ಕನ್ನಡ ಚಿತ್ರ ನಟ ಸುಶೀಲ್ ಗೌಡ ಅಸಹಜ ಸಾವು​; ಭಾವುಕರಾದ ದುನಿಯಾ ವಿಜಿ..!

ಸಿನಿಮಾ ನಟರ ಅಸಹಜ ಸಾವು ಮುಂದುವರೆದಿದ್ದು, ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಸುಶೀಲ್ ಗೌಡ (30) ತಮ್ಮ ಹುಟ್ಟೂರಲ್ಲಿ ನಿನ್ನೆ ಅಸಹಜ ಸಾವಿಗೀಡಾಗಿದ್ದಾರೆ.

ಭವಿಷ್ಯದಲ್ಲಿ ನಾಯಕನಾಗುವ ಕನಸು ಕಂಡಿದ್ದ, ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಸುಶೀಲ್ ಗೌಡ ತಮ್ಮ ಹುಟ್ಟೂರಾದ ಮಂಡ್ಯದಲ್ಲಿ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿರುವ ’ಸಲಗ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ಸುಶೀಲ್ ಗೌಡ ಮಾಡಿದ್ದಾರೆ. ನಟನೆಯ ಜೊತೆಗೆ ಜಿಮ್ ಕೋಚ್ ಸಹ ಆಗಿದ್ದ ಸುಶೀಲ್ ಮೂಲತಃ ಮಂಡ್ಯದವರಾಗಿದ್ದಾರೆ. ಸುಶೀಲ್ ನಿನ್ನೆ ಆತ್ಮಹತ್ಯೆಗೆ ಶರಣಾಗಿರುವ ವಿಷಯ ತಿಳಿದ ಕೂಡಲೇ ನಟ ದುನಿಯಾ ವಿಜಯ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ನೋವಿನಿಂದ ಬರೆದುಕೊಂಡಿದ್ದಾರೆ.

ಮುಂದೆ ಬೆಳೆಯಬೇಕಾಗಿರುವ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವು ಎಲ್ಲದಕ್ಕೂ ಪರಿಹಾರವಲ್ಲ. ಕೊರೊನಾದಿಂದಾಗಿ ಜನರು ಬದುಕಿನ ಬಗ್ಗೆ ಭರವಸೆ ಕಳೆದುಕೊಳ್ಳುತ್ತಿದ್ದಾರೆ, ಇದು ಸಲ್ಲದು. ಆತ್ಮಹತ್ಯೆ ಖಂಡಿತಾ ತಪ್ಪು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ, ಎಂದು ದುನಿಯಾ ವಿಜಯ್ ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ.

'ಸಲಗ' ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ. ಆತನ ಹೆಸರು ಸುಶೀಲ್ ಅಂತ….

Posted by Duniya Vijay on Wednesday, July 8, 2020

ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

  • ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
  • ಕರ್ನಾಟಕ ಆರೋಗ್ಯ ಸಹಾಯವಾಣಿ: 104

ಓದಿ: ಮರ್ಯಾದೆ ಹತ್ಯೆ ಬಗ್ಗೆ ಸಿನಿಮಾ: ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್


 

 

LEAVE A REPLY

Please enter your comment!
Please enter your name here