Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-3)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-3)

- Advertisement -
- Advertisement -

ಪ್ರಿನ್ಸ್‌ನ ಈ ಸಂಭಾಷಣೆ ಕುಟಿಲತೆಯಿಲ್ಲದೆ, ಎಲ್ಲವನ್ನೂ ಒಂದು ಮಟ್ಟಕ್ಕೆ ಭಿನ್ನವಿಸಿಕೊಳ್ಳುವ ರೀತಿಯಲ್ಲಿಯೇ ಇತ್ತು. ಆದರೆ, ಅಲ್ಲಿಗೆ ಸಂದರ್ಶಕನಾಗಿ ಬಂದಿದ್ದ ವ್ಯಕ್ತಿಯಿಂದ ಸಾಮಾನ್ಯ ಸೇವಕನೊಬ್ಬನೆಡೆಗೆ ತೂರಿಬರುತ್ತಿದ್ದ ಈ ಮಾತುಗಳು ಆ ಸೇವಕನಿಗೆ ಅಸಂಬದ್ಧವಲ್ಲ ಎಂದೆನಿಸಿರಲು ಸಾಧ್ಯವಿರಲಿಲ್ಲ. ಮತ್ತು ಅವನ ತೀರ್ಮಾನ ಇವೆರಡರಲ್ಲಿ ಒಂದು ಮಾತ್ರವಾಗಿತ್ತು ಎಂಬುದು ಬಹುಶಃ ವಿವರಣೆಯಾಗುತ್ತದೆ; ಅಂದರೆ ಅವನೊಬ್ಬ ಭಿಕ್ಷಾಟನೆಗೆ ಬಂದ ಠಕ್ಕ, ಅಥವ ಅವನು ಪ್ರಿನ್ಸ್, ಅವನೊಬ್ಬ ಪ್ರಿನ್ಸ್ ಆಗಿದ್ದರೂ ಒಬ್ಬ ಮೂರ್ಖಮಾತ್ರ, ಯಾವುದೇ ರೀತಿಯ ಕನಿಷ್ಟ ಮಹತ್ವಾಕಾಂಕ್ಷೆಯೂ ಇಲ್ಲದವನು; ಯಾವುದಾದರೂ ಮಹತ್ವಾಕಾಂಕ್ಷೆಯುಳ್ಳ ಒಬ್ಬ ಪ್ರಜ್ಞಾವಂತ ಪ್ರಿನ್ಸ್ ಖಂಡಿತವಾಗಿ ಸೇವಕರ ಕೋಣೆಯಲ್ಲಿ ಕಾಯುತ್ತಾ ಕುಳಿತುಕೊಳ್ಳುವುದಿಲ್ಲ, ಮತ್ತು ತನ್ನದೇ ಆದ ಖಾಸಗಿ ವಿಷಯಗಳ ಬಗ್ಗೆ ಈ ರೀತಿ ಮಾತನಾಡುವುದಿಲ್ಲ. ಎರಡರಲ್ಲಿ ಯಾವುದೇ ಆದರೂ ಹೇಗೆ ಈ ಏಕಾಂಗಿ ಸಂದರ್ಶಕನ ಬಗ್ಗೆ ಜನರಲ್‌ಗೆ ನಿವೇದಿಸುವುದು?

“ನೀನು ಪಕ್ಕದ ನಿರೀಕ್ಷಣಾ ಕೊಠಡಿಗೆ ಹೋಗಬೇಕೆಂದು ನನಗೆ ನಿಜವಾಗಿ ಅನ್ನಿಸುತ್ತಿದೆ!” ಒತ್ತಾಯಪೂರ್ವಕವಾಗಿ ಅವನು ಹೇಳಿದ.

“ಯಾಕೆ, ಈಗ ನಾನೇನಾದರೂ ಅಲ್ಲಿ ಕುಳಿತಿದ್ದಿದ್ದರೆ, ನನಗೆ ನನ್ನ ಸ್ವಂತ ವಿವರಗಳನ್ನು ಹೇಳುವ ಅವಕಾಶವೇ ಸಿಗುತ್ತಿರಲಿಲ್ಲ. ನೀನಿನ್ನೂ ನನ್ನ ವಿಷಯದಲ್ಲಿ ನೆಮ್ಮದಿಯನ್ನ ಕಳೆದುಕೊಂಡವನಂತೆ ಇದೀಯ, ಮತ್ತು ನನ್ನ ಉಟ್ಟ ಬಟ್ಟೆ ಮತ್ತು ಗಂಟಿನ ಕಡೆಗೆ ಕಣ್ಣು ಹಾಯಿಸುತ್ತಲೇ ಇದ್ದೀಯ. ಆ ಕಾರ್ಯದರ್ಶಿಗೆ ಕಾಯದೆ ಈಗ ನೀನು ಒಳಗೆ ಹೋಗಿ ನನ್ನ ಬಗ್ಗೆ ಯಾಕೆ ತಿಳಿಸಬಾರದು?”

“ಇಲ್ಲ, ಇಲ್ಲ! ನಿನ್ನಂತಹ ಸಂದರ್ಶಕನ ಬಗ್ಗೆ ಕಾರ್ಯದರ್ಶಿ ಬರದೇ ನನಗೆ ಹೇಳಲಾಗುವುದಿಲ್ಲ. ಅದಲ್ಲದೇ ಆಗಲೇ ಜನರಲ್ ತಿಳಿಸಿರುವಂತೆ ಅವರಿಗೆ ತೊಂದರೆ ಕೊಡುವಂತಿಲ್ಲ, ಅವರೀಗ ಕರ್ನಲ್ ಸಿ– ಜೊತೆ ಇದ್ದಾರೆ. ಗ್ಯಾವ್ರಿಲ ಅರ್ಡಾಲಿಯೊನೋವಿಚ್‌ಗೆ ಒಳಗಡೆಗೆ ಸೀದ ಹೊಗುವ ಸ್ವಾತಂತ್ರ್ಯವಿದೆ.”

“ಅವರ್‍ಯಾರು, ಗುಮಾಸ್ತರೇ?”

“ಏನು? ಗ್ಯಾವ್ರಿಲ ಅರ್ಡಾಲಿಯೊನೋವಿಚ್? ಓ ಇಲ್ಲ; ಅವರು ಅನೇಕ ಸಂಸ್ಥೆಗಳಲ್ಲಿ ಒಂದು ಸಂಸ್ಥೆಗೆ ಸೇರಿದವರು. ನೋಡಿಲ್ಲಿ, ಯಾವುದಕ್ಕೂ ಮೊದಲು ಆ ನಿನ್ನ ಗಂಟನ್ನ ಅಲ್ಲಿಡು.”

“ಸರಿ, ನಾನು ಹಾಗೆಯೇ ಮಾಡುತ್ತೇನೆ, ನನ್ನ ಮೇಲಿನ ಅಂಗಿಯನ್ನೂ ತೆಗೆದುಬಿಡಲೇ?”

“ಹೌದು ಖಂಡಿತವಾಗಿ, ಏನೇ ಆದರೂ ಅದನ್ನ ಹಾಕಿಕೊಂಡು ನೀನು ಒಳಗಡೆಗೆ ಹೋಗುವ ಹಾಗಿಲ್ಲ.”

ಪ್ರಿನ್ಸ್ ಮೇಲೆದ್ದು ತನ್ನ ಮೇಲಿನ ಅಂಗಿಯನ್ನ ತೆಗೆದ; ಅವನ ಬೆಳಗ್ಗೆ ಧರಿಸುವ ಉಡುಪು ಒಂದೆರಡು ಕಡೆ ಸ್ವಲ್ಪ ಸವೆದಿದ್ದರೂ ಸಾಕಷ್ಟು ಚೆನ್ನಾಗಿತ್ತು. ಅವನೊಂದು ಸ್ಟೀಲ್ ಗಡಿಯಾರದ ಚೈನನ್ನು ಧರಿಸಿದ್ದ ಮತ್ತು ಅದರ ಇನ್ನೊಂದು ತುದಿಗೆ ಜಿನೀವ ಬೆಳ್ಳಿಯ ಗಡಿಯಾರವೊಂದನ್ನ ಸಿಕ್ಕಿಸಲಾಗಿತ್ತು. ಪ್ರಿನ್ಸ್ ಮೂರ್ಖನಿದ್ದಿರಬಹುದಾದರೂ ಕೂಡ, ಹಾಗೂ ಆತ ತನ್ನನ್ನು ಹೇಗೋ ಸಂತುಷ್ಟಗೊಳಿಸಿದ್ದರೂ ಕೂಡ, ಒಬ್ಬ ಸಂದರ್ಶಕನ ಜೊತೆಯಲ್ಲಿ ಮಾತನಾಡುವುದು ಜನರಲ್‌ನ ಸೇವಕನಿಗೆ ಸಮಂಜಸವೆಂದೆನಿಸಲಿಲ್ಲ.

“ಮತ್ತೆ ಎಷ್ಟು ಹೊತ್ತಿಗೆ ಮೇಡಮ್ ಜನಗಳನ್ನ ಭೇಟಿಮಾಡುವುದು?” ಪ್ರಿನ್ಸ್ ತಾನು ಮುಂಚೆ ಕುಳಿತಿದ್ದ ಜಾಗದಲ್ಲೇ ಪುನಃ ಕುಳಿತುಕೊಳ್ಳುತ್ತಾ ಸೇವಕನನ್ನು ಕೇಳಿದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)

“ಓ ಅದೆಲ್ಲಾ ನನ್ನ ವ್ಯಾಪ್ತಿಗೆ ಬರುವುದಿಲ್ಲ! ನನಗೆ ತಿಳಿದಿರುವುದರ ಪ್ರಕಾರ ಮೇಡಮ್‌ರನ್ನು ಯಾವ ಸಮಯದಲ್ಲಿ ಬೇಕಾದರೂ ಭೇಟಿ ಮಾಡಬಹುದು; ಅದು ಸಂದರ್ಶಕರ ಮೇಲೆ ಅವಲಂಬಿತವಾಗಿರುತ್ತದೆ. ಉಡುಪಿನ ವಿನ್ಯಾಸಕ ಹನ್ನೊಂದು ಗಂಟೆಗೆ ಹೋಗುತ್ತಾನೆ. ಗ್ಯಾವ್ರಿಲ ಅರ್ಡಾಲಿಯೊನೋವಿಚ್‌ನನ್ನು ಎಲ್ಲರಿಗಿಂತ ಮೊದಲು ಒಳಗೆ ಬಿಡುತ್ತಾರೆ. ಮತ್ತು ಅವನನ್ನು ಮಧ್ಯಾಹ್ನದ ಊಟಕ್ಕೂ ಒಮ್ಮೊಮ್ಮೆ ಸೇರಿಸಿಕೊಳ್ಳುತ್ತಾರೆ.”

“ಈ ಋತುವಿನಲ್ಲಿ ವಿದೇಶಕ್ಕಿಂತ ಇಲ್ಲಿನ ಕೋಣೆಗಳು ಹೆಚ್ಚು ಬೆಚ್ಚಗಿರುತ್ತವೆ” ಪ್ರಿನ್ಸ್ ಗಮನಿಸಿ ಹೇಳಿದ; “ಆದರೆ ನಾನಿದ್ದ ದೇಶದಲ್ಲಿ ಹೊರಗಡೆ ಹೋದಾಗ ಮಾತ್ರ ಇಲ್ಲಿಗಿಂತ ಜಾಸ್ತಿ ಬೆಚ್ಚಗಿರುತ್ತದೆ. ಒಬ್ಬ ರಷ್ಯದವನು ಚಳಿಗಾಲದಲ್ಲಿ ಅಲ್ಲಿನ ಮನೆಗಳಲ್ಲಿ ಜೀವಿಸುವುದು ರೂಢಿಯಾಗುವವರೆಗೂ ಅಸಾಧ್ಯ.”

“ಅಲ್ಲಿ ಕೋಣೆಗಳನ್ನು ಬೆಚ್ಚಗೆ ಕಾಯಿಸುವುದೇ ಇಲ್ಲವೇ?”

“ಸ್ವಲ್ಪವೇ ಸ್ವಲ್ಪ ಮಾಡುತ್ತಾರೆ; ಆದರೆ ಅಲ್ಲಿನ ಮನೆಗಳು ಮತ್ತು ಕಾಯಿಸುವ ಒಲೆಗಳು ನಮ್ಮದುಕ್ಕಿಂತ ಬಹಳ ವಿಭಿನ್ನವಾಗಿರುತ್ತವೆ.”

“ಹೌದ! ನೀನು ಬಹಳ ಕಾಲ ಅಲ್ಲಿಯೇ ಇದ್ದೆಯಾ?”

“ನಾಲ್ಕು ವರ್ಷಗಳು! ನಾನು ಎಲ್ಲಾ ಸಮಯದಲ್ಲೂ ಒಂದೇ ಜಾಗದಲ್ಲಿ ಇರುತ್ತಿದ್ದೆ. ಒಂದು ಹಳ್ಳಿಯಲ್ಲಿ.”

“ನೀನು ರಷ್ಯವನ್ನು ಬಹಳವಾಗಿ ಮರೆತುಬಿಟ್ಟಿರಬೇಕು, ಹೌದಲ್ಲವೊ?”

“ಹೌದು, ಖಂಡಿತವಾಗಿಯೂ ನಾನು ಮರೆತುಬಿಟ್ಟಿದ್ದೆ, ಬಹಳಷ್ಟು; ಮತ್ತೊಂದು ವಿಷಯ ನೀನು ನಂಬುತ್ತೀಯೋ ಇಲ್ಲವೋ, ನಾನು ರಷ್ಯನ್ ಭಾಷೆ ಮಾತನಾಡುವುದನ್ನ ಹೇಗೆ ಮರೆಯಲೇ ಇಲ್ಲ? ಎಂದು ನನ್ನ ಬಗ್ಗೆಯೇ ಆಶ್ಚರ್ಯಪಡುತ್ತೇನೆ. ಈಗಲೂ, ನಾನು ನಿನ್ನ ಜೊತೆ ಮಾತನಾಡುವಾಗ ಕೂಡ ’ಅದೆಷ್ಟು ಚೆನ್ನಾಗಿ ನಾನು ರಷ್ಯನ್ ಭಾಷೆಯನ್ನ ಮಾತನಾಡುತ್ತೇನೆ’ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಆ ಕಾರಣಕ್ಕಾಗಿಯೂ ಭಾಗಶಃ ಬೆಳೆಗ್ಗೆಯಿಂದಲೂ ಸಿಕ್ಕಾಪಟ್ಟೆ ಮಾತನಾಡುತ್ತಿದ್ದೇನೆ. ನಿನಗೆ ಖಂಡಿತವಾಗಿ ಹೇಳುತ್ತೇನೆ, ನೆನ್ನೆ ಸಂಜೆಯಿಂದಲೂ ರಷ್ಯನ್ ಭಾಷೆಯಲ್ಲಿ ಮಾತನಾಡುತ್ತಾ ಸಾಗುವ ಬಯಕೆ ಬಲವಾಗಿ ಹೆಚ್ಚುತ್ತಿದೆ.”

“ಹ್ಮ್, ಹೌದು; ನೀನು ಹಿಂದಿನ ವರ್ಷಗಳಲ್ಲಿ ಪೀಟರ್ಸ್‌ಬರ್ಗ್‌ನಲ್ಲೇ ವಾಸಮಾಡುತ್ತಿದ್ದೆಯಾ?”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ ಅಧ್ಯಾಯ-1; ಭಾಗ-2

ಈ ಒಳ್ಳೆಯ ಸೇವಕನಿಗೆ, ತನ್ನ ವಿವೇಚನಾಶೀಲತೆಯಿಂದ ಕೂಡಿದ ನಿಷ್ಠುರತೆಯ ಸ್ವಭಾವದ ಹೊರತಾಗಿಯೂ, ಈ ರೀತಿಯ ಸೌಮ್ಯವಾದ ಮತ್ತು ಒಪ್ಪುವಂತ ಸಂಭಾಷಣೆಯನ್ನ ಮುಂದುವರಿಸುವ ಚಪಲವನ್ನ ನಿಗ್ರಹಿಸಿಕೊಳ್ಳಲಾಗಲಿಲ್ಲ.

“ಪೀಟರ್ಸ್‌ಬರ್ಗ್‌ನಲ್ಲಾ? ಇಲ್ಲ, ನಾನೆಂದೂ ಇರಲಿಲ್ಲ. ಈಗ ಎಲ್ಲರೂ ಹೇಳುತ್ತಾರೆ ಎಷ್ಟೊಂದು ಬದಲಾಗಿದೆ ಎಂದು, ಮತ್ತು ಈ ನಗರವನ್ನ ಚೆನ್ನಾಗಿ ಬಲ್ಲವರೂ ಕೂಡ ಅವರಿಗೆ ಗೊತ್ತಿದ್ದುದನ್ನೆಲ್ಲಾ ಪುನಃ ಕಲಿಯಬೇಕೆನ್ನುತ್ತಾರೆ. ಎಲ್ಲರೂ ಇಲ್ಲಿನ ಹೊಸ ನ್ಯಾಯಾಲಯಗಳ ಬಗ್ಗೆ ಮತ್ತು ಅಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಬಹಳಷ್ಟು ಮಾತನಾಡಿಕೊಳ್ಳುತ್ತಾರೆ. ಹೌದಲ್ಲವಾ?”

“ಹೂ ಹೌದು! ಅದು ನಿಜವೇನೋ ಸರಿ. ಈಗ, ನೀನಿದ್ದ ದೇಶದಲ್ಲಿ ಕಾನೂನಿನ ವ್ಯವಸ್ಥೆ ಹೇಗಿದೆ, ಅಲ್ಲಿ ಕಾನೂನನ್ನು ಇಲ್ಲಿಗಿಂತ ಹೆಚ್ಚು ನ್ಯಾಯಯುತವಾಗಿ ನಿರ್ವಹಿಸುತ್ತಾರ?”

“ಓ, ನನಗದರ ಬಗ್ಗೆ ತಿಳಿದಿಲ್ಲ! ನಮ್ಮ ಕಾನೂನು ನಿರ್ವಹಣಾ ವ್ಯವಸ್ಥೆಯ ಬಗ್ಗೆ ಸಾಕಷ್ಟು ಒಳ್ಳೆಯದನ್ನ ಕೇಳಿದ್ದೀನಿ ಕೂಡ. ಒಂದು ವಿಷಯ ಎಂದರೆ ಇಲ್ಲಿ ಮರಣದಂಡನೆಯ ಶಿಕ್ಷೆ ಜಾರಿಯಲ್ಲಿಲ್ಲ.”

“ಅಲ್ಲೆಲ್ಲಾ ಅದು ಇದೆಯೇ?”

“ಹೌದು.. ನಾನೊಂದು ಮರಣದಂಡನೆಯ ಪ್ರಕ್ರಿಯೆಯನ್ನ ಫ್ರಾನ್ಸಿನಲ್ಲಿ ಕಣ್ಣಾರೆ ನೋಡಿದ್ದೇನೆ…. ಲಿಯೋನ್ಸ್ ಎಂಬ ಜಾಗದಲ್ಲಿ. ಶ್ನೈಡರ್ ಅದನ್ನು ನನಗೆ ತೋರಿಸಲೋಸುಗವೇ ಅಲ್ಲಿಗೆ ನನ್ನನ್ನು ತಮ್ಮ ಜೊತೆಯಲ್ಲಿ ಕರೆದೊಯ್ದಿದ್ದರು.”

“ಏನು, ಆ ವ್ಯಕ್ತಿಯನ್ನ ನೇಣುಗಂಬಕ್ಕೆ ಏರಿಸಿದರೆ?”

“ಇಲ್ಲ ಫ್ರಾನ್ಸಿನಲ್ಲಿ ಜನಗಳ ತಲೆಯನ್ನ ಕತ್ತರಿಸಿಬಿಡುತ್ತಾರೆ.”

“ಆ ಅಪರಾಧಿ ಏನು ಮಾಡಿದ? ಜೋರಾಗಿ ಕಿರುಚಿಕೊಂಡನೇ?”

“ಓ ಇಲ್ಲ, ಅದೊಂದು ಕ್ಷಣದಲ್ಲಿ ನಡೆಯುವ ಕೆಲಸ. ಅವರು ಮನುಷ್ಯನನ್ನು ಒಂದು ಚೌಕಟ್ಟಿನಲ್ಲಿ ಬಗ್ಗಿ ಕೂರುವಂತೆ ಮಾಡುತ್ತಾರೆ ಮತ್ತು ಒಂದು ಅಗಲವಾದ ಹರಿತವಾದ ಚಾಕು ಯಂತ್ರವೊಂದರ ಮೂಲಕ ಮೇಲಿನಿಂದ ಅವನ ಕತ್ತಿನ ಮೇಲೆ ಬೀಳುತ್ತದೆ, ಅದು ಅತಿ ಭಯಂಕರವಾದ ಭಾರದಿಂದ ಕೂಡಿರುತ್ತದೆ. ಅದನ್ನ ಗಿಲೊಟಿನ್ ಎಂದು ಕರೆಯುತ್ತಾರೆ. ಇಡೀ ತಲೆಯ ಭಾಗವನ್ನು ಕತ್ತರಿಸಿಬಿಡಲು ವೇಗದಿಂದ ಕೆಳಗೆ ಬೀಳುತ್ತದೆ. ಕಣ್ಣು ಮಿಟುಕಿಸುವಷ್ಟೂ ಸಮಯವಿರುವುದಿಲ್ಲ. ಆದರೆ ಅದಕ್ಕಾಗಿ ನಡೆಯುವ ತಯ್ಯಾರಿ ಮಾತ್ರ ಭಯಂಕರ. ಅವರು ಮರಣದಂಡನೆಯ ತೀರ್ಪನ್ನ ಓದುತ್ತಾರೆ, ನಿನಗೆ ಗೊತ್ತಾ, ಅಪರಾಧಿಯ ಕೈಗಳನ್ನ ಕಟ್ಟುವುದರ ಮೂಲಕ ತಯಾರಿ ನಡೆಸುತ್ತಾರೆ ಮತ್ತು ಅವನನ್ನು ಗಾಡಿಯಲ್ಲಿ ವಧಾಸ್ಥಾನದ ಬಳಿಗೆ ಒಯ್ಯುತ್ತಾರೆ, ಮತ್ತು ಈ ಮರಣದಂಡನೆ ಪ್ರಕ್ರಿಯೆಯಲ್ಲಿ ಅತ್ಯಂತ ಭಯ ಹುಟ್ಟಿಸುವ ಭಾಗವೇ ಇದು. ಸುತ್ತಲೂ ಜನರು ಗುಂಪು ಕಟ್ಟಿಕೊಂಡು ನಿಲ್ಲುತ್ತಾರೆ. ಹೆಂಗಸರೂ ಕೂಡ. ಆದರೆ ಹೆಂಗಸರುಗಳು ಬಂದು ನೋಡುವುದನ್ನು ಅವರು ಉತ್ತೇಜಿಸುವುದೇ ಇಲ್ಲ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-3)

“ಇಲ್ಲ, ಇಲ್ಲ, ಇದೆಲ್ಲಾ ಹೆಂಗಸರು ನೋಡುವಂತಹುದಲ್ಲ.”

“ಇಲ್ಲ ಖಂಡಿತ ಇಲ್ಲ! ಅಬ್ಬಾ! ಆ ಅಪರಾಧಿ ಒಬ್ಬ ಅಪ್ಪಟ ಬುದ್ಧಿವಂತ ಧೈರ್ಯಶಾಲಿ ಮನುಷ್ಯ; ಲೆ ಗ್ರಾಸ್ ಎನ್ನುವುದು ಅವನ ಹೆಸರಾಗಿತ್ತು; ಮತ್ತು ನಾನು ಇನ್ನೊಂದು ಮಾತು ಹೇಳುತ್ತೇನೆ, ನಿನಗಿಷ್ಟ ಬಂದಂತೆ, ನಂಬಿದರೆ ನಂಬು ಬಿಟ್ಟರೆ ಬಿಡು, ಅವನು ವಧ್ಯಶಿಲೆಯನ್ನ ಹತ್ತುವಾಗ ಅಳುವುದಕ್ಕೆ ಶುರುಮಾಡಿದ, ಖಂಡಿತವಾಗಿಯೂ ಅವನು ಅಳುತ್ತಿದ್ದ, ಅವನೊಂದು ಬಿಳಿಯ ಹಾಳೆಯಂತೆ ಬಿಳಿಚಿಕೊಂಡಿದ್ದ. ಅವನು ಅಳುತ್ತಿದ್ದದ್ದು- ಅಳುತ್ತಾ ಇದ್ದುದು ಒಂದು ಭಯಾನಕವಾದ ದೃಶ್ಯವಲ್ಲವೇ? ಯಾರಾದರೂ ಕೂಡ ಒಬ್ಬ ವಯಸ್ಕನಾದ ಮನುಷ್ಯ ಭಯದಿಂದ ಅಳುವುದನ್ನ ಕೇಳಿದರೆ- ಮಗುವಲ್ಲ, ಒಬ್ಬ ನಲವತ್ತೈದು ವರ್ಷದ ವಯಸ್ಕ, ಹಿಂದೆಂದೂ ತನ್ನ ಜೀವನದಲ್ಲೇ ಅಳದೇ ಇದ್ದ ವ್ಯಕ್ತಿ, ಅವನ ಮನಸ್ಸಿನಲ್ಲಿ ಆ ಕ್ಷಣದಲ್ಲಿ ಏನು ನಡೆಯುತ್ತಿರಬಹುದು ಅನ್ನುವುದನ್ನ ಕಲ್ಪಿಸಿಕೊ; ಯಾವ ರೀತಿಯ ಘೋರವಾದ ಪ್ರಕ್ಷುಬ್ಧತೆಯನ್ನ ಅವನ ಆತ್ಮ ಸಹಿಸಿದ್ದಿರಬೇಕು; ಇದೊಂದು ಆತ್ಮದ ಮೇಲೆ ಎಸಗುತ್ತಿರುವ ಹೀನಾಯವಾದ ಆಕ್ರೋಶ. ಅದಲ್ಲದೆ ಬೇರೇನೂ ಅಲ್ಲ. ಅದು ’ನೀನು ಯಾರನ್ನೂ ಕೊಲ್ಲುವುದಿಲ್ಲ (Though shall not kill)’ ಎಂದು ಹೇಳಿದೆಯೆಂಬ ಕಾರಣಕ್ಕೆ, ಅವನು ಇನ್ನೊಬ್ಬರನ್ನ ಕೊಂದ ಎಂಬ ಕಾರಣ ನೀಡಿ ಅವನನ್ನ ಕೊಲೆಮಾಡಬೇಕೆ? ಇಲ್ಲ ಇದು ಸರಿಯಲ್ಲ, ಇದೊಂದು ಅಸಿಂಧು ಎನ್ನಬಹುದಾದಂತಹ ಸಿದ್ಧಾಂತ. ನಾನು ನಿನಗೆ ಈಗ ಹೇಳುತ್ತಿರುವುದು ಒಂದು ತಿಂಗಳ ಹಿಂದೆಯಷ್ಟೇ ನೋಡಿದ ಘಟನೆ ಮತ್ತು ಅದು ನನ್ನ ಕಣ್ಣ ಮುಂದೆ ಇಲ್ಲಿಯವರೆಗೂ ವಿಕಟ ನರ್ತನ ಮಾಡುತ್ತಲೇ ಇದೆ. ನಾನು ಆ ಭಯಾನಕ ದೃಶ್ಯವನ್ನ ಆಗಾಗ ಕನಸಿನಲ್ಲಿ ಕಾಣುತ್ತಲೇ ಇರುತ್ತೇನೆ.”

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...