Homeಕರ್ನಾಟಕಕರ್ನಾಟಕ ಸಿಎಂ ಟ್ವಿಟರ್‌ ಖಾತೆ ಹ್ಯಾಕ್‌; ನೂರಕ್ಕೂ ಅಧಿಕ ಟ್ವೀಟ್‌!

ಕರ್ನಾಟಕ ಸಿಎಂ ಟ್ವಿಟರ್‌ ಖಾತೆ ಹ್ಯಾಕ್‌; ನೂರಕ್ಕೂ ಅಧಿಕ ಟ್ವೀಟ್‌!

- Advertisement -
- Advertisement -

ಕರ್ನಾಟಕ ಮುಖ್ಯಮಂತ್ರಿಯವರ ಅಧಿಕೃತ ಟ್ವಿಟರ್ ಖಾತೆಯಾದ @CMofKarnataka ಕೆಲವು ನಿಮಿಷಗಳ ಕಾಲ ಹ್ಯಾಕ್‌ ಆಗಿರುವ ಅನುಮಾನ ವ್ಯಕ್ತವಾಗಿದೆ. ಕೆಲವೇ ನಿಮಿಷಗಳಲ್ಲಿ ನೂರಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದೆ.

ಶನಿವಾರ ಬೆಳಿಗ್ಗೆ 6 ಗಂಟೆಯಿಂದ 18 ನಿಮಿಷಗಳ ಕಾಲ ಟ್ವಿಟರ್‌ ಹ್ಯಾಕ್‌ ಆಗಿತ್ತು ಎನ್ನಲಾಗಿದೆ. ಯಾವುದೇ ನಿರ್ದಿಷ್ಟ ವಿಷಯವನ್ನು ಟ್ವೀಟ್ ಮಾಡದಿದ್ದರೂ ಇತ್ತೀಚೆಗೆ ಖಾತೆ ತೆರೆದವರ ಫ್ರೊಪೈಲ್ ಸೇರಿದಂತೆ ಹಲವರನ್ನು ಟ್ಯಾಗ್ ಮಾಡಲಾಗಿತ್ತು.

ಸಿಎಂ ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಸಂಬಂಧ ಟ್ವಿಟರ್ ಬಳಕೆದಾರರು ಅನುಮಾನ ವ್ಯಕ್ತಪಡಿಸಿ, ಟ್ವೀಟ್ ಕೂಡ ಮಾಡಿದ್ದಾರೆ. ಟ್ವೀಟ್ ಹ್ಯಾಕ್‌ ಆಗಿರುವುದು ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಕೇವಲ ಮೂರೇ ನಿಮಿಷಗಳಲ್ಲಿ ಎಲ್ಲ ಟ್ವೀಟ್‌ಗಳನ್ನು ಅಳಿಸಿಹಾಕಲಾಗಿದೆ.

 

2021ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್ ಖಾತೆಯನ್ನೂ ಹ್ಯಾಕ್ ಮಾಡಲಾಗಿತ್ತು. ಬಿಟ್ಕಾಯಿನ್ ಸಂಬಂಧಪಟ್ಟ ವಿಷಯಗಳನ್ನು ಟ್ವೀಟ್ ಮಾಡಿದ್ದ ಹ್ಯಾಕರ್ಸ್, ಸರ್ಕಾರವೇ ಅಧಿಕೃತವಾಗಿ ಬಿಟ್ಕಾಯಿನ್‌ಗಳನ್ನು ಖರೀದಿ ಮಾಡಿದೆ ಎಂದು ಟ್ವೀಟ್ ಮಾಡಿದ್ದರು.

ಪ್ರಧಾನಿ ಟ್ವಿಟರ್ ಖಾತೆಯನ್ನು ಮರಳಿ ಪಡೆದ ಬಳಿಕ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದ ಪ್ರಧಾನಮಂತ್ರಿ ಕಾರ್ಯಾಲಯ, ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್ ಖಾತೆ ಕೆಲಕಾಲ ಹ್ಯಾಕ್ ಆಗಿತ್ತು ಎಂದು ತಿಳಿಸಿತ್ತು.

“ಭಾರತವು ಅಧಿಕೃತವಾಗಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧ ಟೆಂಡರ್ ಎಂದು ಸ್ವೀಕರಿಸಿದೆ. ಸರ್ಕಾರವು ಅಧಿಕೃತವಾಗಿ 500 BTC ಅನ್ನು ಖರೀದಿಸಿದೆ ಮತ್ತು ಅವುಗಳನ್ನು ದೇಶದ ಎಲ್ಲಾ ನಿವಾಸಿಗಳಿಗೆ ವಿತರಿಸುತ್ತಿದೆ” ಎಂದು ಹ್ಯಾಕ್‌ ಮಾಡಲಾದಾಗ ಟ್ವೀಟ್ ಮಾಡಲಾಗಿತ್ತು. ಜೊತೆಗೆ, ಸಂಭವನೀಯ ಹಗರಣದ ಲಿಂಕ್ ಅನ್ನು ಸಹ ಲಗತ್ತಿಸಲಾಗಿತ್ತು.

ಟ್ವೀಟ್ ಅನ್ನು ಶೀಘ್ರದಲ್ಲೇ ಅಳಿಸಲಾಗಿದ್ದರೂ #Hacked ಹ್ಯಾಷ್‌ಟ್ಯಾಗ್‌ ತಕ್ಷಣವೇ ಟ್ರೆಂಡ್ ಆಗಿತ್ತು. ಬಳಕೆದಾರರು ಈಗ ಅಳಿಸಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್‌ನೊಂದಿಗೆ ಟ್ವೀಟ್ ಮಾಡಿದ್ದರು. “ಗುಡ್ ಮಾರ್ನಿಂಗ್ ಮೋದಿ ಜಿ, ಸಬ್ ಚಂಗಾ ಸಿ?” ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಟ್ವೀಟ್ ಮಾಡಿದ್ದರು.


ಇದನ್ನೂ ಓದಿರಿ: ಪ್ರಜಾಪ್ರಭುತ್ವ ದಮನಕ್ಕೆ ಫೇಸ್‌ಬುಕ್‌, ಟ್ವಿಟರ್‌ ಸಾಥ್‌: ಕ್ರಮಕ್ಕೆ ಸೋನಿಯಾ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....