Homeಮುಖಪುಟ'ಮರುನಾಡನ್ ಮಲಯಾಳಿ' ಯೂಟ್ಯೂಬ್ ಚಾನೆಲ್ ಸಂಸ್ಥಾಪಕರ ವಿರುದ್ಧ ಪ್ರಕರಣ ದಾಖಲು

‘ಮರುನಾಡನ್ ಮಲಯಾಳಿ’ ಯೂಟ್ಯೂಬ್ ಚಾನೆಲ್ ಸಂಸ್ಥಾಪಕರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಪೊಲೀಸ್ ವೈರ್‌ಲೆಸ್ ಸಂದೇಶವನ್ನು ಸೋರಿಕೆ ಮಾಡಿದ ಆರೋಪದಲ್ಲಿ ಮಲಯಾಳಂ ಯೂಟ್ಯೂಬ್ ಚಾನೆಲ್ ‘ಮರುನಾಡನ್ ಮಲಯಾಳಿ’ ಸಂಸ್ಥಾಪಕ ಮತ್ತು ಸಂಪಾದಕ ಶಾಜನ್ ಸ್ಕರಿಯಾ ಅವರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶಾಜನ್ ಸ್ಕರಿಯಾ ವಿರುದ್ಧ ಪಲರಿವಟ್ಟಂ ಪೊಲೀಸರು ತಮ್ಮ ಯುಟ್ಯೂಬ್ ಚಾನೆಲ್ ಮೂಲಕ ಪೊಲೀಸ್ ವೈರ್‌ಲೆಸ್ ಸಂದೇಶವನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಕೋಮು ಸೌಹಾರ್ದತೆ ಧಕ್ಕೆ ಆರೋಪದಲ್ಲಿ ಈ ಹಿಂದೆ ಆಗಸ್ಟ್‌ನಲ್ಲಿ ಶಾಜನ್ ಅವರನ್ನು ಬಂಧಿಸಲಾಗಿತ್ತು. ಜುಲೈನಲ್ಲಿ ಸಿಪಿಐ(ಎಂ) ಶಾಸಕ ಪಿವಿ ಶ್ರೀನಿಜಿನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಪ್ರಕರಣ ದಾಖಲಾಗಿತ್ತು.

ವರದಿಗಳ ಪ್ರಕಾರ, ಪಲರಿವಟ್ಟಂ ಪೊಲೀಸರು ಶಾಜನ್ ಮತ್ತು ಸರ್ಚ್ ಎಂಜಿನ್ ಗೂಗಲ್ ವಿರುದ್ಧ ಭಾರತೀಯ ಟೆಲಿಗ್ರಾಫ್ ಆಕ್ಟ್ ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳ ನಿಬಂಧನೆಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎರ್ನಾಕುಲಂನ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಜುಲೈನಲ್ಲಿ ಬಿಎಸ್‌ಎನ್‌ಎಲ್ ಬಿಲ್‌ಗಳನ್ನು ನಕಲಿ ಮಾಡಿ ರಿಜಿಸ್ಟ್ರಾರ್‌ಗೆ ಸಲ್ಲಿಸಿದ ಆರೋಪ ಶಾಜನ್ ಮೇಲಿದೆ .

ಮೇ ತಿಂಗಳಲ್ಲಿ ನಟ ಪೃಥ್ವಿರಾಜ್ ಅವರು ಜಾರಿ ನಿರ್ದೇಶನಾಲಯಕ್ಕೆ ಹಣ ಪಾವತಿಸಿದ್ದಾರೆ ಎಂದು ಚಾನೆಲ್ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದೆ ಎಂದು ಪೃಥ್ವಿರಾಜ್ ಆರೋಪಿಸಿದ್ದರು.  ಶಾಜನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.

ಇದನ್ನು ಓದಿ: ಗಾಝಾ ಪಟ್ಟಿಯಲ್ಲಿರುವ ಆಸ್ಪತ್ರೆಗಳನ್ನು ರಕ್ಷಿಸಬೇಕು: ಜೋ ಬೈಡನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...