯಾರು ಇಲ್ಲ. ಪಾಪ ಆ ಯಮ್ಮ ಮಮತಾ ಬ್ಯಾನರ್ಜಿ ಒಬ್ಬಳೆ ಎಷ್ಟು ಅಂತ ಹೋರಾಟ ಕೊಡಕ್ಕಾಯ್ತದೆ. ಒಂದು ಎಂಟತ್ತು ಸ್ಟೇಟಲ್ಲಿ ಅವುಳ ತರ ಹೋರಾಟ ಕೊಡೋರಿದ್ರೆ ಇವುರಿಂಗಾಡಕ್ಕಾಯ್ತಿರಲಿಲ್ಲ.

ಪ್ರಶ್ನೆ: ಕಾಂಗ್ರೆಸ್ ಏನ್ ಸಾರ್ ಹಿಂಗಾಯ್ತು?
ಉತ್ತರ: ಬಣ ಮಾಡಿಕಂಡು ಕಿತ್ತಾಡ್ತಾ ಅವೆ. ಮೋದಿಗೆ ಉತ್ತರ ಕೊಡೋನು ಯಾರು ಇಲ್ಲ. ಕಾಂಗ್ರೆಸ್ ಅಧೋಗತಿಗಿಳಿದದೆ ಏನು ಮಾಡದು. ಆಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹತ್ತು ವರ್ಷ ಪ್ರಧಾನಿಯಾಗಿದ್ದೋರು. ಮೋದಿ ಎದುರಿಗೆ ಮಾತಾಡಲಿಲ್ಲ. ಈಗ್ಲು ಯಾರೂ ಮಾತಾಡಲಿಲ್ಲ.

ಪ್ರಶ್ನೆ: ಜನಗಳಿಗೆ ದುಡ್ಡು ಕೊಡ್ತಾ ಅವುರೆ ಸಾರ್, ದುಡ್ಡು ತಗಂಡು ಓಟು ಮಾಡ್ತರೆ, ಇನ್ನ ನಿಮ್ಮಂಥೋರು ಗೆಲ್ಲಕ್ಕಾಗಲ್ಲ ಅಲವೆ?
ಉತ್ತರ: ದುಡ್ಡು ತಗೋಬ್ಯಾಡಿ ಅಂತ ಹೇಳಬೇಕು. ಒಂಥರದ ಜನಾಂದೋಲನ ನ್ಯಡಿ ಬೇಕು. ಆಗ ದುಡ್ಡಿದ್ದೋರ ಸೋಲಸಬವುದು.

ಪ್ರಶ್ನೆ: ಜನ ಸಾರ್, ನಾನು ಮಂಡ್ಯದ ಲೋಕಸಭಾ ಚುನಾವಣೆ ನೋಡಿದೆ. ಕಾಂಗ್ರೆಸ್ಸಿನೋರು ನೋರ್ರುಪಾಯಿ ಕೊಟ್ಟು ಕುಮಾರಸ್ವಾಮಿ ಕಡಿಯೋರು ಐದು ನೂರ್ರುಪಾಯಿ ಕೊಟ್ರು. ಆದ್ರು ಜನ ನೂರ್ರುಪಾಯಿ ಕಡಿಕೆ ಓಟು ಮಾಡಿದ್ರು. (ನಗು)
ಉತ್ತರ: ಥೂ ಅವ್ಯಲ್ಲ ಅಲ್ಲ, ಹಣ ತಗಂಡು ಓಟು ಮಾಡಿದ ಅಪಾಯನ ನಮ್ಮ ಜನಗಳಿಗೆ ಹೇಳಬೇಕು ಕೇಳ್ತರೆ.

ಪ್ರಶ್ನೆ: ಎಡೂರಪ್ಪನ ಆಡಳಿತದ ಬಗ್ಗೆ ಏನನ್ನಸತ್ತೆ ಸಾರ್?
ಉತ್ತರ: ಅವುನ ರಾಜಕಾರಣನೆ ಬೇರೆ ಕಂಡ್ರೀ ಮೊನ್ನೆ ಅವುನ್ಯಾರೋ ಸ್ವಾಮಿ ಯಾರವುನು?
ನಾನು: ವಚನಾನಂದ
ಉತ್ತರ: ಹಾ| ಅವನು ಏನೊ ಅಂದ ಅಂತ ಉಳದೋರೆಲ್ಲ ಯಂಗೆ ಮ್ಯಾಲೆ ಬಿದ್ರು. ಅಂಗೆ ಮಠಮಾನ್ಯ ಎಡೂರಪ್ಪನ ಬೆನ್ನಿಗವೆ. ಟೀಕೆ ಮಾಡಿದೊರು ಓಲೈಸೋರು ಯಲ್ರು ಅವುನ ಕಡಿಕವುರೆ ಆದ್ರಿಂದ ಆತನ ರಾಜಕಾರಣದ ಆಲೋಚನೆ ಬೇರೆ. ನಾವು ನಿರೀಕ್ಷೆ ಮಾಡೋದೆ ಬೇರೆ.

ಪ್ರಶ್ನೆ: ಮಂತ್ರಿಗಳು ಎಮ್ಮೆಲ್ಲೆಗಳು ನೇರವಾಗಿ ಮತೀಯವಾಗಿ ಮಾತಾಡ್ತರಲ್ಲ ಸಾರ್?
ಉತ್ತರ: ಮಾತಾಡ್ತರೆ, ಅವುರ ಮನಸಲ್ಲಿ ಇದ್ದದ್ದೇ ಅದಲ್ವ. ಈಗ ಬಾಯಿ ಬಿಡ್ತರಷ್ಟೇಯ ಯಾವನಾದ್ರು ಎಂಪಿ ಬಾಯಿ ಬಿಡ್ತನ ಮೋದಿ ಶಾ ಇಬ್ರೆ ಇರದೀಗ, ಏನು ಮಾಡಿದ್ರು ಜೊತೆಲಿ ಮಾಡ್ತರೆ, ಈ ದೇಶಕ್ಕೆ ಏನು ಮಾಡದಕ್ಕೂ ಜೊತೆಯಾಗ್ಯವುರೆ, ನೋಡನ ಇರಿ ಅದೇನಾಯ್ತದೊ ನೋಡನ.”

ನಾನು: ನಮಸ್ಕಾರ ಸರ್ ಬರ್ತೀನಿ.
ತಿಮ್ಮಪ್ಪನವರು: ಆಯ್ತು ಹೋಗಿ ಬನ್ನಿ.

ಬಿ.ಚಂದ್ರೇಗೌಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...