Homeಕರ್ನಾಟಕಸ್ಪರ್ಧಾತ್ಮಕ ಪರೀಕ್ಷಾ ಕೊಠಡಿಯಲ್ಲಿ ಶಿರವಸ್ತ್ರ ನಿಷೇಧ, ಮಂಗಳಸೂತ್ರಕ್ಕೆ ಅವಕಾಶ: ಕೆಇಎ

ಸ್ಪರ್ಧಾತ್ಮಕ ಪರೀಕ್ಷಾ ಕೊಠಡಿಯಲ್ಲಿ ಶಿರವಸ್ತ್ರ ನಿಷೇಧ, ಮಂಗಳಸೂತ್ರಕ್ಕೆ ಅವಕಾಶ: ಕೆಇಎ

- Advertisement -
- Advertisement -

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿವಿಧ ಬೋರ್ಡ್‌ಗಳು ಮತ್ತು ಕಾರ್ಪೊರೇಷನ್‌ಗಳಿಗೆ ನೇಮಕಾತಿ ಪರೀಕ್ಷೆಯ ಸಮಯದಲ್ಲಿ ಪರೀಕ್ಷಾ ಹಾಲ್‌ನಲ್ಲಿ ಎಲ್ಲಾ ರೀತಿಯ ಶಿರವಸ್ತ್ರವನ್ನು ಧರಿಸುವುದನ್ನು ನಿರ್ಬಂಧಿಸಿದೆ. ಡ್ರೆಸ್ ಕೋಡ್‌ನಲ್ಲಿ ಸ್ಪಷ್ಟವಾಗಿ ಹಿಜಾಬ್‌ ಎಂದು ಉಲ್ಲೇಖಿಸದಿದ್ದರೂ, ಹೊಸ ಮಾರ್ಗಸೂಚಿಗಳಿಂದ ಇದು ಸೂಚಿತವಾಗಿದೆ.

ಬ್ಲೂಟೂತ್ ಸಾಧನಗಳನ್ನು ಬಳಸಿಕೊಂಡು ಪರೀಕ್ಷಾ ಅಕ್ರಮಗಳನ್ನು ತಡೆಯುವ ಪ್ರಯತ್ನದ ಭಾಗವಾಗಿ ನೂತನ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನ.6 ರಂದು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗೆ ಹಾಜರಾಗುತ್ತಿದ್ದ ಮಹಿಳೆಯೊಬ್ಬರಿಗೆ ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮೊದಲು ಮಂಗಳಸೂತ್ರವನ್ನು ತೆಗೆಯುವಂತೆ ಹೇಳಲಾಗಿತ್ತು. ಹಿಂದುತ್ವ ಗುಂಪುಗಳ ಪ್ರತಿಭಟನೆಯ ನಂತರ KEA ಇದೀಗ ಇತರ ಆಭರಣಗಳನ್ನು ನಿರ್ಬಂಧಿಸುವ ಸಂದರ್ಭದಲ್ಲಿ ಮಹಿಳೆಯರಿಗೆ ಮಂಗಳಸೂತ್ರ ಮತ್ತು ಟೋ ರಿಂಗ್‌ಗಳನ್ನು ಪರೀಕ್ಷಾ ಕೊಠಡಿಯಲ್ಲಿ ಧರಿಸಲು ಅನುಮತಿ ನೀಡಿದೆ.

ರಾಜ್ಯಾದ್ಯಂತ ನ.18 ಮತ್ತು 19ರಂದು ವಿವಿಧ ಮಂಡಳಿಗಳು ಮತ್ತು ನಿಗಮಗಳ ನೇಮಕಾತಿ ಪರೀಕ್ಷೆಗಳು ನಡೆಯಲಿವೆ.

ಅಕ್ಟೋಬರ್‌ನಲ್ಲಿ ಕರ್ನಾಟಕ ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿತ್ತು. ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಅವರು ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಗಳಿಗೆ ಬರಲು ಅವಕಾಶ ಇದೆ ಎಂದು ಹೇಳಿದ್ದರು.

ಆದರೆ ಇದೀಗ ಅಕ್ರಮವಾಗಿ ಬ್ಲೂಟೂತ್ ಸಾಧನಗಳ ಬಳಕೆ ಹಿನ್ನೆಲೆ ರಾಜ್ಯ ಸರ್ಕಾರವು ಈ ರೀತಿ ಹೊಸ ಆದೇಶವನ್ನು ಹೊರಡಿಸಿದೆ. ಅಕ್ಟೋಬರ್‌ನಲ್ಲಿ ಕೆಇಎ ನಡೆಸಿದ ಪರೀಕ್ಷೆ ವೇಳೆ ಕಲಬುರಗಿ ಮತ್ತು ಯಾದಗಿರಿ ಪರೀಕ್ಷಾ ಕೇಂದ್ರಗಳಲ್ಲಿ ಬ್ಲೂಟೂತ್ ಸಾಧನಗಳನ್ನು ಬಳಸಿರುವ ಘಟನೆಯ ಕುರಿತು ರಾಜ್ಯ ಸರ್ಕಾರವು ನ.11 ರಂದು ಸಿಐಡಿ ತನಿಖೆಗೆ ಆದೇಶಿಸಿದೆ.

ಡ್ರೆಸ್ ಕೋಡ್  ಪ್ರಕಾರ, ಅಭ್ಯರ್ಥಿಗಳು ಎತ್ತರದ ಬೂಟುಗಳು, ಜೀನ್ಸ್ ಮತ್ತು ಟಿ-ಶರ್ಟ್‌ಗಳನ್ನು ಧರಿಸುವುದನ್ನು ನಿರ್ಬಂಧಿಸಿದೆ. ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರವನ್ನು ಧರಿಸುವುದನ್ನು, ತಲೆ, ಕಿವಿ, ಮೂಗನ್ನು ಮುಚ್ಚುವ ವಸ್ತ್ರಗಳನ್ನು ಧರಿಸುವುದನ್ನು ನಿಷೇಧಿಸಿದೆ. ಯಾವುದೇ ರೀತಿಯ ಮಾಸ್ಕನ್ನು ಕೂಡ ಧರಿಸುವತಿಲ್ಲ ಎಂದು ಸೂಚಿಸಲಾಗಿದೆ.

ಎಲೆಕ್ಟ್ರಾನಿಕ್‌ ವಸ್ತುಗಳು, ಮೊಬೈಲ್‌ ಪೋನ್‌ಗಳು, ಬ್ಲೂಟುಥ್, ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಗೆ ತರದಂತೆ ನಿಷೇಧ ವಿಧಿಸಲಾಗಿದೆ. ಪೆನ್ಸಿಲ್‌, ಪೇಪರ್‌, ಎರೇಸರ್‌, ಬಾಕ್ಸ್‌ಗಳು, ಆಹಾರ ಪದಾರ್ಥಗಳನ್ನು ತರದಂತೆ ನಿಷೇಧ ವಿಧಿಸಲಾಗಿದೆ.

ಇದನ್ನು ಓದಿ: ಮರುನಾಡನ್ ಮಲಯಾಳಿ’ ಯೂಟ್ಯೂಬ್ ಚಾನೆಲ್ ಸಂಸ್ಥಾಪಕರ ವಿರುದ್ಧ ಪ್ರಕರಣ ದಾಖಲು

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...